50 ಲಕ್ಷ ರೂ.ಗೆ ಬಾಲಕನ ಅಪಹರಿಸಿದ್ದವ ಸೆರೆ
ಹಣ ಕೊಡದಿದ್ದರೆ ನಿಮ್ಮ ಪುತ್ರನನ್ನು ಕೊಲ್ಲುವುದಾಗಿ' ಬೆದರಿಕೆ ಹಾಕಿದ್ದಾಳೆ.
Team Udayavani, Jun 9, 2022, 3:49 PM IST
ಬೆಂಗಳೂರು: ಬಾಲಕನನ್ನು ಅಪಹರಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದು, ಬಾಲಕನನ್ನು ಸುರಕ್ಷಿತವಾಗಿ ರಕ್ಷಿಸಲಾ ಗಿದೆ.
ಹೊರಮಾವು ನಿವಾಸಿ ಮನದೀಪ್ (11) ಅಪಹರಣಕ್ಕೊಳಗಾದ ಬಾಲಕ. ಕೃತ್ಯ ಎಸಗಿದ ನೇಪಾಳ ಮೂಲದ ಗೌರವ್ ಸಿಂಗ್(50) ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಯ ಸಹೋದರನ ಪತ್ನಿ ದುರ್ಗಾ ಎಂಬಾಕೆಗಾಗಿ ಶೋಧ ನಡೆ ಯುತ್ತಿದೆ.
ಹೊರಮಾವು ನಿವಾಸಿ, ಬಿಎಂಟಿಸಿ ಬಸ್ ಚಾಲಕ ಸುಭಾಷ್ ಅವರ ಪುತ್ರ ಮನದೀಪ್ ಮಂಗಳ ವಾರ ಸಂಜೆ 5.30ರ ಸುಮಾರಿಗೆ ಸಂಜೆ ಮನೆ ಬಳಿ ಆಟವಾಡುತ್ತಿದ್ದ. ಆಗ ಮನೆ ಸಮೀಪದಲ್ಲೇ ವಾಸವಾಗಿರುವ ಆರೋಪಿತೆ ಮಹಿಳೆ, ಬಾಲಕನಿಗೆ ಚಾಕೋಲೇಟ್ ಕೊಟ್ಟು, “ನಿನ್ನ ತಾಯಿ ಈಜುಕೋಳಕ್ಕೆ ಕರೆದೊಯ್ಯಲು’ ಹೇಳಿದ್ದಾರೆ ಎಂದು ನಂಬಿಸಿ ಬಸ್ ನಲ್ಲಿ ಜಿಗಿಣಿಯಲ್ಲಿ ಗೌರವ್ ಸಿಂಗ್ ಕೆಲಸ ಮಾಡುವ ಫಾರಂ ಹೌಸ್‌ಗೆ ಕರೆದೊಯ್ದಿದ್ದಾರೆ.
ಬಳಿಕ ಆರೋಪಿಗೆ ಬಾಲಕನನ್ನು ಒಪ್ಪಿಸಿ, ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ರಾತ್ರಿ 8.30ರ ಸುಮಾರಿ ಗೆ ಬಾಲಕನಿಂದಲೇ ಆತನ ತಾಯಿಯ ಮೊಬೈಲ್ ನಂಬರ್ ಪಡೆದು, “ನಿಮ್ಮ ಪುತ್ರನನ್ನು ಅಪಹರಿಸಿದ್ದು, ಆತನನ್ನು ಸುರಕ್ಷಿತವಾಗಿ ಕಳುಹಿಸಲು ಕೂಡಲೇ 50 ಲಕ್ಷ ರೂ. ಕೊಡಬೇಕು. ಪೊಲೀಸರಿಗೆ ದೂರು ನೀಡಿದರೆ ಅಥವಾ ಹಣ ಕೊಡದಿದ್ದರೆ ನಿಮ್ಮ ಪುತ್ರನನ್ನು ಕೊಲ್ಲುವುದಾಗಿ’ ಬೆದರಿಕೆ ಹಾಕಿದ್ದಾಳೆ. ಇದರಿಂದ ಗಾಬರಿಗೊಂಡ ತಂದೆ ಸುಭಾಷ್ ರಾತ್ರಿ ಹೆಣ್ಣೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರ ತಂಡ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸಿ, ಆರೋಪಿಯನ್ನು ಬಂಧಿಸಿದೆ.
