ಕಂಪನಿಗಳ ಕಾರು ಬಾರು ಸಂಚಾರ ಏರುಪೇರು


Team Udayavani, Apr 6, 2019, 11:27 AM IST

1-aa

ವಾಹನ ದಟ್ಟಣೆ ಹೆಚ್ಚಲು ಐಟಿ ಕಂಪನಿಗಳ ಕೊಡುಗೆ ಸಾಕಷ್ಟಿದೆ. ಟೆಕ್ಕಿಗಳು ಕಚೇರಿಗೆ ತೆರಳಲು ಕಾರು ಬಳಸುತ್ತಾರೆ. ಬಹುತೇಕ ಕಾರುಗಳಲ್ಲಿ
ಒಬ್ಬರೇ ಪ್ರಯಾಣಿಸುತ್ತಾರೆ. ಈ ಕಾರುಗಳು ರಸ್ತೆಯ ಅತಿ ಹೆಚ್ಚು ಜಾಗ ಆಕ್ರಮಿಸುತ್ತವೆ. ಅಧ್ಯಯನದ ಪ್ರಕಾರ 60 ಜನರನ್ನು
ಹೊತ್ತೂಯ್ಯಬಹುದಾದ ಒಂದು ಬಸ್‌ ರಸ್ತೆಯಲ್ಲಿ ತೆಗೆದುಕೊಳ್ಳುವ ಸ್ಥಳವನ್ನು, ಒಟ್ಟು ಆರೇ ಜನ ಕೂತಿರುವ ಮೂರು ಕಾರುಗಳು
ಆಕ್ರಮಿಸಿಕೊಳ್ಳುತ್ತಿವೆ. ಈ ಪರಿಸ್ಥಿತಿ ಬದಲಾಗಬೇಕೆಂದರೆ ಐಟಿ ಕಂಪನಿಗಳ ಸಾರಿಗೆ ನೀತಿ, ಕಾರು ಬಳಸುವವರ ಮನಸ್ಥಿತಿ ಬದಲಾಗಬೇಕು.

