Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್‌ ಬಸ್‌’

ನಗರದಲ್ಲಿ ಐಟಿಸಿ ಸನ್‌ಫೀಸ್ಟ್ ಡಾರ್ಕ್‌ ಫ್ಯಾಂಟಸಿಯಿಂದ "ಲಿಲ್‌ ಬಿಗ್‌ ಫ್ಯಾಂಟಸಿ ಸೈನ್ಸ್‌ ಬಸ್‌' ಬಿಡುಗಡೆ‌

Team Udayavani, Sep 28, 2024, 3:23 PM IST

12-bng

ಬೆಂಗಳೂರು: ಬಾಹ್ಯಾಕಾಶ, ಪ್ರಕೃತಿ ಹಾಗೂ ವಿಜ್ಞಾನ ಲೋಕದ ಕೌತುಕಗಳನ್ನು ಕಣ್ತುಂಬಿಕೊಳ್ಳುವ ಮೂಲಕ ತಮ್ಮ ಜ್ಞಾಪಕ ಶಕ್ತಿ, ಆಲೋಚನಾ ಶಕ್ತಿಯನ್ನು ವೃದ್ಧಿಸಿ ಕೊಳ್ಳಲು ಸಹಾಯವಾಗುವ ನಿಟ್ಟಿನಲ್ಲಿ ಶಾಲಾ ಮಕ್ಕಳ ಬಳಿಯೇ ಬರುತ್ತಿದೆ “ಲಿಲ್‌ ಬಿಗ್‌ ಫ್ಯಾಂಟಸಿಯ ಸೈನ್ಸ್‌ ಬಸ್‌’… ‌

ಐಟಿಸಿ ಸನ್‌ಫೀಸ್ಟ್‌ ಡಾರ್ಕ್‌ ಫ್ಯಾಂಟಸಿಯಿಂದ ತಯಾರಾಗಿರುವ ಈ ವಿನೂತನ ಸೈನ್ಸ್‌ ಬಸ್‌ ಅನ್ನು ಇಸ್ರೋ ಮಾಜಿ ನಿರ್ದೇಶಕ ಪ್ರಕಾಶ್‌ ರಾವ್‌, ಬಾಲಿವುಡ್‌ ನಟಿ ಮಂದಿರಾ ಬೇಡಿ, ನಿಮ್ಹಾನ್ಸ್‌ನ ಡಿಎಂ ಡಾ. ಮೇಘಾ ಮಹಾಜನ್‌, ಐಟಿಸಿ ಲಿಮಿಟೆಡ್‌ ಬಿಸ್ಕೆಟ್ಸ್‌ ಮತ್ತು ಕೇಕ್ಸ್ ಕ್ಲಸ್ಟರ್‌, ಫುಡ್ಸ್ ವಿಭಾಗದ ಸಿಒಒ ಅಲಿ ಹ್ಯಾರಿಸ್‌ ಶೇರ್‌ ಅವರು “ಸೈನ್ಸ್‌ ಬಸ್‌’ ಅನ್ನು ನಗರದ ಸೆಂಟ್‌ ಜೋಸೆಫ್ ಹೈಸ್ಕೂಲ್‌ ಮೈದಾನದಲ್ಲಿ ಅನಾವರಣಗೊಳಿಸಿದರು.

ಈ ಕುರಿತು ಮಾತನಾಡಿದ ಮಾಜಿ ಇಸ್ರೋ ನಿರ್ದೇಶಕ ಪ್ರಕಾಶ್‌ ರಾವ್‌, ಮಕ್ಕಳಲ್ಲಿ ಸೃಜನಶೀಲತೆ ಯನ್ನು ಉತ್ತೇಜಿಸಿ ಅವರ ಕಲ್ಪನೆಗೆ ಜೀವ ನೀಡುವ ಉದ್ದೇಶದಿಂದ ಈ ಸೈನ್ಸ್‌ ಬಸ್‌ನನ್ನು ಐಟಿಸಿ ತಂಡ ಬಿಡುಗಡೆ ಮಾಡಿದೆ ಎಂದರು. ‌

ಐಟಿಸಿ ಲಿಮಿಟೆಡ್‌ ಬಿಸ್ಕೆಟ್ಸ್‌ ಮತ್ತು ಕೇಕ್ಸ್ ಕ್ಲಸ್ಟರ್‌, ಫುಡ್ಸ್ ವಿಭಾಗದ ಸಿಒಒ ಅಲಿ ಹ್ಯಾರಿಸ್‌ ಶೇರ್‌ , ಮಕ್ಕ ಳ ಆಲೋಚನೆಗಳಿಗೆ ತಕ್ಕಂತೆ ಐಟಿಸಿ ತಂಡ ಈ ವಿನೂತನ ಹಾಗೂ ಅತ್ಯಾಧುನಿಕ ತಂತ್ರಜ್ಞಾನದಿಂದ ಸೈನ್ಸ್‌ ಬಸ್‌ ತಯಾರಿಸಿದೆ ಎಂದರು.

