![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 10, 2020, 6:00 AM IST
ಬೆಂಗಳೂರು: ನಿರ್ಮಾಪಕರ ಅನುಮತಿ ಇಲ್ಲದೆಯೇ, ಅಕ್ರಮವಾಗಿ ಕನ್ನಡ ಸಿನಿಮಾಗಳು ಪ್ರಸಾರ ಆಗುತ್ತಿದ್ದು, ಆ ಅಕ್ರಮ ಪ್ರಸಾರವನ್ನು ತಡೆಹಿಡಿಯುವಂತೆ ಹೈಕೋರ್ಟ್ ಸೂಚಿಸಿದೆ. ಈ ಸಂಬಂಧ ಗುರುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷರು ಈ ವಿಷಯ ಸ್ಪಷ್ಟಪಡಿಸಿದರು.
ಕನ್ನಡದ ಅನೇಕ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಹಲವು ವಾಹಿನಿಗಳಿಗೆ ಇಂತಿಷ್ಟು ವರ್ಷಗಳಿಗೆ ಹಕ್ಕು ಮಾರಾಟ ಮಾಡಿದ್ದರು. ಆದರೆ, ಆ ಸಿನಿಮಾಗಳ ಹಕ್ಕುಗಳ ಅವಧಿ ಮುಗಿದು ಹೋದ ಹಿನ್ನೆಲೆಯಲ್ಲಿ, ಕೆಲವು ವಾಹಿನಿಗಳು ತಮ್ಮದೇ ಡಿಜಿಟಲ್ ಫ್ಲಾಟ್‌ಫಾರಂನಲ್ಲಿ ಪ್ರಸಾರ ಮಾಡುತ್ತಿದ್ದವು. ಈ ವಿಷಯವನ್ನು ಅರಿತು ನಿರ್ಮಾಪಕರು ಅಕ್ರಮವಾಗಿ ಸಿನಿಮಾಗಳನ್ನು ಪ್ರಸಾರ ಮಾಡುತ್ತಿರುವ ಕುರಿತಂತೆ ಆಕ್ಷೇಪಿಸಿ, ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ನಿರ್ಮಾಪಕರ ಸಂಘ ಅದಕ್ಕಾಗಿಯೇ ವಾದ ಮಂಡಿಸಲು ಧನಂಜಯ್ ಅವರನ್ನು ಕೂಡ ನೇಮಿಸಿತ್ತು. ನ್ಯಾಯಾಲಯ ಎಲ್ಲವನ್ನು ಪರಿಶೀಲಿಸಿ ಡಿಜಿಟಲ್ ಫ್ಲಾಟ್‌ಫಾರಂನಲ್ಲಿ ಅಕ್ರಮ ಸಿನಿಮಾ ಪ್ರಸಾರವನ್ನು ತಡೆಯಿಡಿಯುವಂತೆ ಸೂಚಿಸಿದೆ. ಇನ್ನು ಮುಂದೆ ಯಾವುದೇ ಫ್ಲಾಟ್‌ಫಾರ್ಮ್ ನಲ್ಲಿ ಅಕ್ರಮ ಪ್ರಸಾರ ಮಾಡಿದರೆ ಶಿಕ್ಷಾರ್ಹ ಅಪರಾಧ ಆಗಲಿದೆ ಎಂದು ಎಚ್ಚರಿಸಲಾಗಿದೆ.
ನಿರ್ಮಾಪಕರ ಅನುಮತಿ ಪಡೆಯದೆ ಯಾವುದೇ ಚಾನೆಲ್‌ಗಳು ತಮ್ಮ ಡಿಜಿಟಲ್ ಫ್ಲಾಟ್ ಫಾರಂನಲ್ಲಿ ಪ್ರಸಾರ ಮಾಡುವಂತಿಲ್ಲ ಎಂದು ಹೇಳಿದೆ. ಕೇಸ್ ವಕಾಲತ್ತು ವಹಿಸಿದ್ದ ವಕೀಲ ಧನಂಜಯ್ ಅವರನ್ನು ಮಂಡಳಿಯಲ್ಲಿ ಸನ್ಮಾನಿಸಲಾಯಿತು. ಈ ವೇಳೆ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ಕುಮಾರ್, ಎನ್. ಎಂ.ಸುರೇಶ್,ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ಬಾಬು, ರಾಮಮೂರ್ತಿ, ಕೆ.ಮಂಜು, ಎ.ಗಣೇಶ್, ಕರಿಸುಬ್ಬು ಸೇರಿದಂತೆ ಇತರರು ಭಾಗವಹಿಸಿದ್ದರು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.