Bengaluru: ತಂಗಿ ಮನೆಯಲ್ಲಿ 5.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಅಕ್ಕ!
ಕ್ಯಾಮೆರಾ ಸುಳಿವು ಆಧರಿಸಿ ಬಂಧಿಸಿದ ಆಡುಗೋಡಿ ಪೊಲೀಸರು
Team Udayavani, Aug 31, 2024, 12:04 PM IST
ಬೆಂಗಳೂರು: ತಂಗಿ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಅಕ್ಕನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಶಿಕಲಾ (30) ಬಂಧಿತ ಆರೋಪಿ.
ಈಕೆಯಿಂದ 5.50 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ಆಡುಗೋಡಿ ವಿಎಸ್ ಆರ್ ಬಡಾವಣೆಯಲ್ಲಿ ವಾಸವಾಗಿರುವ ಚಂದ್ರಿಕಾ ಎಂಬುವವರು ಪಿ.ಜಿ. ಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಪತಿ ಶರವಣ ಟಾಟಾ ಏಸ್ ವಾಹನ ಚಾಲಕರಾಗಿದ್ದಾರೆ. ಕೆಲ ದಿನಗಳ ಹಿಂದೆ ಪತಿಗೆ ಅನಾರೋಗ್ಯ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಎಲೆಕ್ಟ್ರಾನಿಕ್ ಸಿಟಿಯ ದೊಡ್ಡ ತೂಗೂರಿನಲ್ಲಿರುವ ಅಕ್ಕ ಶಶಿಕಲಾ ಮನೆಗೆ ವಿಶ್ರಾಂತಿ ಪಡೆಯಲು ತಂಗಿ ಚಂದ್ರಿಕಾ ಆ.15ರಂದು ಹೋಗಿದ್ದರು. ಈ ಮಧ್ಯೆ ಔಷಧ ತರುವಂತೆ ಅಕ್ಕ ಶಶಿಕಲಾಗೆ ತಂಗಿ ಚಂದ್ರಿಕಾ ಸೂಚಿಸಿ ಸ್ಕೂಟರ್‌ನ ಕೀ ನೀಡಿದ್ದಳು. ಕೀ ಬಂಚ್‌ನಲ್ಲಿ ಮನೆಯ ಕೀ ಇರುವುದನ್ನು ಶಶಿಕಲಾ ಗಮನಿಸಿದ್ದಳು. ದ್ವಿಚಕ್ರವಾಹನವನ್ನು ಅಂಗಡಿಗೆ ಹೋಗುವ ಬದಲು ತಂಗಿ ಚಂದ್ರಿಕಾಳ ಆಡುಗೋಡಿಯಲ್ಲಿರುವ ಮನೆಯತ್ತ ತಿರುಗಿಸಿದ್ದಳು.
ಬೀರು ಒಡೆದು: ಮಾರ್ಗಮಧ್ಯೆ ಅನುಮಾನ ಬಾರದಂತೆ ಶಶಿಕಲಾ ದೊಡ್ಡಮ್ಮನನ್ನೂ ಸಹ ಸ್ಕೂಟರ್ ನಲ್ಲಿ ಕೂರಿಸಿಕೊಂಡು ತೆರಳಿದ್ದಳು. ತಂಗಿ ಮನೆಗೆ ಸುಮಾರು 100 ಮೀಟರ್ ದೂರವಿರುವಾಗ ದೊಡ್ಡಮ್ಮನನ್ನ ಇಳಿಸಿದ್ದಳು. ಬಳಿಕ ತಂಗಿಯ ಮನೆಯ ಬೀಗ ತೆಗೆದು ಒಳ ನುಗ್ಗಿ ಬೀರುವಿನ ಕೀ ಹುಡುಕಾಡಿದ್ದಳು. ಅದು ಸಿಗದೇ ಇದ್ದಾಗ ಬೀರು ಒಡೆದು 74 ಗ್ರಾಂ ಚಿನ್ನ ಹಾಗೂ 354 ಗ್ರಾಂ ಬೆಳ್ಳಿ ಆಭರಣ ಕದ್ದಿದ್ದಾಳೆ.
ಇತ್ತ ಶಶಿಕಲಾ ಮನೆಯಿಂದ ಆ.20ರಂದು ತನ್ನ ಮನೆಗೆ ಬಂದ ತಂಗಿ ಚಂದ್ರಿಕಾ ಬೀರು ಪರಿಶೀಲಿಸಿದಾಗ ಕಳ್ಳತನವಾಗಿರುವುದು ಕಂಡು ಬಂದಿತ್ತು. ಪೊಲೀಸರು, ಚಂದ್ರಿಕಾ ಮನೆಯ ಸುತ್ತ-ಮುತ್ತ ಅಳವಡಿಸಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಅಕ್ಕ ಬಂದು ಹೋಗಿರುವ ಸುಳಿವು ಸಿಕ್ಕಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಶಶಿಕಲಾ ಒಪ್ಪಿಕೊಂಡಿ ದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.