Silicon City ಜನರಿಗೆ ಮಾಲಿನ್ಯ ಕಂಟಕ! ಗಾಳಿ ಗುಣಮಟ್ಟ ಕುಸಿತದಿಂದ ಹೃದಯ ಸಂಬಂಧಿ ಕಾಯಿಲೆ

ಬೆಂಗಳೂರಿನಲ್ಲಿ ಶೇ.60 ಮಾಲಿನ್ಯ ಪ್ರಮಾಣ ಹೆಚ್ಚಳ

Team Udayavani, Sep 8, 2023, 11:18 AM IST

8-bangalore

ಬೆಂಗಳೂರು: ಐಟಿ-ಬಿಟಿ ಹಬ್‌, ಸಿಲಿಕಾನ್‌ ಸಿಟಿ, ಉದ್ಯಾನ ನಗರಿ, ಮಹಾನಗರ ಎಂಬ ಖ್ಯಾತಿ ಪಡೆದು, ಒಂದೂವರೆ ಕೋಟಿ ಜನರಿಗೆ ನೆಲೆ ಕೊಟ್ಟಿರುವ ರಾಜ್ಯ ರಾಜಧಾನಿಗೆ ಮಾಲಿನ್ಯದ ಕಂಟಕ ಎದುರಾಗಿದೆ. ಪರಿಣಾಮ ವಾಯು ಮಾಲಿನ್ಯದಿಂದ ಮಾರಣಾಂತಿಕ ಕಾಯಿಲೆಗೆ ತುತ್ತಾಗುವ ದುಸ್ಥಿತಿ ಬಂದೊದಗಿದೆ.

ಬೆಂಗಳೂರಿನಲ್ಲಿ ವರ್ಷ ದಿಂದ ವರ್ಷಕ್ಕೆ ವಾಯು ಮಾಲಿನ್ಯ ಪ್ರಮಾಣ ಹೆಚ್ಚು ತ್ತಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿಯು ಹಲವು ಕ್ರಮ ಜಾರಿಗೊಳಿಸಿದರೂ ಶೇ.60ರಷ್ಟು ಮಾಲಿನ್ಯ ಪ್ರಮಾಣ ಏರಿಕೆಯಾಗಿದೆ.

ವಿವಿಧ ಕಾಯಿಲೆಗೆ ತುತ್ತು:

2022 ಆಗಸ್ಟ್‌ ಮಾಸಕ್ಕೆ ಹೋಲಿ ಸಿದರೆ ಈ ವರ್ಷ ವಾಯು ಮಾಲಿ ನ್ಯವು ಇನ್ನಷ್ಟು ಹೆಚ್ಚಿದೆ. ಇದರಿಂದ ಬೆಂಗಳೂರಿಗರಲ್ಲಿ ಬಹುತೇಕ ಮಂದಿ ಅಸ್ತಮಾ, ಅಲರ್ಜಿ, ಉಸಿರಾಟದ ಸಮಸ್ಯೆ, ಶ್ವಾಸ ಕೋ ಶದ ಸಮಸ್ಯೆ, ಹೊಸ ಮಾದರಿಯ ವೈರಲ್‌ ಜ್ವರ, ಕಣ್ಣಿನ ಸಮಸ್ಯೆ ದುಪ್ಪಟ್ಟಾಗಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ.

ಗಾಳಿಯ ಗುಣಮಟ್ಟ ಕುಸಿತವು ಮಕ್ಕಳು, ವೃದ್ಧರು, ಗರ್ಭಿಣಿಯರಲ್ಲಿ ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ದ್ವಿಗುಣ ಗೊಳ್ಳು ವಂತೆ ಮಾಡಿದೆ ಎಂಬುದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮೂಲ ಗಳಿಂದ ತಿಳಿದು ಬಂದಿದೆ.

