ಪ್ರಿಯಕರನಿಗೆ ಗಂಡಸ್ತನ ಸವಾಲು ಹಾಕಿ ಪತಿ ಹತ್ಯೆ

ಉಸಿರುಗಟ್ಟಿಸಿ ಕೊಂದು ಸಹಜ ಸಾವು ಎಂದ ನಾಟಕವಾಡಿದ್ದ ಪತ್ನಿ

Team Udayavani, Nov 13, 2022, 1:58 PM IST

12

ಬೆಂಗಳೂರು: ಪತಿಗೆ ಲೈಂಗಿಕಾಸಕ್ತಿ ಕಡಿಮೆ ಇದೆ ಎಂದು ಬೇರೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದ 48 ವರ್ಷದ ಮಹಿಳೆಯೊಬ್ಬರು 28 ವರ್ಷದ ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಲೆಗೈದು ಇದೀಗ ವಿದ್ಯಾರಣ್ಯಪುರ ಪೊಲೀಸರ ಅತಿಥಿಯಾಗಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ದೇವಿ ತೋಮಾಂಗ್‌(46) ಮತ್ತು ಆಕೆಯ ಪ್ರಿಯಕರ ಅಸ್ಸಾಂ ಮೂಲದ ಜೈನುಲ್‌ ಅಲಿ ಬಾಬು (30) ಬಂಧಿತರು.

ಆರೋಪಿಗಳು ನ.6ರಂದು ರಾಕೇಶ್‌ ತೋಮಾಂಗ್‌ (52) ಎಂಬುವರನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದರು. ತನ್ನು ಪ್ರಿಯಕರನಿಗೆ ಗಂಡಸ್ತನ ಬಗ್ಗೆ ಸವಾಲು ಹಾಕಿ ಪತಿಯನ್ನು ಹತ್ಯೆಗೈದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಗಾಳ ಮೂಲದ ರಾಕೇಶ್‌, 30 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, 10 ವರ್ಷಗಳ ಹಿಂದೆ ದೇವಿ ತೋಮಾಂಗ್‌ ಎಂಬಾಕೆಯನ್ನು ಮದುವೆಯಾಗಿದ್ದು, ದಂಪತಿ ವಡೇರಹಳ್ಳಿಯಲ್ಲಿ ವಾಸವಾಗಿದ್ದರು. ರಾಕೇಶ್‌, ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡುತ್ತಿದ್ದು, ದೇವಿ ಮನೆ ಕೆಲಸಕ್ಕೆ ಹೋಗುತ್ತಿದ್ದಳು. ಪತಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಊಟ ಕೊಡಲು ಹೋದಾಗ ಜೈನುಲ್‌ ಅಲಿಯನ್ನು ಪರಿಚಯಿಸಿಕೊಂಡಿದ್ದು, ಆತನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಹೀಗಾಗಿ ರಾಕೇಶ್‌ ಮದ್ಯದ ದಾಸನಾಗಿ ಪತ್ನಿ ಜತೆ ಜಗಳ ಮಾಡುತ್ತಿದ್ದ.

ಪತಿಗೆ ಲೈಂಗಿಕಾಸಕ್ತಿ ಕಡಿಮೆ, ಕೊಲೆ: ಪತಿ ರಾಕೇಶ್‌ ವಿಪರೀತ ಮದ್ಯ ಸೇವಿಸುತ್ತಿದ್ದರಿಂದ ಆತನಿಗೆ ಲೈಂಗಿಕ ಆಸಕ್ತಿ ಕಡಿಮೆ ಇತ್ತು. ಹೀಗಾಗಿ 28 ವರ್ಷದ ಜೈನುಲ್‌ ಬಾಬು ಜತೆ ಪತ್ನಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಮತ್ತೂಂದೆಡೆ ಪತ್ನಿಯ ಅಕ್ರಮ ಸಂಬಂಧ ಮುಂದುವರಿದ ಬಗ್ಗೆ ಆಕ್ರೋಶಗೊಂಡಿದ್ದ ರಾಕೇಶ್‌ ಪತ್ನಿಗೆ ಹೊಡೆಯುತ್ತಿದ್ದ. ಆದರಿಂದ ದೇವಿ ತೋಮಾಂಗ್‌, ಪ್ರಿಯಕರ ಜೈನುಲ್‌ ಬಾಬುಗೆ ಕೊಲೆಗೆ ಸುಪಾರಿ ಕೊಟ್ಟಿದ್ದಳು.

ಅದರಂತೆ ಇಬ್ಬರು ಸಂಚು ರೂಪಿಸಿ ನ.5ರಂದು ಮದ್ಯದ ಬಾಟಲಿಗಳು ಮತ್ತು ಕಬಾಬ್‌ ತಂದಿದ್ದ ದೇವಿ, ಪತಿಗೆ ಕಂಠಪೂರ್ತಿ ಮದ್ಯ ಕುಡಿಸಿದ್ದಾಳೆ. ಬಳಿಕ ಆತ ಮಲಗಿದ್ದಾಗ ಜೈನುಲ್‌ ಬಾಬು ಆತನ ಕುತ್ತಿಗೆ ಹಿಸುಕಿದರೆ, ದೇವಿ ಪತಿಯ ಕೈ, ಕಾಲು ಹಿಡಿದುಕೊಂಡು ಕೊಲೆಗೆ ಸಹಕರಿಸಿದ್ದಳು. ಮರುದಿನ ಪತಿ ಮದ್ಯಪಾನ ಮಾಡಿ ಎದೆ ಊರಿ ಎಂದು ಹೇಳುತ್ತ ಮೃತಪಟ್ಟಿದ್ದಾರೆ ಎಂದು ನಾಟಕ ಮಾಡಿದ್ದಳು.

