Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!
ತ್ಯಾಜ್ಯ 2 ತಿಂಗಳಲ್ಲಿ ಗೊಬ್ಬರ ; ಕೃಷಿ ಕೀಟ ಸಂಪನ್ಮೂಲ ಬ್ಯೂರೋದಿಂದ ಸಂಶೋಧನೆ
Team Udayavani, Nov 16, 2024, 2:30 PM IST
ಬೆಂಗಳೂರು: ತ್ಯಾಜ್ಯದ ಜೈವಿಕ ವಿಘಟನೆಗೆ ಸವಾ ಲಾಗಿರುವ ಹೊತ್ತಲ್ಲಿ ಕಡಿಮೆ ಖರ್ಚಿನಲ್ಲಿ ಕಪ್ಪು ಸೈನಿಕ ನೊಣದಿಂದಲೇ (ಬ್ಲಾಕ್ ಸೋಲ್ಜರ್ ಫ್ಲೈ) ತ್ಯಾಜ್ಯ ವನ್ನು ಪೋಷಕಾಂಶವುಳ್ಳ ಗೊಬ್ಬರವಾಗಿಸುವ ವಿಧಾನ ವನ್ನು ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ಸಂಶೋಧನೆ ಮೂಲಕ ಅಭಿವೃದ್ಧಿಪಡಿಸಿದೆ.
ಕಪ್ಪು ಸೈನಿಕ ನೊಣವು ಒಂದು ಕೀಟವಾಗಿದ್ದು ಪ್ಲಾಸ್ಟಿಕ್, ಗಾಜು ಹೊರತುಪಡಿಸಿ ಹಣ್ಣು , ತರಕಾರಿ, ಮಾಂಸ ಸೇರಿದಂತೆ ಯಾವುದೇ ಕೃಷಿ ಸಂಬಂಧಿಸಿದ ಹಸಿ ಹಾಗೂ ಒಣ ತ್ಯಾಜ್ಯವನ್ನು ಸಂಪೂರ್ಣವಾಗಿ ಭಕ್ಷಿಸಿ ಕರಗಿಸುವ ಮೂಲಕ ಕನಿಷ್ಠ 2 ತಿಂಗಳಲ್ಲಿ ಸಂಪೂರ್ಣ ಗೊಬ್ಬರವಾಗಿಸುವ ವಿಶೇಷ ಶಕ್ತಿ ಹೊಂದಿದೆ. ಮನೆ, ಹೋಟೆಲ್, ರೆಸ್ಟೋರೆಂಟ್, ಅಪಾರ್ಟ್‌ಮೆಂಟ್, ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಘನ ತ್ಯಾಜ್ಯ, ಆಹಾರ ಪದಾರ್ಥ ಸೇರಿದಂತೆ ಎಲ್ಲ ವಿಧದ ತ್ಯಾಜ್ಯದ ಮುಕ್ತಿಗೆ ಈ ಕಪ್ಪು ಸೈನಿಕ ಹುಳ ನೆರವಾಗಲಿದೆ.ಮನುಷ್ಯನಿಗೆ ಯಾವುದೇ ರೋಗ ಹರಡದ ಮಾರಕವಲ್ಲದ ಈ ಜೀವಿ ತ್ಯಾಜ್ಯಗಳ ಜೈವಿಕ ವಿಘಟನೆಗೆ ಬ್ಯಾಕ್ಟೀರಿಯಾ ಮಾದರಿಯಲ್ಲಿ ಕೆಲಸ ಮಾಡಲಿದೆ. ಗರಿಷ್ಠ 36 ರಿಂದ 56 ದಿನಗಳವರೆಗೆ ಬದುಕುವ ಈ ಹುಳು 1 ಟನ್ ತಾಜ್ಯದಿಂದ ಕನಿಷ್ಠ 200 ಕೆಜಿ ಗೊಬ್ಬರ ಉತ್ಪಾದಿಸುವ ಸಾಮರ್ಥಯ ಹೊಂದಿದೆ. ಜತೆಗೆ, ಕೋಳಿ, ಜಲಚರ ಪ್ರಾಣಿಗಳಿಗೂ ಆಹಾರ ವಾಗಲಿದೆ.
