ಅಂಕಿಗಳ ಆಟ ಅವಾಸ್ತವಿಕ ಲೆಕ್ಕ?


Team Udayavani, Apr 21, 2020, 2:29 PM IST

ಅಂಕಿಗಳ ಆಟ ಅವಾಸ್ತವಿಕ ಲೆಕ್ಕ?

ಪ್ರಥಮ ವಿಡಿಯೋ ಕಾನ್ಫರೆನ್ಸ್‌ನಿಂದ 10,895.84 ಕೋಟಿ ರೂ. ಮೊತ್ತದ ಬಜೆಟ್‌ ಮಂಡನೆ
3.5 ಕೋಟಿ ರೂ. ಉಳಿತಾಯ ಬಜೆಟ್‌ ಆದರೂ, ಆದಾಯ-ವೆಚ್ಚ ಲೆಕ್ಕಾಚಾರ ಅವಾಸ್ತವ

ಬೆಂಗಳೂರು: ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು 2020-21ನೇ ಸಾಲಿಗೆ 10,895.84 ಕೋಟಿ ಮೊತ್ತದ ಆಯವ್ಯಯ ಮಂಡಿಸಿದೆ. ಅಂಕಿ-ಅಂಶಗಳ ಆಟದಲ್ಲಿ ಇದು ಸುಮಾರು 3.5 ಕೋಟಿ ರೂ. ಉಳಿತಾಯದ ಬಜೆಟ್‌ ಆಗಿದ್ದರೂ, ಬರುವ ಆದಾಯ ಮತ್ತು ವೆಚ್ಚದ ಲೆಕ್ಕಾಚಾರ ಹಾಕಿದರೆ ಅವಾಸ್ತವಿಕತೆ ಕಾಣುತ್ತದೆ.

ಬಿಬಿಎಂಪಿ 10,895.84 ಕೋಟಿ ವೆಚ್ಚಕ್ಕೆ 10,899.23 ಕೋಟಿ ಆದಾಯ ತೋರಿಸಿದೆ. ಇದರಲ್ಲಿ ಶೇ.40 ಸರ್ಕಾರದ ಅನುದಾನ ಅವಲಂಬಿಸಿದ್ದರೆ, ಶೇ. 33 ತೆರಿಗೆ ಆದಾಯ ಸಂಗ್ರಹದ  ಎದುರು ನೋಡುತ್ತಿದೆ. ಆದರೆ, ಕಳೆದ 3-4 ವರ್ಷಗಳಲ್ಲಿ ಗರಿಷ್ಠ ತೆರಿಗೆ ಗುರಿ 2,600 ಕೋಟಿ ಇದ್ದರೂ, ಒಮ್ಮೆಯೂ ತೆರಿಗೆ ಸಂಗ್ರಹದಲ್ಲಿ ಶೇ.100 ಗುರಿ ಸಾಧನೆ ಮಾಡಿದ ಉದಾಹರಣೆಗಳಿಲ್ಲ. ಹಾಗಿದ್ದರೆ, ಕೊರತೆ ಆಗಬಹುದಾದ ಅನುದಾನ ಎಲ್ಲಿಂದ ಕ್ರೋಢೀಕರಿಸಲಿದೆ ಎಂಬುದು ಪ್ರಶ್ನೆಯಾಗಿದೆ.