ಸಿನಿಮೀಯ ರೀತಿ ಜೀಪ್ ಹಾರಿಸಿ ಬಾಲಕನ ರಕ್ಷಣೆ
ಬಾಲಕನ ಅಪಹರಣ ಸಂಬಂಧ ಎಸಿಬಿ ನಿಂಗಪ್ಪ ಸಕ್ರಿ ನೇತೃತ್ವದಲ್ಲಿ 2 ತಂಡ ರಚಿಸಲಾಗಿತ್ತು. ಒಂದು ತಂಡ ಸ್ಥಳೀಯ ಸಿಸಿ ಕ್ಯಾಮೆರಾ ಪರಿಶೀಲಿಸುತ್ತಿದ್ದರೆ, ಹೆಣ್ಣೂರು ಠಾಣೆ ಪಿಎಸ್‌ಐ ಲಿಂಗ ರಾಜು ತಂಡ ಆರೋಪಿಯ ಮೊಬೈಲ್ ಲೊಕೇಷನ್ ಆಧರಿಸಿ ಫಾರ್ಮ್ ಹೌಸ್ ಕಡೆ ಹೊರಟಿ ತ್ತು. ತಡರಾತ್ರಿ 2 ಗಂಟೆಗೆ ಗೌರವ್ ಸಿಂಗ್ ಕೆಲಸ ಮಾಡುತ್ತಿದ್ದ ಫಾರ್ಮ್ ಹೌಸ್‌ಗೆ ತೆರಳಿದ ತಂಡ ಪರಿಚಯಸ್ಥನ ಮೂಲಕ ಫಾರ್ಮ್ ಹೌಸ್ ಗೇಟ್ ತೆರೆಯಲು ಯತ್ನಿಸಿದ್ದಾರೆ. ಅದು ಸಾಧ್ಯವಾಗ ದಿದ್ದಾಗ, ಸುಮಾರು 8 ಅಡಿ ಎತ್ತರದ ಕಾಂಪೌಂಡ್ ಗೋಡೆಯನ್ನು ಸಿನಿಮೀಯ ರೀತಿಯಲ್ಲಿ ಪೊಲೀಸ್ ಜೀಪ್ ಬಳಸಿ ಕಾಂಪೌಂಡ್ ಹಾರಿ ಮನೆಗೆ ನುಗ್ಗಿ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಾಲಕನಿರುವ ಕೊಠಡಿಗೆ ತೆರಳಿ ಮನದೀಪ್ ನನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಅಪಹರಣಕ್ಕೆ ಮೊದಲೇ ಸಂಚು
ಆರೋಪಿ ಗೌರವ್ ಸಿಂಗ್ ಫಾರ್ಮಹೌಸ್ ನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು. ದುಡಿದ ಹಣ ಜೀವನ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ ಅಪಹರಣಕ್ಕೊಳಗಾದ ಬಾಲಕನ ಮನೆ ಸಮೀಪದ ಲ್ಲಿರುವ ಅತ್ತಿಗೆಗೆ ಹಣದ ಆಮಿಷವೊಡ್ಡಿ ಬಾಲಕನ ಅಪಹರಣದ ಸಂಚು ರೂಪಿಸಿದ್ದಾನೆ. ಬಳಿಕ ಮಹಿಳೆ ಪುಸಲಾಯಿಸಿ ಬಾಲಕನನ್ನು ಕರೆದೊಯ್ದಿದ್ದಾಳೆ ಎಂದು ಪೊಲೀಸರು ಹೇಳಿದರು. ಗೌರವ್ ಸಿಂಗ್ ಸಹೋದರನ ಪತ್ನಿ ದುರ್ಗಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 20 ವರ್ಷಗಳಿಂದ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.