Bengaluru: ಆನ್‌ಲೈನ್‌ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ
ಬಿಬಿಎಂಪಿಯಿಂದ ಫೇಸ್‌ಲೆಸ್, ಸಂಪರ್ಕ ರಹಿತ ಆನ್‌ಲೈನ್ ಇ-ಖಾತಾ ವ್ಯವಸ್ಥೆ ; 21 ಲಕ್ಷಕ್ಕೂ ಹೆಚ್ಚು ಕರಡು ಇ-ಖಾತಾಗಳ ಡಿಜಿಟಲೀಕರಣ
Team Udayavani, Oct 5, 2024, 4:13 PM IST
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಹಿಗಳಲ್ಲಿ ದಾಖಲಾಗಿರುವ ಎಲ್ಲ ಖಾತಾಗಳನ್ನು-ಎ ಖಾತಾ ಮತ್ತು ಬಿ ಖಾತಾ ಎರಡನ್ನೂ ಡಿಜಿಟಲೀಕರಣ ಮಾಡಲಾಗಿದೆ. 21 ಲಕ್ಷಕ್ಕೂ ಹೆಚ್ಚು ಕರಡು ಇ-ಖಾತಾಗಳನ್ನು ಯಾರಾದರೂ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಹೊಸ ದಾಗಿ ಅನುಷ್ಠಾನಗೊಳಿಸಲಾಗಿರುವ ಫೇಸ್‌ಲೆಸ್, ಸಂಪರ್ಕರಹಿತ ಆನ್‌ಲೈನ್ ಬಿಬಿಎಂಪಿ ಇ-ಖಾತಾ ವ್ಯವಸ್ಥೆ ಕುರಿತು ಬಿಬಿಎಂಪಿ ಮಾಹಿತಿ ನೀಡಿದೆ.
ಎ ಖಾತ ಮತ್ತು ಬಿ ಖಾತಾ ಸ್ವತ್ತುಗಳಿಗೆ ಸಂಬಂಧಿಸಿದ ಕರಡು ಇ-ಖಾತಾಗಳನ್ನು ಆನ್‌ಲೈನ್‌ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ https://bbmpeaasthi.karnataka.gov.in/ ಲಿಂಕ್ ಮೂಲಕ ಕರಡು ಇ-ಖಾತಾ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ನಾಗರಿಕರು ತಮ್ಮ ಅಂತಿಮ ಇ-ಖಾತಾ ಪಡೆ ಯಲು ಬಿಬಿಎಂಪಿಯಲ್ಲಿ ಯಾರನ್ನೂ ಭೇಟಿ ಮಾಡುವ ಅವಶ್ಯಕತೆಯಿರುವುದಿಲ್ಲ. ಇದು ಸಂಪೂರ್ಣವಾಗಿ ಆನ್‌ಲೈನ್ ವ್ಯವಸ್ಥೆ ಮತ್ತು ಸಂಪರ್ಕ ರಹಿತ ವಾಗಿದೆ ಎಂದು ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ದಾಖಲಾತಿಗಳು: ಇ-ಆಸ್ತಿ ತಂತ್ರಾಂಶವು ವಿದ್ಯುನ್ಮಾನವಾಗಿ ಕಾವೇರಿಯಿಂದ ಪಡೆಯುವ ಕ್ರಯ ಪತ್ರ ಅಥವಾ ನೋಂದಾಯಿತ ಪತ್ರದ ಸಂಖ್ಯೆ ಅಗತ್ಯವಾಗಿದೆ ಎಂದು ತಿಳಿಸಲಾಗಿದೆ.
2024ರ ಏ.1ರಿಂದ ಇಲ್ಲಿಯವರೆಗಿನ ಸ್ವತ್ತಿನ ಋಣಭಾರ ಪ್ರಮಾಣ ಪತ್ರ ಹಾಗೂ ಋಣಭಾರ ಪ್ರಮಾಣ ಪತ್ರ ಸಂಖ್ಯೆಯನ್ನು ಮಾತ್ರ ನಮೂದಿಸಿ. ಇ-ಆಸ್ತಿ ತಂತ್ರಾಂಶವು ವಿದ್ಯುನ್ಮಾನವಾಗಿ ಕಾವೇರಿಯಿಂದ ಪಡೆಯುತ್ತದೆ. ಆಸ್ತಿ ತೆರಿಗೆಯ 10 ಅಂಕಿಯ ಅರ್ಜಿ ಸಂಖ್ಯೆಯನ್ನು ನಮೂದಿಸಿ ಹಾಗೂ ಮಾಹಿತಿ ಯನ್ನು ವಿದ್ಯುನ್ಮಾನವಾಗಿ ಪಡೆಯಲಾಗುತ್ತದೆ. ಮಾಲಿಕರ ಆಧಾರ್ ಇ-ಕೆವೈಸಿ, ಬೆಸ್ಕಾಂ 10-ಅಂಕಿಯ ಖಾತಾ ಸಂಖ್ಯೆಯನ್ನು ನಮೂದಿಸಿ ಹಾಗೂ ಮಾಹಿತಿ ಯನ್ನು ವಿದ್ಯುನ್ಮಾನವಾಗಿ ಪರಿಶೀಲಿಸಲಾಗುವುದು, ಆಸ್ತಿಯ ಜಿಪಿಎಸ್ ಮತ್ತು ಆಸ್ತಿ ಭಾವಚಿತ್ರ ನೀಡಿ. ಎ- ಖಾತಾ ಗಾಗಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ (ನಾಗರಿಕರು ದಾಖಲೆಗಳು ಲಭ್ಯವಿಲ್ಲವೆಂದು ಘೋಷಿಸಬಹುದು ಆದರು ಸಹ ಅಂತಿಮ ಇ-ಖಾತಾವನ್ನು ನೀಡಲಾಗುವುದು).
