ಸ್ಯಾನಿಟೈಸರ್ ಸೂರ್ಯಕಿರಣಗಳು
Team Udayavani, Apr 6, 2020, 6:21 PM IST
ಹಾಲನ್ನು ಕಾಯಿಸುವುದರಿಂದ ಅದರಲ್ಲಿನ ಕ್ರಿಮಿಗಳು ಸಾಯುತ್ತವೆ. ಅದೇ ರೀತಿ ನಮ್ಮ ಮನೆಗಳನ್ನೂ, ಅದರಲ್ಲೂ, ಹೊರಗಿನವರು ಬಂದು ಸೇರುವ ಕೋಣೆಗಳಿಗೂ ಒಂದರ್ಧ ಗಂಟೆ ಸೂರ್ಯ ಕಿರಣಗಳು ಬೀಳುವಂತೆ ಮಾಡಿದರೆ, ಸಾಕಷ್ಟು ಕ್ರಿಮಿಗಳಿಂದ ಮುಕ್ತವಾಗುತ್ತದೆ!
ಹಿಂದೆ ನಮ್ಮಲ್ಲಿ, ಸೂರ್ಯಕಿರಣಗಳು ಮನೆಯನ್ನು ಪ್ರವೇಶಿಸಬೇಕು ಎಂದೇ ಕಿಟಕಿ ಬಾಗಿಲುಗಳ ಸ್ಥಳಗಳನ್ನು ನಿರ್ಧರಿಸುತ್ತಿದ್ದರು. ಬಹುತೇಕ ಕ್ರಿಮಿಕೀಟಗಳು ಶೀತರಕ್ತ ಜೀವಿಗಳಾಗಿದ್ದು, ಅವುಗಳ ಮೇಲೆ ಸೂರ್ಯಕಿರಣಗಳು ನೇರವಾಗಿ ಬಿದ್ದರೆ, ಬಿಸಿಯೇರಿ ಅವು ಸಾಯುತ್ತವೆ. ನಮಗೆ ದಿನನಿತ್ಯ ಒಂದರ್ಧ ಗಂಟೆಯಾದರೂ ಸೂರ್ಯನ ಎಳೆಕಿರಣಗಳು, ಬೆಳಿಗ್ಗೆ ಅಥವಾ ಸಂಜೆ ಮೈಮೇಲೆ ಬೀಳುವುದು, ಆರೋಗ್ಯದ ದೃಷ್ಟಿಯಿಂದಲೂ ಮುಖ್ಯವಾಗುತ್ತದೆ.
ಬಹುತೇಕ ಆಹಾರ ಪದಾರ್ಥಗಳನ್ನು, ಅದರಲ್ಲೂ ಮುಖ್ಯವಾಗಿ ಹಾಲು ಬೆಣ್ಣೆ ಇತ್ಯಾದಿಯನ್ನು, ಸುಮಾರು 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಹತ್ತಾರು ನಿಮಿಷ ಕಾಯಿಸಿ, ನಂತರ ಪ್ಯಾಕ್ ಮಾಡಲಾಗುತ್ತದೆ. ಇದನ್ನು ಪಾಸcರೀಕರಣ ಎನ್ನಲಾಗುತ್ತದೆ. ಇದರಿಂದ ಕ್ರಿಮಿಗಳಿಂದ ಮುಕ್ತಿ ದೊರೆಯುತ್ತದೆ. ನಮ್ಮ ಮನೆಗಳನ್ನೂ, ಅದರಲ್ಲೂ ಹೊರಗಿನವರು ಬಂದು ಸೇರುವ ಸ್ಥಳಗಳಿಗೆ, ಒಂದರ್ಧ ಗಂಟೆ ಸೂರ್ಯ ಕಿರಣಗಳು ಬೀಳುವಂತೆ ಮಾಡಿದರೆ, ಆ ಸ್ಥಳ ಸಾಕಷ್ಟು ಕ್ರಿಮಿಗಳಿಂದ ಮುಕ್ತವಾಗುತ್ತದೆ!
ಸೂರ್ಯಕಿರಣಗಳ ತಾಪಮಾನ : ಸೋಲಾರ್ ಹೀಟರ್‌ನಿಂದ ಬರುವ ನೀರು ತುಂಬಾ ಬಿಸಿ ಇರುತ್ತದೆ. ಇದು ಸೂರ್ಯಕಿರಣಗಳ ನೇರ ಬೀಳುವಿಕೆಯ ಪರಿಣಾಮ. ನೆರಳಿನಲ್ಲಿ ಉಳಿಯಬಹುದಾದ ಕ್ರಿಮಿಗಳೂ, ನೇರವಾಗಿ ಸೂರ್ಯ ಕಿರಣಗಳು ಬಿದ್ದಾಗ, ಅದರ ತಾಪವನ್ನು ಅರ್ಧ ಗಂಟೆ ಕೂಡ ತಡೆದುಕೊಳ್ಳಲಾರವು! ಹಾಗಾಗಿ, ನಮ್ಮ ಮನೆಯ “ಸಾರ್ವಜನಿಕ’ ಭಾಗ ಎಂದರೆ, ಹೊರಗಿನವರು ಬರುವ ಸ್ಥಳವಾದ ವರಾಂಡಾ, ಲಿವಿಂಗ್ ರೂಮ್‌ಗೆ ಮುಖ್ಯವಾಗಿ, ಬಿಸಿಲು ಬೀಳುವಂತೆ ಮಾಡಿದರೆ, ಅವರು ತರಬಹುದಾದ ಸಾಕಷ್ಟು ಕ್ರಿಮಿಗಳು ನಾಶವಾಗುತ್ತವೆ.