ಮಿತಿಗಿಂತ 4 ಪಟ್ಟು ಮಾಲಿನ್ಯ ಹೆಚ್ಚಳ:

ಸಿಲಿ ಕಾನ್‌ ಸಿಟಿಯಲ್ಲಿ ಡಬ್ಲೂé ಎಚ್‌ಒ ನಿಗದಿಪಡಿಸಿರುವ ಮಿತಿಗಿಂತ 4ಕ್ಕೂ ಹೆಚ್ಚು ಪಟ್ಟು ಮಾಲಿನ್ಯ ಉಂಟಾಗಿದೆ. ಧೂಳಿನ ಕಣ, ನೈಟ್ರೋಜನ್‌ ಡಯಾಕ್ಸೆ„ಡ್‌ ಪ್ರಮಾಣ ಸುರಕ್ಷಿತ ಮಟ್ಟಕ್ಕಿಂತ 1.4 ಪಟ್ಟು ಹೆಚ್ಚಾಗಿರುವುದು ಗ್ರೀನ್‌ ಪೀಸ್‌ ಇಂಡಿಯಾ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಪರ್ಟಿಕ್ಯುಲರ್‌ ಮ್ಯಾಟರ್‌ ಹೆಚ್ಚಳದಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿ ವಾರ್ಷಿಕವಾಗಿ ಸಾವಿರಾರು ಮಂದಿ ಮರಣ ಹೊಂದುತ್ತಿರುವುದು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಅಡ್ವಾನ್ಸ್‌ ಸ್ಟಡೀಸ್‌ ನಡೆಸಿದ್ದ ಅಧ್ಯಯನ ದೃಢಪಡಿಸಿದೆ.

ಎಕ್ಯೂಐ ಪ್ರಮಾಣ ಹೆಚ್ಚಳ:

ಬೆಂಗಳೂರಿನ ವಿವಿಧೆಡೆ ಒಟ್ಟು 7 ವಾಯು ಮಾಲಿನ್ಯ ಪರಿಶೀಲನಾ ಘಟಕಗಳಿವೆ. ಜನ ವಸತಿ, ವಾಣಿಜ್ಯ, ಮಿಶ್ರ ಪ್ರದೇಶಗಳು, ಶಾಂತ ಸ್ಥಳಗಳಲ್ಲಿರುವ ಈ ಘಟಕಗಳು ನಿರಂತರವಾಗಿ ಬೆಂಗಳೂರಿನ ವಾಯು ಗುಣಮಟ್ಟವನ್ನು ಪರಿಶೀಲಿಸುತ್ತವೆ. ಇದರ ಪ್ರಕಾರ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ) 201ರ ಮೇಲೆ ದಾಟಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

2022 ಆಗಸ್ಟ್‌ನಲ್ಲಿ ಮೈಸೂರು ರಸ್ತೆಯಲ್ಲಿ ಕೇವಲ 2 ದಿನಗಳ ಕಾಲ 104 ರಿಂದ 108ರಷ್ಟು ಎಕ್ಯೂಐ ಇತ್ತು. ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ 11 ದಿನ ಎಕ್ಯೂಐ ಮಧ್ಯಮ ಸ್ಥಿತಿಯಲ್ಲಿತ್ತು. ಇದನ್ನು ಹೊರತುಪಡಿಸಿದರೆ 2022ರ ಆಗಸ್ಟ್‌ನಲ್ಲಿ ನಗರದೆಲ್ಲೆಡೆ ಮಾಲಿನ್ಯ ಸ್ಥಿರವಾಗಿತ್ತು. ಆದರೆ, 2023ರ ಆಗಸ್ಟ್‌ನಲ್ಲಿ ಜಯನಗರದಲ್ಲಿ ಎಕ್ಯೂಐ ಗರಿಷ್ಠ 125, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ 135, ಕೆಂಗೇರಿ 112, ಕಸ್ತೂರಿನಗರ 103, ಮೈಸೂರು ರಸ್ತೆ 93ಕ್ಕೆ ಹೆಚ್ಚಳವಾಗಿದೆ.