ಮೇಲಿನ ವಿವರಗಳನ್ನು ವಿದ್ಯುನ್ಮಾನವಾಗಿ ಒದಗಿಸಿದ ನಂತರ ತಂತ್ರಾಂಶವು ಸ್ವತಃ ಎಲ್ಲ ದಾಖಲೆಗಳನ್ನು ಪರಿಶೀಲಿಸುತ್ತದೆ.
ನಂತರ ಸ್ವಯಂ ಚಾಲಿತವಾಗಿ ಅಂತಿಮ ಇ-ಖಾತಾವನ್ನು ನೀಡುತ್ತದೆ. ಅಂತಿಮ ಇ-ಖಾತಾ ಪಡೆಯಲು ಬಿಬಿಎಂಪಿಯಲ್ಲಿ ಯಾರನ್ನೂ ಭೇಟಿ ಮಾಡುವ ಅಗತ್ಯವಿಲ್ಲ. ನಮೂದಿಸಿದ ಮಾಹಿತಿಯು ಅಪೂರ್ಣವಾಗಿದ್ದರೆ, ಬಿಬಿಎಂಪಿ ದಾಖಲೆ ಗಳೊಂದಿಗೆ ಹೊಂದಿಕೆಯಾಗದಿದ್ದರೆ ಅಥವಾ ಅಂತಿಮ ಇ-ಖಾತಾವನ್ನು ನೀಡದಿರಲು ಯಾರಾ ದರೂ ಆಕ್ಷೇಪಣೆ ಸಲ್ಲಿಸಿದ್ದರೆ ಮಾತ್ರ ನಾಗರಿಕರು ಬಿಬಿಎಂಪಿಗೆ ಭೇಟಿ ನೀಡಬಹುದು. ಇದು ಅತ್ಯಂತ ಪಾರದರ್ಶಕ ಮತ್ತು ನಾಗರಿಕ ನಿಯಂತ್ರಣದಲ್ಲಿರುವ ಇ-ಖಾತಾ ವ್ಯವಸ್ಥೆಯಾಗಿದೆ.
ಯಾವೆಲ್ಲ ದಾಖಲೆ ಬೇಕು?
ಆನ್‌ಲೈನ್‌ನಲ್ಲಿ ಆಸ್ತಿ ತೆರಿಗೆಯ 10 ಅಂಕಿಯ ಅರ್ಜಿ ಸಂಖ್ಯೆಯನ್ನು ನಮೂದಿಸಿ ಹಾಗೂ ಮಾಹಿತಿಯನ್ನು ವಿದ್ಯುನ್ಮಾನವಾಗಿ ಪಡೆಯ ಲಾಗುತ್ತದೆ. ಮಾಲಿಕರ ಆಧಾರ್ ಇ-ಕೆವೈಸಿ, ಬೆಸ್ಕಾಂ 10-ಅಂಕಿಯ ಖಾತಾ ಸಂಖ್ಯೆಯನ್ನು ನಮೂದಿಸಿ ಹಾಗೂ ಮಾಹಿತಿಯನ್ನು ವಿದ್ಯು ನ್ಮಾನವಾಗಿ ಪರಿಶೀಲಿಸಲಾಗುವುದು, ಆಸ್ತಿಯ ಜಿಪಿಎಸ್ ಮತ್ತು ಆಸ್ತಿ ಭಾವಚಿತ್ರ ನೀಡಿ. ಎ- ಖಾತಾಗಾಗಿ ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು
ಈ ಲಿಂಕ್ ಕ್ಲಿಕ್ ಮಾಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಎ ಖಾತಾ ಹಾಗೂ ಬಿ ಖಾತಾ ಸ್ವತ್ತುಗಳಿಗೆ ಸಂಬಂಧಿಸಿದ ಕರಡು ಇ-ಖಾತಾಗಳನ್ನು https://bbmpeaasthi.karnataka.gov.in/ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಫೇಸ್‌ಲೆಸ್, ಸಂಪರ್ಕರಹಿತ ಆನ್‌ಲೈನ್ ಬಿಬಿ ಎಂಪಿ ಇ-ಖಾತಾ ವ್ಯವಸ್ಥೆ ಇದಾಗಿದೆ.
■ ಉದಯವಾಣಿ ಸಮಾಚಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Weightlifting: ಏಷ್ಯನ್ ವೇಟ್ ಲಿಫ್ಟಿಂಗ್; ಭಾರತಕ್ಕೆ ಎರಡು ಬೆಳ್ಳಿ
Junior World Cup shooting: ಭಾರತದ ಆತಿಥ್ಯದಲ್ಲಿ ಜೂ. ವಿಶ್ವಕಪ್ ಶೂಟಿಂಗ್
Udupi: ಕುದ್ರು ನೆಸ್ಟ್ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.