![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Nov 10, 2023, 12:32 PM IST
ಬೆಂಗಳೂರು: ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯ ಚರಣೆ ಸ್ಥಗಿತಗೊಳಿಸಿ ವರ್ಷಗಳೇ ಕಳೆದರೂ ಸರ್ಕಾರ ವೈದ್ಯರು, ಸಿಬ್ಬಂದಿ ನೇಮಿಸದೇ ನಿರ್ಲಕ್ಷ್ಯ ಮಾಡಿದೆ.
ಶಿವಾಜಿನಗರದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಟಕ್ಕರ್ ನೀಡುವಷ್ಟು ಸುಸಜ್ಜಿತ ಹಾಗೂ ಸುಂದರವಾಗಿ 74 ಕೋಟಿ ರೂ.ನಲ್ಲಿ ನಾಲ್ಕು ಮಹಡಿವುಳ್ಳ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ. 130 ಕ್ಕೂ ಅಧಿಕ ಹಾಸಿಗೆಗಳಿವೆ. ಶಸ್ತ್ರ ಚಿಕಿತ್ಸಾ ವಿಭಾಗ, ತೀವ್ರ ನಿಗಾ ಘಟಕ, ತುರ್ತು ಸೇವೆ, ಪ್ರಯೋಗಾಲಯ ವಿಭಾಗ, ಹೊಸ ಹಾಸಿಗೆಗಳು, ಹೃದ್ರೋಗ, ನ್ಯೂರೋ ಸೇರಿ ವಿವಿಧ ಚಿಕಿತ್ಸಾ ಕೇಂದ್ರಗಳಿವೆ. ಆದರೆ, ಅವುಗಳೆಲ್ಲವೂ ಬಳಕೆ ಆಗದೇ ಮೂಲೆಗುಂಪಾಗಿವೆ. ಏಕೆಂದರೆ ಇಲ್ಲಿ ಒಬ್ಬನೇ ಒಬ್ಬ ವೈದ್ಯ ಹಾಗೂ ಸಿಬ್ಬಂದಿ ಇಲ್ಲ. ಎರಡು ವರ್ಷಗಳ ಹಿಂದೆಯೇ ಆಸ್ಪತ್ರೆ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
2020ರಲ್ಲಿ ಉದ್ಘಾಟನೆ!: ಈ ಆಸ್ಪತ್ರೆ 2020ರಲ್ಲಿ ಲೋಕಾ ರ್ಪಣೆ ಮಾಡಲಾಗಿತ್ತು. ಕೋವಿಡ್ ಸಂದರ್ಭ ದಲ್ಲಿ ಕೊರೊನಾ ಪಾಸಿಟಿವ್ ಬಂದ ರೋಗಿ ಗಳ ಚಿಕಿತ್ಸೆಗೆ ಈ ಆಸ್ಪತ್ರೆ ಬಳಕೆ ಮಾಡಲಾಗಿತ್ತು. ಈ ವೇಳೆ 30 ಎಂಬಿಬಿಎಸ್ ವೈದ್ಯರು, ಶಸ್ತ್ರಚಿಕಿತ್ಸಾ ತಜ್ಞರು, ಹೃದ್ರೋಗ ತಜ್ಞರು, ರೇಡಿ ಯಾಲಜಿಸ್ಟ್ ಸೇರಿ 10 ತಜ್ಞ ವೈದ್ಯರು, ಒಬ್ಬರು ಅಧೀಕ್ಷಕ ವೈದ್ಯರು, ಇಬ್ಬರು