Bengaluru: ಲಕ್ಷ+ ಲೀ. ನೀರು ಬಳಕೆದಾರರಿಗೆ ಸ್ಮಾರ್ಟ್ ಮೀಟರ್
ಸ್ಮಾರ್ಟ್ ಮೀಟರ್‌ನಿಂದ ಶೇ.100 ನಿಖರವಾಗಿ ಬರಲಿವೆ ನೀರಿನ ಬಿಲ್‌ಗಳು
Team Udayavani, Sep 13, 2024, 2:52 PM IST
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಲಕ್ಷಾಂತರ ಲೀಟರ್ ಕಾವೇರಿ ನೀರು ಬಳಸುವ ವಾಣಿಜ್ಯ ಉದ್ಯಮಗಳು, ಅಪಾರ್ಟ್‌ಮೆಂಟ್‌ನಂತಹ ಕಡೆಗಳಲ್ಲಿ ಇನ್ನು ಮುಂದೆ ಸ್ಮಾರ್ಟ್ ಮೀಟರ್ ಅಳವಡಿಸಲು ಜಲಮಂಡಳಿಯು ಮುಂದಾಗಿದೆ.
ಅಮೆರಿಕ, ಜಪಾನ್, ಬ್ರಿಟನ್, ಭಾರತದಲ್ಲಿ ಮುಂಬೈ, ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಈಗಾಗಲೇ ಸ್ಮಾರ್ಟ್‌ಮೀಟರ್‌ಗಳು ಅಳವಡಿಸಿದ್ದು, ಇಲ್ಲೆಲ್ಲ ಶೇ.100 ರಷ್ಟು ನಿಖರವಾಗಿ ನೀರಿನ ಬಿಲ್‌ಗಳು ಬರುತ್ತಿವೆ.
ಇದನ್ನು ಮನಗಂಡ ಜಲಮಂಡಳಿಯು ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳು, ಕಾರ್ಖಾನೆ, ವಾಣಿಜ್ಯ ಕಟ್ಟಡಗಳು, ಐಟಿ-ಬಿಟಿ ಸಂಸ್ಥೆಗಳು, ಎಚ್ ಎಎಲ್, ಬಿಎಚ್‌ಎಎಲ್, ಏರ್‌ಫೋರ್ಸ್ ಸೇರಿದಂತೆ ಲಕ್ಷಾಂತರ ಲೀ. ಕಾವೇರಿ ನೀರು ಬಳಸುವ ಕಡೆಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲು ಸಿದ್ಧತೆ ನಡೆಸುತ್ತಿದೆ. ಈ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ.
ಕಂಪನಿಯಿಂದಲೇ ಹೂಡಿಕೆ:
ಸ್ಮಾರ್ಟ್ ಮೀಟರ್ ಅಳವಡಿಸಲು ನೂರಾರು ಕೋಟಿ ರೂ. ಬೇಕಾಗುತ್ತವೆ. ಜಲಮಂಡಳಿ ಬೊಕ್ಕಸದಲ್ಲಿ ಹಣಕಾಸಿನ ಕೊರತೆ ಇರುವ ಹಿನ್ನೆಲೆಯಲ್ಲಿ ಸ್ಮಾರ್ಟ್‌ಮೀಟರ್ ಯೋಜನೆಯನ್ನು ಖಾಸಗಿ ಕಂಪನಿಗೆ ಟೆಂಡರ್ ನೀಡಲು ಚಿಂತಿಸಲಾಗಿದೆ. ಟೆಂಡರ್ ಪಡೆಯುವ ಕಂಪನಿಯೇ ಯೋಜನೆಗೆ ಹೂಡಿಕೆ ಮಾಡಿದರೆ, ಸ್ಮಾರ್ಟ್‌ಮೀಟರ್‌ನಿಂದ ಬರುವ ನೀರಿನ ಶುಲ್ಕದಲ್ಲಿ ಇಂತಿಷ್ಟು ಪ್ರಮಾಣದ ದುಡ್ಡನ್ನು ಆ ಕಂಪನಿಗೆ ಹಲವು ವರ್ಷಗಳ ಕಾಲ ಪಡೆಯಲು ಅವಕಾಶ ಕಲ್ಪಿಸಲಾ ಗುತ್ತದೆ. ಈ ಮೂಲಕ ಹೂಡಿಕೆ ಮಾಡಿದ ದುಡ್ಡನ್ನು ಕಂಪನಿಯು ಪಡೆಯಬೇಕಾಗಿದೆ. ಇನ್ನು ಯೋಜನೆ ಗಾಗಿ ಯಾವ ಮೂಲಗಳಿಂದ ಹೇಗೆ ಹಣ ಕ್ರೋಢೀಕ ರಿಸಬಹುದು ಎಂಬ ಬಗ್ಗೆಯೂ ಸ್ಮಾಟ್ ಮೀಟರ್ ಕುರಿತು ಅಧ್ಯಯನ ನಡೆಸಲು ಕನ್ಸಲ್ಟೆನ್ಸಿ ಪಡೆಯುವ ಕಂಪನಿ ವರದಿಯಲ್ಲಿ ತಿಳಿಸಲಿದೆ.
ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ಜಲ ಮಂಡಳಿ ಸರ್ವರ್‌ಗಳಿಗೆ ರೀಡಿಂಗ್ ಬರಲಿವೆ. ಪ್ರತಿದಿನ ಬಳಕೆಯಾಗುವ ನೀರು, ಅದಕ್ಕೆ ತಗುಲುವ ವೆಚ್ಚ, ಎಷ್ಟು ಪ್ರಮಾಣದಲ್ಲಿ ನೀರು ಪೂರೈಸಬಹುದು ಸೇರಿದಂತೆ ಹಲವಾರು ನಿಖರವಾದ ಮಾಹಿತಿಗಳು ಜಲ ಮಂಡಳಿ ಮುಖ್ಯ ಕಚೇರಿಯಲ್ಲೇ ಪರಿಶೀಲಿಸಬಹುದಾಗಿದೆ.
ಟೆಂಡರ್ ಪಡೆದ ಸಂಸ್ಥೆಯಿಂದ ಅಧ್ಯಯನ:
ಬೆಂಗಳೂರಿನಲ್ಲಿ ಸ್ಮಾರ್ಟ್‌ಮೀಟರ್ ಅಳವಡಿಸುವ ಕುರಿತು ಅಧ್ಯಯನ ನಡೆಸಿ ಜಲಮಂಡಳಿಗೆ ವರದಿ ನೀಡಲು (ಟ್ರಾನ್ಸಾಕ್ಷನ್ ಎಡ್ವೈಸರ್) ಕನ್ಸಟೆನ್ಸಿಗಾಗಿ ಕರೆದ ಟೆಂಡರ್ ನಲ್ಲಿ ರಾಜ್ಯ ಸರ್ಕಾರದ ಅಧೀನದ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಕರ್ನಾಟಕ ಲಿ.(ಐಡೆಕ್)ಹೆಸರಿನ ಕಂಪನಿವೊಂದು ಭಾಗವಹಿಸಿದೆ. ಕಂಪನಿಯು ಸಲ್ಲಿಸಿರುವ ದಾಖಲೆ ಗ ಳನ್ನು ಜಲಮಂಡಳಿ ಎಂಜಿನಿಯರ್‌ಗಳು ಪರಿಶೀಲಿಸುತ್ತಿದ್ದಾರೆ. ಬಹುತೇಕ ಇದೇ ಕಂಪನಿಗೆ ಕನ್ಸಟೆನ್ಸಿ ನೀಡುವ ಸಾಧ್ಯತೆಗಳಿವೆ.
ಇನ್ನು ಸ್ಮಾರ್ಟ್ ಮೀಟರ್‌ಗಳನ್ನು ಯಾವ ಮಾದರಿಯಲ್ಲಿ ಅಳವಡಿಸಬಹುದು, ವಿದೇಶದ ನಗರಗಳಲ್ಲಿ ಸ್ಮಾಟ್‌ಮೀಟರ್ ವ್ಯವಸ್ಥೆಗಳು ಹೇಗಿವೆ, ಇದಕ್ಕೆ ಅಲ್ಲಿನ ಸರ್ಕಾರವೇ ದುಡ್ಡು ವ್ಯಯಿಸಿ ದೆಯೇ ಅಥವಾ ಪಿಪಿಪಿ ಮಾಡೆಲ್‌ನಲ್ಲಿ ಮಾಡಲಾಗಿ ದೆಯೇ, ಯಾವ ಮೀಟರ್ ಅಳವಡಿಸಿದರೆ ಸೂಕ್ತ ರೀಡಿಂಗ್ ತೆಗೆದುಕೊಳ್ಳಬಹುದು ಎಂಬಿತ್ಯಾದಿ ವಿಚಾ ರಗಳ ಕುರಿತು ಈ ಸಂಸ್ಥೆಯು ಕೆಲವು ತಿಂಗಳುಗಳ ಕಾಲ ಅಧ್ಯಯನ ನಡೆಸಲಿದೆ.
