200ರ ಗಡಿಯಲ್ಲಿ ಕಂಟೈನ್ಮೆಂಟ್ ಪ್ರದೇಶ
Team Udayavani, Jun 17, 2020, 5:53 AM IST
ಬೆಂಗಳೂರು: ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ನಗರದಲ್ಲಿ ಗಣನೀಯ ಪ್ರಮಾಣದಲ್ಲಿ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಮಂಗಳವಾರ ದವರೆಗೆ ನಗರದಲ್ಲಿ ಒಟ್ಟು 191 ಪ್ರದೇಶ ಕಂಟೈನ್ಮೆಂಟ್ ವ್ಯಾಪ್ತಿಗೆ ಒಳಪಟ್ಟಿವೆ. ನಗರದಲ್ಲಿ ಈ ಹಿಂದೆ ಕ್ಲಸ್ಟರ್‌ಗಳಾಗಿ ಗುರುತಿಸಲಾ ಗಿದ್ದ ಪ್ರದೇಶಗಳಾದ ಮಂಗಮ್ಮನಪಾಳ್ಯ, ಪಾದರಾಯ ನ ಪುರ ಹಾಗೂ ಶಿವಾಜಿನಗರ ಪ್ರದೇಶ ಕಂಟೈನ್ಮೆಂಟ್ ಝೋನ್‌ನಲ್ಲಿದ್ದು ಹೆಚ್ಚಿನ ಸೋಂಕಿತರು ಇದ್ದಾರೆ.
ಮಂಗಮ್ಮನಪಾಳ್ಯದಲ್ಲಿ 15, ಪಾದರಾಯನ ಪುರ 70, ಎಸ್.ಕೆ.ಗಾರ್ಡ್‌ನ್ 31ಜನ ಸೋಂಕಿತರಿದ್ದು ಉಳಿ ದಂತೆ ಬಹುತೇಕ ಪ್ರದೇಶಗಳಲ್ಲಿ ಒಂದರಿಂದ ಹತ್ತು ಜನ ಸೋಂಕಿಗೆ ಒಳಗಾಗಿದ್ದಾರೆ. ಎಸ್.ಕೆ.ಗಾರ್ಡ್‌ನ್‌ನಲ್ಲಿ ಒಟ್ಟಾರೆ 31ಜನ ಸೋಂಕಿತರು ಇದ್ದರಾದರೂ, 6 ಕಂಟೈನ್ಮೆಂಟ್ ಪ್ರದೇಶ ಗಳಾಗಿ ಮಾಡಿಕೊಳ್ಳಲಾಗಿದೆ. ಇದೇ ರೀತಿ ಧರ್ಮರಾ ಯ ಸ್ವಾಮಿ ದೇವಸ್ಥಾನ ವ್ಯಾಪ್ತಿ, ವಿಶ್ವೇಶ್ವರಪುರ, ಚೊಕ್ಕಸಂದ್ರ, ಚಲರೆಡ್ಡಿಪಾಳ್ಯ, ಕೆ.ಆರ್‌ಮಾರುಕಟ್ಟೆ, ಮಾರ ಪ್ಪನ ಪಾಳ್ಯ ಸೇರಿ ವಿವಿಧ ವಾರ್ಡ್‌ಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಕಡಿಮೆ ಇದೆಯಾದರೂ ಕಂಟೈನ್ಮೆಂ ಟ್ ಪ್ರದೇಶ ಗಳ ಸಂಖ್ಯೆ 4-5 ಇವೆ.
ಸೋಂಕು 1 ದೃಢಪಟ್ಟಿರುವ ವಾರ್ಡ್‌ಗಳನ್ನೂ ಕಂಟೈನ್ಮೆಂಟ್ ಪ್ರದೇಶ ಎಂದು ಪರಿಗ ಣಿಸುತ್ತಿರುವುದು ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ. 191ಕಂಟೈನ್ಮೆಂಟ್ ಪ್ರದೇಶಗ ಳಿದ್ದು, 8 ವಲಯಗಳ ಕೆಲವು ಪ್ರದೇಶ ಕಂಟೈನ್ಮೆಂ ಟ್‌ನಲ್ಲಿವೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಯಾವ ವಲಯದಲ್ಲಿ ಹೆಚ್ಚು ಕಂಟೈನ್ಮೆಂಟ್?: ದಕ್ಷಿಣ, ಪಶ್ಚಿಮ, ಪೂರ್ವ ವಲಯದಲ್ಲಿ ಉಳಿದ ವಲ ಯಗಳಿ ಗಿಂತ ಹೆಚ್ಚೇ ಸೋಂಕಿತರು, ಕಂಟೈನ್ಮೆಂಟ್ ಪ್ರದೇಶಗಳಿವೆ. ರಾಜರಾಜೇಶ್ವರಿ ನಗರದಲ್ಲಿ ಒಂದೇ ಒಂದು ಪ್ರದೇಶ ಮಾತ್ರ ಕಂಟೈ ನ್ಮೆಂಟ್ ಝೋನ್ ಇದೆ. ದಾಸರಹಳ್ಳಿಯಲ್ಲಿ 5, ಯಲ ಹಂಕದಲ್ಲಿ 9 ಇವೆ.
ಕಂಟೈನ್ಮೆಂಟ್ ಪ್ರದೇಶ ಹೆಚ್ಚಳ?: ನಗರದಲ್ಲಿ 200ಕ್ಕೂ ಹೆಚ್ಚು ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಏರಿಕೆಯಾಗಿರುವ ಸಾಧ್ಯತೆ ಇದೆ. ಬಿಬಿಎಂಪಿ ವಾರ್‌ರೂಮ್‌ನ ಬುಲೆಟಿನ್ ಅನ್ವಯ ಜೂ.12ರ ವರೆಗೆ ಕಂಟೈನ್ಮೆಂಟ್ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳ ಮಾಹಿತಿ ಮಾತ್ರ ನೀಡಲಾ ಗಿದೆ. ಉಳಿದಂತೆ ಜೂ.17ರ ವರೆಗೆ ಕಂಟೈನ್ಮೆಂಟ್ ಝೋನ್ ವ್ಯಾಪ್ತಿಗೆ ಒಳಪಟ್ಟ ಪ್ರದೇಶ 30ಕ್ಕೂ ಹೆಚ್ಚಾಗಿರುವ ಸಾಧ್ಯತೆ ಇದೆ. ಕಳೆದ 3 ದಿನಗಳಿಂದ ನಗರದಲ್ಲಿ 30 -40ರ ಅಂತರದಲ್ಲಿ ಸೋಂಕು ಪ್ರಕರಣ ದೃಢಪಡುತ್ತಿವೆ. ಹೀಗಾಗಿ, ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚಾಗಲಿವೆ ಎಂದು ಹೇಳಲಾಗಿದೆ.
ಕಂಟೈನ್ಮೆಂಟ್ ಪ್ರದೇಶಗಳು: ಪಶ್ಚಿಮ 44, ರಾಜರಾಜೇಶ್ವರಿ ನಗರ 1, ದಾಸರಹಳ್ಳಿ 5, ಯಲಹಂಕ 9, ಮಹದೇವಪುರ 20, ಬೊಮ್ಮನಹಳ್ಳಿ 24, ಪೂರ್ವ 35, ದಕ್ಷಿಣ 50
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.