Bengaluru ಲೈಂಗಿಕ ಕಿರುಕುಳ; ಬೈಕ್ ಟ್ಯಾಕ್ಸಿಯಿಂದ ಜಿಗಿದ ಯುವತಿ !
Team Udayavani, Apr 26, 2023, 6:29 PM IST
ಬೆಂಗಳೂರು : ನಗರದಲ್ಲಿ ಯುವತಿಯೊಬ್ಬಳು ಬೈಕ್ ಟ್ಯಾಕ್ಸಿ ಚಲಿಸುತ್ತಿದ್ದಾಗ ಚಾಲಕ ತನ್ನನ್ನು ಬೇರೆ ಸ್ಥಳಕ್ಕೆ ಕರೆದೊಯ್ಯಲು ಯತ್ನಿಸಿದ ಹಿನ್ನೆಲೆಯಲ್ಲಿ ಬೈಕ್‌ನಿಂದ ಜಿಗಿದ ಘಟನೆ ವರದಿಯಾಗಿದೆ.
ಪೊಲೀಸರ ಪ್ರಕಾರ, ಈ ಘಟನೆಯು ಎಪ್ರಿಲ್ 21 ರಂದು ಸಂಭವಿಸಿದೆ, ಮಹಿಳೆಯು ಸರಿಸುಮಾರು ರಾತ್ರಿ 11 ಗಂಟೆಗೆ Rapido ಅಪ್ಲಿಕೇಶನ್ ಮೂಲಕ ರೈಡ್ ಬುಕ್ ಮಾಡಿದ್ದು, ಚಾಲಕ ಯುವತಿಯ ಫೋನ್ ಅನ್ನು ಕಸಿದುಕೊಂಡು ತಾನು ಒಟಿಪಿ ಪರಿಶೀಲಿಸಬೇಕೆಂದು ಹೇಳಿಕೊಂಡಿದ್ದಾನೆ, ಆದರೆ ನಂತರ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡಲು ಪ್ರಾರಂಭಿಸಿ ಫೋನ್ ಹಿಂತಿರುಗಿಸಲಿಲ್ಲ. ವಾಹನ ಚಲಿಸುತ್ತಿರುವಾಗಲೇ ಚಾಲಕ ತನಗೆ ಕಿರುಕುಳ ನೀಡಲು ಯತ್ನಿಸಿದ ಎಂದು ಹೇಳಿದ್ದಾರೆ.
ನಂತರ ಯಲಹಂಕದ ಅಬ್ರಾರ್ ಬಿಎಂಎಸ್ ಕಾಲೇಜು ಬಳಿ ವೇಗವಾಗಿ ಹೋಗುತ್ತಿದ್ದ ವೇಳೆ ಬೈಕ್‌ನಿಂದ ಆಕೆ ಜಿಗಿದಿದ್ದು, ಕಾಲೇಜಿನ ಸಿಬಂದಿ ಆಕೆಯ ಸಹಾಯಕ್ಕೆ ಬಂದಿದ್ದಾರೆ. ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ, ಆದರೆ ಪೊಲೀಸರು ಆರೋಪಿಯನ್ನು ಆಂಧ್ರಪ್ರದೇಶದ 27 ವರ್ಷದ ದೀಪಕ್ ರಾವ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
#WATCH| Bengaluru, Karnataka: Woman jumps off a moving motorbike after the rapido driver allegedly tried to grope her & snatched her phone
On 21st April, woman booked a bike to Indiranagar, driver allegedly took her phone on pretext of checking OTP & started driving towards… pic.twitter.com/bPvdoILMQ2
— ANI (@ANI) April 26, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Havyaka Mahasabha: ಡಿ.27ರಿಂದ ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.