596 ಪಾಸಿಟಿವ್:‌ ಮುಂಬೈ ಹಾದಿಯಲ್ಲಿ ನಗರ


Team Udayavani, Jun 28, 2020, 6:16 AM IST

596-positive

ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದೇ ದಿನ ದೃಢಪಡುತ್ತಿದ್ದ ಪ್ರಕರಣಗಳು ಶನಿವಾರ ಬೆಂಗಳೂರು ಒಂದರಲ್ಲೇ ದೃಢಪಟ್ಟಿದ್ದು, ಬರೋಬರೀ 596 ಮಂದಿಗೆ ಸೋಂಕು ತಗುಲುವ ಮೂಲಕ ತಣ್ಣಗಿದ್ದ ನಗರಕ್ಕೆ ಬಿಸಿ  ಮುಟ್ಟಿದಂತಾಗಿದೆ. ರಾಜಧಾನಿಯಲ್ಲಿ ಕೋವಿಡ್‌ 19 ನ್ಪೋಟಗೊಂಡಿದೆ. ಮುಂಬೈ, ದೆಹಲಿ, ಚೆನ್ನೈ ಸಾಲಿಗೆ ಬೆಂಗಳೂರು ಸೇರುತ್ತಿದ್ದು, ದ್ವಿಶತಕ ದಾಟದ ನಗರದಲ್ಲಿ ಶನಿವಾರ ಒಂದೇ ದಿನ 596 ಮಂದಿಗೆ ಸೋಂಕು ದೃಢಪಡುವ ಮೂಲಕ  ಜನರಲ್ಲಿ ಆತಂಕ ಹೆಚ್ಚು ಮಾಡಿದೆ.

ನಗರದಲ್ಲಿ ಸೋಂಕಿತರ ಸಂಖ್ಯೆ 2,531 ಏರಿಕೆ  ಯಾಗಿದ್ದು, ಶನಿವಾರ ಮೂವರು ಸೋಂಕಿತರು ಮೃತ  ಪಡುವ ಮೂಲಕ 84ಕ್ಕೆ ಏರಿಕೆಯಾಗಿದೆ. 125 ಜನರಿಗೆ ತೀವ್ರ ನಿಗಾ ಘಟಕದಲ್ಲಿ  ಚಿಕಿತ್ಸೆ ಪಡೆಯುತ್ತಿದ್ದು, ಇನ್ನು 1,913 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ  ಯುತ್ತಿದ್ದಾರೆ. 7 ಜನರು ಗುಣಮುಖರಾಗಿ ಬಿಡುಗಡೆ  ಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 16,688 ವ್ಯಕ್ತಿಗಳಿಗೆ  ಕೋವಿಡ್‌ 19 ತಪಾಸಣೆ ಮಾಡಲಾಗಿದೆ.

ನಗರದ ಅತ್ತಿಗುಪ್ಪೆಯಲ್ಲಿ ವ್ಯಕ್ತಿಯೊಬ್ಬರಿಗೆ ಶನಿವಾರ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅವರು, ವಾಸವಿರುವ ಮನೆಗೆ ಸೋಂಕು ನಿವಾರಕ ದ್ರಾವಣ  ಸಿಂಪಡಣೆ ಮಾಡ ಲಾಗಿದೆ. ಮಹಾಲಕ್ಷಿ ಲೇಔಟ್‌ ಬಳಿಯ ನಾಗಪುರ ವಾರ್ಡ್‌ನ ವ್ಯಕ್ತಿ  ಯೊಬ್ಬರಿಗೆ ಸೋಂಕು ಕಂಡು ಬಂದಿದ್ದು, ಅವರ ಮನೆಯ ರಸ್ತೆಯನ್ನು ಕಂಟೈನ್ಮೆಂಟ್‌ ವಲಯ ಎಂದು ಘೋಷಿಸಲಾಗಿದೆ. ದೊಡ್ಡಮಾವಳ್ಳಿಯ ಎಚ್‌. ಸಿದ್ದಯ್ಯ ರೆಫರಲ್‌ ಆಸ್ಪತ್ರೆ ಸಿಬ್ಬಂದಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ.