“ಬಿಬಿಎಂಪಿ ನಿರೀಕ್ಷಿತ ಆದಾಯ ಬರದಿದ್ದರೂ, ವೆಚ್ಚಗಳಿಗೆ ಒದಗಿಸಿರುವ ಅನುದಾನಕ್ಕೆ ಅನುಗುಣವಾಗಿ ಜಾಬ್‌ ಸಂಖ್ಯೆ ಪಡೆದು, ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಪ್ರತಿ ವರ್ಷ
ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಬಿಲ್‌ಗ‌ಳ ಅಂತರ ಹೆಚ್ಚಾಗುತ್ತಿದೆ. ಪರಿಣಾಮ ಪಾಲಿಕೆಗೆ ಆರ್ಥಿಕ ಹೊರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಸ್ತವಿಕ ಸ್ವೀಕೃತಿಗೆ ಅನುಗುಣವಾಗಿ ವೆಚ್ಚಗಳಿಗೆ ಅವಕಾಶ ಕಲ್ಪಿಸಬೇಕು’ ಎಂದು ಸ್ವತಃ ನಗರಾಭಿವೃದಿಟಛಿ ಇಲಾಖೆ 2 ತಿಂಗಳ ಹಿಂದೆಯೇ ಪತ್ರ ಬರೆದಿದೆ. ಆದರೆ, ಈ ಸಲಹೆ ಕಡೆಗಣಿಸಿರುವುದು ಬಜೆಟ್‌ ಗಾತ್ರದಿಂದಲೇ ಗೊತ್ತಾಗುತ್ತದೆ.

3 ವರ್ಷಗಳಿಂದ ಪ್ರಸ್ತಾಪ!: ಟೋಟಲ್‌ ಸ್ಟೇಷನ್‌ ಸರ್ವೇ ಮೂಲಕ ಎಲ್ಲಾ ವಲಯಗಳಿಂದ ಅಂದಾಜು 325 ಕೋಟಿ ವ್ಯತ್ಯಾಸದ ಆಸ್ತಿ ತೆರಿಗೆ ಬಾಕಿ ಇದ್ದು, ವಸೂಲಾತಿಗೆ ಕಠಿಣ ಕ್ರಮ
ಕೈಗೊಳ್ಳುವುದಾಗಿ ಕಳೆದ 3ವರ್ಷಗಳಿಂದ ಪಾಲಿಕೆ ಬಜೆಟ್‌ನಲ್ಲಿ ಪ್ರಸ್ತಾಪಿಸುತ್ತಿದೆ. ಆದರೆ ವಸೂಲು ಆಗಿಲ್ಲ. ಅದೇ ರೀತಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನಂತರದಲ್ಲಿ ಜಾಹೀರಾತು
ಇಲ್ಲವೇ ಇಲ್ಲ. ಆದರೂ, ಪ್ರಸಕ್ತ ಸಾಲಿನಲ್ಲಿ ಈ ವಲಯದಿಂದ 40 ಕೋಟಿ ರೂ.ಆದಾಯ ನಿರೀಕ್ಷಿಸಲಾಗಿದೆ.  ಹೊಸ ಜಾಹೀರಾತು ಬೈಲಾ ರೂಪಿಸಿದ್ದು, ಅದರ ಅನ್ವಯ ಶುಲ್ಕ ಮತ್ತುತೆರಿಗೆ ರೂಪದಲ್ಲಿ ಇದು ಬರಲಿದೆ ಎಂದು ಪಾಲಿಕೆ ಹೇಳಿದೆ. ಇನ್ನು ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಮಂಡಿಸಲಾದ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟ ಅನುದಾನ ಶೇ.1ಕ್ಕಿಂತ ಕಡಿಮೆ. ಅದರಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ವೈರಸ್‌ ತಡೆಗೆ ವಾರ್ಡ್‌ ಅನುದಾನದಲ್ಲಿ ತಲಾ 25 ಲಕ್ಷ ರೂ.ಗಳಂತೆ ಒಟ್ಟಾರೆ 49.50 ಕೋಟಿ ರೂ. ಕೊರೊನಾ ವಿಪತ್ತು ನಿಧಿಗೆ ವರ್ಗಾಯಿಸಲು ಮೀಸಲಿಡಲಾಗಿದೆ. ಇದು ವಿಪತ್ತು ನಿರ್ವಹಣೆಯನ್ನು ತುರ್ತಾಗಿ ಕೈಗೊಳ್ಳಲು ಮುಖ್ಯಮಂತ್ರಿಗಳ ವಿವೇಚನೆಗೆ ಒಳಪಟ್ಟಿದೆ.

