Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣದ ಸಿಬಂದಿಗೆ ಬೆದರಿಕೆ
Team Udayavani, Nov 2, 2024, 11:22 AM IST
ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಬ್ಯಾಗ್ ಪರಿಶೀಲನೆ ವೇಳೆ ಅನುಮಾನಾಸ್ಪದ ವಸ್ತು ಕಂಡು ಬಂದ ಹಿನ್ನೆಲೆಯಲ್ಲಿ ಇಬ್ಬರು ಪ್ರಯಾಣಿಕರ ಬ್ಯಾಗ್ ಅನ್ನು ಪರಿಶೀಲಿಸಲು ಮುಂದಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಿಬಂದಿಗೆ ನಿಂದಿಸಿ ಬೆದರಿಕೆ ಹಾಕಿದ ಇಬ್ಬರ ವಿರುದ್ಧ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೆಐಎಎಲ್ನ ಸಿಐಎಸ್ಎಫ್ ವಿಭಾಗದ ಎಎಸ್ಜಿ ಪ್ರದ್ಯುಮ್ನ ಕುಮಾರ್ ನೀಡಿರುವ ದೂರು ಆಧರಿಸಿ ಬಿಹಾರ ಮೂಲದ ಅಮನ್ರಾಜ್ (32), ಝಾರ್ಖಂಡ್ ಮೂಲದ ಅದಿಥಿ ಕುಮಾರಿ (28) ವಿರುದ್ಧ ಪ್ರಕರಣ ದಾಖಲಾಗಿದೆ.
ಅ. 29ರಂದು ಇಂಡಿಗೋ ವಿಮಾನದಲ್ಲಿ ಭುವನೇಶ್ವರಗೆ ಪ್ರಯಾಣಿಸಲೆಂದು ಆರೋಪಿಗಳು ಕೆಐಎಎಲ್ಗೆ ಬಂದಿದ್ದರು. ಇಬ್ಬರು ಆರೋಪಿಗಳು ಸೆಕ್ಯೂರಿಟಿ ಚೆಕಿಂಗ್ ಎಂದು ಸೆಕ್ಯೂರಿಟಿ ಹೋಲ್ಡ್ ಏರಿಯಾಗೆ ಬಂದಿದ್ದು, ಇವರ ಬ್ಯಾಗೇಜ್ ಸ್ಕ್ರೀನಿಂಗ್ ಮಾಡುವಾಗ ಪ್ರಯಾಣಿಕರ ಬ್ಯಾಗ್ ನಲ್ಲಿ ಅನುಮಾನಾಸ್ಪದ ವಸ್ತು ಕಂಡು ಬಂದಿತ್ತು. ಬ್ಯಾಗ್ ಅನ್ನು ಕೆಐಎಎಲ್ ಸಿಬಂದಿ ಖುದ್ದು ತಪಾಸಣೆ ಮಾಡಲು ಮುಂದಾದಾಗ ಸಹಕರಿಸದೇ ಇದ್ದಾಗ ಘಟನೆ ಸಂಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.