ಮಾದರಿ ಸಂಗ್ರಹವೇ ಗೊಂದಲದ ಗೂಡು!


Team Udayavani, Apr 5, 2020, 11:09 AM IST

ಮಾದರಿ ಸಂಗ್ರಹವೇ ಗೊಂದಲದ ಗೂಡು!

ಸಾಂದರ್ಭಿಕ ಚಿತ್ರ

ಬೆಂಗಳೂರು: “ಕೋವಿಡ್‌-19′ ವೈರಸ್‌ ಲಕ್ಷಣ ಗಳಿರುವ ವ್ಯಕ್ತಿಯ ಗಂಟಲು ದ್ರಾವಣದ ಮಾದರಿ ಸಂಗ್ರಹಿಸುವ ವಿಚಾರವೇ ಈಗ ಗೊಂದಲದ ಗೂಡಾಗಿದೆ!

ವೈರಸ್‌ ಸೋಂಕಿನ ಲಕ್ಷಣಗಳಿರುವ ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಮುಂದಾಗುತ್ತಿಲ್ಲ. ಮತ್ತೂಂದೆಡೆ ಆ ವ್ಯಕ್ತಿ ದೂರದ ಪ್ರಯೋಗಾಲಯಕ್ಕೆ ಬಂದು ತಪಾಸಣೆಗೊಳಪಡುವುದರಿಂದ ವೈರಸ್‌ ಹರಡುವ ಸಾಧ್ಯತೆ ಹೆಚ್ಚಿರುತ್ತವೆ. ಜತೆಗೆ ಅದು ಕ್ವಾರಂಟೈನ್‌ ಉಲ್ಲಂಘನೆ ಕೂಡ ಆದಂತಾಗುತ್ತದೆ. ಈ ಕಾರಣಗಳಿಂದ ಮನೆಗಳಿಗೆ ತೆರಳಿಯೇ ಗಂಟಲು ದ್ರಾವಣದ ಮಾದರಿ ಸಂಗ್ರಹಿಸುವುದು ಸೂಕ್ತ ಎಂಬುದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್‌) ವಾದ.

ಆದರೆ, ಮನೆ ಮನೆಗೆ ತೆರಳಿ ಮಾದರಿ ಸಂಗ್ರಹಿ ಸುವಷ್ಟು ಮಾನವ ಸಂಪನ್ಮೂಲ ಬೇಕಾಗುತ್ತದೆ. ಅದನ್ನು ಎಲ್ಲಿಂದ ತರುವುದು? ಉದಾಹರಣೆಗೆ ಹತ್ತು ಕಡೆಯಿಂದ ಕರೆಗಳು ಬಂದರೆ, ಹತ್ತು ಜನ ವೈದ್ಯಕೀಯ ಸಿಬ್ಬಂದಿ ಮಾದರಿ ಸಂಗ್ರಹಕ್ಕೆ ತೆರಳಬೇಕಾಗುತ್ತದೆ. ಅದನ್ನು ನಿಭಾಯಿಸುವುದು ಕಷ್ಟವಾಗಲಿದೆ ಎಂಬುದು ರಾಜ್ಯ ಸರ್ಕಾರದ ವಾದ. ಈ ವಾದ-ಪ್ರತಿವಾದಗಳ ನಡುವೆ ಪ್ರಯೋಗಾಲಯಗಳು ಗೊಂದಲಕ್ಕೆ ಸಿಲುಕಿವೆ.

ಸದ್ಯಕ್ಕೆ ಆಸ್ಪತ್ರೆಯಲ್ಲಿ ನಿಗಾದಲ್ಲಿರುವ ವ್ಯಕ್ತಿಗಳ ಮಾದರಿಗಳು ತಪಾಸಣೆಗೆ ಬರುತ್ತಿವೆ. ಇಂತಹವುಗಳನ್ನು ದಿನಕ್ಕೆ 20-30 ಮಾದರಿಗಳನ್ನು ಪರೀಕ್ಷೆಗೊಳಪಡಿಸಿದರೆ ಹೆಚ್ಚು. ಆದರೆ, ಮನೆಗೇ ತೆರಳಿ ಮಾದರಿ ಸಂಗ್ರಹಿ ಸಬೇಕಾ ಅಥವಾ ವೈರಾಣುವಿನ ಲಕ್ಷಣಗಳಿರುವ ವ್ಯಕ್ತಿಯೇ ಪ್ರಯೋಗಾಲಯಕ್ಕೆ ಬಂದು ತಪಾಸಣೆಗೊಳಪಡಿಸುತ್ತಾರಾ ಎಂಬುದರ ಬಗ್ಗೆ ಇನ್ನೂ ಸರ್ಕಾರ ದಿಂದ ಸ್ಪಷ್ಟತೆಯಿಲ್ಲ. ಒಂದೆರಡು ದಿನಗಳು ಸ್ಪಷ್ಟತೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಖಾಸಗಿ ಪ್ರಯೋಗಾಲಯ ವೊಂದರ ಸಿಬ್ಬಂದಿ ಮಾಹಿತಿ ನೀಡಿದರು.

