Bengaluru: ಅಡಮಾನ ಆಸ್ತಿ ಮಾರಾಟ ಮಾಡಲು ಶೀಘ್ರದಲ್ಲೇ ಇ-ಖಾತೆ
ಅರ್ಜಿ ಸಲ್ಲಿಸಿದ 7 ದಿನಗಳೊಳಗೆ ಇ-ಖಾತಾ ಲಭ್ಯ: ಪಾಲಿಕೆ ; ಸುಸ್ತಿದಾರರ ಆಸ್ತಿ ಮಾರಲು ಪರದಾಡುತ್ತಿದ್ದ ಬ್ಯಾಂಕ್‌ಗಳು ನಿರಾಳ
Team Udayavani, Jan 12, 2025, 11:22 AM IST
ಬೆಂಗಳೂರು: ಬ್ಯಾಂಕ್‌ಗಳು ಸೇರಿದಂತೆ ಹಣಕಾಸು ಸಂಸ್ಥೆಗಳು ಅಡಮಾನದ ಆಸ್ತಿಗಳನ್ನು ಮಾರಾಟ ಮಾಡಲು ಇ-ಖಾತಾಗೆ ಪಾಲಿಕೆಗೆ ಅರ್ಜಿ ಸಲ್ಲಿಸಬಹುದು.
ಬೆಂಗಳೂರು ಮಹಾನಗರ ಪಾಲಿಕೆಯು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಇ-ಖಾತಾವನ್ನು ಪಡೆಯಲು ಒಂದು ಮಾದರಿಯನ್ನು ಬಿಡುಗಡೆ ಮಾಡಿದೆ. ಹಣಕಾಸು ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈಗ ಅಡಮಾನದ ಆಸ್ತಿಗಳ ಮಾರಾಟವನ್ನು ಕೈಗೊಳ್ಳಲು ಇ-ಖಾತಾಗೆ ಅರ್ಜಿ ಸಲ್ಲಿಸಲು ಒಂದು ಮಾಡ್ನೂಲ್ ಅನ್ನು ಬಿಡುಗಡೆ ಮಾಡಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಎಸ್‌ಎಆರ್‌ಎಫ್ಎಇಎಸ್‌ಐ (SARFAESI) 2002ರ ಕಾಯ್ದೆಯಡಿಯಲ್ಲಿ ಸಾಲಗಾರರು ಸಾಲ ಮರುಪಾವತಿ ಮಾಡಲು ವಿಫಲವಾದ ಕಾರಣ ಬ್ಯಾಂಕುಗಳು ಅಡಮಾನದ ಆಸ್ತಿಗಳನ್ನು ಮಾರಾಟ ಮಾಡುತ್ತವೆ. ಮಾರಾಟ ಪ್ರಮಾಣಪತ್ರದ ಮೂಲಕ ಮಾರಾಟವನ್ನು ಕಾರ್ಯಗತಗೊಳಿಸಲಾಗುತ್ತದೆ. ರಾಜ್ಯ ಸರ್ಕಾರವು ಅಕ್ಟೋಬರ್ 1 ರಂದು ಭೂ ವಹಿವಾಟುಗಳು ಮತ್ತು ದಾಖಲೆಗಳ ನೋಂದಣಿಗೆ ಇ-ಖಾತಾವನ್ನು ಕಡ್ಡಾಯಗೊಳಿಸಿದಾಗ, ಬ್ಯಾಂಕುಗಳು ಅಡಮಾನದ ಆಸ್ತಿಗಳನ್ನು ಮಾರಾಟ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸಿದ್ದವು. ಈ ಹಿನ್ನೆಲೆಯಲ್ಲಿ ಅಡಮಾನದ ಆಸ್ತಿಗಳನ್ನು ಮಾರಾಟ ಮಾಡುಲು ಇ-ಖಾತಾ ಗೆ ಅರ್ಜಿ ಸಲ್ಲಿಸಬದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬ್ಯಾಂಕ್‌ಗಳು ಸೇರಿದಂತೆ ಹಣಕಾಸು ಸಂಸ್ಥೆಗಳು ಅಡಮಾನದ ಆಸ್ತಿಗಳನ್ನು ಮಾರಾಟ ಮಾಡಲು ಇ-ಖಾತಾಗೆ ಅರ್ಜಿ ಸಂಬಂಧಿಸಿದ ಮಾಡ್ನೂಲ್ (ಮಾದರಿ) ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ವೈಬ್ ಸೈಟ್‌ನಲ್ಲಿ ಕೂಡ ಮಾದರಿಯನ್ನು ತಿಳಿದುಕೊಳ್ಳಬಹುದಾಗಿದೆ. ಈ-ಖಾತಾಗೆ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಂಕ್‌ಗಳು ಸೇರಿದಂತೆ ಹಣಕಾಸು ಸಂಸ್ಥೆಗಳು ಅಡಮಾನದ ಆಸ್ತಿಗಳನ್ನು ಮಾರಾಟ ಮಾಡಲು ಇ-ಖಾತಾಗೆ ಅರ್ಜಿ ಸಲ್ಲಿಸುವಾಗ ಒರಿಜಿನಲ್ ಸೇಲ್ ಸರ್ಟಿಫಿಕೇಟ್‌ಅನ್ನು ಅಪ್ ಲೋಡ್ ಮಾಡುವುದು ಸೇರಿದಂತೆ ಹಲವು ಅಂಶಗಳನ್ನು ಪಾಲನೆ ಮಾಡುವುದು ಇದರಲ್ಲಿ ಸೇರಿದೆ. ನಂತರ ಸಹಾಯಕ ಕಂದಾಯ ಅಧಿಕಾರಿಗಳು ಈ ದಾಖಲೆಗಳನ್ನು ಪರಿಶೀಲನೆ ನಡೆಸಿ ಅರ್ಜಿ ಸಲ್ಲಿಸಿದ 7 ದಿನದ ಒಳಗೆ ಇ-ಖಾತಾ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ajekar: ಎಷ್ಟು ದಿನ ಟವರ್ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್ ಕೊಡಿ ಸ್ವಾಮಿ!
Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ
Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!
Mangaluru: ನಾಗುರಿ ಬಳಿ ನೀರು ಪೂರೈಕೆ ಪೈಪ್‌ಲೈನ್ ಅಳವಡಿಕೆ ಪೂರ್ಣ
Breast Cancer: ಸ್ತನಗಳ ಕ್ಯಾನ್ಸರ್ ನಿಗಾ ಇರಿಸಬೇಕಾದ ಆರಂಭಿಕ ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.