Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಕೃಷಿ ಮೇಳದ 2ನೇ ದಿನ ಬರೋಬ್ಬರಿ 7.60 ಲಕ್ಷ ಮಂದಿ ಭೇಟಿ ; ಮಳಿಗೆಗಳಲ್ಲಿ ಕೃಷಿ, ಯಂತ್ರೋಪಕರಣ ಮಾಹಿತಿ ಪಡೆದ ರೈತರು ; 1.25 ಕೋಟಿ ರೂ. ವಹಿವಾಟು

Team Udayavani, Nov 16, 2024, 1:00 PM IST

5-agri

ಬೆಂಗಳೂರು: ಜಿಕೆವಿಕೆಯಲ್ಲಿ ಕೃಷಿ ಮೇಳದ 2ನೇ ದಿನ ಶುಕ್ರವಾರ ಲಕ್ಷಾಂತರ ಮಂದಿ ಪಾಲ್ಗೊಂಡು ಕೃಷಿ, ಬೆಳೆ, ತೋಟಗಾರಿಕೆ ಬೆಳೆ, ಸಾವಯವ ಉತ್ಪನ್ನ, ನೀರಾವರಿ ಸಲಕರಣೆಗಳು, ಅತ್ಯಾಧುನಿಕ ಯಂತ್ರೋಪಕರಣಗಳ ಬಗ್ಗೆ ಉತ್ಸಾಹದಿಂದ ಮಾಹಿತಿ ಪಡೆದರು. ಸಾವಯವ ಉತ್ಪನ್ನ ಹಾಗೂ ಸಿರಿಧಾನ್ಯ ಉತ್ಪನ್ನಗಳ ಮಳಿಗೆಗಳಿಗೆ ಸಾರ್ವಜನಿಕರು ಮುಗಿ ಬಿದ್ದಿದ್ದರು. ಎರಡನೇ ದಿನದ ಕೃಷಿ ಮೇಳದಲ್ಲಿ 7.60 ಲಕ್ಷ ಸಾರ್ವಜನಿಕರು ಭಾಗಿಯಾಗಿದ್ದರು. ಇದರಲ್ಲಿ 13,611 ಜನ ಕೃಷಿ ವಿವಿಯ ರಿಯಾಯಿತಿ ಭೋಜನಾಲಯದಲ್ಲಿ ಊಟ ಮಾಡಿದ್ದು, 1.25 ಕೋಟಿ ರೂ. ವಹಿವಾಟಾಗಿದೆ. ಕೃಷಿ ಮೇಳದ ಮೊದಲ ದಿನ 3.78 ಲಕ್ಷಕ್ಕಿಂತ ಹೆಚ್ಚಿನ ಜನ ಪಾಲ್ಗೊಂಡಿದ್ದರು. ವಾರಾಂತ್ಯ ಶನಿವಾರ ಹಾಗೂ ಭಾನುವಾರು ಭಾರೀ ಸಂಖ್ಯೆಯಲ್ಲಿ ಜನರು ಭೇಟಿ ನೀಡುವ ಸಾಧ್ಯತೆ ಇದೆ.

ಸಾವಯವ ಮೇಳ: ಸದ್ಯ ಜನರೆಲ್ಲರೂ ಸಾವಯವ ಉತ್ಪನ್ನಗಳ ಮೊರೆ ಹೋಗಿದ್ದರಿಂದ ಮೇಳದ ಹಲವು ಕಡೆ ಸಾವಯವ ವಸ್ತುಗಳು ಕಂಡು ಬಂದವು. ಸಾವಯವ ಜೇನು ತುಪ್ಪ, ನೆಲ್ಲಿಕಾಯಿ ಜ್ಯೂಸ್‌, ಸಾವಯವ ವಸ್ತುವಿನಿಂದ ತಯಾರಿಸಿದ ಉತ್ಪನ್ನಗಳು ಹೀಗೆ ಹಲವು ರೀತಿಯ ಮಳಿಗೆಗಳು ಮೇಳದಲ್ಲಿದ್ದವು. ಜತೆಗೆ ಬೇವಿನ ಮರ, ತೆಂಗಿನ ಚಿಪ್ಪು, ಬಾಳೆ ನಾರಿನ ಉತ್ಪನ್ನಗಳು ನೋಡುಗರನ್ನು ಆಕರ್ಸಿಸಿದವು.