ಮನೆಗೇ ತೆರಳಿ ಸಂಗ್ರಹ; ಪರಿಶೀಲನೆ- ಡಾ. ಮಂಜುನಾಥ್‌: “ಹೊರಗಡೆ ಬಂದಾಗ, ಹರಡುವಿಕೆ ಸಾಧ್ಯತೆ ಇರುತ್ತದೆ ಎನ್ನುವುದು ಕೂಡ ಇದೆ. ಆದರೆ, ಮನೆಗಳಿಗೇ ತೆರಳಿ ಮಾದರಿ ಸಂಗ್ರಹಿಸುವುದು ಪ್ರಯೋಗಾತ್ಮಕವಾಗಿ ಕಷ್ಟ ಆಗುತ್ತದೆ. ಹಾಗಾಗಿ, ಏಪ್ರಿಲ್‌ 12 ಅಥವಾ 13ಕ್ಕೆ “ಆ್ಯಂಟಿಬಾಡಿ ರ್ಯಾಪಿಡ್‌ ಲ್ಯಾಬ್‌ ಟೆಸ್ಟ್‌’ ಸ್ಟ್ರಿಪ್‌ಗ್ಳು ಆಗಮಿಸಲಿವೆ. ಇದರಿಂದ ಕೇವಲ 15ರಿಂದ 20 ನಿಮಿಷಗಳಲ್ಲಿ ಫ‌ಲಿತಾಂಶ ಬರಲಿದೆ. ಆಗ ಮನೆಗಳಿಗೇ ಹೋಗಿ ಮಾದರಿ ಸಂಗ್ರಹಿಸಲು ಸಾಧ್ಯವಿದೆ. ಆ ಕಿಟ್‌ಗಳು ಬಂದಿಳಿದ ನಂತರ ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು’ ಎಂದು ಕೋವಿಡ್‌-19 ಪ್ರಯೋಗಾಲಯಗಳ ಉಸ್ತುವಾರಿ ಡಾ.ಸಿ.ಎನ್‌. ಮಂಜುನಾಥ್‌ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ಇನ್ನು ರಾಜ್ಯದಲ್ಲಿ ಎರಡು ಖಾಸಗಿ ಸೇರಿ ಒಟ್ಟಾರೆ 12 ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸ ಲಾಗುತ್ತಿದೆ. ಜತೆಗೆ ಕೆ.ಸಿ. ಜನರಲ್‌ ಆಸ್ಪತ್ರೆ, ಸಿ.ವಿ. ರಾಮನ್‌ ನಗರ ಬೆಂಗಳೂರಿನಲ್ಲೇ 5-6 ಕಡೆ ಮಾದರಿ ಸಂಗ್ರಹ ಕೇಂದ್ರಗಳು, ಸುಮಾರು 30 ಜ್ವರ ತಪಾಸಣಾ ಕೇಂದ್ರಗಳೂ ಇವೆ. ಅಲ್ಲಿ ಲಕ್ಷಣಗಳು ಕಂಡುಬಂದರೆ, ಅಂತಹ ವ್ಯಕ್ತಿಯನ್ನು ತಕ್ಷಣ ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ಹೇಳಿದರು.

ಪ್ರಕರಣ-ಕಿಟ್‌ ಲಭ್ಯತೆಯಲ್ಲಿ ಅಂತರ?: ಈ ಮಧ್ಯೆ ರಾಜ್ಯದಲ್ಲಿ ಕೋವಿಡ್‌-19 ವೈರಾಣು ಸೋಂಕು ಪರೀಕ್ಷೆಗೆ ಪ್ರಯೋಗಾಲಯಗಳಿವೆ. ಆದರೆ, ಆ ವೈರಾಣು ಪತ್ತೆ ಮಾಡುವ ಕಿಟ್‌ಗಳ ಪೂರೈಕೆ ನಿರೀಕ್ಷಿತ ಮಟ್ಟದ ಲ್ಲಿಲ್ಲ. ಒಂದೆಡೆ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಮತ್ತೂಂದೆಡೆ ಕಿಟ್‌ಗಳ ಲಭ್ಯತೆ ನಡುವಿನ ಅಂತರ ದಿಂದ ಸಮರ್ಪಕ ಮಾದರಿ ಸಂಗ್ರಹ ಸಾಧ್ಯವಾಗುತ್ತಿಲ್ಲ ಎಂಬ ಅಸಹಾಯಕತೆಯೂ ಕೇಳಿಬರುತ್ತಿದೆ.