ಬೆಂಗಳೂರು: ನಮ್ಮ ಮನೆಗಳಲ್ಲಿ ಇರುವಂತೆಯೇ
ಮುಂದುವರಿದ ರಾಷ್ಟ್ರಗಳ ಕಚೇರಿಗಳಲ್ಲಿ “ಶವರ್‌’ಗಳನ್ನು
ಅಳವಡಿಸಲಾಗಿದೆ. ಅಲ್ಲಿ “ವಾಕಿಂಗ್‌ ಅವತಾರ’ದಲ್ಲಿ
ಕಚೇರಿಗಳಿಗೆ ಬರುವ ಉದ್ಯೋಗಿಗಳು, ನೇರವಾಗಿ ಆ
ಶವರ್‌ ಕೆಳಗೆ ನಿಂತು ಫ್ರೆಶ್‌ಅಪ್‌ ಆಗಿ ಫಾರ್ಮಲ್‌ ಡ್ರೆಸ್‌
ಹಾಕಿಕೊಂಡು ಬಂದು ತಮ್ಮ ಆಸನದಲ್ಲಿ ಕುಳಿತು ಕೆಲಸ
ಮಾಡುತ್ತಾರೆ.
ಬೆಳಗಾದರೆ ತಮ್ಮ ಉದ್ಯೋಗಿ ಬೈಸಿಕಲ್‌ ತುಳಿದು
ಬೆವರು ಸುರಿಸುತ್ತಾ ಕಚೇರಿಗೆ ಬರುತ್ತಾನೆ. ಹೀಗೆ
ಬರುವವರು ಸೀದಾ ಶವರ್‌ನಲ್ಲಿ ಸ್ನಾನ ಮಾಡಿ ಬಂದು
ಕೆಲಸ ಶುರು ಮಾಡುತ್ತಾರೆ. ಇದರಿಂದ ದೈಹಿಕ ಕಸರತ್ತೂ
ಆಗುತ್ತದೆ. ಆರೋಗ್ಯಕ್ಕೆ ಒಳ್ಳೆಯದು. ಮತ್ತೂಂದೆಡೆ
ವಾಹನದಟ್ಟಣೆ ತಗ್ಗಿಸಲು ಹಾಗೂ ಪರಿಸರ ಮಾಲಿನ್ಯ
ನಿಯಂತ್ರಣಕ್ಕೂ ಕೊಡುಗೆ ನೀಡಿದಂತಾಗುತ್ತದೆ ಎಂಬುದು
ವಿದೇಶಿ ಕಂಪನಿಗಳ ಲೆಕ್ಕಾಚಾರ.
ಬೈಸಿಕಲ್‌ ಅಥವಾ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಕೆಗೆ
ಪ್ರೋತ್ಸಾಹ ನೀಡಲು ವಿದೇಶಿ ಕಂಪನಿಗಳು ಮಾಡಿಕೊಂಡ
ವ್ಯವಸ್ಥೆ ಇದು. ಆದರೆ, ನಮ್ಮಲ್ಲಿನ ಕಂಪನಿಗಳು ಕಾರುಗಳನ್ನು
ಖರೀದಿಸುವ ಉದ್ಯೋಗಿಗೆ ವಿಶೇಷ ಸಾಲ ನೀಡುತ್ತವೆ.
ಪೆಟ್ರೋಲ್‌ ಅಥವಾ ಡೀಸೆಲ್‌ ಭತ್ಯೆ ಕೊಡುತ್ತವೆ. ಅಷ್ಟೇ ಏಕೆ,
ಕಂಪನಿ ಜಾಗದಲ್ಲಿ ವಾಹನಗಳ ನಿಲುಗಡೆಗೆ ಪ್ರಶಸ್ತ್ಯ
ಸ್ಥಳವನ್ನೂ ಮೀಸಲಿಡಲಾಗುತ್ತದೆ. ಇದಕ್ಕೆ ಪೂರಕವಾಗಿ
ಬ್ಯಾಂಕ್‌ಗಳು ಕೂಡ ಕಡಿಮೆ ಬಡ್ಡಿದರದಲ್ಲಿ ವಾಹನ
ಖರೀದಿಗೆ ಸಾಲ ನೀಡುತ್ತವೆ (ಕೆಲವೆಡೆ ಕೃಷಿ ಸಾಲಕ್ಕಿಂತ
ಕಡಿಮೆ ಬಡ್ಡಿದರ ಇದೆ). ಮಾರ್ಚ್‌ ತಿಂಗಳಲ್ಲಿ ಒಂದೊಂದು
ಬ್ಯಾಂಕ್‌ ಶಾಖೆ ಯಲ್ಲಿ 40ಕ್ಕೂ ಹೆಚ್ಚು ವಾಹನಗಳಿಗೆ ಸಾಲ
ಕೊಡಲಾಗುತ್ತದೆ. ಮತ್ತೂಂದೆಡೆ ಆ ವಾಹನಗಳು
ಸಂಚರಿಸುವ ದಾರಿಯು ದ್ದಕ್ಕೂ ರಸ್ತೆ ವಿಸ್ತರಣೆ, ಫ್ಲೈಓವರ್‌
ಗಳನ್ನೂ ನಿರ್ಮಿಸಲಾಗುತ್ತಿದೆ. ಇದೆಲ್ಲದರ ಪರಿಣಾಮ
ಅನುಭವಿಸುತ್ತಿರುವುದು ಸಮೂಹ ಸಾರಿಗೆಯಲ್ಲಿ
ಸಂಚರಿಸುವ ವರ್ಗ!
ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಈ
ಹಿಂದೆ ನಡೆಸಿದ ಅಧ್ಯಯನವೊಂದರ ಪ್ರಕಾರ ಬೆಂಗಳೂರಿ
ನಲ್ಲಿ 48,83,377 (2016ಕ್ಕೆ) ಉದ್ಯೋಗಿಗಳಿದ್ದಾರೆ. ಇದು
ಒಟ್ಟಾರೆ ಜನಸಂಖ್ಯೆಯ ಶೇ.38.04ರಷ್ಟಾಗುತ್ತದೆ. 2020ರ
ವೇಳೆಗೆ ಇದು 59.56 ಲಕ್ಷ ಆಗಲಿದೆ ಎಂದು
ಅಂದಾಜಿಸಲಾಗಿದೆ. ಇದರಲ್ಲಿ ಐಟಿ ಉದ್ಯೋಗಿಗಳ
ಸಂಖ್ಯೆಯೇ ಶೇ.10ಕ್ಕಿಂತ ಹೆಚ್ಚಿದೆ. ಇದರಲ್ಲಿ ಬಹುತೇಕರ
ಬಳಿ ಸ್ವಂತ ವಾಹನಗಳಿದ್ದು, ಅದರಲ್ಲೂ ಐಟಿ ಉದ್ಯೋಗಿಗಳು
ಹೆಚ್ಚಾಗಿ ಕಾರು ಹೊಂದಿದ್ದಾರೆ.