ಅಪಸ್ವರದ ಮಧ್ಯೆ ಗೆದ್ದ ಜನಪರ
ಕೆಲವು ಅಪಸ್ವರಗಳ ಮಧ್ಯೆಯೂ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹಲವು ಜನಪರ ಯೋಜನೆಗಳತ್ತ ಪಾಲಿಕೆ ಗಮನಹರಿಸಿದೆ. ಮಾಸಿಕ 10 ಸಾವಿರ ಲೀ.ಗಿಂತ ಕಡಿಮೆ ಬಳಸುವ ಗೃಹೋಪಯೋಗಿ ಬಳಕೆದಾರರಿಗೆ ಉಚಿತ ಕಾವೇರಿ ನೀರು ಪೂರೈಸುವುದಾಗಿ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌. ಶ್ರೀನಿವಾಸ್‌ ಪ್ರಕಟಿಸಿದ್ದಾರೆ. ಈ ಸಂಬಂಧ ವಾರ್ಷಿಕ 43 ಕೋಟಿ ರೂ. ಮೀಸಲಿಡಲಾಗಿದೆ. ನಗರದಲ್ಲಿ ಈ ವರ್ಗದ ಗ್ರಾಹಕರು ಸುಮಾರು 2.50 ಲಕ್ಷ ಜನ ಇದ್ದಾರೆ. ಒಂದು ವೇಳೆ 10 ಸಾವಿರ ಲೀ. ಮೇಲೆ ಒಂದು ಲೀ. ನೀರು ಹೆಚ್ಚು
ಬಳಕೆಯಾದರೂ, ಆ ಗ್ರಾಹಕರು ಒಟ್ಟಾರೆ ಬಳಕೆ ಮಾಡಿದ ನೀರಿನ ಬಿಲ್‌ ಪಾವತಿಸಬೇಕಾಗುತ್ತದೆ. ಈ ಹಿಂದೆ ಅಂದರೆ 2017ರಿಂದ ಜಲಮಂಡಳಿ ಕೊಳಚೆಪ್ರದೇಶಗಳ ಗ್ರಾಹಕರಿಗೆ ಇದೇ ಮಾದರಿಯಲ್ಲಿ ಸುಮಾರು 1ಲಕ್ಷ ಗ್ರಾಹಕರಿಗೆ ನೀರು ಪೂರೈಕೆ ಮಾಡುತ್ತಿದೆ. ಇದರಿಂದ ನೀರಿನ ಮಿತಬಳಕೆಯೂ ಆಗಲಿದೆ ಎಂಬುದು ಪಾಲಿಕೆ ಲೆಕ್ಕಾಚಾರ.

