ಮಹಾಯೋಜನೆ 2031; ಗುರಿ 2050! ದೂರದೃಷ್ಟಿಯಿಂದ ಕರಡು ಸೃಜನೆಗೆ ಅಭಿವೃದ್ಧಿ ಪ್ರಾಧಿಕಾರ ಚಿಂತನೆ

2031ರೊಳಗೆ ಗುರಿ ಸಾಧನೆ ಸಂಕಲ್ಪ

Team Udayavani, Jul 23, 2020, 11:18 AM IST

ಮಹಾಯೋಜನೆ 2031; ಗುರಿ 2050! ದೂರದೃಷ್ಟಿಯಿಂದ ಕರಡು ಸೃಜನೆಗೆ ಅಭಿವೃದ್ಧಿ ಪ್ರಾಧಿಕಾರ ಚಿಂತನೆ

ಸಾಂದರ್ಭಿಕ ಚಿತ್ರ

ಬೆಂಗಳೂರು: “ಪರಿಷ್ಕೃತ ನಗರ ಮಹಾಯೋಜನೆ-2031′ ಕರಡನ್ನು ಸರ್ಕಾರ ಹಿಂಪಡೆದ ಬೆನ್ನಲ್ಲೇ ಹಲವು ಮಾರ್ಪಾಡುಗಳೊಂದಿಗೆ ಈ ಬಾರಿ 2050ರ ದೂರದೃಷ್ಟಿ ಇಟ್ಟುಕೊಂಡು ಕರಡು ಸಿದ್ಧಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಚಿಂತನೆ ನಡೆಸಿದೆ.

ನಗರದ ಸ್ಥಿತಿಸ್ಥಾಪಕತ್ವ ಹಾಗೂ ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ “ಪರಿಷ್ಕೃತ ನಗರ ಮಹಾಯೋಜನೆ -2031′ ಮುಂದಿನ ಎರಡು ದಶಕಗಳ ಅಂದರೆ
2050ರ ಗುರಿ ಇಟ್ಟುಕೊಂಡಿರುವುದು ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಕರಡು ಸಿದ್ಧಪಡಿಸಬೇಕಿದೆ. ಬಿಬಿಎಂಪಿ, ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ಸೇರಿದಂತೆ ಇತರೆ ಸರ್ಕಾರಿ ಸಂಸ್ಥೆಗಳನ್ನು ಯೋಜನೆ ಪ್ರಕ್ರಿಯೆಯಲ್ಲಿ ಒಳಗೊಳ್ಳುವಂತಾಗಬೇಕು ಎಂದೂ ಈ ಸಂಬಂಧದ ಸಮಿತಿ
ಅಭಿಪ್ರಾಯಪಟ್ಟಿದೆ.

2020-21ರ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು, ಅಪ್‌ಡೇಟ್‌ ನಕ್ಷೆ ಹಾಗೂ ಪ್ರಸ್ತುತ ಲಭ್ಯವಿರುವ ಭೂಬಳಕೆ ನಕ್ಷೆ ಮಹಾಯೋಜನೆಯ ಸ್ಪಷ್ಟತೆ ಹಾಗೂ ನಿರೂಪಣೆ ಮತ್ತು ಅನುಷ್ಠಾನಕ್ಕಾಗಿ ಸಂಬಂಧಿಸಿದ ಅಂತರ ಇಲಾಖೆಗಳಲ್ಲಿನ ಸಮನ್ವಯತೆ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಶಾಸನಾತ್ಮಕ ಮತ್ತು ಆಡಳಿತಾತ್ಮಕ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಈ ಬಾರಿಯ ಪರಿಷ್ಕರಣೆಯಲ್ಲಿ ಸಂಚಾರ ಆಧಾರಿತ ಅಭಿವೃದ್ಧಿ (ಟಿಒಡಿ) ನೀತಿಗೆ ಒತ್ತು ನೀಡಲಾಗುತ್ತಿದೆ. ಮುಂದಿನ ಮೂರು ದಶಕಗಳಲ್ಲಿ ನಗರದಲ್ಲಿ ಆಗಬಹುದಾದ ಸಂಚಾರದಟ್ಟಣೆ, ಅದಕ್ಕೆ ಪರಿಹಾರಗಳು, ಪಾರ್ಕಿಂಗ್‌ ನೀತಿ, ಸಮಗ್ರ ಸಾರಿಗೆ ನೀತಿ ಮತ್ತಿತರ ಅಂಶಗಳನ್ನು ಇದರಲ್ಲಿ ಕಾಣಬಹುದು.