ಬಳಿಕ ಸ್ಥಳಕ್ಕೆ ಬಂದು ಸಂಬಂಧಿಯೊಬ್ಬರು ರಾಕೇಶ್‌ ಕುತ್ತಿಗೆ ಬಳಿಯಿದ್ದ ಗುರುತು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ ಎಂಬುದು ಪತ್ತೆಯಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಿಯಕರನಿಗೆ ಗಂಡಸ್ತನ ಸವಾಲು!:

“ನೀನು ಗಂಡಸಾಗಿದ್ದರೆ ನನ್ನ ಪತಿಯನ್ನು ಕೊಲೆ ಮಾಡು. ಆಗ ಮಾತ್ರ ನನ್ನ ಜತೆ ಮಲಗಲು ಅವಕಾಶ ನೀಡುತ್ತೇನೆ. ಇಲ್ಲವಾದರೆ ನನ್ನನ್ನು ಬಿಟ್ಟು ಬಿಡು. ನಮ್ಮಿಬ್ಬರ ಸಂಬಂಧಕ್ಕೆ ಪತಿ ರಾಕೇಶ್‌ ಅಡ್ಡಿ ಆಗುತ್ತಿದ್ದಾನೆ. ಆತನನ್ನು ಮುಗಿಸಿಬಿಡು’ ಎಂದು ಸವಾಲು ಹಾಕಿದ್ದಳು. ಅದರಿಂದ ಪ್ರಚೋದನೆಗೊಂಡ ಕೊಲೆಗೈದಿದ್ದಾನೆ ಎಂದು ಪೊಲೀಸರು ಹೇಳಿದರು.

ಒಂಭತ್ತು ದಿನಗಳ ಕಾಲ ಮನೆಯಲ್ಲೇ ಇದ್ದ ಪ್ರಿಯಕರ!

ನ.6ರಂದು ರಾಕೇಶ್‌ ಕೊಲೆಯಾಗಿದ್ದರು. ಜೈನುಲ್‌ ಬಾಬು ಅ.29ರಂದು ರಾತ್ರಿಯೇ ರಾಕೇಶ್‌ ಮನೆಗೆ ಬಂದಿದ್ದ. ಮನೆಯಲ್ಲಿ ಎರಡು ಬೆಡ್‌ರೂಮ್‌ ಇದ್ದು, ಅದರಲ್ಲಿ ಒಂದು ಸ್ಟೋರ್‌ ರೂಮ್‌ ಇತ್ತು. ಅಲ್ಲಿ ಪ್ರಿಯಕರನನ್ನು ದೇವಿ ಇರಿಸಿದ್ದಳು. ಆತನಿಗೆ ಎಲ್ಲ ರೀತಿಯ ಉಪಚಾರ ಮಾಡುತ್ತಿದ್ದಳು. ಅ.29ರಂದು ಕೊಲೆಗೆ ಯತ್ನಿಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ನಂತರ 9 ದಿನಗಳು ಮನೆಯಲ್ಲೇ ಇದ್ದು, ನ.6ರಂದು ಕೊಲೆಗೈದು ಪರಾರಿಯಾಗಿದ್ದ. ಮತ್ತೂಂದೆಡೆ ಪೊಲೀಸರ ಕಣ್ಣು ತಪ್ಪಿಸಲು ದೇವಿ ತೋಮಾಂಗ್‌, ಪ್ರಿಯಕರ ಬಾಬುಗೆ ತನ್ನ ಹೆಸರಿನಲ್ಲಿಯೇ ಹೊಸ ಸಿಮ್‌ ಕಾರ್ಡ್‌ ಕೊಡಿಸಿದ್ದಳು. ಹೀಗಾಗಿ ಬಾಬು ಹಳೇ ಫೋನ್‌, ಸಿಮ್‌ಕಾರ್ಡ್‌ ಎಸೆದು ಹೊಸ ನಂಬರ್‌ ಬಳಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಪತಿ ಫೋನ್‌ ಪೇನಿಂದ ಪ್ರಿಯಕರನಿಗೆ ಹಣ ವರ್ಗ

ರಾಕೇಶ್‌ ಕೊಲೆಯಾದ ಮರುದಿನ ದೇವಿ, ತನ್ನ ಪತಿಯ ಫೋನ್‌ ಪೇನಿಂದ ಪ್ರಿಯಕರನಿಗೆ 50 ಸಾವಿರ ರೂ. ವರ್ಗಾಯಿಸಿದ್ದಳು. ದೇವಿಯ ಕಾಲ್‌ ಡಿಟೇಲ್ಸ್‌ ಮತ್ತು ಬ್ಯಾಂಕ್‌ ಮಾಹಿತಿ ಪಡೆದುಕೊಂಡು ತನಿಖೆ ನಡೆಸಿದಾಗ ಆರೋಪಿ ಹೊಸೂರು ಬಳಿ ಅಡಗಿಕೊಂಡಿರುವ ಮಾಹಿತಿ ಸಿಕ್ಕಿ, ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

 

ಟಾಪ್ ನ್ಯೂಸ್

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

arrested

BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.