ವಿಪತ್ತು ನಿಯಂತ್ರಣ ಅಣಕು ಪ್ರದರ್ಶನ
ಪೈಪ್‌ಲೈನ್ ಸಿಎಚ್ 300.532ಕಿಲೋ ಅಣುಕು ಪ್ರದರ್ಶನಕ್ಕೆ ಚಾಲನೆ
Team Udayavani, Mar 31, 2022, 5:21 PM IST
ನೆಲಮಂಗಲ:ಸಮಾಜದಲ್ಲಿ ಎದುರಾಗುವ ವಿಪತ್ತುಗಳ ಅಪಾಯವನ್ನು ನಿಯಂತ್ರಣ ಮಾಡಲು ಸ್ಥಳೀಯ ಜನರಿಂದ ಸಾಧ್ಯವಾಗಲಿದ್ದು ಅವರಿಗೆ ಜಾಗೃತಿ ಅನಿವಾರ್ಯ ಎಂದು ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ವಿನುತ ಸಲಹೆ ನೀಡಿದರು.
ತಾಲೂಕಿನ ಕಸಬಾ ಹೋಬಳಿಯ ಹೊಸಪಾಳ್ಯ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಪೆಟ್ರೋನೆಟ್ ಎಂ.ಎಚ್.ಬಿ ಲಿಮಿಟೆಡ್ ಸಹ ಯೋಗದೊಂದಿಗೆ ಪೈಪ್‌ಲೈನ್ ಸಿಎಚ್ 300.532ಕಿಲೋ ಅಣುಕು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಇಲಾಖೆಯ ಅಧಿಕಾರಿಗಳ ತಂಡ ವಿಪತ್ತು ಸಂಭವಿಸುವ ಸ್ಥಳಕ್ಕೆ ದಿಢೀರ್ ಬರಲು ಸಾಧ್ಯವಿಲ್ಲ ಆದ್ದರಿಂದ ಸ್ಥಳೀಯ ಜನರಲ್ಲಿ ಜಾಗೃತಿ ಇದ್ದರೆ ಬಹಳಷ್ಟು ಸಮಸ್ಯೆ ದೂರ ವಾಗಲಿದೆ, ಆರುತಿಂಗಳಿಗೊಮ್ಮೆ ಈ ರೀತಿಯ ಕಾರ್ಯಕ್ರಮ ಮಾಡಬೇಕಾಗಿದೆ. ಪೆಟ್ರೋನೆಟ್‌ನಲ್ಲಿ ಸಮಸ್ಯೆ ಉಂಟಾದಾಗ ಕಾರ್ಯನಿರ್ವಹಿಸುವ ರೀತಿ ಹಾಗೂ ಪೈಪ್‌ಗ್ಳಲ್ಲಿ ಇಂಧನ ಸೋರಿಕೆ ಉಂಟಾಗಿ ಅಪಾಯ ಎದುರಾಗುವ ಸಮಯದಲ್ಲಿ ಸ್ಥಳೀಯ ಹಳ್ಳಿಯ ಜನರು ಅಥವಾ ಸಮುದಾಯದ ಜನರು ಯಾವ ರೀತಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಮಾರ್ಗದರ್ಶನವನ್ನು ಅಣುಕು ಪ್ರದರ್ಶನದ ಮೂಲಕ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.
ಸಬ್ ಇನ್ಸ್ ಪೆಕ್ಟರ್ ಈರಮ್ಮ ಮಾತನಾಡಿ, ಅಪಾಯ ಎದುರಾದ ಸ್ಥಳಗಳಲ್ಲಿ ಕೆಲವು ಜನರು ಅಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸುವ ದುಸ್ಸಾಹಸಕ್ಕೆ ಮುಂದಾಗುತ್ತಾರೆ ಅದರಿಂದ ಬಹಳಷ್ಟು ಅಪಾಯ ಎದುರಿಸಬೇಕಾಗುತ್ತದೆ. ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಅಪಘಾತ ಗಳು, ಅಪರಾಧಗಳು, ಅಪಾಯಗಳು, ವಿಪತ್ತುಗಳನ್ನು ಸ್ಥಳೀಯ ಜನರು ಗುರುತಿಸಿ ತಿಳಿಸಿದರೇ ಅಂತಹ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸುವ ಕೆಲಸ ಮಾಡಬಹುದು, ಹಳ್ಳಿಯ ಜನರು ಎಚ್ಚರಗೊಳ್ಳಬೇಕಾಗಿದೆ ಎಂದರು.
ಅಣುಕು ಪ್ರದರ್ಶನ: ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್ ಸರಬರಾಜು ಮಾಡಲು ಅಳವಡಿಸಿರುವ ಪೈಪ್ ಗಳಲ್ಲಿ ಸೋರಿಕೆ, ಪೆಟ್ರೋಲ್ ಕಳ್ಳತನವಾದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡುವ ಜತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಪೆಟ್ರೋನೆಟ್ ತಂಡ, ಅಗ್ನಿಶಾಮಕ ತಂಡ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಿಂದ ಮಾಡುವ ಸೇವೆಗಳ ಅಣುಕು ಪ್ರದರ್ಶನವನ್ನು ನಡೆಸಲಾಯಿತು.
ಶ್ರೀನಿವಾಸಪುರ ಗ್ರಾಪಂ ಅಧ್ಯಕ್ಷೆ ಸವಿತಾವೆಂಕಟೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮಿತ್ರ, ಕನ್ನಡ ಸಾಹಿತ್ಯ ಪರಿಷತ್ ಸಂಘಸಂಸೆ §ಗಳ ಪ್ರತಿನಿಧಿ ವಿಜಯ್ ಹೊಸಪಾಳ್ಯ, ಗ್ರಾಮಲೆಕ್ಕಾಧಿಕಾರಿ ಪೂಜಾ, ಆರೋಗ್ಯ ಇಲಾಖೆ ಸಿಬ್ಬಂದಿ ನರಸಿಂಹಮೂರ್ತಿ, ಅಗ್ನಿಶಾಮಕದ ಅಧಿಕಾರಿ ಸಿದ್ದನಂಜಪ್ಪ , ಎಮ್.ಹೆಚ್.ಬಿ ಕಂಪನಿ ಮುಖ್ಯಸ್ಥ ಅಣಂ, ಬೈರಸಂದ್ರ ಶಾಲೆ ಮುಖ್ಯ ಶಿಕ್ಷಕ ವೆಂಕಟರಮಯ್ಯ, ಭಾರತೀಯ ಕಿಸಾನ್ ಸಂಘದ ಹನುಮಂತಯ್ಯ, ಹೊಸಪಾಳ್ಯ ಹಾಲು ಉತ್ಪಾದಕ ಸಹಕಾರ ಸಂಘದ ಉಪಾಧ್ಯಕ್ಷ ಸಿದ್ದಗಂಗಯ್ಯ, ಪೊಲೀಸ್ ಇಲಾಖೆಯ ಪ್ರದೀಪ್, ಚನ °ಬಸಪ ³ ಹಾಗೂ ಅಣುಕು ಪ್ರದ ರ್ಶನಕ್ಕೆ ಜಾಗ ನೀಡಿದ್ದ ಮಾಲೀಕ ಮುನಿರಾಜು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.