![Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣUdupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ](https://www.udayavani.com/wp-content/uploads/2025/02/ga-1-415x216.jpg)
![Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣUdupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ](https://www.udayavani.com/wp-content/uploads/2025/02/ga-1-415x216.jpg)
Team Udayavani, Jan 30, 2025, 8:28 AM IST
ಬೆಂಗಳೂರು: ಕಾರಿಗೆ ಅಡ್ಡ ಬಂದಿದ್ದಕ್ಕೆ ಚಾಲಕ ಸೇರಿ ಮೂವರು ಬೈಕ್ ಸವಾರನಿಗೆ ನಡು ರಸ್ತೆಯಲ್ಲಿ ಅಮಾನವೀಯವಾಗಿ ಹಲ್ಲೆ ನಡೆಸಿ, ಕಾರಿನಿಂದ ಗುದ್ದಿ ಹತ್ಯೆಗೆ ಯತ್ನಿಸಿರುವ ಘಟನೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಲ್ಲೇಶ್ವರದ ಮಿಲ್ಕ್ ಕಾಲೋನಿ ನಿವಾಸಿ ಎನ್. ಭರತ್ (25) ಹಲ್ಲೆಗೊಳಗಾದವರು.
ಜನವರಿ 8ರ ತಡರಾತ್ರಿ ಸುಮಾರು 1.30ಕ್ಕೆ ಮಲ್ಲೇಶ್ವರದ 17ನೇ ಅಡ್ಡರಸ್ತೆಯ ಜಿಯೋ ಮೆಸ್ಟ್ರಿ ಗ್ಯಾಸ್ಟ್ರೋ ಪಬ್ ಎದುರು ಘಟನೆ ನಡೆದಿದೆ. ಆರೋಪಿಯ ಕಾರು ನಂಬರ್ ಪತ್ತೆಯಾಗಿದ್ದು, ಸದ್ಯದಲ್ಲೇ ಆರೋಪಿಗಳ ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದರು.
ಏನಿದು ಘಟನೆ?: ಕೋರಮಂಗಲದ ಖಾಸಗಿ ಕಂಪನಿ ಯಲ್ಲಿ ಕೆಲಸ ಮಾಡುತ್ತಿರುವ ದೂರುದಾರ ಭರತ್, ಜ.7ರ ತಡರಾತ್ರಿ ಕೆಲಸ ಮುಗಿಸಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಸ್ನೇಹಿತನನ್ನು ವಿಜಯನಗರಕ್ಕೆ ಡ್ರಾಪ್ ಮಾಡಿ ಬಳಿಕ ಮನೆ ಕಡೆಗೆ ಬರುತ್ತಿದ್ದರು. ಮಲ್ಲೇಶ್ವರದ 17ನೇ ಕ್ರಾಸ್‌ನಲ್ಲಿ ಮನೆಗೆ ತೆರಳಲು ದ್ವಿಚಕ್ರ ವಾಹನ ತಿರುವು ಪಡೆಯುವಾಗ ವೈಟ್ ಹಾರ್ಸ್ ಪಬ್ ಕಡೆಯಿಂದ ಕಾರೊಂದು ಬಂದಿದ್ದು, ದ್ವಿಚಕ್ರ ವಾಹನಕ್ಕೆ ಅಡ್ಡ ನಿಲ್ಲಿಸಿದ್ದಾರೆ.
ಬಳಿಕ ಬಳಿಕ ಕಾರು ಚಾಲಕ ಹಾಗೂ ಆತನ ಇಬ್ಬರು ಸಚಹರರು ಕಾರಿನಿಂದ ಕೆಳಗೆ ಇಳಿದು ಏಕಾಏಕಿ ಭರತ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಕಾರನ್ನು ಭರತ್ ಮೇಲೆ ಚಲಾಯಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಾರಿನ ಬಾನೆಟ್ ಹಿಡಿದ ಭರತ್, ಸುಮಾರು 200 ಮೀಟರ್ ನೇತಾಡಿ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ತೋಳು, ತಲೆ, ಬೆನ್ನಿಗೆ ರಕ್ತಗಾಯವಾಗಿದೆ. ಬಳಿಕ ದುಷ್ಕರ್ಮಿಗಳು ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಸದ್ಯ ಗಾಯಾಳು ಭರತ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದರು.
ಆಗಿದ್ದೇನು?
ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಭರತ್
ಇದೇ ವೇಳೆ ಕಾರಿನಲ್ಲಿ ಬರುತ್ತಿದ್ದ ಚಾಲಕ ಹಾಗೂ ಇಬ್ಬರು ಸ್ನೇಹಿತರು.
ಮಲ್ಲೇಶ್ವರದ ಬಳಿ ತಿರುವಿನಲ್ಲಿ ದಿಢೀರ್ ಬಂದ ಭರತ್
ಕಾರು ನಿಲ್ಲಿಸಿ ಬೈಕ್ ಅಡ್ಡಗಟ್ಟಿದ ಚಾಲಕ, ಇಬ್ಬರು ಸಹಚರರು
ಕಾರಿನಿಂದ ಮೂವರು ಇಳಿದು ಏಕಾಏಕಿ ಭರತ್ ಮೇಲೆ ತೀವ್ರ ಹಲ್ಲೆ
ಬಳಿಕ ಭರತ್ ಮೇಲೆಯೇ ಕಾರು ಹರಿಸಲು ಯತ್ನಿಸಿದ ಚಾಲಕ
ಕಾರಿನ ಬಾನೆಟ್ ಹಿಡಿದುಕೊಂಡು ನೇತಾಡಿದ ಸಂತ್ರಸ್ತ ಯುವಕ
ಬಾನೆಟ್ ಮೇಲೆಯೇ 200 ಮೀಟರ್ ಉದ್ದಕ್ಕೆ ಹೋಗಿ ಕೆಳಗಿ ಬಿದ್ದ ಭರತ್
ಯುವಕನಿಗೆ ಗಂಭೀರ ಗಾಯ, ಪ್ರಾಣಾಪಾಯದಿಂದ ಪಾರು
Cauvery water: ಕಾವೇರಿ ನೀರು ಬಳಸಿ ಕಾರು ತೊಳೆದರೆ ಹುಷಾರ್: ಬೀಳುತ್ತೆ 5000 ರೂ. ದಂಡ!
Fraud: ಟ್ರಾಯ್, ಸಿಬಿಐ ತಂಡದ ಹೆಸರಿನಲ್ಲಿ 42.85 ಲಕ್ಷ ರೂ. ವಂಚನೆ: ಕೇಸ್ ದಾಖಲು
Namma Metro: ದರ ಗಣನೀಯ ಹೆಚ್ಚಳದ ಬೆನ್ನಲ್ಲೇ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತ
Fraud Case: ಐಶ್ವರ್ಯಗೌಡ ವಿರುದ್ಧದ ಕೇಸ್‌ಗೆ ಇ.ಡಿ. ಎಂಟ್ರಿ
Bengaluru: ಬುದ್ಧಿವಾದ ಹೇಳಿದ್ದಕ್ಕೆ ತಂದೆಯನ್ನೇ ಕೊಂದ ಪುತ್ರ!
You seem to have an Ad Blocker on.
To continue reading, please turn it off or whitelist Udayavani.