Bengaluru: ಡಿಸಿಆರ್‌ಇನಲ್ಲಿ ಅವ್ಯವಹಾರ: ಎಸ್‌ಡಿಎ ವಿರುದ್ದ ಕೇಸ್‌

ಇಲಾಖೆಯಲ್ಲಿ 65 ಲಕ್ಷ ರೂ. ದುರ್ಬಳಕೆ ; ಆರೋಪ ಬೆನ್ನಲ್ಲೇ ಎಸ್‌ಡಿಎ ಸಂತೋಷ್‌ ಪರಾರಿ

Team Udayavani, Dec 15, 2024, 10:43 AM IST

7-bng

ಬೆಂಗಳೂರು: ನಾಗರಿಕ ಹಕ್ಕು ಜಾರಿ ನಿರ್ದೇಶನಾ ಲಯ (ಡಿಸಿಆರ್‌ಇ) ಸಂಗ್ರಹ ಶಾಖೆಯ ಪ್ರಥಮ ದರ್ಜೆ ಸಹಾಯಕ ದರ್ಜೆಯ ಸಿಬ್ಬಂದಿಯೊಬ್ಬರು 65 ಲಕ್ಷ ರೂ.ಗೂ ಹೆಚ್ಚು ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಡಿಸಿಆರ್‌ಇನ ಪ್ರಭಾರ ಆಡಳಿತಾಧಿಕಾರಿ ಎಂ. ಕಿರಣ್‌ ಎಂಬುವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು, ಸಂಗ್ರಹ ಶಾಖೆಯ ಪ್ರಥಮ ದರ್ಜೆ ಸಹಾಯಕ ಸಂತೋಷ್‌ ಕುಮಾರ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇನ್ನು ಆರೋಪ ಬೆನ್ನಲ್ಲೇ ನ.29ರಿಂದ ಆರೋಪಿತ ಸಿಬ್ಬಂದಿ ಸಂತೋಷ್‌ ಕುಮಾರ್‌ ತಲೆಮರೆಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಆರೋಪಿ ಸಂತೋಷ್‌ ಕುಮಾರ್‌ 2004ರಲ್ಲಿ ಡಿಸಿಆರ್‌ಇ ಘಟಕಕ್ಕೆ ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕಕೊಂಡಿದ್ದರು. 2007ರಿಂದ ಡಿಸಿಆರ್‌ಇ ಕೇಂದ್ರ ಕಚೇರಿಯಲ್ಲಿ ಸಂಗ್ರಹ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ್‌ ಇತರರ ಜತೆ ಸೇರಿಕೊಂಡು, ಒಳಸಂಚು ರೂಪಿಸಿ 65 ಲಕ್ಷಕ್ಕೂ ಅಧಿಕ ಹಣವನ್ನು ದುರುಪಯೋಗ ಮಾಡಿ ಇಲಾಖೆಗೆ ನಷ್ಟವುಂಟು ಮಾಡಿರುವುದು ಡಿ.5ರಂದು ನಡೆದ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಸರ್ಕಾರದಿಂದ ಬಿಡುಗಡೆಯಾದ ಅನುದಾನ ದುರ್ಬಳಕೆ ಆಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇಲಾಖೆಯ ವಿಚಾರಣೆಯಲ್ಲೂ ಅಕ್ರಮ ಪತ್ತೆ: ತುಮಕೂರು ಡಿಸಿಆರ್‌ಇ ಘಟಕದ ಪಿಐ ಎನ್‌. ಎನ್‌. ಜಯಲಕ್ಷ್ಮಮ್ಮ ಅವರು ನಡೆಸಿದ ಇಲಾಖಾ ಪ್ರಾಥಮಿಕ ತನಿಖೆಯಲ್ಲೂ ಸಂತೋಷ್‌ ಅಕ್ರಮ ಎಸಗಿರುವುದು ಸಾಬೀತಾಗಿದೆ. 2017ರಿಂದ 2024ರ ಅಕ್ಟೋಬರ್‌ವರೆಗೆ ಸಂಗ್ರಹ ಶಾಖೆಯ ಕಡತಗಳನ್ನು ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಸಂತೋಷ್‌, ಅಧಿಕಾರಿಗಳ ದಿಕ್ಕು ತಪ್ಪಿಸುವ ಉದ್ದೇಶದಿಂದ ಒಂದೇ ಕಡತ ಸಂಖ್ಯೆಯಲ್ಲಿ ಬೇರೆ ಬೇರೆ ಸಾಮಗ್ರಿಗಳನ್ನು ಖರೀದಿಸಿ ಎರಡೆರಡು ಬಿಲ್ಲುಗಳನ್ನು ತಯಾರಿಸಿ ಒಂದು ಬಿಲ್‌ ಅನ್ನು ಕಡತದಲ್ಲಿ ಇರಿಸಲಾಗಿದೆ. ನಕಲಿ ಬಿಲ್‌ಗೆ ಮಂಜೂರು ಪಡೆದು ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ.

