![Kite-Festival](https://www.udayavani.com/wp-content/uploads/2024/12/Kite-Festival-415x249.jpg)
Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್!
ಕೋಳಿ ಸಂಶೋಧನಾ ಕೇಂದ್ರದ ಮಳಿಗೆಯಲ್ಲಿ ಭರ್ಜರಿ ಸೇಲ್
Team Udayavani, Nov 16, 2024, 1:30 PM IST
![4-cock](https://www.udayavani.com/wp-content/uploads/2024/11/4-cock-620x372.jpg)
ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ 4 ದಿನಗಳ ಕೃಷಿ ಮೇಳದಲ್ಲಿ ಹೆಬ್ಟಾಳದಲ್ಲಿ ರು ವ ಮಾಂಸದ ಕೋಳಿ ಸಂಶೋಧನಾ ಕೇಂದ್ರ ತೆರೆದ ಮಾಂಸದ ನಾಟಿ ಕೋಳಿ ಪ್ರದರ್ಶನ ಹಾಗೂ ಮಾರಾಟ ಮಳಿಗೆಗೆ ರೈತರು ಸೇರಿದಂತೆ ಸಾರ್ವಜನಿಕರು ಲಗ್ಗೆಯಿಟ್ಟು ಮಾಂಸದ ನಾಟಿ ಕೋಳಿ ಮತ್ತದರ ಮರಿಗಳನ್ನು ಖರೀದಿಸುತ್ತಿರುವ ದೃಶ್ಯ ಶುಕ್ರವಾರ ಕಂಡು ಬಂತು.
ವಾರಕ್ಕೆ 7500 ಮರಿ ಸೇಲ್: ಮಾಂಸದ ಕೋಳಿ ಸಂಶೋಧನಾ ಕೇಂದ್ರದಲ್ಲಿ ಸ್ಥಳೀಯವಾಗಿ 4 ಸಾವಿರ ಮಾಂಸದ ಕೋಳಿ ಮಾರಾಟವಾಗುತ್ತದೆ. ರೈತರು ಸೇರಿದಂತೆ ಬೆಂಗಳೂರಿನ ನಗರ ನಿವಾಸಿಗಳು ಮನೆಯಲ್ಲಿ ನಾಟಿ ಕೋಳಿ ಮರಿಯನ್ನು ಸಾಕಣೆ ಮಾಡಲು ಖರೀದಿಸುತ್ತಿದ್ದಾರೆ. ಇಲ್ಲಿ ವಾರವೊಂದಕ್ಕೆ ಸುಮಾರು 7,500 ನಾಟಿ ಕೋಳಿ ಮರಿಗಳು ಮಾರಾಟವಾಗುತ್ತಿವೆ. ನಾಟಿ ಕೋಳಿ ಮರಿ ದರ ಸುಮಾರು 100 ರೂ.
ಕೆ.ಜಿ.ಗೆ 250 ರಿಂದ 300 ರೂ.: ಕೇಂದ್ರದಲ್ಲಿ ಒಂದು ಕೆಜಿ ನಾಟಿ ಕೋಳಿ ಮಾಂಸಕ್ಕೆ 250 ರೂ. ಹಾಗೂ ಹುಂಜವು 300 ರೂ.ಗೆ ಮಾರಾಟವಾಗುತ್ತಿದೆ. ಇನ್ನೂ ಇತರೆ ಫಾರಂಗಳಲ್ಲಿ 300 ರೂ.ನಿಂದ 450 ರೂ. ದರದಲ್ಲಿ ನಾಟಿ ಕೋಳಿ ಮಾಂಸ ಮಾರಾಟವಾಗುತ್ತಿದೆ. ಕೋಳಿಗಳು ಸಂಪೂರ್ಣ ನಾಟಿ ತಳಿಗಳಾಗಿರುವು ದರಿಂದ ಒಂದು ಕೋಳಿ ಗರಿಷ್ಠ ಒಂದುವರೆ ಕೆ.ಜಿ. ತೂಕವಿದೆ.ಇಲ್ಲಿನ ನಗರದ ಫಾರಂಗಳಲ್ಲಿ ಸಿಗುವ ನಾಟಿಗಳು ಕ್ರಾಸ್ ಬ್ರೀಡ್ಸ್ ಆಗಿದೆ.