ಕೇಂದ್ರ ಮಾಜಿ ಸಚಿವ ಅನಂತಕುಮಾರ್‌ ಹೆಸರಿನಲ್ಲಿ ಪಾಲಿಕೆಯ ಎಲ್ಲಾ ವಾರ್ಡ್‌ ಗಳಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗುವಂತೆ ಪ್ರತಿ ವಾರ್ಡ್‌ಗೆ ತಲಾ 15 ಲ್ಯಾಪ್‌ಟಾಪ್‌ ನೀಡಲು ಉದ್ದೇಶಿಸಿದ್ದು, ಇದಕ್ಕಾಗಿ 15 ಕೋಟಿ ರೂ. ಇಡಲಾಗಿದೆ. ಸ್ಮಾರ್ಟ್‌ ಶಿಕ್ಷಣದಡಿ ಪಾಲಿಕೆ ಆಯ್ದ ಶಾಲೆಗಳಲ್ಲಿ ಕನ್ನಡ-ಆಂಗ್ಲ ಭಾಷೆಯಲ್ಲಿ ದೃಶ್ಯ ಮಾಧ್ಯಮ, ಸ್ಮಾರ್ಟ್‌ ತರಗತಿ ಶಿಕ್ಷಣ ನೀಡಲು 7 ಕೋಟಿ ರೂ. ಮೀಸಲಿಡಲಾಗಿದೆ. 30 ಲಕ್ಷ ಅನುದಾನದಲ್ಲಿ ಪಾಲಿಕೆ ಶಾಲಾ ಶಿಕ್ಷಕರಿಗೆ ಏಕರೂಪದ ಸಮವಸOಉ, ಆರೋಗ್ಯ ವಿಭಾಗದಲ್ಲಿ ಸಾರ್ವಜನಿಕರಿಗೆ
ಆರೋಗ್ಯ ಸೇವೆ ಸಲ್ಲಿಸುತ್ತಿರುವ “ಲಿಂಕ್‌ ವರ್ಕರ್’ಗಳಿಗೆ ಪ್ರತಿ ತಿಂಗಳ ಸಂಭಾವನೆ ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ದಿನಪತ್ರಿಕೆ ಮತ್ತು ಹಾಲನ್ನು ನಿರಂತರವಾಗಿ ವಿತರಿಸುತ್ತಿರುವವರಿಗೆ “ಗುಂಪು ಆರೋಗ್ಯ ವಿಮೆ’ ಜಾರಿಗೆ. ಇದಕ್ಕಾಗಿ 70 ಲಕ್ಷ ರೂ. ಮೀಸಲು, 10 ಕೋಟಿಯಲ್ಲಿ ನಗರದ 8 ಮಾರ್ಗಗಳಲ್ಲಿ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಸ್ವಾಗತ ಕಮಾನು, ಉದ್ಯಾನಗಳಲ್ಲಿ ಅಲಂಕಾರಿಕ ಗಿಡ ಬೆಳೆಸಿ, ಮಾರಾಟ ಮಾಡುವ ವ್ಯವಸ್ಥೆಗಾಗಿ 2 ಕೋಟಿ ರೂ., ಘನತ್ಯಾಜ್ಯ ನಿರ್ವಹಣೆಗಾಗಿ 15 ಕೋಟಿ ರೂ. ಅನುದಾನ ಸೇರಿ ಹಲವು ಪ್ರಮುಖ
ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.

