ಎಲ್ಪಿಜಿಗೆ ಬೇಡಿಕೆ ಶೇ. 25ರಷ್ಟು ಏರಿಕೆ
Team Udayavani, Apr 18, 2020, 3:55 PM IST
ಬೆಂಗಳೂರು: ಲಾಕ್ಡೌನ್ ಘೋಷಣೆಯಾದ ನಂತರದಿಂದ ನಗರದಲ್ಲಿ ಅಡುಗೆ ಅನಿಲ ಸಿಲಿಂಡರ್ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಆದರೆ, ಅದರ ಪೂರೈಕೆ ವಿತರಕರಿಗೆ ಸವಾಲಾಗಿ
ಪರಿಣಮಿಸಿದೆ. ಸಾಮಾನ್ಯ ದಿನಗಳಿಗಿಂತ ಲಾಕ್ ಡೌನ್ ಅವಧಿಯಲ್ಲಿ ಶೇ. 25ರಿಂದ 30ರಷ್ಟು ಅಡುಗೆ ಅನಿಲ ಸಿಲಿಂಡರ್ ಬುಕಿಂಗ್ನಲ್ಲಿ ಏರಿಕೆ ಕಂಡುಬಂದಿದೆ. ಇನ್ನೊಂದೆಡೆ ಕೋವಿಡ್ -19 ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸಿಲಿಂಡರ್ ವಿತರಕ ಸಿಬ್ಬಂದಿಯಲ್ಲಿ ಶೇ. 50ರಷ್ಟು ಇಳಿಕೆ ಯಾಗಿದೆ. ಸದ್ಯ ಸೇವೆ ನೀಡುತ್ತಿರುವ ವಿತರಕ ಸಿಬ್ಬಂದಿಯನ್ನೂ ಕೆಲ ಗ್ರಾಹಕರು ಅನುಮಾನ, ಅವಮಾನಕರವಾಗಿ ನೋಡುತ್ತಿರುವುದು ಆತ್ಮವಿಶ್ವಾಸ ಕುಗ್ಗುವಂತೆ ಮಾಡಿದೆ.
ಪ್ಯಾನಿಕ್ ಬುಕ್ಕಿಂಗ್ ಹೆಚ್ಚಾಗಿದೆ: ಲಾಕ್ ಡೌನ್ನಿಂದ ವಾಣಿಜ್ಯ ಮಳಿಗೆಗಳು, ಹೋಟೆಲ್ಗಳು ಬಹುತೇಕ ಸ್ಥಗಿತಗೊಂಡಿವೆ. ಹಾಗಾಗಿ, ವಾಣಿಜ್ಯ ಉದ್ದೇಶಿ ಸಿಲಿಂಡರ್ ಬೇಡಿಕೆ ಕಡಿಮೆ ಆಗಿದೆ.
ಆದರೆ, ಗೃಹ ಬಳಕೆ ಗ್ರಾಹಕರಿಂದ “ಪ್ಯಾನಿಕ್ ಬುಕಿಂಗ್’ ಹೆಚ್ಚಾಗಿದ್ದು, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಶೇ. 25ರಷ್ಟು ಬೇಡಿಕೆ ಅಧಿಕವಾಗಿದೆ. ಇನ್ನೊಂದೆಡೆ ಶೇ. 50ರಷ್ಟು ವಿತರಕ
ಸಿಬ್ಬಂದಿಯಷ್ಟೇ ಕೆಲಸಕ್ಕೆ ಬರುತ್ತಿದ್ದು, ತೀವ್ರ ಒತ್ತಡವಿದೆ. ಈ ಮಧ್ಯೆ ವಿತರಕರಿಗೆ ತಿಂಡಿ, ಊಟದ ಜತೆಗೆ ಮಾಸ್ಕ್, ಸ್ಯಾನಿ ಟೈಸರ್ ನೀಡಿ ಕಳುಹಿಸಬೇಕಿದೆ. ಹಾಗಿದ್ದರೂ ಕೆಲಗ್ರಾಹಕರು ಅನುಮಾನದಿಂದ ನೋಡುವುದರಿಂದ ವಿತರಕರು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅಗತ್ಯ ಸೇವೆಯಾಗಿರುವುದರಿಂದ ಮುಂದುವರಿಸುವುದು ಅನಿವಾರ್ಯವಾಗಿದೆ ಎಂದು ಜನ ಭಾರತ್ ಗ್ಯಾಸ್ ಏಜೆನ್ಸಿಯ ಹರೀಶ್ ಹೇಳುತ್ತಾರೆ.