ಬೆಲ್ಲದಲ್ಲೂ ಹಲವು ಮಾದರಿ, ವಿಭಿನ್ನ ರುಚಿ: “ಮಂಡ್ಯ ಬೆಲ್ಲ ರೈತ ಉತ್ಪಾದಕ ಕಂಪನಿ’ಯಿಂದ ಹಲವು ಬಗೆಯ ಬೆಲ್ಲ ಮಾರಾಟ ಹಾಗೂ ಪ್ರದರ್ಶನವಿದೆ. ಇಲ್ಲಿ ಪುಡಿ ಬೆಲ್ಲ, ಬಕೆಟ್‌ ಬೆಲ್ಲ, ಅಚ್ಚು ಬೆಲ್ಲ, ಕುಲ್ಫಿ ಬೆಲ್ಲ, ಉಂಡೆ ಬೆಲ್ಲ ಮತ್ತು ಅಣಿ ಬೆಲ್ಲ ಎಂಬ ವಿಧಗಳಿವೆ. ಇದರಲ್ಲಿ ಪುಡಿ ಬೆಲ್ಲ ತಯಾರಿಕೆ ಸಮಯದಲ್ಲಿ ಹೆಚ್ಚು ಶಾಖ ನೀಡಿ ವಿಭಿನ್ನ ಮಾದರಿಯಲ್ಲಿ ತಯಾರಿಸಲಾಗಿದ್ದು, ರುಚಿಯಲ್ಲಿಯೂ ಭಿನ್ನವಾಗಿದೆ. ಬೆಲ್ಲ ತಯಾರು ಮಾಡುವಾಗ ಶಾಖದೊಂದಿಗೆ ಅದರ ಆಕೃತಿಯ ಮೇಲೂ ರುಚಿಯಲ್ಲಿ ಬದಲಾವಣೆಯಾಗುತ್ತದೆ ಎನ್ನುತ್ತಾರೆ ತಯಾರಕರು.

ಸಿರಿಧ್ಯಾನ್ಯದ್ದೇ ಜಗತ್ತು: ಉತ್ತಮ ಆರೋಗ್ಯ ಶೈಲಿಗೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಜನರೆಲ್ಲರೂ ಸಿರಿಧ್ಯಾನ ಮೊರೆ ಹೊಗುತ್ತಿರುವುದು ಸಾಮಾನ್ಯವಾಗಿದೆ. ಈ ಟ್ರೆಂಡ್‌ ಮೇಳದಲ್ಲಿ ಬಿಂಬಿತವಾಗಿದ್ದು, ಸಿರಿ ಧಾನ್ಯದಿಂದ ತಯಾರಿಸಿದ ತಿಂಡಿ, ಸಂಡಿಗೆ, ಹಪ್ಪಳದಂತಹ ಉತ್ಪನ್ನ ಭಾರೀ ಬೇಡಿಕೆ ಕಂಡು ಬಂತು. ರುಚಿಯಲ್ಲೂ ಯಾವುದೇ ರಾಜಿಯಾಗದೇ ಉತ್ತಮ ಉತ್ಪನ್ನಗಳನ್ನು ನೀಡುವ ಹತ್ತು ಹಲವು ಮಳಿಗೆಗಳು ಗ್ರಾಹಕರನ್ನು ಆಕರ್ಷಿಸಿದವು.

ಇಲಿ, ಹುಳು, ಚಿಟ್ಟೆ, ಪತಂಗಗಳ ಪ್ರದರ್ಶನ

ವಿವಿಯ ಎನಾಟೆಮಿಯ ವಿಭಾಗದಿಂದ ವಿವಿಧ ಬಗೆಯ ಪರಾಗಸ್ಪರ್ಶ ಕೀಟಗಳು, ಬೇರುಹುಳು, ಚಿಟ್ಟೆ, ಪತಂಗ ಹಾಗೂ ಜೇನು ಹುಳುಗಳ ಸಂಗ್ರಹವನ್ನು ಪ್ರದರ್ಶನಕ್ಕಿಡಲಾಗಿದೆ. ವಿವಿಯ ವಿದ್ಯಾರ್ಥಿಗಳು ಇದರ ಬಗ್ಗೆ ಮಾಹಿತಿ ನೀಡುತ್ತಿದ್ದು, ಹೊಸ ಬಗೆಯ ಕೀಟ ಪ್ರಪಂಚ ತೆರೆದು ಕೊಂಡಿದೆ. ಜತೆಗೆ ವಿವಿಧ ಪ್ರಕಾರದ ಜೀವಂತ ಇಲಿಗಳು ವೀಕ್ಷಕರನ್ನು ಅಚ್ಚರಿಗೊಳಿಸಿತು.

ಗಾಣದ ಎಣ್ಣೆಗೆ ಜನರ ಮೊರೆ

ಇತ್ತೀಚಿಗೆ “ಆರೋಗ್ಯವೇ ಭಾಗ್ಯ’ ಎನ್ನುವ ಮಾತಿಗೆ ಹೆಚ್ಚು ಒತ್ತು ಬರುತ್ತಿದ್ದು, ಸಂಸ್ಕರಿತ ಅಡುಗೆ ಎಣ್ಣೆಗಳ ಬದಲಾಗಿ ಮೊದಲು ಬಳಸುತ್ತಿದ್ದ ಗಾಣದ ಎಣ್ಣೆಗೆ ಹೆಚ್ಚು ಜನ ಮೊರೆ ಹೋದದ್ದನ್ನು ಮೇಳದಲ್ಲಿ ಕಂಡು ಬಂತು. ಗಾಣದ ಎಣ್ಣೆಯ ಅಂಗಡಿಗಳ ಜತೆ ಜತೆಗೆ ಉತ್ತಮ ಮಾರುಕಟ್ಟೆಯೂ ದೊರಕಿದೆ. ಅಲ್ಲದೆ ಸುಲಭವಾಗಿ ಧಾನ್ಯಗಳಿಂದ ಎಣ್ಣೆ ತೆಗೆಯುವ ಯಂತ್ರಗಳ ಮಾರಾಟವೂ ಕೃಷಿ ಮೇಳದಲ್ಲಿದೆ.