ಇದೇ ವೇಳೆ ಮಾತನಾಡಿದ ಬಾಲಿವುಡ್‌ ನಟಿ ಮಂದಿರಾ ಬೇಡಿ, ನನಗೆ 8 ವರ್ಷದ ಮಗಳಿದ್ದಾಳೆ. ಅವಳು ಒಂದೊಂದು ಕಲ್ಪನೆಯಲ್ಲಿ ಇರುತ್ತಾಳೆ. ಒಂದು ದಿನ ಪೈಲೆಟ್‌, ಮತ್ತೂಂದು ದಿನ ಚೆಫ್ ಆಗಬೇಕು ಎನ್ನುತ್ತಾಳೆ. ಹೀಗೆ ಮಕ್ಕಳ ಕಲ್ಪನೆಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತವೆ. ಅವರ ಕಲ್ಪನೆಗಳಿಗೆ ಐಟಿಸಿ ತಂಡ ರೆಕ್ಕೆ ಕಟ್ಟಿದಂತಾಗಲಿದೆ ಎಂದರು. ಸೇಂಟ್‌ ಜೋಸೆಫ್‌ ಶಾಲೆ ಪ್ರಾಂಶುಪಾಲರು ರೋಹನ್‌ ಡಿ ಅಲ್ಮೇಡಾ ಇತರರಿದ್ದರು.

ನಾಸಾ ಭೇಟಿಗೆ ಅವಕಾಶ

ಸೈನ್ಸ್‌ ಬಸ್‌ನಲ್ಲಿ ಮಕ್ಕಳು ತಮ್ಮ ಆಸಕ್ತಿದಾ ಯಕ ವಿಚಾರ ಹಾಗೂ ಕಲೆಯನ್ನು ಪ್ರದರ್ಶಿ ಸಬಹುದು. ಯಾವ ಮಗುವಿನ ಕಲ್ಪನೆಯು ಹೆಚ್ಚು ವಿಭಿನ್ನ ಹಾಗೂ ವಿಶೇಷವಾಗಿರುತ್ತ ದೆಯೋ ಆ ಆಯ್ದ ಮಕ್ಕಳನ್ನು ನಾಸಾಗೆ ಭೇಟಿ ನೀಡುವ ಅವಕಾಶವನ್ನು ಐಟಿಸಿ ಡಾರ್ಕ್‌ ಫ್ಯಾಂಟಸಿ ತಂಡ ಮಾಡಲಿದೆ. ಪ್ರಸ್ತು ತ ಬೆಂಗಳೂರಿನಲ್ಲಿ ನೂತನ ಬಸ್‌ಗೆ ಚಾಲನೆ ಸಿಕ್ಕಿದ್ದು, ಈ ಬಸ್‌ ಇಡೀ ದೇಶಾ ದ್ಯಂತ ಎಲ್ಲೆ ಡೆ ಸಂಚರಿಸಿ, ಕೋಟ್ಯಂತರ ಮಕ್ಕಳ ಕ್ರಿಯಾ ತ್ಮಕತೆ ಹಾಗೂ ಕಲ್ಪನೆಗೆ ಸಾಕ್ಷಿಯಾಗಲಿದೆ.

ಸೈನ್ಸ್‌ ಬಸ್‌ನ ವಿಶೇಷತೆ

ಈ ಬಸ್‌ ಹಲವು ವಿಶೇಷ ಹಾಗೂ ಕೌತುಕದಿಂದ ಕೂಡಿದೆ. ಈ ಬಸ್‌ನಲ್ಲಿ ವಿಸ್ತಾರವಾದ ಸಂವಾದಾತ್ಮಕ ಪರದೆ ಇದ್ದು, ಅತ್ಯಾಧುನಿಕ ತಂತ್ರಜ್ಞಾನದ ಸಂಯೋಜನೆಯಿಂದ ನಡೆಸಲ್ಪಡುತ್ತದೆ. ಇದರಲ್ಲಿ ಮಕ್ಕಳ ತಮ್ಮ ಕೈಯಿಂದ ಬಿಡಿಸಿದ ಚಿತ್ರ ಅಥವಾ ಪಾತ್ರವು ರೋಮಾಂಚಕ ಡಿಜಿಟಲ್‌ ರಚನೆಗಳಾಗಿ ಪರಿವರ್ತನೆಗೊಳ್ಳಲಿದೆ. ಮಕ್ಕಳು ಪೇಪರ್‌ ಮೇಲೆ ಬರೆದ ಈ ಕಲಾಕೃತಿಯನ್ನು ಸ್ಕ್ಯಾನ್‌ ಮಾಡಿದ ನಂತರ, ಅವರ ಪಾತ್ರಗಳು ಅಥವಾ ಕಲಾಕೃತಿಗಳು ಸ್ಪೇಸ್‌ ಶಿಪ್‌ನಲ್ಲಿ ಡಿಜಿಟಲ್‌ ಆಗಿ ರೂಪದಲ್ಲಿ 3ಡಿ ಸಂವಾದಾತ್ಮಕ ಅಕ್ಷರಗಳಾಗಿ ಪ್ರದರ್ಶನಗೊಳ್ಳಲಿದೆ.

