Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Team Udayavani, Nov 23, 2024, 6:55 AM IST
ಬೆಂಗಳೂರು: ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಹೊಟ್ಟೆಯಿಂದ ಬರೋಬ್ಬರಿ 40-50 ಟೂತ್ ಬ್ರಷ್‌ಗಳನ್ನು ಹೊರ ತೆಗೆದ ವೈದ್ಯರೇ ಅರೆ ಕ್ಷಣ ದಂಗಾಗಿದ್ದಾರೆ!. ಹೌದು, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಅಧೀನ ಆಸ್ಪತ್ರೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಜೀವದಾನ ನೀಡಿದ್ದಾರೆ.
ಹೊಟ್ಟೆ ನೋವೆಂದು ಸುಮಾರು 4 ದಿನಗಳ ಹಿಂದೆ 26 ವರ್ಷದ ಯುವಕ ಮಣಿಕಂಠ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ, ತಪಾಸಣೆ ನಡೆಸಿದ ವೈದ್ಯರು, ಹೊಟ್ಟೆಯ ಭಾಗವನ್ನು ಎಂಆರ್‌ಐ ಸ್ಕ್ಯಾನಿಂಗ್‌ಗೆ ಬರೆದುಕೊಟ್ಟಿದ್ದರು. ಬಳಿಕ, ಎಂಆರ್‌ಐ ವರದಿ ನೋಡಿದ ವೈದ್ಯರು ಹೊಟ್ಟೆಯಲ್ಲಿ ಬ್ರೆಷ್‌ಗಳು ಇರುವುದನ್ನು ಗಮನಿಸಿದರು. ಈ ವೇಳೆ, ಕೂಡಲೇ ದಿನಾಂಕವನ್ನು ನಿಗದಿ ಮಾಡಿಕೊಂಡ ವೈದ್ಯರು, ಶಸ್ತ್ರ ಚಿಕಿತ್ಸೆ ಮಾಡಲು ನಿರ್ಧರಿಸಿದ್ದರು.
ಸುಮಾರು ವರ್ಷಗಳಿಂದ ಮದ್ಯ ವ್ಯಸನಿ ಆಗಿದ್ದ ರೋಗಿ ಮಣಿಕಂಠ ಸ್ಥಿತಿಯನ್ನು ಗಮನಿಸಿದ ಕುಟುಂಬಸ್ಥರು, ಕುಡಿತ ಬಿಡಿಸಲು ಕಳೆದ ಒಂದು ತಿಂಗಳ ಹಿಂದೆ ಮದ್ಯ ವ್ಯರ್ಜನ ಕೇಂದ್ರಕ್ಕೆ ದಾಖಲಿಸಿದ್ದರು. ಅನಂತರ ಪದೇ ಪದೆ ತೀವ್ರ ಹೊಟ್ಟೆ ನೋವೆಂದು ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಸಿಬಂದಿ ಕುಟುಂಬಸ್ಥರಿಗೆ ಮಾಹಿತಿ ನೀಡಿದರು. ಬಳಿಕ, ಕುಟುಂಬಸ್ಥರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು.
ಟೂತ್ ಬ್ರೆಷ್‌ಗಳನ್ನು ನುಂಗಿದ್ದು ಹೇಗೆ?
ಮದ್ಯ ವ್ಯರ್ಜನ ಕೇಂದ್ರಕ್ಕೆ ದಾಖಲಾಗಿದ್ದ ಮಣಿಕಂಠ, ಬಾತ್‌ರೂಮ್‌ಗೆ ಹೋಗಿ ಸಹಚರರ ಟೂತ್ ಬ್ರೆಷ್‌ಗಳನ್ನು ಕದಿಯುತ್ತಿದ್ದ. ಅಲ್ಲದೆ, ಅವುಗಳನ್ನು ನುಂಗಲು ಆಗದೇ ಎರಡು ಭಾಗಗಳನ್ನಾಗಿ ತುಂಡರಿಸಿ ಒಂದೊಂದಾಗೇ ನುಂಗುತ್ತಿದ್ದ. ಅಷ್ಟು ಬ್ರೆಷ್‌ಗಳನ್ನು ನುಂಗಿದ್ದರೂ ಗಂಟಲು ನೋವು ಸೇರಿದಂತೆ ಇತರೆ ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ. ಕಳೆದ 3-4 ದಿನದಿಂದ ತೀವ್ರ ಹೊಟ್ಟೆ ನೋವು ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಶಸ್ತ್ರ ಚಿಕಿತ್ಸೆ ವೇಳೆ ಅಚ್ಚರಿ!
ಮೊದಲೇ ದಿನಾಂಕ ನಿಗದಿ ಮಾಡಿಕೊಂಡಂತೆ ವೈದ್ಯರು ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದರು. ಈ ವೇಳೆ, ವ್ಯಕ್ತಿಯ ಹೊಟ್ಟೆಯಲ್ಲಿದ್ದ ಬ್ರೆಷ್‌ಗಳನ್ನು ಹೊರ ತೆಗೆಯುತ್ತಿದ್ದಂತೆ, 3-4 ಚಾಕಲೆಟ್ ಪೇಪರ್‌ಗಳೂ ಪತ್ತೆಯಾಗಿವೆ. ಅಲ್ಲದೆ, ಕೆಲವೊಂದು ಬ್ರೆಷ್‌ಗಳು ಹಳೆಯದಾಗಿದ್ದರೆ, ಮತ್ತೆ ಕೆಲವು ಹೊಸ ಬ್ರೆಷ್‌ಗಳೂ ಇದ್ದವು. ಇವೆಲ್ಲಾ ಕುಡಿತ ಬಿಡಿಸುವ ಪುನರ್ವಸತಿ ಕೇಂದ್ರದ ಸಿಬಂದಿಯವು ಎನ್ನಲಾಗಿದ್ದು ತಿಂಗಳಲ್ಲಿ 50ಕ್ಕೂ ಹೆಚ್ಚು ಬ್ರೆಷ್‌ಗಳನ್ನು ನುಂಗಿದ್ದಾನೆ. ಜೊತೆಗೆ ಕುಡಿತ ಹಾಗೂ ಡಿಪ್ರಷನ್‌ನಿಂದಾಗಿ ಟೂತ್ ಬ್ರೆಷ್ ಹಾಗೂ ಚಾಕೋಲೆಟ್ ಪೇಪರ್‌ಗಳನ್ನು ನುಂಗಿದ್ದಾನೆಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಹರೀಶ್ ಹಾಡೋನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.