Metro ಹಳಿಗೆ ಬಿದ್ದ ಮಗು: ತಕ್ಷಣ ವಿದ್ಯುತ್‌ ನಿಲ್ಲಿಸಿ ರಕ್ಷಣೆ

ಮಗು ಬಿದ್ದ ಕೂಡಲೇ ಪ್ಲಾಟ್‌ಫಾರಂನ ಎಮೆರ್ಜೆನ್ಸಿ ಬಟನ್‌ ಒತ್ತಿದ ಭದ್ರತಾ ಸಿಬ್ಬಂದಿ; ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಘಟನೆ ;ಸಮಯಪ್ರಜ್ಞೆ ಮೆರೆದ ಸೆಕ್ಯುರಿಟಿ ಗಾರ್ಡ್‌ಗಳು

Team Udayavani, Aug 3, 2024, 12:41 PM IST

6-metro

ಬೆಂಗಳೂರು: ನಗರದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ರಾತ್ರಿ ಪ್ಲಾಟ್‌ಫಾರ್ಮ್ನಲ್ಲಿ ಆಟವಾಡುತ್ತಿದ್ದ 4 ವರ್ಷದ ಮಗು ಆಯತಪ್ಪಿ ಹಳಿ ಮೇಲೆ ಬಿದ್ದಿದ್ದು, ಕೂಡಲೇ ಎಚ್ಚೆತ್ತ ಭದ್ರತಾ ಹಾಗೂ ನಿಲ್ದಾಣ ನಿಯಂತ್ರಕ ಸಿಬ್ಬಂದಿ ರೈಲು ಹಳಿಯ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುರುವಾರ ರಾತ್ರಿ 9.08 ನಿಮಿಷಕ್ಕೆ ತಾಯಿ ಮತ್ತು ಇಬ್ಬರು ಮಕ್ಕಳು ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದು, ಪ್ಲಾಟ್‌ಫಾರ್ಮ್ 2ರಲ್ಲಿ ನಿಂತಿದ್ದರು. ಆಗ ತನ್ನ ಸಹೋದರನ ಜತೆ ಆಟವಾಡುತ್ತಿದ್ದ ಮಗು, ರೈಲು ಹಳಿ ಸಮೀಪ ತೆರಳಿದ್ದು, ಆಯತಪ್ಪಿ ಕೆಳಗೆ ಬಿದ್ದಿದ್ದೆ. ಅದೇ ವೇಳೆ ನಿಲ್ದಾಣದಲ್ಲಿದ್ದ ಭದ್ರತಾ ಸಿಬ್ಬಂದಿ ಕೂಡಲೇ ನಿಲ್ದಾಣ ನಿಯಂತ್ರಕರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಪ್ಲಾಟ್‌ಫಾರ್ಮ್ ನಲ್ಲಿರುವ ತುರ್ತು ರೈಲು ನಿಲುಗಡೆ(ಎಮರ್ಜೆನ್ಸಿ ಬಟನ್‌) ಬಟನ್‌ ಒತ್ತಿ ಕೆಲ ಕ್ಷಣಗಳಲ್ಲೇ ಹಳಿ ಮೇಲಿನ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಿದ್ದಾರೆ. ನಂತರ ಹಳಿ ಮೇಲೆ ಇಳಿದು ಮಗುವನ್ನು ರಕ್ಷಣೆ ಮಾಡಿದ್ದಾರೆ.