ವೈರಸ್ ಕಡಿಮೆಯಾಗುತ್ತೆ …: ಸೂರ್ಯ ಕಿರಣಗಳು ಇಡೀ ಕೋಣೆಯನ್ನು ಬೆಳಗಬೇಕು ಎಂದೇನೂ ಇಲ್ಲ, ಮನೆಯ ಒಂದು ಭಾಗದಲ್ಲಿ ಒಂದಷ್ಟು ಕ್ರಿಮಿಗಳು ನಾಶವಾದರೂ, ಒಟ್ಟಾರೆಯಾಗಿ ಅವುಗಳ ಸಂಖ್ಯೆ ಕಡಿಮೆ ಆಗಿ, ನಮ್ಮ ದೇಹಕ್ಕೆ ಕಡಿಮೆ ಕ್ರಿಮಿಗಳ ಜೊತೆ ಕಾದಾಡುವಂತೆ ಆಗುತ್ತದೆ! ಅಂದರೆ ವೈರಸ್- ಬ್ಯಾಕ್ಟೀರಿಯಾಗಳ “ಲೋಡ್’- ಒಂದು ಹಂತಕ್ಕೆ ಕಡಿಮೆ ಆದಂತೆ ಆಗುತ್ತದೆ. ಮನೆಯವರು ಯಾರಾದರೂ ಕೆಮ್ಮಿದರೆ, ಸೀನಿದರೆ, ನೂರಾರು ಕಣಗಳು ಗಾಳಿಯಲ್ಲಿ ಸೇರಿ, ತೇಲಾಡಲು ಶುರು ಆಗುತ್ತದೆ. ನೇರವಾಗಿ ಬೀಳುವ ಸೂರ್ಯ ಕಿರಣಗಳು ಹೆಚ್ಚು ತಾಪಮಾನ ಹೊಂದಿರುವುದರಿಂದ, ಗಾಳಿಯಲ್ಲಿ ಅಡಗಿರುವ ಈ ಕ್ರಿಮಿಗಳೂ ಒಂದು ಹಂತಕ್ಕೆ ನಿರ್ಮೂಲ ಆಗುತ್ತವೆ. ಮನೆಯೊಳಗೆ ಕಿರಣಗಳ ತೀಕ್ಷ್ಣತೆ ಹೆಚ್ಚೆನಿಸಿದಾಗ, ಬೇಕೆಂದರೆ ಪರದೆ ಎಳೆದು ಅದನ್ನು ನಿಯಂತ್ರಿಸಬಹುದು. ಕ್ರಿಮಿನಾಶಕಗಳನ್ನು ಸಿಂಪಡಿಸಿದರೆ, ಅದು ನಮ್ಮ ಮೇಲೆಯೂ ಅಡ್ಡಪರಿಣಾಮ ಬೀರುತ್ತದೆ.
ಸೂರ್ಯ ಒಳಗೆ ಬರಲು : ಮನೆ ದಕ್ಷಿಣದಲ್ಲಿದ್ದರೆ ಚೆನ್ನ ಸೂರ್ಯನ ಕಿರಣಗಳು ಬೆಳಗ್ಗೆಯೇ ಒಂದು ರೀತಿ, ಸಂಜೆ ಇನ್ನೊಂದು ರೀತಿ ಇರುತ್ತವೆ ಎಂದೇನೂ ಇಲ್ಲ! ನಮಗೆ ಬೆಳಗ್ಗೆ ಆಗಿದ್ದಾಗ, ಅದೇ ದಿಕ್ಕು ಅಮೆರಿಕದವರಿಗೆ ಪಶ್ಚಿಮವಾಗಿರುತ್ತದೆ! ನಮ್ಮಲ್ಲಿ ಸೂರ್ಯ ಏಳುತ್ತಿದ್ದಂತೆ ಅಮೆರಿಕದಲ್ಲಿ ಮುಳುಗುತ್ತಿರುತ್ತಾನೆ. ನಿಮ್ಮ ಮನೆಗೆ ಪೂರ್ವದಿಂದ ಬರುವ ಕಿರಣಗಳು ಏನೆಲ್ಲ ಉಪಯುಕ್ತ ಕಾರ್ಯ ಮಾಡಬಲ್ಲವೋ, ಅವೆಲ್ಲವನ್ನೂ ಪಶ್ಚಿಮದ ಸಂಜೆ ಸೂರ್ಯನ ಕಿರಣಗಳೂ ಮಾಡಬಲ್ಲವು. ನಿಮ್ಮ ನಿವೇಶನದ ದಿಕ್ಕು ಪೂರ್ವವಿರಲಿ, ಪಶ್ಚಿಮವಿರಲಿ, ದಕ್ಷಿಣವಿದ್ದರೆ ಮತ್ತೂ ಚೆನ್ನ, ಕಿಟಕಿ ಬಾಗಿಲುಗಳನ್ನು ಈ ದಿಕ್ಕಿನಲ್ಲಿ ಇಟ್ಟರೆ ಸೂರ್ಯ ಕಿರಣಗಳು ಕೋಣೆಯ ಒಂದು ಭಾಗವನ್ನಾದರೂ ಪ್ರವೇಶಿಸುವಂತೆ ಮಾಡಬಹುದು.
–ಆರ್ಕಿಟೆಕ್ಟ್ ಕೆ. ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.