Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
10 ನಿಮಿಷಗಳ ಅಂತರದಲ್ಲಿ ಮೆಟ್ರೋ ಕಾರ್ಯಾಚರಣೆ
Team Udayavani, Nov 8, 2024, 2:26 PM IST
ಬೆಂಗಳೂರು: “ನಮ್ಮ ಮೆಟ್ರೋ’ ವಿಸ್ತರಿತ ಹೊಸ ಮಾರ್ಗದಲ್ಲಿ ಮೊದಲ ದಿನ ಉತ್ತಮ ಸ್ಪಂದನೆ ದೊರಕಿದ್ದು, ನಾಗಸಂದ್ರ-ಮಾದಾವರ ನಡುವೆ ಗುರುವಾರ ಇಡೀ ದಿನ 16000 ಜನ ಪ್ರಯಾಣಿಸಿದ್ದಾರೆ. ಬೆಳಗ್ಗೆ 5ರಿಂದ ಶುರುವಾದ ಉದ್ದೇಶಿತ ಮಾರ್ಗದ ವಾಣಿಜ್ಯ ಸಂಚಾರ ರಾತ್ರಿ 11ರವರೆಗೆ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ 10 ನಿಮಿಷಗಳ ಅಂತರದಲ್ಲಿ ಮೆಟ್ರೋ ಕಾರ್ಯಾಚರಣೆ ಮಾಡಿತು.
ಬೆಳಗ್ಗೆ 5ರಿಂದ ರಾತ್ರಿ 9ರವರೆಗೆ 15,594 ಜನ ಪ್ರಯಾಣಿಸಿದ್ದು, ರಾತ್ರಿ 11ರ ವೇಳೆಗೆ ಈ ಸಂಖ್ಯೆ 16000ದ ಗಡಿ ದಾಟಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ದ ಅಧಿಕಾರಿಗಳು ತಿಳಿಸಿದರು.
3.14 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಮೂರು ನಿಲ್ದಾಣಗಳಿದ್ದು, ಅವುಗಳಿಂದ ನಗರದ ವಿವಿಧೆಡೆ ಮೆಟ್ರೋ ಪ್ರಯಾಣ ಬೆಳೆಸಿದವರ ಸಂಖ್ಯೆ 7,400 ಇದ್ದರೆ, ಬೇರೆ ಬೇರೆ ನಿಲ್ದಾಣಗಳಿಂದ ಈ ಮೂರು ನಿಲ್ದಾಣಗಳಿಗೆ ಬಂದಿಳಿದವರ ಸಂಖ್ಯೆ 8,194 ಆಗಿದೆ. ಎರಡು ಕಡೆ ನೈಸ್ ರಸ್ತೆಯನ್ನು ಸಂಧಿಸುವ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದುಹೋಗುವ ಈ ಅತಿ ಚಿಕ್ಕ ಮಾರ್ಗದಲ್ಲಿ ನಿತ್ಯ 44 ಸಾವಿರ ಜನ ಪ್ರಯಾಣಿ ಸಲಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಅಂದಾಜಿಸಿದ್ದಾರೆ.
ಮೊದಲ ದಿನ ತಾವು ಇರುವ ಪ್ರದೇಶಗಳಿಗೆ ಮತ್ತಷ್ಟು ಹತ್ತಿರವಾದ ಮೆಟ್ರೋದಲ್ಲಿ ಜನ ಸಂಚರಿಸಿ ಖುಷಿಪಟ್ಟರು.ಕೆಲವರು ಜಾಲಿ ರೈಡ್ ಮಾಡಿ ಸೆಲ್ಫಿà ತೆಗೆದುಕೊಂಡರು. ಆ ಫೋಟೋಗಳೆಲ್ಲ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.