Bengaluru: ಮಹಿಳೆಯ ರೋಗ ನಿರ್ಲಕ್ಷಿಸಿದ ಆಸ್ಪತ್ರೆಗೆ 10 ಲಕ್ಷ ದಂಡ
Team Udayavani, Aug 28, 2024, 11:57 AM IST
ಬೆಂಗಳೂರು: ಗರ್ಭಿಣಿಯ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸಿ, ತೀವ್ರ ತರಹದ ಅನಾರೋಗ್ಯಕ್ಕೆ ಕಾರಣವಾದ ನಗರದ ಪ್ರತಿಷ್ಠಿತ ಖಾಸಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ 3ನೇ ಹೆಚ್ಚುವರಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಆಯೋಗವು 10.20 ಲಕ್ಷ ರೂ. ದಂಡ ವಿಧಿಸಿದೆ.
ಬೆಂಗಳೂರು ನಿವಾಸಿ ಆರ್.ಎಸ್. ಸಂಜನಾ ಅವರು ಗರ್ಭಿಣಿಯಾದ ಬಳಿಕ ಪ್ರಗ್ನೆನ್ಸಿ ಕೇರ್‌ಗೆ ಸಂಬಂಧಿಸಿದಂತೆ ಮಲ್ಲೇಶ್ವರದ ಕಿಡ್ಸ್ ಕ್ಲಿನಿಕ್ ಇಂಡಿಯಾ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದಾರೆ. ಸುಮಾರು 7 ತಿಂಗಳ ಸಂದರ್ಭದಲ್ಲಿ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದು, ಈ ಕುರಿತು ವೈದ್ಯರಿಗೆ ಮಾಹಿತಿ ನೀಡಿದ್ದರೂ ಯಾವುದೇ ಚಿಕಿತ್ಸೆಯನ್ನು ನೀಡಿರಲಿಲ್ಲ. ಹೊಟ್ಟೆ ನೋವು ಹೆಚ್ಚಾಗುತ್ತಿದ್ದಂತೆ ಮತ್ತೂಮ್ಮೆ ವೈದ್ಯರನ್ನು ಸಂಪರ್ಕಿಸಿದ್ದರೂ ಹೆರಿಗೆ ಬಳಿಕ ತಪಾಸಣೆ ಮಾಡೋಣ ಎಂದು ಹೇಳಿ ನಿರ್ಲಕ್ಷಿಸಿದ್ದರು.
ಈ ನಡುವೆ, 2017ರ ಆ.10ರಂದು ದೂರುದಾರರು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕವೂ ಕಿಬ್ಬೊಟ್ಟೆಯಲ್ಲಿ ನೋವು ಕಡಿಮೆಯಾಗಿರಲಿಲ್ಲ. ಈ ವೇಳೆ ಬಾಣಂತಿ ತೀವ್ರ ತರಹದ ಉಸಿರಾಟ ಸಮಸ್ಯೆ, ಕಿಬ್ಬೊಟ್ಟೆಯಲ್ಲಿ ನೋವು ಕಾಣಿ ಸಿ ಕೊಂಡಿದೆ. ಆಸ್ಪತ್ರೆಯಲ್ಲಿ ಐಸಿಯು ವ್ಯವಸ್ಥೆ ಇರದ ಕಾರಣ ಸಂಜನಾ ಅವರಿಗೆ ಆಕ್ಸಿಜನ್‌ನಲ್ಲಿಟ್ಟು ಮೇಲ್ವಿಚಾರಣೆ ನಡೆಸಿದ್ದಾರೆ. 3 ದಿನಗಳ ಬಳಿಕ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದ್ಯೊ ಯುವಂತೆ ಸೂಚನೆ ನೀಡಿದ್ದಾರೆ.
ಆ.12ರಂದು ನಗರದ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ರೋಗಿಯು ಆರೋಗ್ಯ ಸ್ಥಿರವಾಗಿರಲಿಲ್ಲ. ರಕ್ತ, ಇತರೆ ತಪಾಸ ಣೆಯ ಬಳಿಕ ಸಂಜನಾಗೆ ಪ್ಯಾಂಕ್ರಿಯಾ ಟೈಟಿಸ್ ಸಮಸ್ಯೆ ಇರುವುದು ದೃಢವಾಗಿದೆ. ಬಳಿಕ ಐಸಿಯುನಲ್ಲಿ 10 ದಿನ ಚಿಕಿತ್ಸೆ ನೀಡಿದ ಬಳಿಕ ಗುಣಮುಖವಾಗಿದ್ದಾರೆ.
