Bengaluru: 20 ಲಕ್ಷ ಚಿನ್ನ ಕದ್ದು ಪ್ರೇಯಸಿಗೆ ಕೊಟ್ಟಿದ್ದ ವಿವಾಹಿತ!
ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿದ್ದ ಆರೋಪಿಗಳು; ಕಳ್ಳತನದಿಂದ ಬಂದ ಹಣದಲ್ಲಿ ಬದುಕು ಕಟ್ಟಿ ಕೊಳ್ಳಲು ನಿರ್ಧರಿಸಿದ್ದ ಪ್ರಿಯಕರ-ಪ್ರೇಯಸಿ ಬಂಧನ
Team Udayavani, Aug 10, 2024, 10:33 AM IST
ಬೆಂಗಳೂರು: ತಾನು ಕೆಲಸಕ್ಕಿದ್ದ ಸಾಫ್ಟ್ ವೇರ್ ಎಂಜಿನಿಯರ್ ಮನೆಯಲ್ಲಿ ಚಿನ್ನಾಭರಣ ಕದ್ದು ಪ್ರೇಯಸಿಗೆ ಕೊಟ್ಟಿದ್ದ ಕಳ್ಳ ಹಾಗೂ ಆತನ ಪ್ರೇಯಸಿ ಆಡುಗೋಡಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಮಿಳುನಾಡು ಮೂಲದ ನಾರಾಯಣಸ್ವಾಮಿ (34) ಹಾಗೂ ನವೀನಾ (39) ಬಂಧಿತರು.
ಆರೋಪಿ ಗಳಿಂದ 20 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ನಾರಾಯಣ ಸ್ವಾಮಿ ಪತ್ನಿಗೆ ಪ್ಯಾರಲಿಸಿಸ್ ಆಗಿತ್ತು. ಇತ್ತ ನವೀನಾಳ ಗಂಡನಿಗೂ ಪ್ಯಾರಲಿಸಿಸ್ ಆಗಿತ್ತು. ಈ ನಡುವೆ ಕೆಲ ತಿಂಗಳ ಹಿಂದೆ ಡೇಟಿಂಗ್ ಆ್ಯಪ್‌ವೊಂದರಲ್ಲಿ ನಾರಾಯಣಸ್ವಾಮಿ ನವೀನಾಳ ಪರಿಚಯವಾಗಿತ್ತು. ಇವರ ಪ್ರೇಮವು ಪ್ರೀತಿಗೆ ತಿರುಗಿ ಇಬ್ಬರೂ ವಿವಾಹ ಮಾಡಿಕೊಳ್ಳಲು ಪರಸ್ಪರ ಸಿದ್ಧರಾಗಿದ್ದರು.
ನಾರಾಯಣಸ್ವಾಮಿ ಹಾಗೂ ನವೀನಾ ಇವರಿಬ್ಬರಿಗೂ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ, ಮಕ್ಕಳನ್ನು ಬಿಟ್ಟು ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದ್ದರು. ವಿವಾಹ ಮಾಡಿಕೊಂಡು ಸಂಸಾರ ನಡೆಸಲು ಹಣ ಹೊಂದಿಸುವುದೇ ಇಬ್ಬರಿಗೂ ಕಷ್ಟವಾಗಿತ್ತು. ಆರೋಪಿ ನಾರಾ ಯಣಸ್ವಾಮಿ ತಾಯಿ ಬೆಳ್ಳಿಯಮ್ಮ ಕಳೆದ 20 ವರ್ಷಗಳಿಂದ ಲಕ್ಕಸಂದ್ರದ ಸಾಫ್ಟ್ ವೇರ್ ಎಂಜಿನಿಯರ್‌ವೊಬ್ಬರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದರು. ಮಗ ನಾರಾಯಣಸ್ವಾಮಿಯೂ ಆಗಾಗ್ಗೆ ಇವರ ಮನೆಗೆ ಬಂದು ಹೋಗುತ್ತಾ ಮನೆ ಮಾಲೀಕರ ವಿಶ್ವಾಸ ಗಳಿಸಿದ್ದ.
