ಬಿಬಿಎಂಪಿ ತುರ್ತು ಬಜೆಟ್
Team Udayavani, Apr 20, 2020, 12:29 PM IST
ಬೆಂಗಳೂರು: ಆರೋಗ್ಯ ತುರ್ತುಪರಿಸ್ಥಿತಿ ಅವಧಿಯಲ್ಲಿ ಅಪಸ್ವರದ ಮಧ್ಯೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2020-21ನೇ ಸಾಲಿನ ಬಜೆಟ್ ಮಂಡನೆ ಆಗಲಿದೆ.
ಮೇಯರ್, ಉಪ ಮೇಯರ್, ಆಯುಕ್ತರು ಸೇರಿ ಬೆರಳೆಣಿಕೆಯಷ್ಟು ಸದಸ್ಯರ ಸಮ್ಮುಖದಲ್ಲಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಧ್ಯಾಹ್ನ 12ಕ್ಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಬಜೆಟ್ ಮಂಡಿಸಲಿದ್ದಾರೆ. ಉಳಿದ ಸದಸ್ಯರು ವಿಡಿಯೊ ಕಾನ್ಫರೆನ್ಸ್ ಮೂಲಕ ಇದಕ್ಕೆ ಸಾಕ್ಷಿಯಾಗಲಿದ್ದಾರೆ. ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ
ಪ್ರಕಾರ ಬಜೆಟ್ ಮಂಡನೆ ವೇಳೆ ಬಹುತೇಕ ಎಲ್ಲಾ ಸದಸ್ಯರು ಖುದ್ದು ಹಾಜರಿರಬೇಕಾದ್ದು ನಿಯಮ. ಆದರೆ, ಸಾಮಾಜಿಕ ಅಂತರ ಕಡ್ಡಾಯವಾಗಿದ್ದು ಅದೇ ಕಾಯ್ದೆಯಲ್ಲಿ ನೀಡಿರುವ “ವಿಶೇಷ ಅವಕಾಶ’ದಡಿ ತಂತ್ರಜ್ಞಾನ ಬಳಸಿ ಕೋರಂಗೆ ಕೊರತೆ ಆಗದಂತೆ ವ್ಯವಸ್ಥೆ ಮಾಡಿ, ಆಯವ್ಯಯ ಮಂಡಿಸಲಾಗುತ್ತಿದೆ. ಈ ಹಿಂದೆ 1953ರಲ್ಲಿ ಪ್ಲೇಗ್ ವೇಳೆ ಈ ಸ್ಥಿತಿ ನಿರ್ಮಾಣವಾಗಿತ್ತು
ಎನ್ನಲಾಗಿದೆ. ಆಗ, ಆಯುಕ್ತರು ಬಜೆಟ್ ಮಂಡಿಸಿ, ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಿದ್ದರು. ಬಿಬಿಎಂಪಿ 8 ವಲಯವಾರು ಪಾಲಿಕೆ ಸದಸ್ಯರು ನಿರ್ದಿಷ್ಟ ಪ್ರದೇಶದಲ್ಲಿ ಸೇರುವುದಕ್ಕೆ ವ್ಯವಸ್ಥೆ
ಮಾಡಲಾಗಿದ್ದು, ಇಲ್ಲಿ ವಿಡಿಯೋ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೇಂದ್ರ ಕಚೇರಿಯಲ್ಲಿ ಮಂಡನೆಯಾಗುವ ಬಜೆಟ್ ಅನ್ನು ಸದಸ್ಯರು ವಲಯ ಮಟ್ಟದಲ್ಲಿ ನೋಡುವುದರ ಜತೆಗೆ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೂ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಪ್ರಕ್ರಿಯೆ ಬಗ್ಗೆ ಕೆಲ ಸದಸ್ಯರಿಂದ ಅಪಸ್ವರ ಕೇಳಿಬರುತ್ತಿದೆ. “ಕೆಎಂಸಿ ಕಾಯ್ದೆ ಅನ್ವಯ ಬಜೆಟ್ ಮಂಡನೆಯಾದರೂ, ಯಾವುದೇಅಂಶಗಳ ಬಗ್ಗೆ ಚರ್ಚೆ ಮಾಡಲು ಸಾಧ್ಯವಾಗಲ್ಲ. ಅಲ್ಲದೆ, ಕೋರಂ ಬಗ್ಗೆಯೂ ಗೊಂದಲ ಮೂಡುವ ಸಾಧ್ಯತೆ ಇದೆ.