ಕನ್ಸಲ್ಟೆಂಟ್‌ ಬದಲಾವಣೆಗೂ ಚಿಂತನೆ?: ಕಳೆದ ಐದು ವರ್ಷಗಳಿಂದ ಮಹಾಯೋಜನೆಗಾಗಿ ಸಿದ್ಧತೆ ನಡೆಯುತ್ತಲೇ ಇದೆ. ಇದಕ್ಕಾಗಿ 15 ಕೋಟಿ ರೂ.
ಮೀಸಲಿ ಟ್ಟಿದ್ದು, ಬಹುತೇಕ ಖರ್ಚಾಗಿದೆ. ಆದರೆ, ಇದುವರೆಗೆ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ  ಯೋಜನೆ ಸಿದ್ಧಪಡಿಸಿಕೊಡಲು ನಿಯೋಜಿಸಿದ ಕನ್ಸಲ್ಟೆಂಟ್‌
ಸಂಸ್ಥೆಯನ್ನೂ ಕೈಬಿಡುವ ಬಗ್ಗೆ ಚರ್ಚೆ ನಡೆ ದಿದೆ. ಆದರೆ, ಈ ಚರ್ಚೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಮಂಡಳಿಯ ಮುಂದೆ ಬಂದಿಲ್ಲ ಎನ್ನಲಾಗಿದೆ.

ಕರಡು ಹಿನ್ನೆಲೆ: ಕಾಂಗ್ರೆಸ್‌ ಸರ್ಕಾರ 2015ರಲ್ಲಿ ಈ “ಪರಿಷ್ಕೃತ ಮಹಾನಗರ ಯೋಜನೆ-2031’ರ ಕರಡು ಸಿದ್ಧತೆ ನಡೆದಿತ್ತು. ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ
ಸರ್ಕಾರದಲ್ಲಿ ಇದಕ್ಕೆ ಅಂತಿಮ ಸ್ಪರ್ಶ ನೀಡಲಾಗಿತ್ತು. ಇನ್ನೇನೂ ಅನುಮೋದನೆಗೊಳ್ಳುವಷ್ಟರಲ್ಲಿ ಸರ್ಕಾರ ಪತನಗೊಂಡು, ಬಿಜೆಪಿ ಅಧಿಕಾರಕ್ಕೆ ಬಂದಿತು. ಈ
ಸರ್ಕಾರ ಕೆಲವು ಮಾರ್ಪಾಡುಗಳೊಂದಿಗೆ ಮತ್ತೆ ಕರಡು ಸಲ್ಲಿಸುವಂತೆ ಸೂಚನೆ ನೀಡಿದೆ. ಇದರೊಂದಿಗೆ ಸತತ ಮೂರು ಸರ್ಕಾರಗಳು ಕೂಡ ಕರಡು ಸಿಡಿಪಿಯನ್ನು ಮೂಲೆಗುಂಪು ಮಾಡಿದಂತಾಗಿದೆ. ಸರ್ಕಾರ ಪರಿಷ್ಕೃತ ರೂಪದಲ್ಲಿ ಸಿದ್ಧಪಡಿಸಲು ಆದೇಶಿಸಿದ್ದರಿಂದ ನಗರಾಭಿವೃದ್ಧಿ ಇಲಾಖೆ ಹಂತದಲ್ಲಿ ಮತ್ತೆ ಸರಣಿ ಸಭೆಗಳು ನಡೆದು ಮಾರ್ಗಸೂಚಿ ಸಿದ್ಧಗೊಳ್ಳಬೇಕು. ನಂತರವೇ ಬಿಡಿಎಯಿಂದ ಪರಿಷ್ಕೃತ ಕಾರ್ಯ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ
ನೀಡಿದರು. “ಪರಿಷ್ಕೃತ ನಗರ ಮಹಾ ಯೋಜನೆ’ 2031ಕ್ಕೇ ಸೀಮಿತವಾಗಿರಲಿದೆ. ಆದರೆ, ನಮ್ಮ ಫೋಕಸ್‌ 2050ರ ಮೇಲಿರಲಿದೆ. ಅಂದರೆ, ಯೋಜನೆಯನ್ನು 2031ರ ನಂತರದ ಮುಂದಿನ ಎರಡು ದಶಕಗಳಲ್ಲಿ ನಗರದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕರಡು ಸಿದ್ಧಪಡಿಸಲು ಉದ್ದೇಶಿ ಸಲಾಗಿದೆ. ಇದಲ್ಲದೆ, ಈಗಿರುವ ಕನ್ಸಲ್ಟೆಂಟ್‌ ಸಂಸ್ಥೆಯನ್ನು ಮುಂದುವರಿಸ ಬೇಕೇ ಅಥವಾ ಹೊಸ ಕನ್ಸಲ್ಟೆಂಟ್‌ ಅನ್ನು ನೇಮಿಸಬೇಕೇ ಎಂಬುದರ ಬಗ್ಗೆಯೂ ಪ್ರಾಥಮಿಕ ಹಂತದಲ್ಲಿ ಚರ್ಚೆ ನಡೆಸಲಾಗಿ ದೆ. ಶೀಘ್ರ ಇದನ್ನು ಮಂಡಳಿ ಸಭೆ ಮುಂದೆ ತಂದು ಅಂತಿಮ ಗೊಳಿಸಲಾಗುವುದು’ ಎಂದು
ಬಿಡಿಎ ಆಯುಕ್ತ ಎಚ್‌.ಆರ್‌. ಮಹದೇವ್‌ “ಉದಯವಾಣಿ’ಗೆ ತಿಳಿಸಿದರು.

