ಬೆಂಗಳೂರು: ಈದ್ ಮಿಲಾದ್ ಮೆರವಣಿಗೆ ವೇಳೆ ಮಾರಕಾಯುಧಗಳ ಬಳಕೆ; 19 ಮಂದಿ ಬಂಧನ
ಓವೈಸಿ ಅವರ ಪ್ರಚೋದನಕಾರಿ ಭಾಷಣದ ರೀಮಿಕ್ಸ್ ಹಾಡು ಬಳಕೆ...
Team Udayavani, Oct 11, 2022, 2:57 PM IST
ಬೆಂಗಳೂರು: ಸಿದ್ದಾಪುರದಲ್ಲಿ ಈದ್ ಮಿಲಾದ್ ಆಚರಣೆಯ ಮೆರವಣಿಗೆ ವೇಳೆ ಮಾರಕಾಯುಧಗಳನ್ನು ಝಳಪಿಸಿದ 14 ಮಂದಿ ಅಪ್ರಾಪ್ತ ವಯಸ್ಕರು ಸೇರಿದಂತೆ 19 ಮಂದಿ ಯುವಕರನ್ನು ಪೊಲೀಸ್ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಅಕ್ಟೋಬರ್ 9 ರಂದು ಮೆರವಣಿಗೆಯ ನಂತರ ಈ ಘಟನೆ ನಡೆದಿದೆ. ಎಐಎಂಐಎಂ ನಾಯಕ, ತೆಲಂಗಾಣ ಶಾಸಕ ಅಕ್ಬರುದ್ದೀನ್ ಓವೈಸಿ ಅವರ ಪ್ರಚೋದನಕಾರಿ ಭಾಷಣದಿಂದ ಮಾಡಿದ ರೀಮಿಕ್ಸ್ ಹಾಡನ್ನು ಯುವಕರು ಮತ್ತು ಅಪ್ರಾಪ್ತರ ಗುಂಪು ಪ್ಲೇ ಮಾಡಿದೆ.
ಹಿಂದೂಸ್ಥಾನದಲ್ಲಿ ವಾಸಿಸುವ ಎಲ್ಲಾ ಹಿಂದೂಗಳು ದೇಶದಲ್ಲಿ 100 ಕೋಟಿ ಜನಸಂಖ್ಯೆಯನ್ನು ಹೊಂದಿದ್ದಾರೆ. ನಮ್ಮ ಜನಸಂಖ್ಯೆ ಕೇವಲ 28 ಕೋಟಿ. ನಾವು ಏನಾಗಿದ್ದೇವೆಯೋ ಅದಕ್ಕಿಂತ ಹೆಚ್ಚಿನವರು ನೀವು. ಯಾರು ಶಕ್ತಿಶಾಲಿ ಎಂದು ನೋಡೋಣ. ಪೊಲೀಸರು 10 ನಿಮಿಷಗಳ ಕಾಲ ರಸ್ತೆಯಿಂದ ಹೊರಡಲಿ, ಏನಾಗುತ್ತದೆ ಎಂದು ನೋಡೋಣ, ”ಎಂಬ ಪ್ರಚೋದನಕಾರಿ ಭಾಷಣದ ಸಾಲುಗಳನ್ನು ಸಂಗೀತದೊಂದಿಗೆ ಜೋರಾಗಿ ನುಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎಫ್‌ಐಆರ್ ದಾಖಲಿಸಿರುವ ಬೆಂಗಳೂರು ನಗರದ ಸಿದ್ದಾಪುರ ಪೊಲೀಸರು, ಅಪ್ರಾಪ್ತ ವಯಸ್ಕ ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಗುಂಪು ಅಪಾಯಕಾರಿ ಆಯುಧಗಳನ್ನು ಝಳಪಿಸಿ, ನೃತ್ಯ ಮಾಡಲು ಪ್ರಾರಂಭಿಸಿತು. ಘಟನೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.