ಅಂಗೈಯಲ್ಲಿ ಹವಾಮಾನ ಮಾಹಿತಿ

ಕೃಷಿ ವಿಶ್ವವಿದ್ಯಾಲಯ ಹಾಗೂ ಭಾರ ತೀಯ ಹವಾಮಾನ ಇಲಾಖೆಯ ಸಹಭಾಗಿತ್ವದಲ್ಲಿ ಹವಾಮಾನ ಮುನ್ಸೂಚನೆ ಮತ್ತು ಎಚ್ಚರಿಕೆಯ ಸಂದೇಶ ನೀಡಿವ “ಮೌಸಮ್‌ ಆ್ಯಪ್‌’, ಗುಡುಗು ಮಿಂಚಿನ ಮಾಹಿತಿ ಯನ್ನು ನೀಡುವ “ದಾಮಿನಿ’ ಆ್ಯಪ್‌ ರೈತರ ಗಮನ ಸೆಳೆಯಿತು. ಜೊತೆಗೆ ಗಾಳಿಯ ವೇಗ, ದಿಕ್ಕು ಅಳೆಯುವ ಮಾಪನ, ಮಣ್ಣಿನ ಉಷ್ಣತಾ ಮಾಪಕ, ಸೂರ್ಯ ಶಾಖದ ಅಳತೆ ಮಾಪನ ಹಾಗೂ ಮಳೆ ಪ್ರಮಾಣ ಅಳೆಯುವ ಸಾಧನದ ಪ್ರಾತ್ಯಕ್ಷಿಕೆ ನೋಡುಗರನ್ನು ಸೆಳೆಯಿತು.

ಸ್ವಯಂಚಾಲಿತ ಕಳೆ ನಾಶಕ ಯಂತ್ರ

ಕೃಷಿ ಮೇಳದಲ್ಲಿ ಅತ್ಯಾಧುನಿಕ ಯಂತ್ರಗಳು ಪ್ರದರ್ಶನಗೊಳ್ಳುತ್ತಿವೆ. ಯುಎನ್‌ಜಿ ಆಗ್ರೊಸ್‌ ಸಂಸ್ಥೆಯು ಹೊಸ ಮಾದರಿಯ ಕಳೆ ನಾಶಕ ಯಂತ್ರಗಳನ್ನು ಅಭಿವೃದ್ಧಿಪಡಿಸಿದೆ. ಕೀಟನಾಶದ ಬದಲಾಗಿ ಈ ಯಂತ್ರವನ್ನು ಸುಲಭವಾಗಿ ಬಳಸಬಹುದು ಎನ್ನುತ್ತಾರೆ ಸಂಶೋಧಕರು. ಈ ಮೊದಲು ಈ ಯಂತ್ರ ಮಾರುಕಟ್ಟೆಯಲ್ಲಿತ್ತು, ಆದರೆ ಮಾನವ ಚಾಲಿತವಾಗಿತ್ತು. ಇದೇ ಯಂತ್ರವನ್ನು ಸ್ವಯಂ ಚಾಲಿತವಾಗಿ ಮಾರ್ಪಾಡು ಮಾಡಲು ಪ್ರೋತ್ಸಾಹ ದೊರಕಿದ್ದರಿಂದ ಹೊಸ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಕಳೆ ಕೀಳುವುದು, ಬೆಳೆಗಳಿಗೆ ಸಾಲು ಹೊಡೆಯಲು, ಕಾಲುವೆ ನಿರ್ಮಿಸಲು. ಬದು ನಿರ್ಮಿಸಲು ಇದನ್ನು ಉಪಯೋಗಿಸಬಹುದಾಗಿದ್ದು, 50 ಮಾದರಿಯ ಟೂಲ್ಸ್‌ಗಳು ಲಭ್ಯವಿದೆ. ಒಂದು ಲೀಟರ್‌ ಪೆಟ್ರೋಲ್‌ ಹಾಕಿದರೆ 1 ಗಂಟೆ ಕೆಲಸ ಮಾಡಬಹುದು. 1 ಎಕರೆ ಜಾಗವನ್ನು 3 ಗಂಟೆಯಲ್ಲಿ ಕಳೆ ಕೀಳಬಹುದಾಗಿದ್ದು, ಇದರ ಬೆಲೆ 25 ಸಾವಿರ ರೂ. ಇದೆ. ರೈತರು ಸುಲಭವಾಗಿ ಇದನ್ನು ಬಳಸಬಹುದಾಗಿದ್ದು 20 ಕೆ.ಜಿ. ಭಾರವಾಗಿದೆ.

ಟಾಪ್ ನ್ಯೂಸ್

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.