ಪ್ರಯೋಜನಗಳು ಏನೇನು?: ಕಪ್ಪು ಸೈನಿಕ ನೊಣವು ತ್ಯಾಜ್ಯದ ವಿಘಟನೆಗೆ ಸಹಕಾರಿಯಾಗಿದ್ದು ಇದರ ಲಾರ್ವಾ ಗಳು ಹೊಟ್ಟೆಬಾಕತನದ ಹುಳಗಳಾಗಿವೆ. ತ್ಯಾಜ್ಯವನ್ನು ತ್ವರಿತವಾಗಿ ಗಾಳಿಯಲ್ಲಿ ಕೊಳೆಯು ವಂತೆ ಮಾಡಲಿವೆ. ಅಲ್ಲದೆ ಇತರೆ ನೊಣಗಳ ಸಂತಾನೋತ್ಪತ್ತಿ ನಿಯಂತ್ರಣಗೊಳಿಸಲಿದೆ. ಯಾವುದೇ ರೋಗವಾಹಕವಲ್ಲ. ಜೊತೆಗೆ ರೈತರು, ಖಾಸಗಿ ಸಂಸ್ಥೆಗಳು, ನಗರ ವಸತಿ ಜನರು ಮತ್ತು ಕೋಳಿ ಸಾಕಣೆದಾರರನ್ನು ಆಕರ್ಷಿಸಲಿದೆ.
ರಾಜ್ಯದಲ್ಲೂ ಬೇಡಿಕೆ
ಬ್ಲಾಕ್ ಸೋಲ್ಜರ್ ಫ್ಲೈ ಯಾವುದೇ ರೋಗಾಣು ಪಸರಿಸುವುದಿಲ್ಲ. ರಸ್ತೆ ಬದಿಗಳಲ್ಲಿ ಎಸೆದಿರುವ ತ್ಯಾಜ್ಯದ ವಾಸನೆ ತಡೆಯಲಿದೆ. ಚೆನ್ನೈ, ತಮಿಳುನಾಡು, ಕೇರಳ ಸೇರಿದಂತೆ ಮೊದಲಾದ ಕಡೆಗಳಲ್ಲಿ ನೊಣಗಳನ್ನು ಬಳಸಿ ಗೊಬ್ಬರ ಉತ್ಪಾದಿಸಲಾಗುತ್ತಿದೆ. ಹಲವು ಪೋಷಕಾಂಶವುಳ್ಳ ಗೊಬ್ಬರ ಹಣ್ಣು, ತರಕಾರಿ ಸೇರಿದಂತೆ ಹಲವು ವಿಧದ ಮಿಶ್ರಬೆಳೆಗೆ ಪೂರಕವಾಗಿದೆ. ರಾಜ್ಯದಲ್ಲಿಯೂ ರೈತರಿಂದ ಬೇಡಿಕೆ ಇದೆ. ● ಡಾ.ಮಹೇಶ್ ಯಂಡಿಗೆರೆ, ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋದ ಪ್ರಧಾನ ವಿಜ್ಞಾನಿ
ಬೆಳೆಸುವುದು ಹೇಗೆ?
ಕಪ್ಪು ಸೈನಿಕ ನೊಣವು ಹನಿ ನೀರು ಕುಡಿದು ಬದು ಕುವ ಸಾಮರ್ಥ್ಯ ಹೊಂದಿದೆ. ಆರಂಭಿಕ ವಾಗಿ ಅವುಗಳನ್ನು ತಂದು ತ್ಯಾಜ್ಯ ತುಂಬಿದ ದೊಡ್ಡದಾದ ತೊಟ್ಟಿ, ಡ್ರಮ್‌ಗಳಲ್ಲಿ ಬಿಡಬೇಕು. ಲಾರ್ವಾ ಹಂತ ದಲ್ಲಿ ಬೆಳೆದು ತ್ಯಾಜ್ಯವನ್ನು ಹೆಚ್ಚಾಗಿ ವಿಘಟಿಸಿ ಗೊಬ್ಬರವಾಗಿಲಿಸದೆ. ಪ್ರತಿ ನೊಣ ಗಳಿಗೆ 5 ರಿಂದ 6 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು ಕಡಿಮೆ ಖರ್ಚಿನಲ್ಲಿ ಆದಾಯ ಗಳಿಸಲು ಸಾಧ್ಯವಿದೆ.
ಕಪ್ಪು ಸೈನಿಕ ನೊಣದ ವಿಶೇಷ
ಹಸಿ, ಒಣ ತ್ಯಾಜ್ಯ ಗೊಬ್ಬರ ವಾಗಿಸುವ ಶಕ್ತಿ
ಜೀವಿತಾವಧಿ-56 ದಿನಗಳು
ಲಾರ್ವಾ, ಕಿಶೋರ, ಪ್ರೌಢಾವಸ್ಥೆ
ಇತರೆ ನೊಣದ ಸಂತಾನೋತ್ಪತ್ತಿ ಕಡಿತ
■ ರಘು ಕೆ.ಜಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.