ಸಿಬ್ಬಂದಿಯನ್ನು ಚಿಕಿತ್ಸೆಗೆ ರವಾನಿಸಲಾಗಿದ್ದು, ತಾತ್ಕಾಲಿಕವಾಗಿ ಆಸ್ಪತ್ರೆಯನ್ನು ಬಂದ್‌ ಮಾಡಲಾಗಿದೆ. ಶಿವನಗರದ ಅಪಾರ್ಟ್‌ಮೆಂಟ್‌ನಲ್ಲಿ 48 ವರ್ಷದ ವ್ಯಕ್ತಿ, ಆತನ ಪತ್ನಿ, 30 ವರ್ಷದ ಸಹೋದರನಿಗೆ ಸೋಂಕು ದೃಢಪಟ್ಟಿದೆ. ಇನ್ನು ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಸಿಬ್ಬಂದಿಗೆ ಗುಣಮಟ್ಟದ ಮಾಸ್ಕ್, ಪಿಪಿಇ ಕಿಟ್‌ ಸೇರಿ ಕೋವಿಡ್‌ 19  ಸೋಂಕಿನಿಂದ ರಕ್ಷಣೆಗೆ ಸರಿಯಾದ ಸಾಧನಗಳನ್ನು ಕೊಡದೇ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

4.84 ಲಕ್ಷ ರೂ. ಸಂಗ್ರಹ: ಕೋವಿಡ್‌-19 ಸೋಂಕು ನಿಯಂತ್ರಿಸುವ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಾಗೂ ಮುಖಗವಸು (ಮಾಸ್ಕ್ ) ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುವವರಿಗೆ  ಮಾರ್ಷಲ್‌ಗ‌ಳು ದಂಡ ಸಂಗ್ರಹಿಸುತ್ತಿದ್ದು, ಶನಿವಾರ ಮಾಸ್ಕ್ ಧರಿಸದ 2,280 ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ 140 ಮಂದಿ ಸೇರಿದಂತೆ 2,420 ಮಂದಿಯಿಂದ ಒಟ್ಟು 4.84 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.

ಡ್ರೋನ್‌ ಮೂಲಕ ಔಷಧ ಸಿಂಪಡಣೆ: ನಗರದಲ್ಲಿ ಸೀಲ್‌ಡೌನ್‌ ಪ್ರದೇಶಗಳು ಹಾಗೂ ಕಂಟೈನ್ಮೆಂಟ್‌ ವಲಯ ಹೆಚ್ಚಾಗುತ್ತಿದ್ದು, ಡ್ರೋನ್‌ ಮೂಲಕ ಔಷಧಿ ಸಿಂಪಡಿಸಲು ತಯಾರಿ ಆರಂಭವಾಗಿದ್ದು, ಮಲ್ಲೇಶ್ವರದಲ್ಲಿ ಭಾನುವಾರ ಔಷಧ ಸಿಂಪಡಣೆ ನಡೆಯಲಿದೆ.

ನಗರದಲ್ಲಿ ಕೋವಿಡ್‌ಗೆ ಮೂರು ಬಲಿ: ಬನಶಂಕರಿಯ ಡಾ.ಬಿ.ಆರ್‌. ಅಂಬೇಡ್ಕರ್‌ ತಾಂತ್ರಿಕ ಕಾಲೇಜಿನ 50 ವರ್ಷದ ಆಡಳಿತಾಧಿಕಾರಿ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಶನಿವಾರ ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿದ್ದಾರೆ. ಜೂ 15 ರಂದು ಇವರನ್ನು ಕೋವಿಡ್‌ 19 ಪರೀಕ್ಷೆಗೆ ಒಳಪಡಿಸಿದಾಗ ವೈರಸ್‌ ತಗುಲಿರುವುದು ದೃಢವಾಗಿತ್ತು. ಅವರನ್ನು ಚಿಕಿತ್ಸೆಗೆ ಸೇಂಟ್‌ ಜಾನ್‌ ಆಸ್ಪತ್ರೆಗೆ ರವಾನಿಸಿ, ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡಲಾಗಿತ್ತು.  ಇನ್ನು ಅವರ ಪತ್ನಿಗೂ  ಪಾಸಿಟಿವ್‌ ದೃಢವಾಗಿದ್ದು, ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಇಬ್ಬರು ಮಕ್ಕಳು ಕ್ವಾರಂಟೈನ್‌ನಲ್ಲಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 83 ವರ್ಷದ ವೃದ್ಧೆ ಹಾಗೂ 70 ವರ್ಷದ  ಪುರುಷ ಸೋಂಕಿನಿಂದ ಮೃತಪಟ್ಟಿರುವುದು ವರದಿಯಾಗಿದೆ.

