Bengaluru: ಬೈಕ್‌ನಲ್ಲಿ ಬಂದು ಮೊಬೈಲ್ ದೋಚಿದ ಇಬ್ಬರ ಬಂಧನ
Team Udayavani, Sep 14, 2024, 11:53 AM IST
ಬೆಂಗಳೂರು: ಸಾರ್ವಜನಿಕ ಮೊಬೈಲ್ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾರೋಹಳ್ಳಿ ನಿವಾಸಿ ಚೇತನ್ ಅಲಿಯಾಸ್ ಚಿಟ್ಟೆ (23) ಮತ್ತು ಸುಂಕದಕಟ್ಟೆ ನಿವಾಸಿ ನವೀನ್ ಕುಮಾರ್ ಅಲಿಯಾಸ್ ಅಪ್ಪು (20) ಬಂಧಿತರು. ಆರೋಪಿಗಳಿಂದ 1.70 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 12 ಮೊಬೈಲ್ ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ರಾಜಾಜಿನಗರ ಪಿ.ಜಿ. ನಿವಾಸಿ ವಿಷ್ಣುವರ್ಧನ್ ಎಂಬುವರು ಸೆ.4ರಂದು ಸಂಜೆ ಕೆಲಸ ಮುಗಿಸಿಕೊಂಡು ಸುಂಕದಕಟ್ಟೆ ಸಮೀಪದ ಕಂಪನಿ ಎದುರು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬರುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳು ಏಕಾಏಕಿ ವಿಷ್ಣುವರ್ಧನ್ ಅವರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Car Seized: ತೆರಿಗೆ ಪಾವತಿಸದ ಬೆಂಜ್, ಪೋರ್ಶೆ ಸೇರಿ 30 ಐಷಾರಾಮಿ ಕಾರು ಜಪ್ತಿ
Lokayukta: ವಿಶೇಷ ತಹಶೀಲ್ದಾರ್ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ
Video: ಊಟದ ವಿಚಾರದಲ್ಲಿ ಅರ್ಧಕ್ಕೆ ನಿಂತಿದ್ದ ಮದುವೆ ಪೊಲೀಸ್ ಠಾಣೆಯಲ್ಲಿ ಪೂರ್ಣಗೊಂಡಿತು
Bengaluru: ಪತಿ ಸಂಬಂಧಿಕರಿಂದ ಆಸ್ತಿ ಕಬಳಿಕೆ: ಪತ್ನಿ
Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ; ಮತ್ತೋರ್ವ ಆರೋಪಿ ಬಂಧನ