Bengaluru: 460 ಕೋಟಿ ರೂ. ಮೌಲ್ಯದ ಆಸ್ತಿ ವಶ ಪಡೆದ ಬಿಡಿಎ!

ನಾಗರಬಾವಿಯ 2 ಕಡೆ ಬೃಹತ್‌ ಅತಿಕ್ರಮಣ ತೆರವು ಕಾರ್ಯಾಚರಣೆ;ಬಿಡಿಎ ಪರ ತೀರ್ಪು ನೀಡಿದ್ದ ನ್ಯಾಯಾಲಯ

Team Udayavani, Sep 29, 2024, 4:03 PM IST

16-bng

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ನಿರ್ಮಾಣ ತೆರವು ಕಾರ್ಯಾ ಚರಣೆ ಮುಂದುವರೆಸಿದೆ. ನಾಗರಬಾವಿಯ 2 ಕಡೆಗ ಳಲ್ಲಿ ಬಿಡಿಎಗೆ ಸೇರಿದ ಸುಮಾರು 460 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಶನಿವಾರ ಜಪ್ತಿ ಮಾಡಿಕೊಂಡಿದೆ. ನಾಗರಬಾವಿ ಸರ್ವೆ ನಂ.78 ಹಾಗೂ ಸರ್ವೆ ನಂ.129ರಲ್ಲಿ ಬಿಡಿಎಗೆ ಸೇರಿದ ಒಟ್ಟು 460 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿರ್ವಹಣೆ ಮಾಡುತ್ತಿದ್ದರು. ಈ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆ, ಗ್ಯಾರೇಜ್‌ ಸೇರಿ ಇನ್ನಿತರ ವಾಣಿಜ್ಯ ವ್ಯವಹಾರಗಳನ್ನು ನಡೆಸಿ ಬಾಡಿಗೆ ಪಡೆಯುತ್ತಿದ್ದರು.

ಈ ವಿಚಾರ ಬಿಡಿಎ ಅಧಿಕಾರಿಗಳ ಗಮನಕ್ಕೆ ಬಂದು ಈ ಜಾಗಗಳನ್ನು ನಿರ್ವಹಣೆ ಮಾಡುತ್ತಿದ್ದರು. ನ್ಯಾಯಾಲಯದಲ್ಲಿ ಈ ಜಾಗದ ಬಗ್ಗೆ ವ್ಯಾಜ್ಯ ನಡೆಯುತ್ತಿತ್ತು. ಇತ್ತೀಚೆಗೆ ಕೋರ್ಟ್‌ನಿಂದ ಬಿಡಿಎ ಪರ ತೀರ್ಪು ಪ್ರಕಟಗೊಂಡಿತ್ತು. ಇದರ ಬೆನ್ನಲ್ಲೇ ನಾಗರಬಾವಿ ಗ್ರಾಮದ ಸರ್ವೆ ನಂ.78 ರಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಗೋದಾಮು, ಶೆಡ್‌ಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿ ಪ್ರಾಧಿಕಾರಕ್ಕೆ ಸೇರಿದ 6 ಎಕರೆ ಪ್ರದೇಶದ ಸುಮಾರು 430 ಕೋಟಿ ರೂ.ನ ಆಸ್ತಿಯನ್ನು ಪ್ರಾಧಿಕಾರವು ತನ್ನ ವಶಕ್ಕೆ ತೆಗೆದುಕೊಂಡಿದೆ.

30 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ: ನಾಗರಭಾವಿಯ ಸರ್ವೆ ನಂ.129 ರಲ್ಲಿನ ನಾಗರಭಾವಿ 1ನೇ ಹಂತ ಬಡಾವಣೆ ರಚನೆಗೆ ಬಿಡಿಎ 1985ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ ಭೂಸ್ವಾಧೀನ ಪಡಿಸಿತ್ತು. ಈ ಸರ್ವೆ ನಂಬರಿನ ಜಮೀನಿನಲ್ಲಿ ರಚಿಸಲಾದ ಪ್ರಾಧಿಕಾರದ ನಿವೇಶನಗಳ ಪೈಕಿ 15+24 ಮೀ. ಅಳತೆಯ ಮೂಲೆ ನಿವೇಶನ ಸಂಖ್ಯೆ: 2, 15, 12ಗಿ18 ಮೀ.

