ಕಸ ನಿರ್ವಹಣೆ ಉಪನಿಯಮಕ್ಕೆ ಸರ್ಕಾರ ಅಸ್ತು
Team Udayavani, Jun 9, 2020, 6:22 AM IST
ಬೆಂಗಳೂರು: ನಗರದಲ್ಲಿ ವೈಜ್ಞಾನಿಕ ಕಸ ನಿರ್ವಹಣೆ ಹಾಗೂ ಕಸ ನಿರ್ವಹಣೆ ಲೋಪವೆಸಗುವವರ ಮೇಲೆ ದಂಡ ವಿಧಿಸುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿ ರಾಜ್ಯಪತ್ರ ಹೊರಡಿಸಿನಗರದಲ್ಲಿ ವೈಜ್ಞಾನಿಕ ಕಸ ವಿಲೇವಾರಿ, ಮೂಲ ಹಂತದಲ್ಲೇ ಕಸ ವಿಂಗಡಣೆ ಹಾಗೂ ಕಸ ನಿರ್ವಹಣೆ ನಿಯಮ ಉಲ್ಲಂಘಮಾಡುವವರಿಗೆ ದಂಡ ವಿಧಿಸುವ ಸಂಬಂಧ ಬಿಬಿಎಂಪಿ 2019ರ ಆಗಸ್ಟ್‌ನಲ್ಲಿ “ಬಿಬಿಎಂಕಸ ನಿರ್ವಹಣೆ ಉಪನಿಯಮ’ ರೂಪಿಸಿತ್ತು. ಇದನ್ನು ಕೌನ್ಸಿಲ್ ಸಭೆಯಲ್ಲಿ ಮಂಡಿಸಿ, ಸರ್ಕಾರಕ್ಕೆ ಕಳುಹಿಸಲಾಗಿತ್ತು. ಸದ್ಯ ಇಸರ್ಕಾರ ಅಸ್ತು ಎಂದಿದ್ದು, ಅಧಿಕೃತ ಜಾರಿಯಷ್ಟೇ ಬಾಕಿ ಇದೆ.
ರಾಜ್ಯಪತ್ರದಲ್ಲಿರುವ ಅಂಶಗಳು: ಕಸ ನಿರ್ವಹಣೆ ಉಪನಿಯಮದಲ್ಲಿ ಹಲವು ಸುಧಾರಿತ ಅಂಶಗಳನ್ನು ಸೇರಿಸಲಾಗಿಇದರಲ್ಲಿ ಪ್ರಮುಖವಾಗಿ ಸಾರ್ವಜನಿಕರು ತಮ್ಮ ಕಸವನ್ನು ತಾವೇ ಗೊಬಮಾಡಿಕೊಂಡರೇ ಘನತ್ಯಾಜ್ಯದ ಕರದಲ್ಲಿ ಶೇ. 50ರಷ್ಟು ರಿಯಾಯಿತಿ ಸಿಗಲಿದೆ. ಆದರೆ, ಅವಕಾಶವನ್ನು ತ್ಯಾಜ್ಯ ಸಂಗ್ರಹಕಾರರಿಗೆ ನೀಡಿಲ್ಲ. ಇನ್ನು ನಗರದಲ್ಲಿ ಕಸ ವಿಲೇವಾರಿಗೆ ಸಾಕಷ್ಟು ತೊಡಕಾಗಿರುವ ನಿಷೇಧಿತ ಪ್ಲಾಸ್ಟಿಕ್‌ಗೆ ಕಡಿವಾಣ ಹಾಕುವ ಅಂಶವನ್ನೂ ಸೇರಿಸಲಾಗಿದೆ. ಇಲ್ಲಿಯವರೆಗೆ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಕಾರರಿಗೆ ವಿಧಿಸುತ್ತಿದ್ದ ದಂಡವನ್ನು ಪ್ಲಾಸ್ಟಿಕ್ ಬಳಸುವವರ ಮೇಲೂ ಪ್ರಯೋಗಿಸಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ.