ಕಂಪನಿಗಳ ನೀತಿ ಬದಲಾಗಲಿ; ಐಐಎಸ್ಸಿ
ಐಟಿ ಉದ್ಯೋಗಿಗಳು ಸಾಮಾನ್ಯವಾಗಿ ಮಧ್ಯಮ ಮತ್ತು ಕೆಳ ಮಧ್ಯಮವರ್ಗದಿಂದ ಬಂದವರಾಗಿದ್ದು, ಏಕಾಏಕಿ ಹೆಚ್ಚು ಸಂಬಳ ಬರುತ್ತಿದ್ದಂತೆ ತಾವೂ ಸ್ವಂತ ಕಾರು ಖರೀದಿಸಬೇಕು ಎಂಬ ಆಸೆ ಹುಟ್ಟುತ್ತದೆ. ಹೀಗೆಖರೀದಿಸುವಾಗ, ಕುಟುಂಬಕ್ಕೆ ಸೂಕ್ತವಾಗುವ ದೊಡ್ಡ
ಕಾರುಗಳನ್ನು ಖರೀದಿಸುವುದೇ ಹೆಚ್ಚು. ಇದಕ್ಕೆ ಕಂಪನಿ, ಬ್ಯಾಂಕ್‌ಗಳು ಸಾಲ ಕೊಡುತ್ತವೆ. ಆದರೆ ಈ ಕಾರುಗಳು ಎರಡು ರೀತಿಯಲ್ಲಿ ಸ್ಥಳ ಆಕ್ರಮಿಸಿಕೊಳ್ಳುತ್ತವೆ. ಒಂದು ರಸ್ತೆಯ ಜಾಗ, ಮತ್ತೂಂದು ಬೆಳಗ್ಗೆಯಿಂದ ಸಂಜೆವರೆಗೆ ನಿಲುಗಡೆ ಆಗುವ ಕಂಪನಿಯ ಜಾಗ. ಅದೆಲ್ಲವೂ
ಅತ್ಯಂತ ಬೆಲೆ ಬಾಳುವ ಭೂಮಿಯೇ. ಈ ಹಿನ್ನೆಲೆಯಲ್ಲಿ ಕಂಪನಿಗಳ ನೀತಿಗಳಲ್ಲೇ ಬದಲಾವಣೆ ಗಬೇಕು ಎಂದು ಐಐಎಸ್ಸಿಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಆಶಿಶ್‌ ವರ್ಮ ತಿಳಿಸುತ್ತಾರೆ.

ಕಾರುಗಳಲ್ಲಿ 1-1.50 ಜನ ಸಂಚಾರ
“ಪೀಕ್‌ ಅವರ್‌’ನಲ್ಲಿ, ಐಟಿ ಕಾರಿಡಾರ್‌ಗಳಲ್ಲಿ ಸಂಚರಿಸುವ ಕಾರುಗಳಲ್ಲಿ ಪ್ರಯಾಣಿಸುವ ಸರಾಸರಿ ವ್ಯಕ್ತಿಗಳ ಸಂಖ್ಯೆ 1ರಿಂದ 1.50! ಸಾಮಾನ್ಯವಾಗಿ ಕಾರುಗಳಲ್ಲಿ 5 ಜನ ಸಂಚರಿಸಬಹುದು. ಆದರೆ, ಐಟಿ ಕಾರಿಡಾರ್‌ಗಳಲ್ಲಿ ಬಹುತೇಕ ಕಾರುಗಳಲ್ಲಿ ಒಬ್ಬರೇ ಸಂಚರಿಸುತ್ತಾರೆ. ನಗರದ ಉಳಿದ ಮಾರ್ಗಗಳಲ್ಲಿ ಈ ಪ್ರಮಾಣ 2.8ರಷ್ಟಿದೆ. ಇದು ಕಳೆದ
ವರ್ಷ ನಾವು ಸಮೀಕ್ಷೆ ನಡೆಸಿದಾಗ ಕಂಡುಬಂದ ಅಂಶ ಎಂದು ಸಾರಿಗೆ ತಜ್ಞ ಪ್ರೊ.ಎಂ.ಎನ್‌.ಶ್ರೀಹರಿ ತಿಳಿಸುತ್ತಾರೆ. ಎಂಟು ಪಟ್ಟು ಜಾಗ ಆಕ್ರಮಣ
ನಗರದಲ್ಲಿ “ಪೀಕ್‌ ಅವರ್‌’ನಲ್ಲಿ ಸಂಚರಿಸುವ 1.75 ಲಕ್ಷ ಕಾರುಗಳು ರಸ್ತೆಗಳಲ್ಲಿ ಆಕ್ರಮಿಸಿಕೊಳ್ಳುವ ಜಾಗವು ಆರು ಸಾವಿರ ಬಸ್‌ಗಳು ತೆಗೆದುಕೊಳ್ಳುವ ಜಾಗಕ್ಕಿಂತ ಎಂಟುಪಟ್ಟು ಅಧಿಕ! ವಾಹನ ದಟ್ಟಣೆ ವೇಳೆ ಆರು ಸಾವಿರ ಬಿಎಂಟಿಸಿ ಬಸ್‌ಗಳು ಶೇ.44.2ರಷ್ಟು ಟ್ರಿಪ್‌ಗ್ಳನ್ನು ಪೂರೈಸುತ್ತವೆ. ಆ ಮೂಲಕ ಲಕ್ಷಾಂತರ ಜನರಿಗೆ ಸೇವೆ ಸಲ್ಲಿಸುತ್ತವೆ. ಆದರೆ, ಇದೇ ಸಮಯದಲ್ಲಿ ಓಡಾಡುವ ಸುಮಾರು 1.75 ಲಕ್ಷ ಕಾರುಗಳು
ಬಸ್‌ಗಳಿಗಿಂತ ಎಂಟುಪಟ್ಟು ಹೆಚ್ಚು ಜಾಗವನ್ನು ಆಕ್ರಮಿಸಿಕೊಂಡು ಕೇವಲ ಶೇ.4.8ರಷ್ಟು ಟ್ರಿಪ್‌ಗ್ಳನ್ನು ಪೂರೈಸುತ್ತವೆ ಎಂದು ತಜ್ಞರು ತಿಳಿಸುತ್ತಾರೆ.