ಅಳತೆ ಮೂಲೆ ನಿವೇಶನ ಸಂಖ್ಯೆ: 19 ಮತ್ತು 9+12 ಮೀ ಅಳತೆ ಮಧ್ಯಂತರ ನಿವೇಶನ ಸಂಖ್ಯೆ: 1ಎ, 1ಬಿ ಮತ್ತು ಸಿ.ಎ.ನಿವೇಶನದಲ್ಲಿ ಅನಧಿ ಕೃತ ಶೆಡ್‌, ಗ್ಯಾರೇಜ್‌ ಮತ್ತು ನರ್ಸರಿ ಗಾರ್ಡನ್‌ ನಿರ್ಮಾಣ ಮಾಡಿ ಪ್ರಾಧಿಕಾರದ ಜಾಗವನ್ನು ಒತ್ತುವರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಆದೇಶದಂತೆ ಅಭಿಯಂತರ ಅಧಿಕಾರಿ-1 ಅವರಿಂದ ತೆರವು ಆದೇಶ ಪಡೆದು ಕಾರ್ಯಚರಣೆ ನಡೆಸಿ ಇಲ್ಲಿನ 30 ಕೋಟಿ ರೂ. ಬೆಲೆಬಾಳುವ ಆಸ್ತಿಗೆ ಫೆನ್ಸಿಂಗ್‌ ಮತ್ತು ಬಿಡಿಎ ನಾಮಪಲಕ ಅಳವಡಿಸಿ ಪ್ರಾಧಿಕಾರದ ಸುಪರ್ದಿಗೆ ಪಡೆಯಲಾಗಿದೆ.

ಅವಕಾಶ ನೀಡದೆ ತೆರವು: ಮಾಲಿಕರ ಅಳಲು ಬಿಡಿಎ ಜಾಗದಲ್ಲಿ ನಿರ್ಮಿಸಿದ್ದ 40ಕ್ಕೂ ಹೆಚ್ಚು ಅಂಗಡಿ-ಮುಂಗಟ್ಟುಗಳನ್ನು ಬಿಡಿಎ ಜೆಸಿಬಿ ಯಂತ್ರಗಳ ಮೂಲಕ ಕ್ಷಣ ಮಾತ್ರದಲ್ಲಿ ನೆಲಸಮ ಮಾಡಿದೆ. ಬಂಡವಾಳ ಹಾಕಿ ಲಾಭಕಾಗಿ ಕಾಯುತ್ತಿದ್ದ ಅಂಗಡಿ ಮಾಲಿಕರ ಮುಂದೆಯೇ ಅಂಗಡಿಗಳನ್ನು ಧ್ವಂಸ ಮಾಡಲಾಗಿದೆ. ಈ ಬಗ್ಗೆ ಬಿಡಿಎ ಅಧಿಕಾರಿಗಳನ್ನು ಸಾರ್ವಜನಿಕರು ಪ್ರಶ್ನಿಸಿದರೆ, ಅಂಗಡಿ ತೆರವು ಮಾಡಲು ಮೊದಲೇ ನೋಟಿಸ್‌ ಕೊಟ್ಟಿದ್ದೆವು ಎಂದಿದ್ದಾರೆ. ಆದರೆ, ಅಂಗಡಿ ಮಾಲಿಕರು ಮಾತ್ರ, ಬಿಬಿಎಂಪಿ ಪರವಾನಗಿ, ಆಹಾರ ಪರವಾನಗಿಯಂತಹ ದಾಖಲೆಗಳಿದ್ದರೂ ನಮಗೆ ಕೊಟ್ಟಿರುವ ಕಾಲಾವಶಕ್ಕಿಂತ ಮುಂಚಿತವಾಗಿ ಅಂಗಡಿ ಧ್ವಂಸ ಮಾಡಲಾಗಿದೆ.

ಅಂಗಡಿಯಲ್ಲಿದ್ದ ವಸ್ತುಗಳನ್ನು ಸಾಗಿಸುವುದಕ್ಕೆ ಸ್ವಲ್ಪ ಕಾಲಾವಕಾಶ ನೀಡಬೇಕಿತ್ತು. ಇದೀಗ ಅಂಗಡಿಗೆ ಹಾಕಿದ ಬಂಡವಾಳದ ಜೊತೆಗೆ ಅಲ್ಲಿದ್ದ ಸಾವಿರಾರು ರೂ. ಮೌಲ್ಯದ ವಸ್ತುಗಳೂ ನಾಶವಾಗಿವೆ ಎಂಬುದು ಅಂಗಡಿ ಮಾಲಿಕರು ಅಳಲು. ಬಿಡಿಎ ಮತ್ತು ಖಾಸಗಿ ವ್ಯಕ್ತಿಗಳ ನಡುವಿನ ಜಗಳ ಅಂತ್ಯಗೊಂಡು ಇದು ಬಿಡಿಎ ಸ್ವತ್ತು ಎಂದಾಗಿರುವುದು ಒಂದು ಕಡೆಯಾದರೆ, ಮತ್ತೂಂದೆಡೆ ಸಾಲ ಸೋಲ ಮಾಡಿ ವ್ಯಾಪಾರಕ್ಕೆ ಬಂಡವಾಳ ಹಾಕಿದ್ದ ಇಲ್ಲಿನ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ.

