Bengaluru: ಹೂಡಿಕೆಯಲ್ಲಿ ಹಣ ದ್ವಿಗುಣ ಆಮಿಷ ತೋರಿಸಿ 35.35 ಲಕ್ಷ ರೂ. ವಂಚನೆ
ಬ್ಯಾಂಕ್ ಖಾತೆ ತೆರೆಯಲು ಕಮಿಷನ್ ಪಡೆಯುತ್ತಿದ್ದ ಮೂವರ ಬಂಧನ
Team Udayavani, Oct 19, 2024, 3:17 PM IST
ಬೆಂಗಳೂರು: ಅಂತಾರಾಜ್ಯ ವ್ಯಕ್ತಿಗಳ ಜೊತೆಗೆ ಸೇರಿಕೊಂಡು ಹವಾಲ ದಂಧೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳಿ ಮೂಲದ ಅಮನ್, ಅಹಮದಾಬಾದ್ ಮೂಲದ ಗುರು ಬಾಯ್, ಭರತ್ ಬಾಯಿ ಬಂಧಿತರು.
ಎಚ್‌ಎಸ್‌ಆರ್ ಲೇಔಟ್‌ನ ವೆಂಕಟಾಪುರದ ವ್ಯಕ್ತಿ ಯೊಬ್ಬರನ್ನು ವಾಟ್ಸಆ್ಯಪ್ ಮೂಲಕ ಸಂಪರ್ಕಿಸಿದ ಆರೋಪಿಗಳು, ಗಣೇಶ ಗ್ರೀನ್ ಭಾರತ್ ಲಿ. ಐಪಿಒ ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹಣ ದ್ವಿಗುಣ ವಾಗಿ ಹೆಚ್ಚಿನ ಹಣ ಸಂಪಾದಿಸಬಹುದೆಂದು ಆಮಿಷವೊಡ್ಡಿದ್ದರು.
ನಂತರ ಹಂತ ಹಂತವಾಗಿ 35.35 ಲಕ್ಷ ರೂ. ಅನ್ನು ವಿವಿಧ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು. ಈ ಬಗ್ಗೆ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಇಎನ್ ಠಾಣೆ ಪೊಲೀಸರ ತನಿಖೆ ವೇಳೆ ದೂರುದಾರರಿಂದ ದೇಶದ ವಿವಿಧ ರಾಜ್ಯಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಕಂಡು ಬಂದಿತ್ತು. ಆ ಹಣವನ್ನು ವಿತ್ ಡ್ರಾ ಮಾಡಿದ ಇಬ್ಬರುವ ಆರೋಪಿಗಳನ್ನು ಹೈದರಾಬಾದ್ ನಲ್ಲಿ ವಶಕ್ಕೆ ಪಡೆದಿದ್ದಾರೆ.
ಆ ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ, ಒಬ್ಬನ ಸಹೋದರ ದುಬೈನಲ್ಲಿ ವಾಸವಾಗಿದ್ದು, ಆತನು ಆರೋಪಿಗಳಿಬ್ಬರ ಜೊತೆ ಸೇರಿಕೊಂಡು ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಸಿರುವುದು ಗೊತ್ತಾಗಿದೆ. ನಂತರ ಆರೋಪಿಗಳು ದೂರುದಾರರಿಗೆ ಆಮಿಷವೊಡ್ಡಿ ವಿವಿಧ ಖಾತೆಗಳಿಗೆ ಹಣ ಸಂದಾಯ ಮಾಡಿಸಿದ್ದರು. ಈ ರೀತಿ ಸಂದಾಯ ಮಾಡಿದ ಹಣವನ್ನು ಈ ಮೂವರು ವ್ಯಕ್ತಿಗಳ ಮೂಲಕ ಡ್ರಾ ಮಾಡಿಸಿ, ನಂತರ ಹವಾಲ ಮೂಲಕ ದುಬೈನಲ್ಲಿ ಹಣ ಪಡೆದುಕೊಳ್ಳುತ್ತಿದ್ದ ವಿಚಾರ ತನಿಖೆಯಲ್ಲಿ ಕಂಡು ಬಂದಿದೆ.
ಶೇ.3ರಷ್ಟು ಹಣ ಹವಾಲ ಏಜೆಂಟರಿಗೆ
ಇತರೆ ವಿವಿಧ ಬ್ಯಾಂಕ್ ಖಾತೆಗಳ ಕೆವೈಸಿ ಹಾಗೂ ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸಿ ಪರಿಶೀಲಿಸಿ ದಾಗ ಹುಬ್ಬಳ್ಳಿ ಮೂಲದ ವ್ಯಕ್ತಿ ಇದರಲ್ಲಿ ಭಾಗಿ ಯಾಗಿರುವುದು ಗೊತ್ತಾಗಿತ್ತು. ನಂತರ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಆ ವೇಳೆ ಈ ರೀತಿ ಕಳುಹಿಸುತ್ತಿದ್ದ ಹಣಕ್ಕೆ ಶೇ.3ರಷ್ಟು ಹಣವನ್ನು ಅಹಮದಾಬಾದ್‌ನಲ್ಲಿರುವ ವ್ಯಕ್ತಿಯು ಹವಾಲಾ ಏಜೆಂಟರಿಗೆ ಕಳುಹಿಸುತ್ತಿದ್ದ. ನಂತರ ಸ್ನೇಹಿತರೊಂದಿಗೆ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಚೆಕ್ ಮೂಲಕ ಹಣವನ್ನು ವಿತ್ ಡ್ರಾ ಮಾಡಿಕೊಂಡಿರುತ್ತಾರೆ. ಎಟಿಎಂಗಳಲ್ಲಿಯೂ ಸಹ ಹಣ ವಿತ್ ಡ್ರಾ ಮಾಡಿಕೊಳ್ಳುತ್ತಿದ್ದರು. ಎಟಿಎಂ ಕಾರ್ಡ್ ನ ಮಿತಿ ಮುಗಿದಾಗ ಸ್ಥಳೀಯ ಪೆಟ್ರೋಲ್ ಬಂಕ್ ಗಳಲ್ಲಿ ಎಟಿಎಂ ಕಾರ್ಡ್ ಬಳಸಿ ಕೊಂಡು ಹಣ ಪಡೆದು ಮಾಲಿಕರಿಗೆ ಶೇ.3 ರಷ್ಟು ಕಮಿಷನ್ ನೀಡುತ್ತಿದ್ದ ಸಂಗತಿಯೂ ಹೊರ ಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.