Bengaluru: 54 ಎಂಜಿನಿಯರಿಂಗ್ ಸೀಟ್ ಬ್ಲಾಕ್: ಕೆಇಎ ಶಂಕೆ
ಕೆಇಎ ಮೂಲಕವೇ ಸರ್ಕಾರಿ ಕೋಟಾ ಸೀಟು ಭರ್ತಿ ; ಸರ್ಕಾರಿ ಕೋಟಾದ ಸೀಟುಗಳಿಗೆ 4ನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಅವಕಾಶ
Team Udayavani, Nov 16, 2024, 2:43 PM IST
ಬೆಂಗಳೂರು: ಈ ವರ್ಷದ ಇಂಜಿನಿ ಯರಿಂಗ್ ಪ್ರವೇಶ ಪ್ರಕ್ರಿಯೆಯಲ್ಲಿ ಸೀಟ್ ಬ್ಲಾಕಿಂ ಗ್ ನಡೆದಿರುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಕ್ಕೆ ಬಹುತೇಕ ಖಚಿತವಾಗಿದ್ದು, ಮುಂದಿನ ವರ್ಷದಿಂದ ಮೆಡಿಕಲ್ ಸೀಟು ಹಂಚಿಕೆ ಮಾದರಿಯಲ್ಲಿಯೇ ಇಂಜಿ ನಿಯರಿಂಗ್ ಸೀಟು ಹಂಚಿಕೆ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಿದೆ. ಸೀಟ್ ಬ್ಲಾಕಿಂಗ್ ದಂಧೆಗೆ ಕಡಿವಾಣ ಹಾಕಲು ಎಲ್ಲ ಸರ್ಕಾರಿ ಕೋಟಾದ ಸೀಟುಗಳನ್ನು ಕೆಇಎಯ ಮೂಲಕವೇ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಕೆಇಎಯ ಪ್ರಮುಖ ಪ್ರಸ್ತಾವನೆ ಆಗಿದೆ.
ಈ ಬಾರಿ ಕೆಇಎಯು ಹಂಚಿಕೆ ಮಾಡಿದ್ದ ಸೀಟುಗಳಲ್ಲಿ 2,625 ಸೀಟುಗಳು ಭರ್ತಿ ಯಾ ಗದೆ ಖಾಸಗಿ ಇಂಜಿನಿಯರಿಂಗ್ ಕಾಲೇಜು ಗಳ ಮ್ಯಾನೇಜ್‌ಮೆಂಟ್‌ಗಳ ಪಾಲಾ ದ ಪ್ರಕರಣವನ್ನು ಗಂಭೀರವಾಗಿ ತೆಗೆದು ಕೊಂಡ ಕೆಇಎ, ಈ ಸೀಟುಗಳ ಆಪ್ಷನ್ ಎಂಟ್ರಿ ಮಾಡಿ, ಕಾಲೇಜುಗಳಿಗೆ ದಾಖ ಲಾಗದ ವಿದ್ಯಾರ್ಥಿಗಳಿಗೆ ಶೋಕಾಸ್ ನೋಟಿಸ್ ನೀಡಿ ಮಾಹಿತಿ ಪಡೆದುಕೊಂಡಿತ್ತು.
ಹಲವು ವಿದ್ಯಾರ್ಥಿಗಳು ಜೆಇಇ, ಕಾಮೆಡ್-ಕೆ ಮೂಲಕ ಪಡೆದ ಸೀಟ್‌ಗಳಿಗೆ ಪ್ರವೇಶ ಪಡೆದಿದ್ದು ಅವರು ಸಿಇಟಿಯ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗಿ ಯಾಗಿಲ್ಲ ಎಂಬ ಮಾಹಿತಿ ಖಚಿತವಾಗಿದೆ. ಉಳಿದಂತೆ ಇನ್ನು ಕೆಲ ವಿದ್ಯಾರ್ಥಿಗಳು ತಮ್ಮ ನಿರೀಕ್ಷೆಯ ಕಾಲೇಜುಗಳು ದಕ್ಕದ ಹಿನ್ನೆಲೆ ಯಲ್ಲಿ ತಮಗೆ ಲಭಿಸಿದ ಕಾಲೇಜುಗಳಿಗೆ ಪ್ರವೇಶ ಪಡೆದಿಲ್ಲ. ಆದರೆ ಇನ್ನು ಕೆಲವು ಪ್ರಕರಣಗಳಲ್ಲಿ ಸೀಟು ಆಯ್ಕೆಗೆ ಒಂದೇ ಐಪಿ ಅಡ್ರೆಸ್ ಬಳಸಿರುವ ಪ್ರಕರಣಗಳು ಪತ್ತೆ ಯಾಗಿದ್ದು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮೇಲ್ನೋಟಕ್ಕೆ ಇಂತಹ 54 ಪ್ರಕರಣಗಳಿವೆ ಎಂದು ಕೆಇಎಯ ಉನ್ನತ ಮೂಲಗಳು ತಿಳಿಸಿವೆ.