ಟಾಪ್ ನ್ಯೂಸ್

BBK-11: ಬಿಗ್ ಬಾಸ್ ಮನೆಗೆ ಖ್ಯಾತ ಯೂಟ್ಯೂಬರ್ ಎಂಟ್ರಿ

BBK-11: ಬಿಗ್ ಬಾಸ್ ಮನೆಗೆ ಖ್ಯಾತ ಯೂಟ್ಯೂಬರ್ ಎಂಟ್ರಿ

1-sadsad

Lokayukta ADGP ಚಂದ್ರಶೇಖರ್ ಬ್ಲಾಕ್‌ಮೇಲರ್, ಕ್ರಿಮಿನಲ್:ಎಚ್‌ಡಿಕೆ ಕೆಂಡಾಮಂಡಲ

BBK-11: ಬಿಗ್ ಬಾಸ್ ಮನೆಗೆ ಬಂದರು ಸೀರಿಯಲ್ ಸುಂದರಿಯರು

BBK-11: ಬಿಗ್ ಬಾಸ್ ಮನೆಗೆ ಬಂದರು ಸೀರಿಯಲ್ ಸುಂದರಿಯರು

M-Kharge-illeness

J-K Election: ಚುನಾವಣಾ ಪ್ರಚಾರ ಭಾಷಣ ನಡುವೆಯೇ ಅಸ್ವಸ್ಥರಾದ ಮಲ್ಲಿಕಾರ್ಜುನ್‌ ಖರ್ಗೆ!

1-shah

Rahul Gandhi ಗ್ಯಾರಂಟಿಗಳು ಕರ್ನಾಟಕ, ಹಿಮಾಚಲದಲ್ಲಿ ಫಸಲು ನೀಡಿವೆ: ಅಮಿತ್ ಶಾ

6

World Heart Day: ನಿಮ್ಮ ಹೃದಯ ಜೀವಕ್ಕೆ ಕುತ್ತಾಗುವ ಮುನ್ನ ಎಚ್ಚೆತ್ತುಕೊಳ್ಳೋಣ

1-jjk

Nasrallah ಹ*ತ್ಯೆ ಖಂಡಿಸಿ ಕಾಶ್ಮೀರದಲ್ಲಿ ಬೃಹತ್ ಪ್ರತಿಭಟನೆ; ಮಾಜಿ ಸಿಎಂ ಮುಫ್ತಿ ಬೆಂಬಲ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-bng

Bengaluru: ತನ್ನ ಖಾಸಗಿ ಕ್ಷಣಗಳಿದ್ದ ಮೊಬೈಲ್‌ ಕದಿಯಲು ಸುಪಾರಿ!

Manipal Hospitals; ಹಿರಿಯ ನಾಗರಿಕರಿಗೆ ಆಲ್ಝೈಮರ್ಸ್ ಕಾಯಿಲೆಯ ಕುರಿತು ತಜ್ಞರೊಂದಿಗೆ ಚರ್ಚೆ

Manipal Hospitals; ಹಿರಿಯ ನಾಗರಿಕರಿಗೆ ಆಲ್ಝೈಮರ್ಸ್ ಕಾಯಿಲೆಯ ಕುರಿತು ತಜ್ಞರೊಂದಿಗೆ ಚರ್ಚೆ

12-bng

Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್‌ ಬಸ್‌’

11-bng

Bengaluru: ಸಾಲ ತೀರಿಸಲು ಸರ ಕದಿಯುತ್ತಿದ್ದ ಇಬ್ಬರ ಬಂಧನ

10-bng

Bengaluru: ಇಬ್ಬರು ಡ್ರಗ್ಸ್‌ ಪೆಡ್ಲರ್ ಸೆರೆ: 51 ಕೆ.ಜಿ. ಗಾಂಜಾ ಜಪ್ತಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

BBK-11: ಬಿಗ್ ಬಾಸ್ ಮನೆಗೆ ಖ್ಯಾತ ಯೂಟ್ಯೂಬರ್ ಎಂಟ್ರಿ

BBK-11: ಬಿಗ್ ಬಾಸ್ ಮನೆಗೆ ಖ್ಯಾತ ಯೂಟ್ಯೂಬರ್ ಎಂಟ್ರಿ

1-sadsad

Lokayukta ADGP ಚಂದ್ರಶೇಖರ್ ಬ್ಲಾಕ್‌ಮೇಲರ್, ಕ್ರಿಮಿನಲ್:ಎಚ್‌ಡಿಕೆ ಕೆಂಡಾಮಂಡಲ

7

Mangaluru: ಟ್ರಾಫಿಕ್‌ ಸಿಗ್ನಲ್‌ ಕಾರ್ಯಾಚರಣೆ ಯಾವಾಗ?; ಇಲಾಖೆಗೆ ಸಿಕ್ಕಿಲ್ಲ ಕಂಟ್ರೋಲ್‌

BBK-11: ಬಿಗ್ ಬಾಸ್ ಮನೆಗೆ ಬಂದರು ಸೀರಿಯಲ್ ಸುಂದರಿಯರು

BBK-11: ಬಿಗ್ ಬಾಸ್ ಮನೆಗೆ ಬಂದರು ಸೀರಿಯಲ್ ಸುಂದರಿಯರು

M-Kharge-illeness

J-K Election: ಚುನಾವಣಾ ಪ್ರಚಾರ ಭಾಷಣ ನಡುವೆಯೇ ಅಸ್ವಸ್ಥರಾದ ಮಲ್ಲಿಕಾರ್ಜುನ್‌ ಖರ್ಗೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.