ಮುಖ್ಯವಾಗಿ ಬಜೆಟ್‌ನಲ್ಲಿ ನಮ್ಮ ಕ್ಷೇತ್ರಗಳಿಗೆ ಅನುದಾನ ಕೊರತೆಯಾದರೆ ಚರ್ಚೆ ಮಾಡಲು ಸಾಧ್ಯವಿಲ್ಲ’ ಎಂದು ದೂರಿದ್ದಾರೆ.
ಕೋರಂ ಕಾಯ್ದುಕೊಳ್ಳಬೇಕು: ವಲಯವಾರು ಪಾಲಿಕೆ ಸದಸ್ಯರ ಹಾಜರಾತಿ ಆಯಾ ವಲಯದ ಜಂಟಿ ಆಯುಕ್ತರು ತೆಗೆದುಕೊಳ್ಳಲಿದ್ದು, ಸದಸ್ಯರ ಹಾಜರಾತಿ ಕೇಂದ್ರ ಕಚೇರಿಯ ಕೌನ್ಸಿಲ್ ಕಾರ್ಯದರ್ಶಿಗೆ ನೀಡಲಿದ್ದಾರೆ. ಪಾಲಿಕೆ ಸದಸ್ಯರ 3ನೇ ಒಂದರಷ್ಟು ಸದಸ್ಯರು ಹಾಜರಿರುವ ಮೂಲಕ ಕೋರಂ ಇದ್ದರೆ ಮಾತ್ರ ಬಜೆಟ್ ಮಂಡನೆಗೆ ಅವಕಾಶ ಸಿಗಲಿದೆ. ಮುನ್ನೆಚ್ಚರಿಕೆ
ಕ್ರಮವಾಗಿ ಪಾಲಿಕೆ ಸದಸ್ಯರು ಸಭೆ ಸೇರುವ ಎಲ್ಲ ವಲಯಗಳಲ್ಲೂ ವಿಡಿಯೋ ರೆಕಾರ್ಡಿಂಗ್ ಮಾಡುವುದಕ್ಕೆ ಕೌನ್ಸಿಲ್ ವಿಭಾಗದ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಎಷ್ಟು ಜನರಿಗೆ ಅವಕಾಶ?: ಪಾಲಿಕೆ ಕೇಂದ್ರ ಕಚೇರಿ ಕೆಂಪೇಗೌಡ ಪೌರ ಸಭಾಂಗಣ ದಲ್ಲಿ ಮೇಯರ್, ಉಪಮೇಯರ್, ಬಿಬಿಎಂಪಿ ಆಯುಕ್ತ, ತೆರಿಗೆ ಮತ್ತುಆರ್ಥಿಕ ಸ್ಥಾಯಿ ಅಧ್ಯಕ್ಷ ಹಾಗೂ ಸಮಿತಿ ಸದಸ್ಯರು, ಆಡಳಿತ ಪಕ್ಷ, ವಿರೋಧ ಪಕ್ಷದ ನಾಯಕರು, ಕೌನ್ಸಿಲ್ ಕಾರ್ಯದರ್ಶಿ ಸೇರಿ ಮುಖ್ಯ ಅಧಿಕಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಏ. 22ಕ್ಕೆ ಚರ್ಚೆ?
ಪಾಲಿಕೆ 2020-21ನೇ ಸಾಲಿನ ಬಜೆಟ್ ಬಗ್ಗೆ ಏ.22ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಚರ್ಚೆ ಸಾಧ್ಯತೆ.
ಯಾವ ವಲಯ, ಎಲ್ಲಿ ಸ್ಥಳ ನಿಗದಿ?
