Bangalore: ವಿದೇಶಿ ಪೆಡ್ಲರ್‌ನಿಂದ 12.6 ಲಕ್ಷ ರೂ. ಜಪ್ತಿ : ದೇಶದಲ್ಲೇ ಮೊದಲು
ಮಾದಕ ವಸ್ತು ಮಾರಾಟ ಮಾಡಿ ಲಕ್ಷಾಂತರ ರೂ. ಸಂಪಾದಿಸಿದ್ದ ಆರೋಪಿ
Team Udayavani, Jan 13, 2024, 3:45 PM IST
ಬೆಂಗಳೂರು: ವಿದೇಶಿ ಡ್ರಗ್ಸ್ ಪೆಡ್ಲರ್‌ನನ್ನು ಹೆಡೆಮುರಿಕಟ್ಟಿದ ಬೆಂಗಳೂರು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ವಿಭಾಗದ ಪೊಲೀಸರು 12.60 ಲಕ್ಷ ರೂ. ಜಪ್ತಿ ಮಾಡಿದ್ದಾರೆ. ಡ್ರಗ್ಸ್ ಪೆಡ್ಲರ್‌ನಿಂದ ಹಣ ಮುಟ್ಟುಗೋಲು ಹಾಕಿಕೊಂಡಿರುವುದು ದೇಶದಲ್ಲೇ ಮೊದಲ ಪ್ರಕರಣ ಇದಾಗಿದೆ. ಈ ಕುರಿತು ಪೊಲೀಸ್ ಇಲಾಖೆ ತಿಳಿಸಿದೆ.
ನೈಜೀರಿಯಾ ಮೂಲದ ಪೀಟರ್ ಇಕೆಡಿ ಬೆಲನ್ವು (38) ಬಂಧಿತ.
12.60 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. 2023ರ ನವೆಂಬರ್‌ನಲ್ಲಿ ಡ್ರಗ್ಸ್ ಪೆಡ್ಲರ್ ಆಗಿದ್ದ ಆರೋಪಿ ಪೀಟರ್ ಇಕೆಡಿ ಬೆಲನ್ವುನನ್ನು ವಿದ್ಯಾರಣ್ಯ ಪುರ ಠಾಣಾ ಪೊಲೀಸರು ಬಂಧಿಸಿದ್ದರು. ಈತ ಡ್ರಗ್ಸ್ ನಿಂದ ಲಕ್ಷಾಂತರ ರೂ. ಸಂಪಾದಿಸಿರುವುದು ಹಾಗೂ ವಿವಿಧ ಬ್ಯಾಂಕ್ ಗಳ ಪಾಸ್‌ಬುಕ್, ಡೆಬಿಟ್ ಕಾರ್ಡ್ ಹೊಂದಿರುವ ಸಂಗತಿ ಸಿಸಿಬಿ ಪೊಲೀಸರ ಗಮನಕ್ಕೆ ಬಂದಿತ್ತು.
ಸಿಸಿಬಿ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ ತನಿಖಾಧಿ ಕಾರಿಗಳಿಗಿರುವ ಅಧಿಕಾರ ಚಲಾಯಿಸಿ ಆರೋಪಿಯ ಪತ್ನಿಯ ಎರಡು ಬ್ಯಾಂಕ್ ಖಾತೆಯಿಂದ 2.55 ಲಕ್ಷ ರೂ. ಹಾಗೂ ಆರೋಪಿಯ ಇತರ 5 ಬ್ಯಾಂಕ್ ಖಾತೆಗಳಲ್ಲಿದ್ದ 4.90 ಲಕ್ಷ ಸೇರಿ 7 ಬ್ಯಾಂಕ್ ಖಾತೆಗಳಲ್ಲಿ ಒಟ್ಟು 12.60 ಲಕ್ಷ ರೂ. ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಸಕ್ಷಮ ಪ್ರಾಧಿಕಾರ ಮತ್ತು ಆಡಳಿತಾಧಿಕಾರಿಗಳಾದ ಸಫೇಮಾ (ಎಫ್ಒಪಿ) ಹಾಗೂ ಎನ್‌ಡಿಪಿಎಸ್‌ಎ, ಚೆನ್ನೈರವರು ಎನ್‌ಡಿಪಿಎಸ್ ಕಾಯ್ದೆ ಅಧ್ಯಾಯ 5(ಎ) ಕಲಂ. 68(ಎಫ್)(2) ರಲ್ಲಿ ವಿಚಾರಣೆ ಕೈಗೊಂಡು, ಜ.11ರಂದು ಈ ಮುಟ್ಟುಗೋಲು ಆದೇಶ ಅನು ಮೋದಿಸಲ್ಪಟ್ಟಿದೆ ಎಂದು ತಿಳಿದು ಬಂದಿದೆ.