ಸಮಯ ವ್ಯರ್ಥ; ಸಿಟಿಜನ್‌ ಆ್ಯಕ್ಷನ್‌ ಫೋರಂ: “ಇದೊಂದು ವ್ಯರ್ಥ ಪ್ರಯತ್ನ. ಈ ಮೂಲಕ ಸರ್ಕಾರ ಅಥವಾ ಬಿಡಿಎ ಸಮಯ ವ್ಯಯ ಮಾಡುತ್ತಿದೆ ಹೊರತು, ಬೇರೇನೂ ಇಲ್ಲ. ಯಾಕೆಂದರೆ, ಈ ವಿಚಾರ ನ್ಯಾಯಾಲಯದ ಮುಂದಿದ್ದು, ಅಲ್ಲಿ ತೀರ್ಮಾನ ಆಗುವವರೆಗೂ ಏನೂ ಮಾಡುವಂತಿಲ್ಲ. ಅಷ್ಟಕ್ಕೂ ಸರ್ಕಾರಕ್ಕೆ ಮೆಟ್ರೋಪಾಲಿಟನ್‌ ಪ್ಲಾನಿಂಗ್‌ ಕಮಿಟಿ (ಎಂಪಿಸಿ) ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಇಚ್ಛೆಯೇ ಇದ್ದಂತಿಲ್ಲ’ ಎಂದು ಪರಿಷ್ಕೃತ ನಗರ
ಮಹಾಯೋಜನೆ-2031ಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಸಿಟಿಜನ್‌ ಆ್ಯಕ್ಷನ್‌ ಫೋರಂನ ಹಿರಿಯ
ಸದಸ್ಯ ವಿಜಯನ್‌ ಮೆನನ್‌ ಹೇಳುತ್ತಾರೆ.

ಯೋಜನೆ ಸಿದ್ಧತೆಯಲ್ಲಿ ಇತರೆ ಇಲಾಖೆಗಳ ಪಾತ್ರ
1 ಅಭಿವೃದ್ಧಿಯ ರೋಡ್‌ಮ್ಯಾಪ್‌ ಮತ್ತು ಸಂಪೂರ್ಣ ಸಹಭಾಗಿತ್ವ
2 ಯೋಜನೆ ನಿರೂಪಣೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ, ಬಿಎಂಆರ್‌ಸಿಎಲ್‌, ಡಿಯುಎಲ್‌ಟಿ, ಬೆಸ್ಕಾಂ, ಜಲಮಂಡಳಿಯಂತಹ ಸಂಸ್ಥೆಗಳಿಗೆ ಒಂದು ಪ್ರಕ್ರಿಯೆಯನ್ನು ಸಿದ್ಧಪಡಿಸುವುದು.
3 ಜಿಐಎಸ್‌ ಮತ್ತು ಡಾಟಾ ಅಪ್‌ಲೋಡ್‌ಗೆ ಶಿಷ್ಟಾಚಾರಗಳನ್ನು ರೂಪಿಸುವುದು. 
4 ಮಾಡಬೇಕಾದ ಕಾರ್ಯಚಟುವಟಿಕೆಗಳನ್ನು ಬಿಡಿಎ ಮತ್ತು ಇತರೆ ಏಜೆನ್ಸಿಗಳು ಸೇರಿ ಪಟ್ಟಿ ಮಾಡುವುದು.

ಮಾರ್ಪಾಡುಗಳೇನು?
1 2031ರ ಬದಲಿಗೆ 2050ರ ದೂರದೃಷ್ಟಿ ಇಟ್ಟುಕೊಂಡು ಯೋಜನೆ ರೂಪಿಸುವುದು.
2 ಸಂಚಾರ ಆಧಾರಿತ ಅಭಿವೃದ್ಧಿಗೆ ಆದ್ಯತೆ. ಇದಕ್ಕೆ ಡಿಯುಎಲ್‌ಟಿ, ಬಿಎಂಟಿಸಿ, ಬಿಎಂಆರ್‌ಸಿಎಲ್‌ ನೆರವು
3 ಪ್ರಸ್ತುತ ಅಭಿವೃದ್ಧಿ ಆಧರಿಸಿ ಯೋಜನೆ ಮತ್ತು ನೀತಿಗಳ ರಚನೆ
4 ನಗರ ಅಭಿವೃದ್ಧಿಗೆ ಸ್ಪಷ್ಟ ದೃಷ್ಟಿ-ಗುರಿ ನಿಗದಿಗೆ ಕ್ರಮ
5 ವಾಣಿಜ್ಯ, ಕೈಗಾರಿಕೆ, ಹಸಿರು ವಲಯ ಹೆಚ್ಚಳಕ್ಕೆ ಆದ್ಯತೆ 
6 ರಸ್ತೆ, ಉದ್ಯಾನ, ಮೂಲಸೌಕರ್ಯ ಅಭಿವೃದ್ಧಿ ಖಾತರಿಗೆ ಚೌಕಟ್ಟು

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.