ಇದರಂತೆ ಗೃಹ ಬಳಕೆದಾರರಿಗೆ 500 ರಿಂದ 1 ಸಾವಿರ ರೂ. ವರೆಗೆ ವಾಣಿಜ್ಯ ಬಳಕೆದಾರರಿಗೆ 25 ಸಾವಿರ ರೂ.ನಿಂದ 50 ಸಾವಿರ ರೂ.ವರೆಗೆ ದಂಡ ವಿಧಿಸುವ ಅವಕಾಶವಿದೆ. ಉಳಿದಂತೆ ಪ್ರಮುಖವಾಗಿ ಪ್ರತಿ ವರ್ಷ ಕಸದ ಮೇಲೆ ಶೇ.5ರಷ್ಟು ಕರ ವಿಧಿಸುವುದಕ್ಕೂ ಅವಕಾಶ ನೀಡಲಾಗಿದೆ. ಇದರಂತೆ ಪ್ರತಿ ವರ್ಷ ಆಸ್ತಿತೆರಿಗೆದಾರರಿಗೆ ಆಸ್ತಿ ತೆರಿಗೆಯ ಶೇ.5ರಷ್ಟನ್ನು ಹೆಚ್ಚುವರಿಯಾಗಿ ಘನತ್ಯಾಜ್ಯನಿರ್ವಹಣಾ ಉಪಕರ ಸಂಗ್ರಹಿಸಲು ನಿರ್ಧರಿಸಲಾಗಿದೆ. ಈ ಮೊತ್ತವನ್ನು ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲಾಗುತ್ತದೆ. ಶೇ.5ರಷ್ಟು ಉಪಕರ ಹೆಚ್ಚಿಸುವುದಕ್ಕೂ ಅವಕಾಶ ನೀಡಲಾಗಿದೆ. ಇನ್ನು ಮೂರು ತಿಂಗಳು ಘನತ್ಯಾಜ್ಯ ಶುಲ್ಕ ಪಾವತಿ ಮಾಡಿದಿದ್ದರೆ ಮೇಲೆ¤ರಿಗೆ ರೂಪದಲ್ಲಿ ಪ್ರತಿ ತಿಂಗಳು ಶೇ.2ರಷ್ಟು ಶುಲ್ಕ ವಿಧಿಸುವ ಕಠಿಣ ಕಾನೂನು ರೂಪಿಸಲಾಗಿದೆ.
ಕಟ್ಟಡವಾರು ಉಪಕರ ವಿವರ: ನಗರದಲ್ಲಿರುವ 1000 ಚ.ಅಡಿವರೆಗಿನ ವಿಸ್ತೀರ್ಣ ವಾಸದ ಕಟ್ಟಡಕ್ಕೆ ಪ್ರತಿ ತಿಂಗಳು 30 ರೂ. ಹಾಗೂ 1000 ಚ. ಅಡಿಯಿಂದ ಗರಿಷ್ಠ 5000 ಚ.ಅಡಿ ವರೆಗಿನ ನಿವಾಸಿ ಕಟ್ಟಡಗಳಿಗೆ ಆಯಾ ಕಟ್ಟಡ ವಿಸ್ತೀರ್ಣಕ್ಕೆ ಅನುಗುಣವಾಗಿ 200 ರೂ.ವರೆಗೆ ಮಾಸಿಕ ಘನತ್ಯಾಜ್ಯ ಉಪಕರ ನಿಗದಿ ಮಾಡಲಾಗಿದೆ. ಇದೇ ಮಾದರಿಯಲ್ಲಿ ಕೈಗಾರಿಕಾ ಕಟ್ಟಡಗಳಿಗೆ 1000 ಚ.ಅಡಿವರೆಗೆ 100 ರೂ. ಹಾಗೂ ಅದಕ್ಕೆ ಮೇಲ್ಪಟ್ಟು 5000 ಚ.ಅಡಿ ವರೆಗೆ ಗರಿಷ್ಠ 300 ರೂ. ವರೆಗೆ ಮಾಸಿಕ ತ್ಯಾಜ್ಯ ಉಪಕರ ವಿಧಿಸಿದೆ. ಜತೆಗೆ ಹೋಟೆಲ್, ಮಾಲ್, ಕಲ್ಯಾಣ ಮಂಟಪ ಸೇರಿದಂತೆ ಬೃಹತ್ ತ್ಯಾಜ್ಯ ಉತ್ಪಾದಕ ಸಂಸ್ಥೆಗಳಿಗೆ ಆರಂಭಿಕ 10 ಸಾವಿರ ಚ.ಅಡಿವರೆಗೆ 300 ರೂ. ನಿಂದ ಗರಿಷ್ಠ 50 ಸಾವಿರ ಚ.ಅಡಿ ವರೆಗಿನ ಕಟ್ಟಡಗಳಿಗೆ 500 ರೂ., 50 ಸಾವಿರ ಚ. ಅಡಿಗಿಂತ ಹೆಚ್ಚಿರುವ ಕಟ್ಟಡಗಳಿಗೆ 600 ರೂ. ಉಪಕರ ನಿಗದಿ ಮಾಡಲಾಗಿದೆ.
