Bengaluru: ಕದ್ದ ನೆಕ್ಲೇಸ್ ಧರಿಸಿ ವಾಟ್ಸ್ಆ್ಯಪ್ ಡಿಪಿಯಲ್ಲಿ ಹಾಕಿ ಸಿಕ್ಕಿ ಬಿದ್ದಳು!
ಎಚ್‌ಎಎಲ್‌ನಲ್ಲಿ ಕೆಲಸಕ್ಕಿದ್ದ ಮನೆಯಲ್ಲಿ 80 ಗ್ರಾಂ ನೆಕ್ಲೇಸ್ ಕಳ್ಳತನ ; ಮಾಲೀಕರು ಆಕೆಯ ವಾಟ್ಸ್‌ಆ್ಯಪ್ ಡಿಪಿ ನೋಡಿದಾಗ ಕೃತ್ಯ ಬೆಳಕಿಗೆ
Team Udayavani, Aug 10, 2024, 11:48 AM IST
ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕದ್ದ ಚಿನ್ನದ ನೆಕ್ಲೇಸ್ ಧರಿಸಿ ವಾಟ್ಸ್‌ಆ್ಯಪ್ ಡಿಪಿಗೆ ಫೋಟೋ ಹಾಕಿದ ಮನೆಕೆಲಸದಾಕೆ ಎಚ್‌ಎಎಲ್ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, 5 ಲಕ್ಷ ರೂ. ಮೌಲ್ಯದ 80 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ.
ಹೊಸಪೇಟೆ ಮೂಲದ ಮಾರತ್ತಹಳ್ಳಿಯ ರೇಣುಕಾ (38) ಬಂಧಿತೆ.
ಮಾರತ್ತಹಳ್ಳಿಯ ಅಪಾರ್ಟ್‌ಮೆಂಟ್‌ನ ಫ್ಲಾಟ್ ವೊಂದರಲ್ಲಿ ರೇಣುಕಾ ಹಲವು ತಿಂಗಳುಗಳಿಂದ ಮನೆಗೆಲಸ ಮಾಡುತ್ತಿದ್ದಳು. 2023ರ ನವೆಂಬರ್ 12ರಂದು ಮನೆ ಮಾಲೀಕರ ಗಮನಕ್ಕೆ ಬಾರದಂತೆ ಕಬೋರ್ಡ್‌ನಲ್ಲಿ ಇಟ್ಟಿದ್ದ ಚಿನ್ನದ ನೆಕ್ಲೇಸ್ ಅನ್ನು ಕದ್ದಿದ್ದಳು.
ಕಳೆದ ಮಾರ್ಚ್ 29ರಂದು ಮಾಲೀಕರು ನೋಡಿದಾಗ ನೆಕ್ಲೇಸ್ ಇಲ್ಲದಿರುವುದು ಕಂಡು ಆತಂಕಕ್ಕೊಳಗಾಗಿದ್ದರು. ಮನೆಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸೇರಿದಂತೆ ನಾಲ್ವರು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿ ಮಾಲೀಕರು ಎಚ್‌ಎಎಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ನಾಲ್ವರು ಕೆಲಸಗಾರರನ್ನು ಠಾಣೆಗೆ ಕರೆಸಿಕೊಡು ವಿಚಾರಣೆ ಮಾಡಿದ್ದರೂ ಕಳವು ಮಾಡಿರುವ ಸುಳಿವು ಸಿಕ್ಕಿರಲಿಲ್ಲ.
ಇದಾದ ಹಲವಾರು ತಿಂಗಳು ಕಳೆದ ನಂತರ ರೇಣುಕಾ ಕದ್ದ ನೆಕ್ಲೇಸ್ ಧರಿಸಿಕೊಂಡು ಫೋಟೋ ತೆಗೆಸಿ ಅದನ್ನು ತನ್ನ ವಾಟ್ಸಾಪ್ ಡಿಪಿಗೆ ಹಾಕಿಕೊಂಡಿದ್ದಳು. ಇದನ್ನು ಗಮನಿಸಿದ ಮನೆ ಮಾಲೀಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ರೇಣುಕಾಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.