ಮಹಾರಾಷ್ಟ್ರದಿಂದ ಬರುವವರಿಗೆ 7ದಿನ ಕ್ವಾರಂಟೈನ್‌ ಕಡ್ಡಾಯ: ಮಹಾರಾಷ್ಟ್ರದಿಂದ ಬರುವವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್‌ ಮತ್ತು 7 ದಿನ ಹೋಂ ಕ್ವಾರಂಟೈನ್‌ ಹಾಗೂ ಮಹಾರಾಷ್ಟ್ರ ಹೊರತು ಪಡಿಸಿ ಬೇರೆ ರಾಜ್ಯದಿಂದ  ಕರ್ನಾಟಕಕ್ಕೆ ಬರುವವರಿಗೆ 14 ದಿನ ಹೋಂ ಕ್ವಾರಂಟೈನ್‌ ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿದೆ. ಕ್ವಾರಂಟೈನ್‌ ಸರ್ವೇಕ್ಷಣೆಯನ್ನು ತಂತ್ರಾಂಶದ ಮೂಲಕ ಮಾಡಲಾಗುತ್ತದೆ. ಈ ಸಂಬಂಧ ತಾಂತ್ರಿಕ ಅಪ್ಲಿಕೇಷನ್‌ ಮತ್ತು  ಸರ್ವೇಕ್ಷಣಾ ತಂಡದ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್‌ ಹಾಗೂ 7 ದಿನ ಹೋಂ ಕ್ವಾರಂಟೈನ್‌ ಕಡ್ಡಾಯವಾಗಿರು ತ್ತದೆ. ಅದೇ ರೀತಿ ಮಹಾರಾಷ್ಟ್ರ  ಹೊರತುಪಡಿಸಿ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನ ಹೋಂ ಕ್ವಾರಂಟೈನ್‌ ಕಡ್ಡಾಯವಾಗಿರು ತ್ತದೆ ಎಂದು ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಆದೇಶ  ಹೊರಡಿಸಿದ್ದಾರೆ.

ಕೆಎಸ್‌ಆರ್‌ಪಿಯಲ್ಲಿ 10 ಮಂದಿಗೆ ಪಾಸಿಟಿವ್‌: ಕೆಎಸ್‌ಆರ್‌ಪಿಯಲ್ಲಿ ಮತ್ತೆ ಕೋವಿಡ್‌ 19 ಕಾಣಿಸಿಕೊಂಡಿದ್ದು, ಶನಿವಾರ ಹತ್ತು ಮಂದಿಗೆ ಪಾಸಿಟಿವ್‌ ಬಂದಿದೆ. ಈ ಮೊದಲು ನಾಲ್ಕನೆ ಬೆಟಾಲಿಯನ್‌ ನಲ್ಲಿ 11 ಕೋವಿಡ್‌ 19  ಪ್ರಕರಣ  ಪತ್ತೆಯಾಗಿತ್ತು. ಹೀಗಾಗಿ ಒಂದೇ ಆವರಣದಲ್ಲಿ ವಾಸವಾಗಿದ್ದ ಮೂರು ಮತ್ತು ನಾಲ್ಕನೇ ಬೆಟಾಲಿಯನ್‌ ನ ಸುಮಾರು 100 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ವಾರಂಟೈನ್‌ ನಲ್ಲಿದ್ದ ಪೊಲೀಸ್‌ ಸಿಬ್ಬಂದಿಗೆ ಪರೀಕ್ಷೆಗೊಳಪಡಿಸಿದಾಗ ಮೂರನೇ ಬೆಟಾಲಿಯನ್‌ ನ ಹತ್ತು ಮಂದಿಗೆ ಪಾಸಿಟಿವ್‌ ಬಂದಿದೆ. ಈ ಹಿನ್ನೆಲೆಯಲ್ಲಿ ವಸತಿ ಸಂಕೀರ್ಣ ಮತ್ತು ಕಮಾಂಡೆಂಟ್‌ ಕಚೇರಿಗಳನ್ನು ಸೀಲ್‌ ಡೌನ್‌ ಮಾಡಲಾಗಿದ್ದು, ಔಷಧಿ ಸಿಂಪಡಿಸಲಾಗಿದೆ ಎಂದು  ಕೆಎಸ್‌ಆರ್‌ಪಿ ಮೂಲಗಳು ತಿಳಿಸಿವೆ.