ಪೂರ್ವ ವಲಯ: ಕೆನೋಪಿ ಹೋಟೆಲ್, ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್. (ಮೇಯೋಹಾಲ್). ಪಶ್ಚಿಮ ವಲಯ: ಐಪಿಪಿ ಕಚೇರಿ, ಮಲ್ಲೇಶ್ವರ. ದಕ್ಷಿಣ ವಲಯ: ಅಶ್ವಥ್ ಕಲಾಭವನ,
(ಆಡಿಟೋರಿಯಂ), ನರಸಿಂಹರಾಜ ಕಾಲೋನಿ. ಬೊಮ್ಮನಹಳ್ಳಿ ವಲಯ: ಜಂಟಿ ಆಯುಕ್ತರ ಕಚೇರಿ ಸಭಾಂಗಣ, ಬೇಗೂರು. ಯಲಹಂಕ: ಮಿನಿ ವಿಧಾನಸೌಧ ಕಟ್ಟಡ, 3ನೇ
ಮಹಡಿ, ಸಭಾ ಕೊಠಡಿ, ಯಲಹಂಕ ನ್ಯೂಟೌನ್. ರಾಜರಾಜೇಶ್ವರಿ ನಗರ: ರಾಜರಾಜೇಶ್ವರಿ ನಗರ ವಲಯ ಕಚೇರಿ, ಸಭಾಂಗಣ ಕೊಠಡಿ. ದಾಸರಹಳ್ಳಿ: ದಾಸರಹಳ್ಳಿ ವಲಯದ ಜಂಟಿ
ಆಯುಕ್ತರ ಕಚೇರಿ, ಹೆಸರಘಟ್ಟ ಮುಖ್ಯ ರಸ್ತೆ. ಮಹದೇವಪುರ ವಲಯ- ಶೆಹರಟನ್ ಗ್ರ್ಯಾಂಡ್ ಹೋಟೆಲ್, ಪ್ರಸ್ಟೀಜ್ ಶಾಂತಿ ನಿಕೇತನ, ಹೂಡಿ
ಯಾವ ಆ್ಯಪ್ ಬಳಕೆ?
ಬಿಬಿಎಂಪಿ ಬಜೆಟ್ ಮಂಡನೆಗೆ ಸರ್ಕಾರದ ಅಧಿಕೃತ ವೆಬ್‌ಸೈಟ್ http://www.facebook. com/BBMP.Mayor ಸಂಪರ್ಕವನ್ನೇ ಬಳಸಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಕೌನ್ಸಿಲ್
ಕಾರ್ಯದರ್ಶಿ ಜಿ.ಹೇಮಂತ್ ಶರಣ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿ, ಬಜೆಟ್ ಮಂಡನೆಗೆ ಈಗಾಗಲೇ ಸಿದಟಛಿತೆ ಮಾಡಿಕೊಳ್ಳಲಾಗಿದ್ದು, ಯಾವುದೇ ತಾಂತ್ರಿಕ ಸಮಸ್ಯೆ ಆಗದಂತೆ ಪೂರ್ವ ಪರಿಶೀಲನೆ ಮಾಡಲಾಗಿದೆ. ಹೀಗಾಗಿ, ತಾಂತ್ರಿಕ ಸಮಸ್ಯೆ ಎದುರಗುವ ಸಾಧ್ಯತೆ ಕಡಿಮೆ. ಇನ್ನು ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್ http:// bbmp.gov.in ನ ಮೂಲಕ ಸಾರ್ವಜನಿಕರೂ ಬಜೆಟ್ ನೋಡಬಹುದು ಎಂದು ತಿಳಿಸಿದರು.
ಅನುಮಾನ ಬಂದರೆ ಒಳಗೆ ಬಿಡುವುದಿಲ್ಲ: ಬಜೆಟ್ ಮಂಡನೆಗೆ ಬರುವ ಎಲ್ಲಾ ನಾಯಕರು, ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿ ಗಳನ್ನು ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿದ ಬಳಿಕವೇ ಸಭೆಗೆ ಬಿಡಲಾಗುವುದು. ಆರೋಗ್ಯ ಸಮಸ್ಯೆ ಅಥವಾ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಂತ ಹವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.