ಡ್ರಗ್ಸ್ ವಹಿವಾಟಿಗಾಗಿ 7 ಬ್ಯಾಂಕ್ ಖಾತೆ
ಆರೋಪಿಯು 2018ರಲ್ಲಿ ವೈದ್ಯಕೀಯ ವೀಸಾದ ಆಧಾರದಲ್ಲಿ ಭಾರತಕ್ಕೆ ಬಂದಿದ್ದ. ನಂತರ 2022ರಲ್ಲಿ ಮಣಿಪುರ ಮೂಲದ ಮಹಿಳೆಯನ್ನು ವಿವಾಹವಾಗಿದ್ದ. ಆಕೆಯ ಹೆಸರಿನಲ್ಲಿ ಬೆಂಗಳೂರು ನಗರದಲ್ಲಿ ಎರಡು ಬ್ಯಾಂಕ್ ಖಾತೆಗಳನ್ನು ಹಾಗೂ ನಕಲಿ ದಾಖಲಾತಿಗಳನ್ನು ನೀಡಿ ಇತರರ ಹೆಸರಿನಲ್ಲಿ ಐದು ಬ್ಯಾಂಕ್ ಖಾತೆಗಳು ಸೇರಿದಂತೆ ಒಟ್ಟು ಏಳು ಬ್ಯಾಂಕ್ ಖಾತೆಗಳನ್ನು ತೆರೆದಿದ್ದ. ಈ ಖಾತೆಗಳಿಂದ ಗೂಗಲ್ ಪೇ ಹಾಗೂ ಫೋನ್ ಪೇ ಮೂಲಕ ಡ್ರಗ್ಸ್ ಪೆಡ್ಲಿಂಗ್ ಹಣದ ವಹಿವಾಟನ್ನು ನಿರ್ವಹಿಸುತ್ತಿದ್ದ ಎಂಬ ಅಂಶಗಳು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಏಳು ಡ್ರಗ್ಸ್ ಪೆಡ್ಲರ್‌ಗಳ ಬಂಧನ, 1.66 ಕೋಟಿ ರೂ. ಮಾದಕ ವಸ್ತು ಜಪ್ತಿ
ಬೆಂಗಳೂರು: ಕಳೆದ ಒಂದು ವಾರದಿಂದ ಪ್ರತ್ಯೇಕ 5 ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಸೇರಿದಂತೆ 7 ಮಾದಕ ವಸ್ತುಗಳ ದಂಧೆಕೋರರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 1.66 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಬಂಧಿತರಿಂದ 18.5 ಕೆಜಿ ಗಾಂಜಾ, 203 ಗ್ರಾಂ ಎಂಡಿಎಂಎ, 410 ಎಕ್ಸ್‌ಟಸಿ ಪಿಲ್ಸ್, 7 ಮೊಬೈಲ್, 2 ದ್ವಿ ಚಕ್ರ ವಾಹನ, 1 ಕಾರು ಜಪ್ತಿ ಮಾಡಿಕೊಳ್ಳಲಾಗಿದೆ.
ಏಳು ಜನ ಡ್ರಗ್ ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.66 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಸಿಸಿಬಿ ಪೊಲೀಸರು ಕಳೆದ ಒಂದು ವಾರದಲ್ಲಿ ಬೆಂಗಳೂರಿನ ಗಿರಿನಗರ, ಮಡಿವಾಳ, ಚಿಕ್ಕಜಾಲ, ಆರ್‌ಟಿ ನಗರ, ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಬಗೆಯ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ್ದರು.
■ ಉದಯವಾಣಿ ಸಮಾಚಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.