ಟಾಪ್ ನ್ಯೂಸ್

Basangouda Patil Yatnal

BJP: ಹೈಕಮಾಂಡ್ ಅನುಮತಿಸಿದರೆ ಬಸವಕಲ್ಯಾಣದಿಂದ ಬೆಂಗಳೂರಿಗೆ ಪಾದಯಾತ್ರೆ: ಶಾಸಕ ಯತ್ನಾಳ

Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ

Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ

Nirmala Sitharaman

Bengaluru; ಚುನಾವಣಾ ಬಾಂಡ್‌ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್‌ ವಿರುದ್ದ ಎಫ್‌ಐಆರ್

Gurudath Kamath: ಖ್ಯಾತ ಫೋಟೋಗ್ರಾಫರ್ ಗುರುದತ್ ಕಾಮತ್ ನಿಧನ

Gurudath Kamath: ಖ್ಯಾತ ಫೋಟೋಗ್ರಾಫರ್ ಗುರುದತ್ ಕಾಮತ್ ನಿಧನ

ಅವರು-ಇವರು ಕಳ್ಳರು ಎನ್ನೋದು ಬೇಡ, ರಾಜೀನಾಮೆ ಕೊಟ್ಟು ನೀವು ಸ್ವಚ್ಛವಾಗಿರಿ: ಯತ್ನಾಳ್

MUDA; ಅವರು-ಇವರು ಕಳ್ಳರು ಎನ್ನೋದು ಬೇಡ, ರಾಜೀನಾಮೆ ಕೊಟ್ಟು ನೀವು ಸ್ವಚ್ಛವಾಗಿರಿ: ಯತ್ನಾಳ್

ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಮತ್ತೋರ್ವನ ಬಂಧನ

Hubli: ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಮತ್ತೋರ್ವನ ಬಂಧನ

Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ

Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-bng

Bengaluru: ಸಾಲ ತೀರಿಸಲು ಸರ ಕದಿಯುತ್ತಿದ್ದ ಇಬ್ಬರ ಬಂಧನ

10-bng

Bengaluru: ಇಬ್ಬರು ಡ್ರಗ್ಸ್‌ ಪೆಡ್ಲರ್ ಸೆರೆ: 51 ಕೆ.ಜಿ. ಗಾಂಜಾ ಜಪ್ತಿ

9–bng

Bengaluru: ಮೋಜಿನ ಜೀವನಕ್ಕೆ ಸರ ಕದೀತಿದ್ದ ಯುವಕನ ಸೆರೆ

8-bng

Bengaluru: ವಾಹನ ಕಳ್ಳನ ಬಂಧನ: 30 ದ್ವಿಚಕ್ರ ವಾಹನ ಜಪ್ತಿ

7-bng

Bengaluru: ರಾತ್ರಿ ವೇಳೆ ಮನೆ ಕಳವು: ಇಬ್ಬರ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Basangouda Patil Yatnal

BJP: ಹೈಕಮಾಂಡ್ ಅನುಮತಿಸಿದರೆ ಬಸವಕಲ್ಯಾಣದಿಂದ ಬೆಂಗಳೂರಿಗೆ ಪಾದಯಾತ್ರೆ: ಶಾಸಕ ಯತ್ನಾಳ

Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ

Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ

Nirmala Sitharaman

Bengaluru; ಚುನಾವಣಾ ಬಾಂಡ್‌ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್‌ ವಿರುದ್ದ ಎಫ್‌ಐಆರ್

Gurudath Kamath: ಖ್ಯಾತ ಫೋಟೋಗ್ರಾಫರ್ ಗುರುದತ್ ಕಾಮತ್ ನಿಧನ

Gurudath Kamath: ಖ್ಯಾತ ಫೋಟೋಗ್ರಾಫರ್ ಗುರುದತ್ ಕಾಮತ್ ನಿಧನ

moksha Kushal recent photoshoot

Moksha Kushal: ಹಾಟ್‌ ಫೋಟೋಶೂಟ್‌ನಲ್ಲಿ ಮೋಕ್ಷಾ ಮಿಂಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.