ಮೆಟ್ರೋ ಸಿಬ್ಬಂದಿ ಬಾಲಕನನ್ನು ಹಳಿಯಿಂದ ಎತ್ತಿ ಪ್ಲಾಟ್‌ಫಾರ್ಮ್ಗೆ ತಂದು ಪರೀಕ್ಷಿಸಿದ್ದಾರೆ. ಆಗ ಮಗುವಿನ ಎಡಕಿವಿಯ ಹಿಂದೆ ಸಣ್ಣ ಗಾಯಗಳಾಗಿದ್ದವು. ಬೇರೆ ಯಾವುದೇ ಗಾಯಗಳಾಗಿರಲಿಲ್ಲ. ಕೂಡಲೇ ಸರ್‌ ಸಿ.ವಿ. ರಾಮನ್‌ ಆಸ್ಪತ್ರೆಗೆ ಮೆಟ್ರೋ ಸಿಬ್ಬಂದಿಯೇ ಕರೆದೊಯ್ದು ಪರೀಕ್ಷೆ ಮಾಡಿಸಿದರು. ಯಾವುದೇ ಗಂಭೀರ ಸ್ವರೂಪದ ಗಾಯಗಳು ಆಗಿರಲಿಲ್ಲ. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದರು.

ಆ ನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಮಾಡಿಸಲಾಗಿದ್ದು, ಯಾವುದೇ ಸಮಸ್ಯೆ ಕಂಡು ಬಾರದ ಕಾರಣ ಮಗುವನ್ನು ತಾಯಿ ಜತೆಗೆ ಕಳುಹಿಸಿಕೊಡಲಾಯಿತು. ಈ ಘಟನೆಯಿಂದಾಗಿ ರಾತ್ರಿ 9.08ರಿಂದ 9.15ರವರೆಗೆ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳಿಸಲಾಯಿತು. ಬಳಿಕ ಎಂದಿನಂತೆ ಕಾರ್ಯಾಚರಣೆ ನಡೆಯಿತು ಎಂದು ಬಿಎಂಆರ್‌ ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಗು ಉಳಿಸಿದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು:

ಮಗು ರೈಲು ಹಳಿಗೆ ಬೀಳುತ್ತಿದ್ದಂತೆ ಎಚ್ಚೆತ್ತ ಪ್ಲಾಟ್‌ಫಾರ್ಮ್ಗಳಲ್ಲಿದ್ದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು ಕೂಡಲೇ ಎಮರ್ಜೆನ್ಸಿ ಬಟನ್‌ ಒತ್ತಿ, ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ. ಅದರಿಂದ ಮಗುವಿನ ಪ್ರಾಣ ಉಳಿದಿದೆ. ಇಲ್ಲವಾದರೆ ಮಗುವಿನ ಪ್ರಾಣ ಹೋಗುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಆಗಿದ್ದೇನು?

 ಇಬ್ಬರು ಮಕ್ಕಳ ಜತೆ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ತಾಯಿ

 ಈ ವೇಳೆ ಸಹೋದರನ ಜತೆ ಆಟವಾಡುತ್ತಾ ಹಳಿಗೆ ಬಿದ್ದ 4 ವರ್ಷದ ಮಗು

 ಕೂಡಲೇ ನಿಲ್ದಾಣದ ನಿಯಂತ್ರಕರಿಗೆ ಮಾಹಿತಿ ನೀಡಿದ ಭದ್ರತಾ ಸಿಬ್ಬಂದಿ

 ಎಮರ್ಜೆನ್ಸಿ ಬಟನ್‌ ಒತ್ತಿ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಿದ ಸೆಕ್ಯೂರಿಟಿ

 ಬಳಿಕ ಹಳಿ ಮೇಲೆ ಇಳಿದು ಮಗುವನ್ನು ಮೇಲಕ್ಕೆ ಎತ್ತಿ ರಕ್ಷಿಸಿದ ನೌಕರ

ಹಳಿಗೆ ಜಿಗಿದ ಘಟನೆಗಳು

2012ರ ಮಾ. 5ರಂದು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ವಿದ್ಯಾರ್ಥಿಯೊಬ್ಬ ಮೆಟ್ರೋ ರೈಲಿನೆದುರು ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಇದು ಮೊದಲ ಘಟನೆಯಾಗಿದೆ.