ಬುಧವಾರ ಒಂದೇ ದಿನ 143 ಜನ ಕೋವಿಡ್‌-19 ವೈರಸ್‌ ಲಕ್ಷಣಗಳಿರುವವರು ಸೇರ್ಪಡೆಯಾಗಿದ್ದು, ಒಟ್ಟಾರೆ 200 ಜನರ ಗಂಟಲು ದ್ರಾವಣ ಮಾದರಿ ಸಂಗ್ರಹಕ್ಕೆ ಆರೋಗ್ಯ ಇಲಾಖೆ ನಿರ್ಧರಿಸಿದೆ. ನಿರ್ಣಾಯಕ ಘಟ್ಟದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಮಾದರಿ ಸಂಗ್ರಹ ಪ್ರಮಾಣ ಏರಿಕೆ ಆಗಲಿದೆ. ಅದಕ್ಕೆ ತಕ್ಕಂತೆ ಕಿಟ್‌ಗಳ ಪೂರೈಕೆ ಆಗುತ್ತಿಲ್ಲ ಎಂಬ ಅಪಸ್ವರ ಕೇಳಿಬರುತ್ತಿದೆ.

ಆದರೆ, ಅಂತಹ ಯಾವುದೇ ರೀತಿ ಕೊರತೆ ಇಲ್ಲ. “ಸರ್ಕಾರಿ ಪ್ರಯೋಗಾಲಯಗಳಿಗೆ ಐಸಿಎಂಆರ್‌ ನಿಂದ ಕಿಟ್‌ಗಳು ಪೂರೈಕೆ ಆಗುತ್ತಿದ್ದು, ಖಾಸಗಿ ಪ್ರಯೋಗಾಲಯಗಳು ಭಾರತೀಯ ತಯಾರಿಕೆ ಕಂಪೆನಿಗಳಿಗೆ ಬೇಡಿಕೆ ಇಟ್ಟಿವೆ. ಸದ್ಯಕ್ಕೆ ಸಾಕಷ್ಟು ತಪಾಸಣೆ ಸಾಮರ್ಥ್ಯ ಇದೆ’ ಎಂದು ನಿಮ್ಹಾನ್ಸ್‌ನ ನ್ಯೂರೊ ವೈರಾಲಜಿ ವಿಭಾಗದ ಮುಖ್ಯಸ್ಥ ಡಾ.ವಿ. ರವಿ ಸ್ಪಷ್ಟಪಡಿಸುತ್ತಾರೆ.

ಇದುವರೆಗೆ 3,580ಕ್ಕೂ ಅಧಿಕ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಪ್ರಸ್ತುತ 9 ಪ್ರಯೋಗಾಲಯಗಳ ಜತೆಗೆ 2-3 ದಿನದಲ್ಲಿ ಬೆಂಗಳೂರಿನ ನಿಮ್ಹಾನ್ಸ್‌, ವೆನ್‌ಲಾಕ್‌ ಆಸ್ಪತ್ರೆ, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಸೇರಿ ಇನ್ನೂ 3 ಪ್ರಯೋಗಾಲಯಗಳು ಸೇರ್ಪಡೆ ಆಗಲಿವೆ. ದಿನಕ್ಕೆ 200 ಮಾದರಿಗಳ ತಪಾಸಣೆ ಗೊಳಪಡಿಸಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮಾದರಿ ತಪಾಸಣೆಗೂ ದಾನ ನೀಡಿ :  ಯುಎಸ್‌ಎಫ್ಎಬಿ ಮತ್ತು ಪುಣೆಯ ಮೈಲ್ಯಾಬ್ಸ್ನಿಂದ ಕಿಟ್‌ಗಳು ಪೂರೈಕೆ ಆಗುತ್ತವೆ. ಇದರಲ್ಲಿ ಯುಎಸ್‌ಎಫ್ಎಬಿ ಕಿಟ್‌ನ ಮೂಲಕ ಮಾಡುವ ಪ್ರತಿ ತಪಾಸಣೆಗೆ 4,500 ರೂ. ಆಗುತ್ತದೆ. ಮೈಲ್ಯಾಬ್ಸ್ ದರ 1,200 ರೂ. ಎರಡರ ಸಾಮರ್ಥ್ಯವೂ ಪ್ರತಿ ವೃತ್ತ (6 ತಾಸುಗಳು)ದಲ್ಲಿ ನೂರು ಮಾದರಿ ತಪಾಸಣೆ ಮಾಡಬಹುದಾಗಿದೆ. ಬರೀ ಅನ್ನ- ಆಹಾರ ಹಾಗೂ ಪರಿಹಾರ ನಿಧಿಗಳಿಗೆ ದಾನಗಳು ಸೀಮಿತ ವಾಗುತ್ತಿವೆ. ಆ ಪೈಕಿ ಸ್ವಲ್ಪ ಪ್ರಮಾಣವಾದರೂ ದಾನಿಗಳು ಮಾದರಿ ತಪಾಸಣೆಗೂ ನೀಡಬೇಕು. ಆಗ ಸರ್ಕಾರದ ಮೇಲಿನ ಹೊರೆ ಮತ್ತಷ್ಟು ಕಡಿಮೆ ಆಗುತ್ತದೆ ಎಂದು ಆರೋಗ್ಯ ಇಲಾಖೆಯ ವೈದ್ಯರೊಬ್ಬರು ತಿಳಿಸುತ್ತಾರೆ.

 

– ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.