ಬಜೆಟ್‌ ಪ್ರಮುಖಾಂಶಗಳು
– ಪ್ರಸಕ್ತ ಸಾಲಿನಿಂದ ಜನನ ಮತ್ತು ಮರಣ ಪ್ರಮಾಣಪತ್ರಗಳು ಉಚಿತವಾಗಿ ಅಂಚೆ ಮೂಲಕ ಮನೆಗೇ ಬರಲಿವೆ. ಈ ಸಂಬಂಧ ಯೋಜನೆ ಘೋಷಣೆ.
– ಪ್ರತಿ ತಿಂಗಳು 10 ಸಾವಿರ ಲೀ.ವರೆಗೆ ಕಾವೇರಿ ನೀರು ಉಚಿತ. 110 ಹಳ್ಳಿ, ಎರಡೂವರೆ ಲಕ್ಷ ಕುಟುಂಬಕ್ಕೆ ಅನುಕೂಲ.
– ಬೊಮ್ಮನಹಳ್ಳಿಯ ಅಪೋಲೊ ಆಸ್ಪತ್ರೆ ಬಳಿ ಇರುವ ಪಾಲಿಕೆ ಜಾಗದಲ್ಲಿ ದೀನದಯಾಳು ಉಪಾಧ್ಯಾಯ ಹೆಸರಲ್ಲಿ ಮಕ್ಕಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ. ಇದಕ್ಕಾಗಿ 25 ಕೋಟಿ.
– ಈಗಾಗಲೇ ಇರುವ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದೆಡೆ ಡಯಾಲಿಸಿಸ್‌ ಕೇಂದ್ರ ಸ್ಥಾಪನೆಗೆ 16 ಕೋಟಿ ಮೀಸಲು.
– ಬೊಮ್ಮನಹಳ್ಳಿ ವಲಯದಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ.
– ಪ್ರಾಥಮಿಕ ಆರೋಗ್ಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಲಿಂಕ್‌ ಕಾರ್ಯಕರ್ತರಿಗೆ ಮಾಸಿಕ ಸಾವಿರ ರೂ.ಸಂಭಾವನೆ.
– 75 ವರ್ಷ ಮೀರಿದ ಆರ್ಥಿಕ ಸಂಕಷ್ಟದಲ್ಲಿರುವ ನೂರು ಕನ್ನಡಪರ ಹೋರಾಟಗಾರರು, ಅಶಕ್ತ ಕನ್ನಡ ಕಲಾವಿದರಿಗಾಗಿ “ಹೊಸ ಬೆಳಕು’. ಸ್ವಾತಂತ್ರ್ಯ ದಿನದಂದು ತಲಾ ಲಕ್ಷ ರೂ. ಆರ್ಥಿಕ ನೆರವು.
– ಕೆಂಪೇಗೌಡ ದಿನಾಚರಣೆಯನ್ನು ಬೆಂಗಳೂರು ಹಬ್ಬವಾಗಿ ಆಚರಣೆ.
– ಅನಂತಕುಮಾರ್‌ ಹೆಸರಿನಲ್ಲಿ ಪ್ರತಿ ವಾರ್ಡ್‌ಗೆ ಬಡ ವಿದ್ಯಾರ್ಥಿಗಳಿಗೆ 15 ಲ್ಯಾಪ್‌ಟಾಪ್‌ ವಿತರಣೆಗೆ 15 ಕೋಟಿ.
– ಪಾಲಿಕೆ ಆದಾಯ ವೃದ್ಧಿಗಾಗಿ ಉದ್ಯಾನಗಳಲ್ಲಿ ಅಲಂಕಾರಿಕ ಗಿಡ ಬೆಳೆಸಿ, ಮಾರಾಟಕ್ಕೆ ವ್ಯವಸ್ಥೆ. ಇದಕ್ಕಾಗಿ 2 ಕೋಟಿ ರೂ.
– 8 ಮಾರ್ಗಗಳಲ್ಲಿ “ನಾಡಪ್ರಭು ಕೆಂಪೇಗೌಡ’ ಸ್ವಾಗತ ಕಮಾನು.
– ಪಾಲಿಕೆ ವಾಹನ ಚಾಲಕರ ವಾಸಕ್ಕಾಗಿ 10 ಕೋಟಿ ವೆಚ್ಚದಲ್ಲಿ ವಸತಿಗೃಹ ನಿರ್ಮಾಣ. ಮೊದಲ ಹಂತವಾಗಿ 5 ಕೋಟಿ ಅನುದಾನ.
– ಹೊಸದಾಗಿ ರುದ್ರಭೂಮಿ, ಸ್ಮಶಾನಗಳ ನಿರ್ಮಾಣಕ್ಕೆ 10 ಕೋಟಿ.
– ನಿರಾಶ್ರಿತರ ತಂಗುದಾಣ ನಿರ್ಮಾಣ ಮತ್ತು ನಿರ್ವಹಣೆಗೆ 5 ಕೋಟಿ.
– ಪ್ರತಿ ವಾರ್ಡ್‌ಗೆ 50 ಟೈಲರಿಂಗ್‌ ಯಂತ್ರ ವಿತರಣೆಗೆ 4 ಕೋಟಿ.
– ಶಾಲೆ ಬಿಟ್ಟ ಮಕ್ಕಳನ್ನು ಕರೆತರಲು “ಕಲಿಯೋಣ ಬಾ’ ಯೋಜನೆ.
– ಸ್ಮಾರ್ಟ್‌ ಶಿಕ್ಷಣ- ಪಾಲಿಕೆ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ದೃಶ್ಯ ಮಾಧ್ಯಮ ಮತ್ತು ಸ್ಮಾರ್ಟ್‌ ತರಗತಿಗಳಿಗಾಗಿ 7 ಕೋಟಿ.
– ಕೆಂಪೇಗೌಡ ಹೆಸರಲ್ಲಿ 4 ವಲಯಗಳಲ್ಲಿ ಶಾಲೆ ನಿರ್ಮಾಣಕ್ಕೆ 10 ಕೋಟಿ.
– ಪಾಲಿಕೆ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ರಕ್ಷಣೆಗಾಗಿ ಸಿಸಿ ಕ್ಯಾಮರಾ ಅಳವಡಿಕೆ. ಇದಕ್ಕಾಗಿ 5 ಕೋಟಿ.
– ಶಾಲಾ-ಕಾಲೇಜುಗಳಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆಗೆ 2 ಕೋಟಿ.
– ಅಂಗವಿಕಲರು ರಾಷ್ಟ್ರೀಯ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಲು ಆರ್ಥಿಕ ನೆರವು. ಇದಕ್ಕಾಗಿ 1.50 ಕೋಟಿ ರೂ.
– ಪ್ರತಿ ವಾರ್ಡ್‌ಗೆ 10 ತ್ರಿಚಕ್ರ ವಾಹನಗಳ ವಿತರಣೆಗೆ 10 ಕೋಟಿ.