2019ರಲ್ಲಿ ವಿದ್ಯಾರ್ಥಿಯೊಬ್ಬ ಬಸವನಗುಡಿ ನ್ಯಾಷನಲ್‌ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ. ಅದೃಷ್ಟವಶಾತ್‌ ಬದುಕಿದ್ದ.

ಈ ವರ್ಷದ ಹೊಸ ವರ್ಷದ ಮೊದಲ ದಿನವೇ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಮೊಬೈಲ್‌ ಬಿತ್ತು ಎಂಬ ಕಾರಣಕ್ಕೆ ಮಹಿಳೆ ಟ್ರಾಕ್‌ಗೆ ಇಳಿದಿದ್ದರು. ತಕ್ಷಣ ಎಚ್ಚೆತ್ತ ಸಿಬ್ಬಂದಿ ಹಳಿಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರಿಂದ ಮಹಿಳೆ ಅಪಾಯದಿಂದ ಪಾರಾಗಿದ್ದರು.

ಟಾಪ್ ನ್ಯೂಸ್

HDD

Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ

Noida: ಕಚೇರಿಯಲ್ಲಿ ವೃದ್ಧನನ್ನು ಕಾಯಿಸಿದ ಸಿಬ್ಬಂದಿಗೆ ನಿಂತು ಕೆಲಸ ಮಾಡೋ ಶಿಕ್ಷೆ

Noida: ಕಚೇರಿಯಲ್ಲಿ ವೃದ್ಧನನ್ನು ಕಾಯಿಸಿದ ಸಿಬ್ಬಂದಿಗೆ ನಿಂತು ಕೆಲಸ ಮಾಡೋ ಶಿಕ್ಷೆ

Madras ಐಐಟಿಯಲ್ಲಿ ಲಲಿತ ಕಲಾ ಕೋಟಾ: ಇದೇ ಮೊದಲು!

Madras ಐಐಟಿಯಲ್ಲಿ ಲಲಿತ ಕಲಾ ಕೋಟಾ: ಇದೇ ಮೊದಲು!

Feb 2025: ಬಿಜೆಪಿಗೆ ನೂತನ ಅಧ್ಯಕ್ಷ ಆಯ್ಕೆ? ಜನವರಿ ಮಧ್ಯಭಾಗದಲ್ಲಿ ರಾಜ್ಯಘಟಕಗಳಿಗೆ ಆಯ್ಕೆ

Feb 2025: ಬಿಜೆಪಿಗೆ ನೂತನ ಅಧ್ಯಕ್ಷ ಆಯ್ಕೆ? ಜನವರಿ ಮಧ್ಯಭಾಗದಲ್ಲಿ ರಾಜ್ಯಘಟಕಗಳಿಗೆ ಆಯ್ಕೆ

Mohan Bhagwat: ಅಹಂಕಾರ ಬಿಡಿ, ಇಲ್ಲದಿದ್ರೆ ಹಳ್ಳಕ್ಕೆ ಬೀಳ್ತೀರಿ

Mohan Bhagwat: ಅಹಂಕಾರ ಬಿಡಿ, ಇಲ್ಲದಿದ್ರೆ ಹಳ್ಳಕ್ಕೆ ಬೀಳ್ತೀರಿ

Rajya Sabha: ಸಂವಿಧಾನ ಕಾಂಗ್ರೆಸ್‌ನ ಆಸ್ತಿ ಅಲ್ಲ: ಸಚಿವ ಅಮಿತ್‌ ಶಾ ಗುಡುಗು

Rajya Sabha: ಸಂವಿಧಾನ ಕಾಂಗ್ರೆಸ್‌ನ ಆಸ್ತಿ ಅಲ್ಲ: ಸಚಿವ ಅಮಿತ್‌ ಶಾ ಗುಡುಗು

Kannada ಸಾಹಿತ್ಯ ಸಮ್ಮೇಳನ 2 – 3 ವರ್ಷಕ್ಕೊಮ್ಮೆ ನಡೆಯಲಿ

Kannada ಸಾಹಿತ್ಯ ಸಮ್ಮೇಳನ 2 – 3 ವರ್ಷಕ್ಕೊಮ್ಮೆ ನಡೆಯಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