ಇತ್ತೀಚೆಗೆ ಮನೆ ಮಾಲೀಕರು ಕೆಲಸದ ನಿಮಿತ್ತ ಕುಟುಂಬ ಸಮೇತ ದುಬೈಗೆ ತೆರಳಿದ್ದರು. ನಾರಾಯಣ ಸ್ವಾಮಿಗೆ ಮನೆ ಸ್ವತ್ಛ ಮಾಡಲು ತಿಳಿಸಿ ಮನೆಯ ಬೀಗದ ಕೀಯನ್ನು ನೆಲಮಹಡಿಯಲ್ಲಿರುವ ಅವರ ಸಂಬಂಧಿಕರ ಮನೆಯಲ್ಲಿ ಕೊಟ್ಟು ಹೋಗಿದ್ದರು. ತಾನು ಕೆಲಸ ಮಾಡುತ್ತಿದ್ದ ವಿಚಾರವನ್ನೂ ನಾರಾಯಣ ಸ್ವಾಮಿ ಪ್ರೇಯಸಿ ಬಳಿ ಹೇಳಿಕೊಂಡಿದ್ದ. ಇತ್ತ ಪ್ರೇಯಸಿಯು ಎಲ್ಲಾದರೂ ಮನೆಗಳ್ಳತನ ಕಳ್ಳತನ ಮಾಡಿ ಹಣ ಹೊಂದಿಸುವಂತೆ ತಿಳಿಸಿದ್ದಳು.
ಎಲ್ಲೆಲ್ಲೋ ಕಳ್ಳತನ ಮಾಡುವ ಬದಲು ತಾನು ಕೆಲಸ ಮಾಡುವ ಮನೆಯಲ್ಲೇ ಚಿನ್ನಾಭರಣ ಕದ್ದರೆ ತನ್ನ ಮೇಲೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ನಾರಾಯಣಸ್ವಾಮಿ ಯೋಚಿಸಿ, ತಾನು ಕೆಲಸಕ್ಕಿದ್ದ ಮನೆಗೆ ಕನ್ನ ಹಾಕಲು ಸಂಚು ರೂಪಿಸಿದ್ದ. ಅದರಂತೆ ಇತ್ತೀಚೆಗೆ ಮನೆ ಮಾಲೀಕರ ಕೊಠಡಿಯ ಬೀಗ ಮುಗಿದು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಬೀಗ ಹಾಕಿಕೊಂಡು ಹೋಗಿದ್ದ. ನಂತರ ಕದ್ದ ಚಿನ್ನದೊಂದಿಗೆ ಚೆನ್ನೈಗೆ ತೆರಳಿ ಪ್ರೇಯಸಿ ನವೀನಾಗೆ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಸಿಕ್ಕಿ ಬಿದ್ದಿದ್ದು ಹೇಗೆ?
ಇತ್ತ ದುಬೈಗೆ ಹೋಗಿದ್ದ ಟೆಕಿ ಕುಟುಂಬ ವಾಪಸ್ ಬಂದಾಗ ಕೊಠಡಿಯಲ್ಲಿದ್ದ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿತ್ತು. ಮನೆ ಸ್ವತ್ಛ ಮಾಡಲು ಬರುತ್ತಿದ್ದ ನಾರಾಯಣ ಸ್ವಾಮಿಯೇ ಕಳುವು ಮಾಡಿರುವ ಅನುಮಾನ ಮೂಡಿತ್ತು. ಆಡುಗೋಡಿ ಪೊಲೀಸ್ ಠಾಣೆಗೆ ಚಿನ್ನ ಕಳ್ಳತನವಾ ಗಿರುವ ಕುರಿತು ಮನೆ ಮಾಲೀಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀ ಸರು ಅನುಮಾನದ ಮೇರೆಗೆ ನಾರಾಯಣಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ನಡೆದ ಸಂಗತಿ ವಿವರಿಸಿದ್ದ. ನಂತರ ಚೆನ್ನೈನ ರಾಜೇಶ್ವರಿನಗರದಲ್ಲಿರುವ ಆತನ ಪ್ರೇಯಸಿ ಯನ್ನು ವಶಕ್ಕೆ ಪಡೆದು ಚಿನ್ನಾಭರಣದ ಬಗ್ಗೆ ವಿಚಾ ರಿಸಿದಾಗ ಆಕೆ ಗಿರವಿ ಇಟ್ಟಿರುವುದಾಗಿ ತಿಳಿಸಿದ್ದಳು. ಆಕೆ ಕೆಲಸ ಮಾಡುವ ಪಾರ್ಲರ್ ಮಾಲೀಕರ ಬಳಿ ಗಿರಿವಿ ಇಟ್ಟಿದ್ದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.