ಶೇ.60 ಮಾಲಿನ್ಯ ಹೆಚ್ಚಳ

ಕಳೆದ 4 ವರ್ಷಗಳಲ್ಲಿ ವಾಹನಗಳ ಓಡಾಟ ಮಿತಿ ಮೀರಿ ಹೋಗಿರುವುದು, ಜನಸಂಖ್ಯೆ ಏರುತ್ತಿರುವುದು, ಮಿತಿಗಿಂತ ಹೆಚ್ಚು ಕಟ್ಟಡಗಳು ತಲೆ ಎತ್ತುತ್ತಿರುವುದು, ಎಲ್ಲೆಂದರಲ್ಲಿ ಕಸ ಎಸೆಯುವುದು, ಕೈಗಾರಿಗಳ ಹೆಚ್ಚಳದಿಂದ ರಸ್ತೆಯ ಧೂಳಿನ ಮಾಲಿನ್ಯವು ಶೇ.60ರಷ್ಟು ಹೆಚ್ಚಾಗಿದೆ ಎಂಬುದನ್ನು ಸಮೀಕ್ಷೆಗಳು ಬಹಿರಂಗಪಡಿಸಿವೆ. ಮಾಲಿನ್ಯಕಾರಕಗಳಿಗೆ ದೀರ್ಘ‌ಕಾಲದವರೆಗೆ ದೇಹವು ಒಡ್ಡಿಕೊಂಡರೆ ಶ್ವಾಸಕೋಶದ ಕ್ಯಾನ್ಸರ್‌, ಹೃದಯದ ಕ್ತನಾಳದಲ್ಲಿ ತೊಂದರೆ, ಶ್ವಾಸಕೋಶದ ಕಾರ್ಯ ಕಡಿಮೆಗೊಳಿಸುವಂತಹ ದೀರ್ಘ‌ಕಾಲದ ಕಾಯಿಲೆಗಳ ಅಪಾಯ ಹೆಚ್ಚಾಗುವ ಆತಂಕ ಎದುರಾಗಲಿದೆ.

ಮಾಲಿನ್ಯ ತಡೆಗಟ್ಟಲು ಏನು ಮಾಡಬೇಕು ?

 ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ ನೀಡುವುದು.

 ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವುದು.

 ಕೈಗಾರಿಕಾ ಹೊರಸೂಸುವಿಕೆ ನಿಯಂತ್ರಿಸಲು ಕ್ರಮ.

 ತ್ಯಾಜ್ಯಗಳ ಸೂಕ್ತ ರೀತಿಯ ನಿರ್ವಹಣೆ ಮಾಡುವುದು.

 ಹೆಚ್ಚು ಗಿಡ ನೆಟ್ಟು ಮರಗಳನ್ನು ಪೋಷಿಸುವುದು.

ಬೆಂಗಳೂರಿನಲ್ಲಿ ಮಾಲಿನ್ಯದಿಂದ 1ರಿಂದ 15 ವರ್ಷದ ಮಕ್ಕಳಲ್ಲಿ ಅನಾರೋಗ್ಯ ಹೆಚ್ಚುತ್ತಿದೆ. ಹೆಚ್ಚಿನ ವಾಯು ಮಾಲಿನ್ಯ ನಗರಗಳ ಪೈಕಿ ದೇಶದಲ್ಲೇ ದೆಹಲಿ ಹೊರತುಪಡಿಸಿದರೆ ಬೆಂಗಳೂರು ನಂತರದ ಸ್ಥಾನದಲ್ಲಿದೆ. ಮಾಲಿನ್ಯದ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ●ಡಾ.ಎ.ಎನ್‌.ಯಲ್ಲಪ್ಪ ರೆಡ್ಡಿ, ಪರಿಸರ ತಜ್ಞ.

ಬೆಳವಣಿಗೆ ಹೆಸರಿನಲ್ಲಿ ಮನುಷ್ಯ ಕೃತಕ ಬದುಕು ನಡೆಸುತ್ತಿರುವುದು ಮಾಲಿನ್ಯ ಹೆಚ್ಚಲು ಪ್ರಮುಖ ಕಾರಣವಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದ ಅಲರ್ಜಿ, ಸೋಂಕು ಉಂಟಾದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಇಲ್ಲದಿದ್ದರೆ ಕಾಯಿಲೆ ಗಂಭೀರ ಸ್ವರೂಪಕ್ಕೆ ಹೋಗುವ ಸಾಧ್ಯತೆಗಳಿರುತ್ತವೆ. ●ಡಾ.ಬಿ.ಎಲ್‌.ಸುಜಾತಾ ರಾಥೋಡ್‌, ನಿರ್ದೇಶಕಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ.

●ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

4-bng

Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.