![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Mar 31, 2022, 11:14 AM IST
ಬೆಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯ ಖಾಸಗಿ ವಿಡಿಯೋ ಇಟ್ಟಕೊಂಡು ಮೂರು ಲಕ್ಷ ರೂ.ಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ಕಾಡುಗೋಡಿ ನಿವಾಸಿ 35 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇರೆಗೆ ತಮಿಳುನಾಡಿನ ಹೊಸೂರು ಮೂಲದ ಗಣೇಶ್ (25)ಎಂಬಾತನನ್ನು ಬಂಧಿಸಲಾಗಿದೆ. ಒಂದೂವರೆ ವರ್ಷದ ಹಿಂದೆ ಸಂತ್ರಸ್ತೆ ಡೇಟಿಂಗ್ ಆ್ಯಪ್‌ನಲ್ಲಿ ಖಾತೆ ತೆರೆದಿದ್ದರು. ಆಗ ಆರೋಪಿ ಗಣೇಶ್ ಪರಿಚಯವಾಗಿದ್ದ. ನಂತರ ಇಬ್ಬರೂ ಸ್ನೇಹಿತರಾಗಿದ್ದರು.
ಸಂತ್ರಸ್ತೆಯೊಂದಿಗೆ ಸಲುಗೆ ಬೆಳೆಸಿಕೊಂಡ ಆರೋಪಿ ಆಕೆಗೆ ವಾಟ್ಸ್‌ಆ್ಯಪ್ ಹಾಗೂ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದ. ಈ ವೇಳೆ ಯುವತಿ ಜತೆ ಖಾಸಗಿಯಾಗಿ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದು, ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ಇದೀಗ 15 ದಿನಗಳಿಂದ ಆರೋಪಿ, ಸಂತ್ರಸ್ತೆಗೆ ವಿಡಿಯೋ ಕಳುಹಿಸಿ ಮೂರು ಲಕ್ಷ ರೂ. ಕೊಡಬೇಕು. ಇಲ್ಲವಾದರೆ ಅದನ್ನು ಪತಿಗೆ ಕಳುಹಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ. ಅದರಿಂದ ಗಾಬರಿಗೊಂಡ ಮಹಿಳೆ ಕಾಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ವೈನ್ ಡೆಲಿವರಿ ಸೋಗಿನಲ್ಲಿ ಯುವತಿಗೆ ವಂಚನೆ
ಆನ್‌ಲೈನ್ ಮೂಲಕ ವೈನ್ ಆರ್ಡರ್ ಮಾಡಿದ್ದ ಯುವತಿಯೊಬ್ಬರ ಬಳಿ ಡೆಲಿವರಿ ಶುಲ್ಕ ಪಡೆಯುವ ನೆಪದಲ್ಲಿ ಸೈಬರ್ ವಂಚಕರು 49 ಸಾವಿರ ರೂ. ದೋಚಿದ್ದಾರೆ. ಈ ಸಂಬಂಧ ಲಾಲ್‌ಬಾಗ್ ರಸ್ತೆಯ 22 ವರ್ಷದ ಯುವತಿ ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಂಚನೆಗೊಳಗಾದ ಯುವತಿ ಮಾ.26ರರಂದು ವೈನ್ಸ್ ಹೋಮ್ ಡೆಲಿವರಿ ಎಂಬ ಆನ್‌ಲೈನ್ ವಹಿವಾಟಿನಲ್ಲಿ ವೈನ್ಸ್ ಬುಕ್ ಮಾಡಿದ್ದು, ಆನ್‌ಲೈನ್ ಮೂಲಕ 540 ರೂ. ಶುಲ್ಕವನ್ನು ಪಾವತಿಸಿದ್ದರು. ಕೆಲ ಹೊತ್ತಿನ ಬಳಿಕ ಸೈಬರ್ ವಂಚಕ ಯುವತಿಗೆ ಕರೆ ಮಾಡಿ, ಡೆಲಿವರಿ ಮಾಡಿದ ಶುಲ್ಕ 10 ರೂ. ಪಾವತಿಸಬೇಕಂದು ಹೇಳಿದ್ದಾನೆ. ಜತೆಗೆ ಶುಲ್ಕ ಪಾವತಿಯಾಗಲು ಒಟಿಪಿ ನೀಡಬೇಕು ಎಂದು ಯುವತಿ ಯಿಂದ ಒಟಿಪಿ ಪಡೆದುಕೊಂಡಿದ್ದ. ಆದಾದ ಕೆಲ ನಿಮಿಷಗಳಲ್ಲೇ ಯುವತಿಯ ಬ್ಯಾಂಕ್ ಖಾತೆಯಿಂದ 49,326 ರೂ. ಅನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.
ಹಣ ಕಡಿತವಾದ ಸಂದೇಶ ಬಂದ ಕೂಡಲೇ ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚನೆಗೊಳಗಾದವರ ಖಾತೆಯ ವಿವರ ನೀಡುವಂತೆ ಮಂಗಳವಾರ ಬ್ಯಾಂಕ್‌ಗೆ ಪತ್ರ ಬರೆದಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.