ವಿಭಿನ್ನ ಆಹಾರ ತಯಾರಿಕೆಗೆ ತರಬೇತಿ
ಫುಡ್ ಬ್ಯುಸಿನೆಸ್‌ನಲ್ಲಿ ಆಸಕ್ತಿ ಹೊಂದಿದ್ದರೆ ಈ ಮಾಹಿತಿ ನಿಮಗೆ ಪೂರಕ. ತಾಂಜಾವೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫುಡ್ ಟೆಕ್ನಾಲಜಿ, ಎಂಟರ್‌ಪ್ರೈನರ್ ಶಿಪ್ ಆ್ಯಂಡ್ ಮ್ಯಾನೇಜ್‌ಮೆಂಟ್ ನಿಂದ ವಿನೂತನ ಮಾದರಿಯಲ್ಲಿ ಆಹಾರ ತಯಾರಿಕೆಯ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. ಇಲ್ಲಿ ಹಾಲು ರಹಿತ ಐಸ್‌ಕ್ರೀಮ್, ಸಿರಿಧಾನ್ಯಗಳ ಪಾಸ್ತಾ, ಫ್ಲೇಕ್ಸ್, ಹಾಲು ರಹಿತ ಸಿರಿಧಾನ್ಯದ ಐಸ್ ಕ್ರೀಮ್ ಹೀಗೆ ವಿಭಿನ್ನ ಮಾದರಿಯ ಆಹಾರಗಳ ತಯಾರಿಕೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಮಾಗಡಿಯಿಂದ ಕೃಷಿ ಮೇಳಕ್ಕೆ ಬಂದಿದ್ದೇನೆ. ಇಲ್ಲಿ ಕೃಷಿಯ ಬಗ್ಗೆ ಹಲವು ಮಾಹಿತಿ ಲಭ್ಯವಾಗುತ್ತದೆ. ಈ ವರ್ಷ ನಮ್ಮ ತೋಟದಲ್ಲಿ ತರಕಾರಿ ಬೆಳೆಯಬೇಕು ಎಂದು ಅಂದುಕೊಂಡಿದ್ದೇನೆ. ಅದಕ್ಕೆ ಪೂರಕವಾದ ಮಾಹಿತಿ ಹಾಗೂ ಉತ್ಪನ್ನ ಹುಡುಕುತ್ತಿದ್ದೇನೆ. ●ಚಂದ್ರಯ್ಯ, ಕೃಷಿಕ, ಮಾಗಡಿ
ಕೃಷಿ ಮೇಳದ ಮಳಿಗೆಗಳಲ್ಲಿ ನೀರಾವರಿಗೆ ಪೂರಕವಾದ ಉತ್ಪನ್ನಗಳು ಸಾಕಷ್ಟಿವೆ. ಇಲ್ಲಿ ದೊರೆಯುವ ಹಲವು ಹೈಬ್ರೀಡ್ ತಳಿಯ ಬೀಜಗಳು ರೈತರಿಗೆ ಉಪಯೋಗ ಆಗಲಿದೆ. ●ಆರ್.ಕೆ.ಶರ್ಮ, ಕೃಷಿಕ
ಟಾಪ್ ನ್ಯೂಸ್
![Kite-Festival](https://www.udayavani.com/wp-content/uploads/2024/12/Kite-Festival-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Child marriage: 3 ವರ್ಷದಲ್ಲಿ ರಾಜ್ಯಾದ್ಯಂತ 1,465 ಬಾಲ್ಯ ವಿವಾಹ ಪತ್ತೆ](https://www.udayavani.com/wp-content/uploads/2024/12/6-29-150x90.jpg)
Child marriage: 3 ವರ್ಷದಲ್ಲಿ ರಾಜ್ಯಾದ್ಯಂತ 1,465 ಬಾಲ್ಯ ವಿವಾಹ ಪತ್ತೆ
![Indira canteen: ನಗರದಲ್ಲಿ ಶೀಘ್ರ ಹೊಸದಾಗಿ 50 ಇಂದಿರಾ ಕ್ಯಾಂಟೀನ್](https://www.udayavani.com/wp-content/uploads/2024/12/4-32-150x90.jpg)
Indira canteen: ನಗರದಲ್ಲಿ ಶೀಘ್ರ ಹೊಸದಾಗಿ 50 ಇಂದಿರಾ ಕ್ಯಾಂಟೀನ್
![3](https://www.udayavani.com/wp-content/uploads/2024/12/3-28-150x90.jpg)
ಸಿನಿಮೀಯವಾಗಿ ಮೊಬೈಲ್ ಕಳ್ಳರನ್ನು ಬೆನ್ನಟ್ಟಿ ಹಿಡಿದ ಬಿಬಿಎಂಪಿ ಮಾಜಿ ಕಾರ್ಪೋರೇಟರ್!
![10](https://www.udayavani.com/wp-content/uploads/2024/12/10-18-150x80.jpg)
Election: ಒಕ್ಕಲಿಗ ಸಂಘದ ಚುನಾವಣೆ; ಡಿ.ಕೆ.ಶಿವಕುಮಾರ್ ಬಣ ಮೇಲುಗೈ
![11](https://www.udayavani.com/wp-content/uploads/2024/12/11-16-150x80.jpg)
Inner politics; ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.