ಬೆಂಗಳೂರಿನ ಐದಾರು ಕಡೆ ಸ್ಮಾರ್ಟ್‌ಮೀಟರ್ ಅಳವಡಿಸಿ ಪರಿಶೀಲಿಸಲಿದೆ. ಈ ಎಲ್ಲ ಪ್ರಕ್ರಿಯೆಗಳ ಬಳಿಕ ಜಲಮಂಡಳಿಗೆ ಈ ಸುದೀರ್ಘವಾದ ವರದಿ ನೀಡಲಿದೆ. ಈ ಸಂಸ್ಥೆಯು ನೀಡುವ ವರದಿ ಆಧರಿಸಿ ಯೋಜನೆ ರೂಪಿಸುವ ಬಗ್ಗೆ ಸರ್ಕಾರಕ್ಕೆ ಜಲಮಂಡಳಿಯು ಪ್ರಸ್ತಾವನೆ ಸಲ್ಲಿಸಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಾರ್ಯ ಶುರುವಾಗಲಿದೆ.
ವಾಣಿಜ್ಯ ಸಂಕೀರ್ಣಗಳಿಗೆ ಮಾತ್ರ ಅಳವಡಿಕೆ ಏಕೆ?
ಕಾವೇರಿ ನೀರು ಬಳಸುತ್ತಿರುವ ಬೆಂಗಳೂರಿನ 10.95 ಲಕ್ಷ ಸಂಪರ್ಕಗಳಲ್ಲಿ ಜಲಮಂಡಳಿಯು ಮೆಕ್ಯಾನಿಕಲ್ ಮೀಟರ್ ಅಳವಡಿಸಿದೆ. ಮೆಕ್ಯಾನಿಕಲ್ ಮೀಟರ್‌ಗಳಿಂದ ನೀರಿನ ಬಿಲ್‌ಗಳಲ್ಲಿ ಶೇ.5ರಷ್ಟು ಪ್ರಮಾಣದಲ್ಲಿ ವ್ಯತ್ಯಾಸಗಳಾಗುತ್ತವೆ. ಪ್ರತಿ ತಿಂಗಳು 1 ಲಕ್ಷ ಲೀಟರ್‌ಗಿಂತ ಕಡಿಮೆ ನೀರನ್ನು ಬಳಸುವವರಿಗೆ ಇದು ಹೊರೆಯಾಗುವುದಿಲ್ಲ. ಬದಲಾಗಿ 5 ಲಕ್ಷ ಲೀಟರ್‌ಗಿಂತ ಹೆಚ್ಚಿನ ನೀರು ಬಳಸುವ ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು, ಐಟಿ-ಬಿಟಿ ಕಂಪನಿಗಳಂತಹ ಪ್ರದೇಶಗಳಲ್ಲಿ ಪ್ರತಿ ತಿಂಗಳು ಹೆಚ್ಚುವರಿಯಾಗಿ ಲಕ್ಷಾಂತರ ರೂ. ನೀರಿನ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಆರೋಪಗಳಿವೆ. ಹೀಗಾಗಿ ವಾಣಿಜ್ಯ ಸಂಕೀರ್ಣಗಳಂತಹ ಪ್ರದೇಶಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸಲು ಜಲಮಂಡಳಿಯು ಚಿಂತಿಸಿದೆ.
ಸ್ಮಾರ್ಟ್ ಮೀಟರ್ ಅಳವಡಿಸುವ ಬಗ್ಗೆ ಅಧ್ಯಯನ ನಡೆಸುವ ಕಂಪನಿಯು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸುತ್ತೇವೆ. ಮೊದಲನೇ ಹಂತದಲ್ಲಿ ಬೆಂಗಳೂರಿನ ವಾಣಿಜ್ಯ ಸಂಕೀರ್ಣಗಳಲ್ಲಿ ಸ್ಮಾರ್ಟ್‌ಮೀಟರ್ ಅಳವಡಿಸುವ ಉದ್ದೇಶವಿದೆ. ಇದರಿಂದ ವಾಣಿಜ್ಯ ಕಟ್ಟಡಗಳಿಗೆ ಅನುಕೂಲವಾಗಲಿದೆ. ●ಡಾ.ವಿ.ರಾಮ್ ಪ್ರಸಾತ್ ಮನೋಹರ್, ಜಲಮಂಡಿ ಅಧ್ಯಕ
-ಅವಿನಾಶ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Havyaka Mahasabha: ಡಿ.27ರಿಂದ ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.