ಡ್ರಗ್ಸ್‌ ಪಿಡುಗು ತಡೆಗೆ ಸಹಕಾರ ಅಗತ್ಯ


Team Udayavani, Jun 27, 2020, 5:14 AM IST

drugss-pidugu

ಬೆಂಗಳೂರು: ಮಾದಕ ವಸ್ತು ಮಾರಾಟ, ಸೇವನೆ ಪಿಡುಗನ್ನು ತೊಲಗಿಸುವ ಕಾರ್ಯಕ್ಕೆ ನಾಗರಿಕರು ಸಹಕಾರ ನೀಡಬೇಕು ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹೇಳಿದರು. ಶುಕ್ರವಾರ ನಗರ ಪೊಲೀಸ್‌ ಆಯುಕ್ತರ  ಕಚೇರಿಯಲ್ಲಿ ನಡೆದ “ಮಾದಕ ವಸ್ತು ವಿರೋಧಿ’ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಾದಕವಸ್ತು ಜಾಲ ಗಂಭೀರವಾಗಿ ಪರಿಗಣಿಸಬೇಕಿದೆ.

ಈ ಜಾಲದಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವ ಸಮೂಹ, ಸುಶಿಕ್ಷಿತರು  ಬಲಿಯಾಗುತ್ತಿದ್ದಾರೆ. ಈ ಜಾಲವನ್ನು ಹೋಗಲಾಡಿಸಲು ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ಶ್ರಮಿಸುತ್ತಿದೆ. ನಾಗರಿಕರು ಕೈ ಜೋಡಿಸಬೇಕೆಂದರು. ಮಾದಕ ವಸ್ತು ಮಾರಾಟ, ಸೇವನೆ ಕಂಡು ಬಂದರೆ ನಾಗರಿಕರು ಟೋಲ್‌ ಫ್ರೀ ನಂಬರ್‌  1098 ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು. 2019 ರಿಂದ 2020ರಲ್ಲಿ ಇಲ್ಲಿಯವರೆಗೆ ನಗರ ಪೊಲೀಸರು ಮಾದಕ ವಸ್ತು ಮಾರಾಟ ಜಾಲ ಮಟ್ಟಹಾಕಲು  ಶ್ರಮಿಸಿದ್ದಾರೆ. ಡಾರ್ಕ್‌ ವೆಬ್‌ ಮೂಲಕ ನಡೆಯುತ್ತಿದ್ದ ಜಾಲವನ್ನು ಭೇದಿಸಲಾಗಿತ್ತು.

ಅಂತಾರಾಷ್ಟ್ರೀಯ ದಂಧೆಕೋರರು ಕೊರಿಯರ್‌ ಮೂಲಕ ನಡೆಸುತ್ತಿದ್ದ ದಂಧೆಯನ್ನು ಬಯಲಿಗೆಳೆಯಲಾಗಿತ್ತು. ಅಷ್ಟೇ ಅಲ್ಲದೆ ಈ ಜಾಲದ  ವಿರುದಟಛಿ ಎನ್‌ಡಿಪಿಎಸ್‌ ಕಾಯಿದೆ ಅಡಿಯಲ್ಲಿ 1,174 ಪ್ರಕರಣಗಳನ್ನು ದಾಖಲಿಸಿ 44 ವಿದೇಶಿ ಪ್ರಜೆಗಳು ಸೇರಿ 1845 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 1,016 ಕೆ.ಜಿ ಗಾಂಜಾ, 2.9 ಕೆ.ಜಿ ಅಫೀಮು, 1.5 ಕೆ.ಜಿ ಹಶೀಶ್‌, 345  ಗ್ರಾಂ ಕೊಕೇನ್‌, 85 ಗ್ರಾಂ ಚರಸ್‌ , 1079 ಮಾದಕ ವಸ್ತು ಮಾತ್ರೆಗಳು ಸೇರಿ ಅಪಾರ ಪ್ರಮಾಣದ ಮಾದಕ ವಸ್ತು ಜಪ್ತಿ ಮಾಡಲಾಗಿದೆ ಎಂದು ಆಯುಕ್ತರು ವಿವರಿಸಿದರು.

ಮಾದಕ ವಸ್ತು ಸಮಾಜಕ್ಕೆ ಮಾರಕ; ಬೊಮ್ಮಾಯಿ: ಮಾದಕ ವಸ್ತು ವ್ಯಕ್ತಿಗೆ ಮಾತ್ರವಲ್ಲ. ಸಮಾಜಕ್ಕೂ ಮಾರಕ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ನಮ್ಮ ದೇಶ ಮತ್ತು ರಾಜ್ಯಕ್ಕೆ ದೊಡ್ಡ ಇತಿಹಾಸವಿದೆ.  ಮಾನವೀಯತೆ ಇರದ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇರುವುದಿಲ್ಲ. ಸಮಾಜದಲ್ಲಿ ಯಾರೇ ಮಾದಕ ವಸ್ತು ಸೇವನೆ ಮಾಡುತ್ತಿದ್ದರೆ ತಮಗೆ ಸಂಬಂಧವಿಲ್ಲ ಎಂದು ಭಾವಿಸಬಾರದು.

ಕೂಡಲೇ ಪೊಲೀಸರು ಅಥವಾ ಪೊಲೀಸ್‌  ಕಂಟ್ರೋಲ್‌ ರೂಂಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಇನ್ನೂ ಸಿಸಿಬಿ ಪೊಲೀಸರು ನಗರಾದ್ಯಂತ ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿದ್ದಾರೆ. ಪ್ರಮುಖವಾಗಿ ಕೆನಡಾ, ಆಫ್ರಿಕಾ, ಕೇರಳದವರಾಗಿದ್ದಾರೆ. ಆದರೆ, ಕೆಲ  ಆರೋಪಿಗಳಿಗೆ ಬಹುಬೇಗನೆ ಜಾಮೀನು ಸಿಗುತ್ತಿದೆ. ಈ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಹೊಸ ಕಾನೂನು ಜಾರಿಗೆ ತರಲು ಚಿಂತಿಸಲಾಗಿದೆ.

ಟಾಪ್ ನ್ಯೂಸ್

Ullal: ಗಾಂಜಾ ಮಾರಾಟ: ಜೋಡಿ ಬಂಧನ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Mangaluru: ವಕೀಲರ ಮೇಲೆ ಹಲ್ಲೆ: ದೂರು

Mangaluru: ವಕೀಲರ ಮೇಲೆ ಹಲ್ಲೆ: ದೂರು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqeqwe

Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು

ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್‌ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್‌ ನಕಾರ

ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್‌ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್‌ ನಕಾರ

Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ

Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ

Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್‌ ಡೆಲಿವರಿ ಬಾಯ್‌ ಸಾವು

Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್‌ ಡೆಲಿವರಿ ಬಾಯ್‌ ಸಾವು

Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ

Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Mangaluru: ವಕೀಲರ ಮೇಲೆ ಹಲ್ಲೆ: ದೂರು

Mangaluru: ವಕೀಲರ ಮೇಲೆ ಹಲ್ಲೆ: ದೂರು

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.