ನೀರಿನ ಮಿತ ಬಳಕೆಗೆ ಪ್ರೋತ್ಸಾಹ ನೀಡಲು 10 ಸಾವಿರ ಲೀ. ಒಳಗೆ ನೀರು ಬಳಸುವ ಸುಮಾರು 2.5 ಲಕ್ಷ ಜನರಿಗೆ ಉಚಿತ ನೀರು ನೀಡುವ ಯೋಜನೆ ಪರಿಚಯಿಸಲಾಗಿದೆ. ಅಲ್ಲದೆ, ಕೊರೊನಾ ಸೋಂಕಿತರ ಅನುಕೂಲಕ್ಕೆ ಎಲ್ಲಾ 198 ವಾರ್ಡ್‌ಗಳಿಗೆ ತಲಾ 25 ಲಕ್ಷ ರೂ. ಅನುದಾನ ನೀಡಿದ್ದೇವೆ.
● ಎಂ. ಗೌತಮ್‌ ಕುಮಾರ್‌, ಮೇಯರ್‌

ದೋಬಿ ಘಾಟ್‌ಗಳಲ್ಲಿ ವಾಷಿಂಗ್‌ ಮಷಿನ್‌ ಅಳವಡಿಕೆ, ಬಡವರು,ಸಾಮಾನ್ಯರಿಗೆ ನೆರವಾಗುವಂತೆ ಅನುದಾನ ನೀಡಲಾಗಿದೆ. ಇಂದಿರಾ ಕ್ಯಾಂಟೀನ್‌ಗೆ ಸರ್ಕಾರ ಅನುದಾನ ನೀಡುತ್ತಿದೆ. ಹೀಗಾಗಿ, ಇದಕ್ಕೆ ಬಿಬಿಎಂಪಿಯಲ್ಲಿ ಪ್ರತ್ಯೇಕ ಹಣ ಮೀಸಲಿಡುವ ಪ್ರಶ್ನೆ ಉದ್ಬವಿಸುವುದಿಲ್ಲ.
 ● ಎಲ್‌. ಶ್ರೀನಿವಾಸ್‌, ತೆರಿಗೆ-ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ

ವಾಸ್ತವ ಅರ್ಥ ಮಾಡಿಕೊಳ್ಳದ ಬೋಗಸ್‌ ಬಜೆಟ್‌. ಕೋವಿಡ್-19 ದಿಂದ ಜನ ತತ್ತರಿಸುತ್ತಿದ್ದರೂ, ಅಗತ್ಯ ಅನುದಾನ ನೀಡಿಲ್ಲ. ಇಂದಿರಾ ಕ್ಯಾಂಟೀನ್‌ಗೆ ಹಣ ನೀಡಿಲ್ಲ. ಪಕ್ಷಾಂತರಿ ಮತ್ತು ಬಿಜೆಪಿ ಸದಸ್ಯರು  ಹಾಗೂ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಸೀಮಿತ ಬಜೆಟ್‌. ವಿರೋಧ ಪಕ್ಷದ ಸದಸ್ಯರ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ.
● ಅಬ್ದುಲ್‌ ವಾಜಿದ್‌, ಪ್ರತಿ ಪಕ್ಷದ ನಾಯಕ

ಟಾಪ್ ನ್ಯೂಸ್

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

10-

Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್

9-

CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ

8-gadaga

Diesel theft; ಗದಗ: ಕೆ.ಎಸ್.‌ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

9-agri

Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

5

New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

10-

Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್

9-

CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ

5

Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.