Bengaluru; ಗ್ಯಾಸ್ ಗೀಸರ್ ಅವಘಡ : ತಾಯಿ ಮೃತ್ಯು, ಮಗು ಗಂಭೀರ
Team Udayavani, Dec 23, 2023, 6:33 PM IST
ಬೆಂಗಳೂರು: ನಗರದ ಸದಾಶಿವ ನಗರದ ಅಶ್ವತ್ಥ್ ನಗರದ ಮನೆಯೊಂದರ ಬಾತ್ ರೂಂ ನಲ್ಲಿ ಗ್ಯಾಸ್ ಗೀಸರ್ ನಿಂದ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಾದ ಕಾರಣ ತಾಯಿ ಮೃತಪಟ್ಟಿದ್ದು, ಮಗುವಿನ ಸ್ಥಿತಿ ಗಂಭೀರವಾಗಿರುವ ಅವಘಡ ಶನಿವಾರ ಸಂಭವಿಸಿದೆ.
ಸ್ನಾನ ಗೃಹದಲ್ಲಿ ಉಸಿರಾಟ ಸಮಸ್ಯೆ ಗೆ ತಾಯಿ ಮಗು ಸಿಲುಕಿದ್ದು, ಕೆಲ ಹೊತ್ತಿನ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ ರಮ್ಯಾ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದು, 4 ವರ್ಷದ ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕೆತ್ಸೆ ನೀಡಲಾಗುತ್ತಿದೆ.
ಕಿಟಕಿ ಬಾಗಿಲುಗಳು ಮತ್ತು ಬಾಗಿಲು ಮುಚ್ಚಿದ್ದ ಕಾರಣ ಉಸಿರಾಟದ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.