ಈ ಮೂಲಕ ಸರ್ಕಾರದ ಅನುದಾನದಲ್ಲಿ ಬಿಡುಗಡೆಯಾಗಿರುವುದು ಗೊತ್ತಾಗಿದೆ. ಹೀಗಾಗಿ ಸಂತೋಷ್‌ ಕುಮಾರ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಿರಣ್‌ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

12-butterfly-park

Bengaluru: ಕೈ ಬೀಸಿ ಕರೆಯುತ್ತಿದೆ ಯಲಹಂಕದ ನೂತನ ಚಿಟ್ಟೆ ಉದ್ಯಾನವನ

15-gruhalaxmi

Gruha Lakshmi Scheme ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿದ ಅತ್ತೆ-ಸೊಸೆ: ಸಚಿವೆ ಶ್ಲಾಘನೆ

1-kai

Bizarre; ದುಡಿಯಲು ಇಷ್ಟವಿಲ್ಲದ್ದಕ್ಕೆ ಕೈಯ ನಾಲ್ಕು ಬೆರಳುಗಳನ್ನೇ ಕತ್ತರಿಸಿಕೊಂಡ ಭೂಪ!

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

1-sk

South Korea; ಮಿಲಿಟರಿ ಆಡಳಿತ ಹೇರಿ ಅಧಿಕಾರ ಕಳೆದುಕೊಂಡ ಅಧ್ಯಕ್ಷ!

1-mv-sm-bf

Military ವಾಹನವೀಗ ಹೊಟೇಲ್‌: 1 ದಿನದ ವಾಸಕ್ಕೆ 10,000 ರೂ.!

1-digi

‘DigiLocker’; ಕ್ಲೇಮ್‌ ಮಾಡದ ಹೂಡಿಕೆಗೆ ಪರಿಹಾರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-butterfly-park

Bengaluru: ಕೈ ಬೀಸಿ ಕರೆಯುತ್ತಿದೆ ಯಲಹಂಕದ ನೂತನ ಚಿಟ್ಟೆ ಉದ್ಯಾನವನ

6-bng

Bengaluru: ಬಸ್‌ ಚಾಲಕನ ಮೇಲೆ ಮಹಿಳೆ ಹಲ್ಲೆ

4-bng

Bengaluru: ಉದ್ಯಮಿಯ ಕಾರಿನಲ್ಲಿದ್ದ 50 ಲಕ್ಷ ಕದ್ದ ಚಾಲಕ; 4 ತಾಸಿನಲ್ಲಿ ಸೆರೆ

3-bng

Bengaluru: ಪತ್ನಿ, ಮಾವನ ಕಿರುಕುಳ: ಹೆಡ್‌ಕಾನ್‌ಸ್ಟೇಬಲ್‌ ಆತ್ಮಹತ್ಯೆ

5-bng

Bengaluru: ಟೆಕಿ ಅತುಲ್‌ ಆತ್ಮಹತ್ಯೆ ಕೇಸ್‌: ಕಾನೂನು ಸುಧಾರಣೆಗೆ ಆಗ್ರಹ

MUST WATCH

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

ಹೊಸ ಸೇರ್ಪಡೆ

12-butterfly-park

Bengaluru: ಕೈ ಬೀಸಿ ಕರೆಯುತ್ತಿದೆ ಯಲಹಂಕದ ನೂತನ ಚಿಟ್ಟೆ ಉದ್ಯಾನವನ

2

Mudbidri: ನಿಮ್ಮ ದೇಹ ಪ್ರಕೃತಿ ಉಚಿತ ಪರೀಕ್ಷೆ!

15-gruhalaxmi

Gruha Lakshmi Scheme ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿದ ಅತ್ತೆ-ಸೊಸೆ: ಸಚಿವೆ ಶ್ಲಾಘನೆ

1-shakti

Mukesh Khanna; ‘ಶಕ್ತಿಮಾನ್‌’ ಹಕ್ಕು ಮಾರಿದ್ರೆ ಅದು ಡಿಸ್ಕೋ ಡ್ರಾಮಾ ಆಗ್ತಿತ್ತು… 

1

Sullia: ಪಾಲನೆ ಆಗದ ವನ್‌ಸೈಡ್‌ ಪಾರ್ಕಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.