ಇದಕ್ಕೂ ಮುನ್ನೆ ಮಲ್ಲೇಶ್ವರದ ಕಿಡ್ಸ್ ಕ್ಲಿನಿಕ್ ಇಂಡಿಯಾ ಆಸ್ಪತ್ರೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ್ದರ ಬಗ್ಗೆ ಗ್ರಾಹಕ ನ್ಯಾಯಾಲಯದಲ್ಲಿ ದೂರು ನೀಡಿದ್ದಾರೆ.
ಅನಾರೋಗ್ಯ ಸಮಸ್ಯೆಯಿಂದ ನವಜಾತ ಶಿಶುಗೆ ಹಾಲುಣಿಸಲು ಸಾಧ್ಯ ವಾಗಿ ರಲಿಲ್ಲ. ಇದರಿಂದಾಗಿ ಹಿಂಸೆಗೆ ಒಳಗಾಗಿದ್ದೇನೆ. ಇದಕ್ಕೆ ಕಾರಣೀ ಭೂñ ರಾದ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಅಲ್ಲಿನ ವೈದ್ಯಾಧಿಕಾರಿಗಳಿಂದ 20 ಲಕ್ಷ ರೂ. ಪರಿಹಾರ ಕೋರಿ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
10.20 ಲಕ್ಷ ದಂಡ!: 3ನೇ ಹೆಚ್ಚುವರಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಆಯೋಗ ಅಧ್ಯಕ್ಷ ಶಿವರಾಮ್ ಕೆ. ಅವರು ಸಾಕ್ಷ್ಯ ಹಾಗೂ ವಾದ ಆಲಿಸಿ, ರೋಗಿಯ ಅನಾರೋಗ್ಯ ಸಮಸ್ಯೆ ಹಾಗೂ ಅನಾವಶ್ಯಕ ವೈದ್ಯಕೀಯ ವೆಚ್ಚಕ್ಕೆ ಕಾರಣವಾದ ಖಾಸಗಿ ಆಸ್ಪತ್ರೆಗೆ 10 ಲಕ್ಷ ರೂ. ದಂಡ ಹಾಗೂ ಮಾನಸಿಕ ಹಿಂಸೆಗೆ 20 ಸಾವಿರ ರೂ. ಸೇರಿದಂತೆ 10.20 ಲಕ್ಷ ರೂ. ಗಳನ್ನು ದೂರುದಾರರಿಗೆ ಪಾವತಿ ಮಾಡುವಂತೆ ಆದೇಶಿಸಿದೆ.
ಆಗಿದ್ದೇನು?
7 ತಿಂಗಳ ಗರ್ಭಿಣಿಯಾಗಿದ್ದಾಗ ಕಿಬೊಟ್ಟೆ ನೋವು
ಆಸ್ಪತ್ರೆಗೆ ತೋರಿಸಿದರೂ ನಿರ್ಲಕ್ಷಿಸಿದ ವೈದ್ಯ
ಹೆರಿಗೆ ಬಳಿಕ ಚಿಕಿತ್ಸೆ ನೀಡೋಣ ಎಂದು ಹೇಳಿದ್ದ ವೈದ್ಯ
ಹೆರಿಗೆ ಬಳಿಕ ನೋವು ಹೆಚ್ಚಾದಾಗ ಬೇರೆ ಆಸ್ಪತ್ರೆಗೆ ಹೋಗಲು ಸೂಚನೆ
ಬೇರೆ ಆಸ್ಪತ್ರೆಯಲ್ಲಿ ಪ್ಯಾಂಕ್ರಿಯಾಟೈಟಿಸ್ ಸಮಸ್ಯೆ ಇರುವುದು ದೃಢ
10 ದಿನಗಳ ನಿರಂತರ ಚಿಕಿತ್ಸೆ ಬಳಿಕ ಮಹಿಳೆ ಗುಣಮುಖ
ಇದಕ್ಕೂ ಮುನ್ನ ನಿರ್ಲಕ್ಷ್ಯವಹಿಸಿದ್ದ ವೈದ್ಯ ವಿರುದ್ಧ ಕೋರ್ಟ್‌ಗೆ ದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.