ಸಮಯ ಬದಲಿಸಲಿ
ಪ್ರತಿ ಬೇಸಿಗೆಯಲ್ಲಿ ಹೈದರಾಬಾದ್‌ ಕರ್ನಾಟಕದಲ್ಲಿ ಶಾಲಾ-ಕಾಲೇಜು ಮತ್ತು ಉದ್ಯೋಗದ ಸಮಯವನ್ನು ಬದಲಾಯಿಸಲಾಗುತ್ತದೆ. ಅದೇ
ರೀತಿ, ನಗರದಲ್ಲಿ ಶಾಲಾ-ಕಾಲೇಜುಗಳ ಸಮಯ ಬದಲಿಸಬೇಕು ಎಂದು ಪ್ರೊ.ಶ್ರೀಹರಿ ಒತ್ತಾಯಿಸುತ್ತಾರೆ. ಏಕೆಂದರೆ, ನಗರದಲ್ಲಿ ಒಟ್ಟಾರೆ
ಕಾರ್ಯಾಚರಣೆ ಮಾಡುವ ಟ್ರಿಪ್‌ಗ್ಳಲ್ಲಿ ಮೂರನೇ ಒಂದು ಭಾಗದಷ್ಟು ಟ್ರಿಪ್‌ಗ್ಳು ಶಾಲಾ- ಕಾಲೇಜುಗಳಿಗೆ ತೆರಳುವ ವಾಹನಗಳದ್ದಾಗಿರುತ್ತವೆ.
ವಿದ್ಯಾರ್ಥಿಗಳು ಮಾತ್ರವಲ್ಲ; ಪೋಷಕರು, ಮನೆಕೆಲಸದವರು ಮಕ್ಕಳನ್ನು ಕರೆತರಲು ಹೋಗುತ್ತಾರೆ. ಹಾಗಾಗಿ, ಈ ಟ್ರಿಪ್‌ಗ್ಳ ವಿಂಗಡಣೆ ಮಾಡಬೇಕು. ಬೆಳಗ್ಗೆ 7 ಗಂಟೆಗೆ ಶಾಲೆಗಳು ಶುರುವಾಗಿ, ಮದ್ಯಾಹ್ನ 3 ಗಂಟೆ ಹೊತ್ತಿಗೆ ಮುಗಿಯಬೇಕು. ಉದ್ಯೋಗಿಗಳಿಗೂ ಕೆಲಸದ ಸಮಯ ವಿಂಗಡಿಸಬೇಕು.

ಏನು ಮಾಡಬಹುದು?

ಐಟಿ ಕಂಪೆನಿಗಳಿಗೆ ಹವಾನಿಯಂತ್ರಿತ ಬಸ್‌ಗಳ ವ್ಯವಸ್ಥೆ ಮಾಡಬೇಕು ಅಥವಾ ಕಂಪೆನಿಗಳೇ ವ್ಯವಸ್ಥೆ ಮಾಡಿಕೊಳ್ಳಬೇಕು.

ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ ದೊರೆ ಆಗ, ಜನ ಬಸ್‌ಗಳತ್ತ ಮುಖ ಮಾಡುತ್ತಾರೆ.