ಎರಡು ಸಿಲಿಂಡರ್ ಸೌಲಭ್ಯ ಹೊಂದಿರುವ ಗ್ರಾಹಕರು ಒಂದು ಸಿಲಿಂಡರ್ ಪಡೆದ ಮರುದಿನವೇ ಮತ್ತೂಂದು ಸಿಲಿಂಡರ್ ಬುಕಿಂಗ್ ಮಾಡುತ್ತಿದ್ದಾರೆ. ಇದರಿಂದ ಒಂದು ಸಿಲಿಂಡರ್ಗಾಗಿ ಕಾದಿರುವವರಿಗೆ ವಿತರಿಸಲು ವಿಳಂಬವಾಗುತ್ತದೆ. ಹೋಟೆಲ್, ಮಳಿಗೆಗಳೆಲ್ಲಾ ಬಂದ್ ಆಗಿದ್ದು, ಒತ್ತಡದಲ್ಲಿ ಕೆಲಸ ಮಾಡುತ್ತಿರುವ ವಿತರಕರು ನೀರು ಕೇಳಿದರೂ ಕೆಲ ಗ್ರಾಹಕರು ನೀಡದಿರುವುದು ಕಂಡಾಗ ಬೇಸರವಾಗುತ್ತದೆ ಎಂದು ಆನಂದ್ ಭಾರತ್ ಗ್ಯಾಸ್ನ ಸಂತೋಷ್ ಬೇಸರ ವ್ಯಕ್ತಪಡಿಸುತ್ತಾರೆ.
ಗ್ಯಾಸ್ ಸಿಲಿಂಡರ್ ವಿತರಕರಿಗೆ ಪಾಸು ಇಲ್ಲ
ಅಡುಗೆ ಅನಿಲ ಸಿಲಿಂಡರ್ ಅಗತ್ಯ ವಸ್ತುವಾಗಿದ್ದರೂ ವಿತರಕರಿಗೆ ಎಲ್ಲಿಯೂ ಪೊಲೀಸ್ ಇಲಾಖೆ ಪಾಸು ವಿತರಿಸಿಲ್ಲ. ಹಾಗಾಗಿ ಪೊಲೀಸರು, ಸಾರ್ವಜನಿಕರ
ಪ್ರತಿರೋಧದ ನಡುವೆಯೇ ವಿತರಕರು ಕಾರ್ಯ ನಿರ್ವಹಿಸಬೇಕಿದೆ. ಲಾಕ್ ಡೌನ್ ಬಳಿಕ ಸಿಲಿಂಡರ್ ಬೇಡಿಕೆ ಶೇ. 50ರಷ್ಟು ಹೆಚ್ಚಾಗಿದೆ. ಆನ್ಲೈನ್ನಲ್ಲಿ ಶುಲ್ಕ ಪಾವತಿಸಿದರೆ, ಕಡ್ಡಾಯವಾಗಿ ವಿತರಿಸಬೇಕೆಂಬ ನಿಯಮದ ಕಾರಣಕ್ಕೆ ಬಹಳಷ್ಟು ಗ್ರಾಹಕರು ಆನ್ಲೈನ್ನಲ್ಲಿ ಶುಲ್ಕ ಪಾವತಿಸುತ್ತಿದ್ದಾರೆ. ಹೀಗಾಗಿ ಸಕಾಲದಲ್ಲಿ ಸಿಲಿಂಡರ್ ಒದಗಿಸುವುದು ಸವಾಲಾಗಿದೆ ಎಂದು ವಿತರಕ
ಜಗದೀಶ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.