ಕೋವಿಡ್‌ 19 ಗೆದ್ದ 100ರ ವೃದ್ಧೆ: ರೋಗ ನಿರೋಧಕ ಶಕ್ತಿ ಹೊಂದಿರುವ ಯುವಜನತೆ ಸೋಂಕಿನಿಂದ ಮೃತಪಡುತ್ತಿದ್ದು, ಶನಿವಾರ 100 ವರ್ಷದ ವೃದ್ಧೆಯೊಬ್ಬರು ಕೋವಿಡ್‌ 19 ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.  ಕುಮಾರಸ್ವಾಮಿ ಲೇಔಟ್‌ ನಿವಾಸಿಯಾಗಿರುವ ನೂರು ವರ್ಷದ ವೃದ್ಧೆಗೆ ಜೂ.15ರಂದು ಕೋವಿಡ್‌ 19 ಸೋಂಕು ದೃಢಪಟ್ಟಿತ್ತು. ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಗೆ ದಾಖಲಾಗಿ  ಕೇವಲ 9 ದಿನಗಳಲ್ಲೇ ಕೋವಿಡ್‌ 19 ವಿರುದಟಛಿ ಗೆದ್ದಿರುವ ಶತಾಯುಷಿ ವೃದ್ಧೆ ಆಸ್ಪತ್ರೆಯಿಂದ ಬಿಡುಗಡೆಯಾಗಿ  ಮನೆಗೆ ತೆರಳಿದ್ದಾರೆ.

495 ಕಂಟೈನ್ಮೆಂಟ್‌ ವಲಯ: ನಗರದಲ್ಲಿ ಕೋವಿಡ್‌ 19 ಸ್ಫೋಟಗೊಂಡಿದ್ದು, ಕಂಟೈನ್ಮೆಂಟ್‌ ವಲಯಗಳು ಹೆಚ್ಚಳವಾಗಿವೆ. 198 ವಾರ್ಡ್‌ಗಳಿಗೂ ಸೋಂಕು ಹರಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜೂ. 20 ರಂದು 437  ಕಂಟೈನ್ಮೆಂಟ್‌ ವಲಯಗಳಿದ್ದು, ಶನಿವಾರ ವೇಳೆಗೆ 495 ವಲಯ ಗುರತಿಸಲಾಗಿದೆ. ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿ ಹೆಚ್ಚಾಗಿ ಸೋಂಕಿತರು ಇರುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation; ಸಾವಿನ ನಂತರವೂ ನೆರವಾದ ಜೀವ: 5 ಜೀವ ಉಳಿಸಿದ ಅಂಗಾಂಗ ದಾನ

Organ Donation; ಸಾವಿನ ನಂತರವೂ ನೆರವಾದ ಜೀವ: 5 ಜೀವ ಉಳಿಸಿದ ಅಂಗಾಂಗ ದಾನ

Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್‌ ಸಮಸ್ಯೆ

Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್‌ ಸಮಸ್ಯೆ

Bengaluru: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಯುವಕನಿಂದ ಲೈಂಗಿಕ ಕಿರುಕುಳ; ದೂರು

Bengaluru: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಯುವಕನಿಂದ ಲೈಂಗಿಕ ಕಿರುಕುಳ; ದೂರು

Theft: ವಿದ್ಯಾಗಣಪತಿ, ಸುಬ್ರಹ್ಮಣ್ಯ ದೇಗುಲಗಳ ಹುಂಡಿ ಹಣ, 5 ಚಿನ್ನದ ತಾಳಿ ಬೊಟ್ಟು ಕಳವು

Theft: ವಿದ್ಯಾಗಣಪತಿ, ಸುಬ್ರಹ್ಮಣ್ಯ ದೇಗುಲಗಳ ಹುಂಡಿ ಹಣ, 5 ಚಿನ್ನದ ತಾಳಿ ಬೊಟ್ಟು ಕಳವು

Underpass: ಅಪಾಯ ಆಹ್ವಾನಿಸುತ್ತಿದೆ ಅಂಡರ್‌ಪಾಸ್‌ ಫಾಲ್ಸ್‌ ಸೀಲಿಂಗ್‌

Underpass: ಅಪಾಯ ಆಹ್ವಾನಿಸುತ್ತಿದೆ ಅಂಡರ್‌ಪಾಸ್‌ ಫಾಲ್ಸ್‌ ಸೀಲಿಂಗ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.