ಒಂದೇ ಟ್ರಾಫಿಕ್‌ನಲ್ಲಿ ಬಸ್‌ ಮತು ಇರುತ್ತವೆ. ಆದರೆ, ಬಸ್‌ಗಳಿಗೆ ಅಲ್ಲ ಇರುವುದರಿಂದ ನಿಗದಿತ ದೂರ ಕÅಸಮಯ ತೆಗೆದುಕೊಳ್ಳು ತ್ತವೆ. ಆ
ಪ್ರತ್ಯೇಕ ಕಾರಿಡಾರ್‌ ಅಥವಾ ಸಿಗ್ನ ಮೇರೆಗೆ ತೆರಳಲು ಅವಕಾಶ ಕಲ್ಪಿಸಬೇಕು.

ಸರ್ಕಾರಿ ಉದ್ಯೋಗಿಗಳು ಬಸ್‌ಗಳಲ್ಲಿ ಸಂಚರಿಸುವಂತೆ ಉತ್ತೇಜಿಸಲು ರಿಯಾಯ್ತಿ ಪಾಸು, ಹೆಚ್ಚುವರಿ ಬಸ್‌ ಸೇವೆ ಕಲ್ಪಿಸಬೇಕು.

ಸಮೂಹ ಸಾರಿಗೆ ವ್ಯವಸ್ಥೆ ಬಳಸುವ ಉದ್ಯೋಗಿಗಳಿಗೆ ಐಟಿ ಕಂಪನಿಗಳು ಉಚಿತ ಅಥವಾ ರಿಯಾಯ್ತಿ ಪಾಸು ನೀಡಬೇಕು. ಪೂರಕವಾಗಿ ಹೆಚ್ಚು ಬಸ್‌ಗಳ ಸೇವೆ ಒದಗಿಸಬೇಕು.

60 ಜನರ ಜಾಗ
6 ಜನರ ಪಾಲು! 60 ಜನರ ಜಾಗವನ್ನು ಕೇವಲ ಆರು ಜನ ಆಕ್ರಮಿಸಿಕೊಳ್ಳುತ್ತಿದ್ದಾರೆ. ಇದು ಅತ್ಯಂತ ದೊಡ್ಡ ಅಸಮಾನತೆ ಎಂದು ಬಿಎಂಟಿಸಿ ಬಸ್‌ ಪ್ರಯಾಣಿಕರ ವೇದಿಕೆ ಸದಸ್ಯ ವಿನಯ್‌ ಶ್ರೀನಿವಾಸ್‌ ಆರೋಪಿಸುತ್ತಾರೆ. ಅಧ್ಯಯನಗಳೇ ಹೇಳುವಂತೆ ಒಂದು ಕಾರಿನಲ್ಲಿ ಸರಾಸರಿ ಒಂದೂವರೆ ಜನ ಪ್ರಯಾಣಿಸುತ್ತಾರೆ. ಮೂರು ಕಾರುಗಳಲ್ಲಿ ಎಂದಾದರೆ 5.5ರಿಂದ 6 ಜನ ಆಗುತ್ತದೆ. ಮೂರು ಕಾರುಗಳನ್ನು ಹೊಂದಿಸಿಟ್ಟರೆ, ಅದು ಒಂದು ಬಸ್‌ನಷ್ಟು ಜಾಗ ತೆಗೆದುಕೊಳ್ಳುತ್ತದೆ. ಅಂದರೆ, ಅಷ್ಟೇ ಜಾಗದಲ್ಲಿ 60 ಜನ ಸಂಚರಿಸುತ್ತಿದ್ದಾರೆ ಎಂದಾಯಿತು. ಆ
ಮೂರು ಕಾರುಗಳು ಉಗುಳುವ ಹೊಗೆ ಮತ್ತು ಅದರಿಂದ ಉಂಟಾಗುವ ವಾಯುಮಾಲಿನ್ಯ ಹಾಗೂ ಅದಕ್ಕೆ ತುತ್ತಾಗುವ ಬಸ್‌ ಪ್ರಯಾಣಿಕರ ನಗರ
ಯೋಜನೆಗಳನ್ನು ರೂಪಿಸುವವರು, ಸರ್ಕಾರದ ನೀತಿ-ನಿರೂಪಣೆಗಳನ್ನು ರೂಪಿಸುವವರು ಏಕೆ ಯೋಚಿಸುವುದಿಲ್ಲ? ಈ ಅಸಮಾನತೆ ಅವರಿಗೆ
ಕಾಣುವುದಿಲ್ಲವೇ ಎಂದು ಕೇಳುತ್ತಾರೆ.

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.