ಒಟ್ಟಾರೆ ಸೀಟ್ ಬ್ಲಾಕಿಂಗ್ ದಂಧೆಯನ್ನು ಗಂಭೀರ ವಾಗಿ ಪರಿಗಣಿಸಿರುವ ಕೆಇಎ ಮುಂದಿನ ದಿನಗಳಲ್ಲಿ ಇಂತಹ ವಿದ್ಯಮಾನ ಘಟಿಸ ದಂತೆ ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ. ವೈದ್ಯಕೀಯ ಕೋರ್ಸ್‌ಗಳಲ್ಲಿ ಸರ್ಕಾರಿ ಕೋಟಾದ ಎಲ್ಲ ಸೀಟ್‌ಗಳನ್ನು ಕೆಇಎಯೇ ಭರ್ತಿ ಮಾಡುತ್ತದೆ. ಆದರೆ ಇಂಜಿನಿಯರಿಂಗ್‌ನಲ್ಲಿ ಎರಡನೇ ವಿಸ್ತರಿತ ಸುತ್ತಿನ ಬಳಿಕ ಖಾಲಿ ಉಳಿಯುವ ಸರ್ಕಾರಿ ಕೋಟಾದ ಸೀಟ್ ಗಳು ಮ್ಯಾನೇಜ್‌ಮೆಂಟ್ ಪಾಲಾಗುತ್ತವೆ. ಈ ನಿಯಮ ದುರುಪಯೋಗ ಪಡಿಸಿಕೊಂಡು ಕೆಲ ಕಾಲೇಜುಗಳು ಮತ್ತು ಸೀಟ್ ಬ್ಲಾಕ್ ದಂಧೆ ಮಾಡುವವರು ಸರ್ಕಾರಿ ಕೋಟಾದ ಸೀಟ್‌ಗಳು ಖಾಲಿ ಇರುವಂತೆ ಮಾಡಿ ಆ ಬಳಿಕ ಅದು ಮ್ಯಾನೇಜ್‌ಮೆಂಟ್ ಕೋಟಾದ ಸೀಟ್‌ಗಳಾಗಿ ಪರಿವರ್ತನೆ ಗೊಂಡ ಬಳಿಕ ಹಲವು ಪಟ್ಟು ಹೆಚ್ಚು ಶುಲ್ಕ ಪಡೆದು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿವೆ.
ಇದಕ್ಕೆ ಕಡಿವಾಣ ಹಾಕಬೇಕಾದರೆ ಈಗಿರುವ ಎರಡೇ ಸುತ್ತಿನ ಕೌನ್ಸಿಲಿಂಗ್ ಎಂಬ ನಿಯಮವನ್ನು ತಿದ್ದುಪಡಿ ಮಾಡಿ ಸರ್ಕಾರಿ ಕೋಟಾದ ಸೀಟುಗಳಿಗೆ ಮೂರು ಅಥವಾ ನಾಲ್ಕನೇ ಸುತ್ತಿನ ಕೌನ್ಸಿಲಿಂಗ್‌ಗೆ ಅವಕಾಶ ಕಲ್ಪಿಸ ಬೇಕು. ಹಾಗೆಯೇ ಸರ್ಕಾರಿ ಕೋಟಾದ ಎಲ್ಲ ಸೀಟ್‌ಗಳನ್ನು ಕೆಇಎಯ ಮೂಲಕವೇ ಭರ್ತಿ ಮಾಡಬೇಕು ಎಂಬುದು ಕೆಇಎಯ ವಾದವಾಗಿದೆ.
ಮುಂದಿನ ವರ್ಷ ಖಾಸಗಿ ಇಂಜಿನಿ ಯರಿಂಗ್ ಕಾಲೇಜುಗಳ ಜೊತೆ ಸೀಟ್ ಹಂಚಿಕೆ ಒಪ್ಪಂದ ಮಾಡಿಕೊಳ್ಳುವಾಗ ಭರ್ತಿಯಾಗದ ಸರ್ಕಾರಿ ಕೋಟಾ ಸೀಟ್‌ಗಳನ್ನು ಮ್ಯಾನೇಜ್ ಮೆಂಟ್‌ಗೆ ನೀಡುವ ಷರತ್ತನ್ನು ಕೈಬಿಡಬೇ ಕೆಂದು ಕೆಇಎ ತನ್ನ ಪ್ರಸ್ತಾವನೆಯಲ್ಲಿ ತಿಳಿಸಿದೆ.
ಕೌನ್ಸಿಲಿಂಗ್ ಪ್ರಕ್ರಿಯೆ ಕೆಇಎಯ ಮೊದಲ ಸುತ್ತಿನ ಕೌನ್ಸಿಲಿಂಗ್ ನಡೆದ ಬಳಿಕವೇ ಕಾಮೆಡ್ -ಕೆ (ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಪರೀಕ್ಷೆ) ಯ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸಬೇಕು. ಇದರಿಂದಾಗಿ ಸೀಟ್ ಹಂಚಿಕೆ ಆದ ಬಳಿಕ ಸೀಟ್‌ಗಳನ್ನು ರದ್ದು ಮಾಡುವ ಪ್ರಮಾಣ ಕಡಿಮೆ ಆಗಲಿದೆ. ●ಎಚ್. ಪ್ರಸನ್ನ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.