Theft Case: ರಿಯಲ್‌ ಎಸ್ಟೇಟ್‌ ಉದ್ಯಮಿ ಮನೆಗೆ ನುಗ್ಗಿ 50 ಲಕ್ಷ ಮೌಲ್ಯದ ಚಿನ್ನ ಕಳವು

Theft Case: ರಿಯಲ್‌ ಎಸ್ಟೇಟ್‌ ಉದ್ಯಮಿ ಮನೆಗೆ ನುಗ್ಗಿ 50 ಲಕ್ಷ ಮೌಲ್ಯದ ಚಿನ್ನ ಕಳವು

Bengaluru: ಮದ್ಯಪಾನ, ಅತಿ ವೇಗದ ಚಾಲನೆ: 689 ಕೇಸ್‌, 1.33 ಲಕ್ಷ ರೂ. ದಂಡ

Bengaluru: ಮದ್ಯಪಾನ, ಅತಿ ವೇಗದ ಚಾಲನೆ: 689 ಕೇಸ್‌, 1.33 ಲಕ್ಷ ರೂ. ದಂಡ

Bengaluru: ಪತ್ನಿ ಮೇಲಿನ ಕೋಪಕ್ಕೆ 4.5 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ

Bengaluru: ಪತ್ನಿ ಮೇಲಿನ ಕೋಪಕ್ಕೆ 4.5 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ

ಮಾಲಿನ್ಯ ನಿಯಂತ್ರಣ ಮಂಡಳಿ ನೇಮಕಕ್ಕೆ ವಿದ್ಯಾರ್ಹತೆ ಸಡಿಲ: ಹೈಕೋರ್ಟ್‌ಗೆ ಅರ್ಜಿ

ಮಾಲಿನ್ಯ ನಿಯಂತ್ರಣ ಮಂಡಳಿ ನೇಮಕಕ್ಕೆ ವಿದ್ಯಾರ್ಹತೆ ಸಡಿಲ: ಹೈಕೋರ್ಟ್‌ಗೆ ಅರ್ಜಿ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Dina Bhavishya

Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ

HDD

Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ

Noida: ಕಚೇರಿಯಲ್ಲಿ ವೃದ್ಧನನ್ನು ಕಾಯಿಸಿದ ಸಿಬ್ಬಂದಿಗೆ ನಿಂತು ಕೆಲಸ ಮಾಡೋ ಶಿಕ್ಷೆ

Noida: ಕಚೇರಿಯಲ್ಲಿ ವೃದ್ಧನನ್ನು ಕಾಯಿಸಿದ ಸಿಬ್ಬಂದಿಗೆ ನಿಂತು ಕೆಲಸ ಮಾಡೋ ಶಿಕ್ಷೆ

Madras ಐಐಟಿಯಲ್ಲಿ ಲಲಿತ ಕಲಾ ಕೋಟಾ: ಇದೇ ಮೊದಲು!

Madras ಐಐಟಿಯಲ್ಲಿ ಲಲಿತ ಕಲಾ ಕೋಟಾ: ಇದೇ ಮೊದಲು!

Feb 2025: ಬಿಜೆಪಿಗೆ ನೂತನ ಅಧ್ಯಕ್ಷ ಆಯ್ಕೆ? ಜನವರಿ ಮಧ್ಯಭಾಗದಲ್ಲಿ ರಾಜ್ಯಘಟಕಗಳಿಗೆ ಆಯ್ಕೆ

Feb 2025: ಬಿಜೆಪಿಗೆ ನೂತನ ಅಧ್ಯಕ್ಷ ಆಯ್ಕೆ? ಜನವರಿ ಮಧ್ಯಭಾಗದಲ್ಲಿ ರಾಜ್ಯಘಟಕಗಳಿಗೆ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.