Bengaluru: ಕಾವೇರಿ ನೀರು 6ನೇ ಹಂತದ ಯೋಜನೆಗೆ ಸಿದ್ಧತೆ
ಸಮಗ್ರ ವರದಿ ತಯಾರಿಸಲು ಟೆಂಡರ್ ; 7,200 ಕೋಟಿ ರೂ. ಮೊತ್ತದ ಯೋಜನೆ
Team Udayavani, Nov 1, 2024, 3:53 PM IST
ಬೆಂಗಳೂರು: ಕಾವೇರಿ 5ನೇ ಹಂತದ ಯೋಜನೆಯು ಪೂರ್ಣಗೊಳ್ಳುತ್ತಿದ್ದಂತೆ ಇದೀಗ ಕಾವೇರಿ 6ನೇ ಹಂತದ ಯೋಜನೆಗೆ ಜಲಮಂಡ ಳಿಯು ಸಿದ್ಧತೆ ನಡೆಸಿದೆ. ಸಮಗ್ರ ಯೋಜನಾ ವರದಿ(ಡಿಪಿಆರ್) ಪ್ರಕ್ರಿಯೆ ಮುಗಿದ ಬಳಿಕ ಯೋಜನೆ ಪ್ರಾರಂಭವಾಗಲಿದೆ.
ಕಾವೇರಿ 6ನೇ ಹಂತದ ಯೋಜನೆಯ ಡಿಪಿಆರ್ ಪ್ರಕ್ರಿಯೆ ನಡೆಯುತ್ತಿದೆ. ಯೋಜನೆ ಕುರಿತು ಪ್ಲ್ರಾನ್ ರೂಪಿಸಲು ಡಿಪಿಆರ್‌ಗಾಗಿ ಟೆಂಡರ್ ಕರೆಯಲಾಗಿದೆ. ಟೆಂಡರ್ ಪಡೆಯುವ ಕಂಪನಿಯು ಡಿಪಿಆರ್ ಯೋಜನೆ ಸಿದ್ಧಪಡಿಸಲಿದೆ. 6ನೇ ಹಂತದ ಯೋಜನೆಗೆ ನಿಖರವಾಗಿ ಎಷ್ಟು ದುಡ್ಡು ಖರ್ಚಾಗಲಿವೆ, ಯೋಜನೆ ಹೇಗೆ ಮಾಡಬಹುದು ಎಂಬಿತ್ಯಾದಿ ವಿಚಾರ ಗಳು ಡಿಪಿಆರ್ ಪ್ರಕ್ರಿಯೆ ಮುಗಿದ ಬಳಿಕ ತಿಳಿದು ಬರಲಿವೆ. ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ 6ನೇ ಹಂತದ ಕಾವೇರಿ ಯೋಜನೆಗೆ ಸುಮಾರು 7,200 ಕೋಟಿ ರೂ. ತಗುಲುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.
6ನೇ ಹಂತದಿಂದ ಎಲ್ಲೆಲ್ಲಿ ಕಾವೇರಿ ನೀರು?: ಬೆಂಗಳೂರು ಅಭಿವೃದ್ಧಿ ಪ್ರಾಧಿ ಕಾರ(ಬಿಡಿಎ) ವ್ಯಾಪ್ತಿಗೆ ಬರುವ ಶಿವರಾಮ ಕಾರಂತ ಬಡಾವಣೆ, ನಾಡಪ್ರಭು ಕೆಂಪೇಗೌಡ ಬಡಾವಣೆ, ದೇವನಹಳ್ಳಿ, ಹೊಸಕೋಟೆ, ಆನೇಕಲ್, ಬಿಡದಿ ಹಾಗೂ ನೆಲಮಂಗಲ ಪ್ರದೇಶಗಳ ಸುತ್ತ-ಮುತ್ತ ಕಾವೇರಿ ನೀರು ಪೂರೈಕೆಯಾಗಲಿದೆ. ಇದರಿಂದ ಸುಮಾರು 6 ಟಿಎಂಸಿ ಹೆಚ್ಚುವರಿ ಕಾವೇರಿ ನೀರು ನಗರಕ್ಕೆ ಪೂರೈಕೆಯಾಗಲಿವೆ. ನಗರಕ್ಕೆ ಈ ಹಿಂದೆ 1,450 ಎಂಎಲ್‌ಡಿ ಕಾವೇರಿ ನೀರು ಪೂರೈಕೆ ಯಾಗುತ್ತಿತ್ತು.
ಇತ್ತೀಚೆಗೆ ಚಾಲನೆ ಪಡೆದುಕೊಂಡಿರುವ ಕಾವೇರಿ 5ನೇ ಹಂತದ ಯೋಜನೆಯಿಂದ ಹೆಚ್ಚುವರಿ ಯಾಗಿ 775 ಎಂಎಲ್‌ಡಿಯಷ್ಟು ನೀರು ಪೂರೈಸುವ ಸಾಮರ್ಥ್ಯವಿದೆ. ಆದರೆ, ಈ ಯೋಜನೆಯಡಿ ಕಾವೇರಿ ನೀರಿನ ಸಂಪರ್ಕ ಪಡೆದಿರುವ 53 ಗ್ರಾಮಗಳ 55 ಸಾವಿರ ಕಡೆಗಳಿಗೆ 150 ಎಂಎಲ್‌ಡಿ ನೀರು ಹರಿಸಲಾಗುತ್ತಿದೆ. 6ನೇ ಹಂತದ ಯೋಜನೆಯಿಂದ ಹೆಚ್ಚುವರಿಯಾಗಿ 500 ಎಂಎಲ್‌ಡಿ ಕಾವೇರಿ ನೀರು ನಗರಕ್ಕೆ ಹರಿದು ಬರಲಿದೆ. ಈ ಯೋಜನೆಯಿಂದ ನಗರದ ಹೊರ ವಲಯದ ಭಾಗಗಳಲ್ಲಿ ಬೇಸಿಗೆಯಲ್ಲಿ ಕಾಡುತ್ತಿರುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್
Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.