ಸಮಾರಂಭದ ಕಸಕ್ಕೂ ಹಣ: ನಗರದಲ್ಲಿ ಇನ್ನು ಮುಂದೆ ಯಾವುದೇ ಸಭೆ, ಸಮಾರಂಭ ನಡೆಸಿ ಬೃಹತ್ ಪ್ರಮಾಣದಲ್ಲಿ ಕಸ ಉತ್ಪಾದನೆಯಾದರೆ, ಅದರ ವಿಲೇವಾರಿಗೆ ಪಾಲಿಕೆಗೆ ಪ್ರತಿ ಕೆ.ಜಿಗೆ ಬಿಬಿಎಂಪಿಗೆ ಪ್ರತಿ ಕೆ.ಜಿ. ಕಸಕ್ಕೆ ಆರು ರೂ. ನೀಡಬೇಕು! ನಗರದ ಯಾವುದೇ ಸಮುದಾಯ ಭವನ, ಹೋಟೆಲ್ ಅಥವಾ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಒಂದು ವಾರ ಅಥವಾ ಇದಕ್ಕಿಂತ ಹೆಚ್ಚು ದಿನಗಳ ಕಾಲ ನಡೆಯುವ ಎಲ್ಲ ಕಾರ್ಯಕ್ರಮ ಮತ್ತು ವಸ್ತು ಪ್ರದರ್ಶನಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ವಿಲೇವಾರಿ ಅವಧಿವಾರು ಪ್ರತ್ಯೇಕ ಕರ ನಿಗದಿ ಮಾಡಲಾಗಿದೆ. ಇದರಂತೆ ಒಂದು ವಾರದವರೆಗೆ 1500 ರೂ., ಒಂದು ವಾರ ಮೇಲ್ಪಟ್ಟು ಒಂದುತಿಂಗಳ ವರೆಗೆ 3000 ರೂ. ಹಾಗೂ ಒಂದು ತಿಂಗಳ ಮೇಲ್ಪಟ್ಟ ಕಾರ್ಯಕ್ರಮಗಳಿಗೆ 6,000 ರೂ. ಕರ ನಿಗದಿಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Bengaluru: ಬಿಷಪ್ ಕಾಟನ್ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್: ಆತಂಕ
Bengaluru: ಮನೆಯ ಬಾಲ್ಕನಿಯಲ್ಲಿ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ದಂಪತಿ ಬಂಧನ
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
MUST WATCH
ಹೊಸ ಸೇರ್ಪಡೆ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Wandse, ಚಿತ್ತೂರು, ಇಡೂರು: ಹೊಂಡಗಳಿಗೆ ಮುಕ್ತಿ ಕೊಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.