ಫಾರ್ಮಸಿಸ್ಟ್, ಇಬ್ಬರು ಆಹಾರ ತಜ್ಞರು, 6 ಶುಶ್ರೂಷಕರು, 6 ಪ್ರಯೋಗಾಲಯ ತಂತ್ರಜ್ಞರು, 15 ಭದ್ರತಾ ಸಿಬ್ಬಂದಿ, 60 ಡಿ ಗುಂಪಿನ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಸಂಪೂರ್ಣ ಸ್ಥಗಿತ: ಕೋವಿಡ್ ಪ್ರಕರಣಗಳು ಕಡಿಮೆ ಆದಂತೆ ಇಲ್ಲಿ ನಿಯೋಜಿಸಿದ ವೈದ್ಯರು, ಸಿಬ್ಬಂದಿ ಗಳ ಸಂಖ್ಯೆಯೂ ಕಡಿಮೆಯಾಗುತ್ತಾ ಬಂತು. ಬೆಂಗಳೂರು ಮೆಡಿಕಲ್ ಕಾಲೇಜು ನೇಮಿ ಸಿದ ವೈದ್ಯರನ್ನು ಹಂತವಾಗಿ ಹಿಂಪಡೆದುಕೊಂಡಿತು. ಕೆಲ ಸಮಯದವರೆಗೆ ನರ ರೋಗಗಳಿಗೆ ನೀಡುತ್ತಿದ್ದ ಒಪಿಡಿ ಸೇವೆ ಬಂದ್ ಮಾಡಲಾಯಿತು. ವಾರದ ಹಿಂದೆ ಕಾರ್ಯಾ ಚರಣೆ ನಡೆಸುತ್ತಿದ್ದ ಮಾನಸಿಕ ರೋಗಿಗಳ ಒಪಿಡಿ ವಿಭಾಗ ಪ್ರಸ್ತುತ ಸ್ಥಗಿತಗೊಂಡಿದೆ.
ವೈದ್ಯರೇ ಇಲ್ಲ ಸ್ವಾಮೀ!: ಈ ಆಸ್ಪತ್ರೆಯನ್ನು ಕಾರ್ಡಿಯಾಲಾಜಿ, ನ್ಯೂರಾಲಜಿಸ್ಟ್, ಗ್ಯಾಸ್ಟ್ರೋಲಜಿ, ಯುರಾಲಜಿ ವಿಭಾಗದ ರೋಗಿಗಳಿಗೆ ವಿಶೇಷ ಚಿಕಿತ್ಸೆ ನೀಡಲು ನಿರ್ಮಾಣ ಮಾಡಲಾಗಿತ್ತು. ಆದರೆ, ಇದಕ್ಕೆ ತಜ್ಞ ವೈದ್ಯರ ತಂಡವೇ ಇಲ್ಲ. ಕೋಟ್ಯಂತರ ರೂ. ವ್ಯಯಿಸಿ ಹೊಸ ಕಟ್ಟಡ ನಿರ್ಮಿಸಿ ಭೂತ ಬಂಗಲೆಯಾಗಿಸುವ ಬದಲಾಗಿ, ಈಗಾಗಲೇ ನಿರ್ಮಾಣವಾಗಿ ಕಾರ್ಯಾಚರಣೆ ಮಾಡದ ಆಸ್ಪತ್ರೆಗಳನ್ನು ಪ್ರಾರಂಭಿಸುವತ್ತ ಸರ್ಕಾರ ಚಿಂತನೆ ಮಾಡಬೇಕಾಗಿದೆ.
ಯಾರಿಗೆ ಹೇಗೆ ಅನುಕೂಲ: ಈ ಆಸ್ಪತ್ರೆಯು ಕಾರ್ಯಾ ರಂಭವಾದರೆ ಶಿವಾಜಿನಗರದ ಸುತ್ತ ಮುತ್ತ ಲಿನ ಜನರಿಗೆ ಅನುಕೂಲವಾಗಲಿದೆ. ಹೃದ ಯಾಘಾತ ಹಾಗೂ ನರ ಸಂಬಂಧಿಸಿದ ತುರ್ತು ಅನಾರೋಗ್ಯದ ಗೋಲ್ಡನ್ ಅವಧಿಯಲ್ಲಿ ಜಯ ದೇವ ಹಾಗೂ ನಿಮ್ಹಾನ್ಸ್ ಬದಲಾಗಿ ಶಿವಾಜಿ ನಗರದ ಚರಕದಲ್ಲಿ ಚಿಕಿತ್ಸೆ ದೊರಕಿದರೆ ರೋಗಿಗಳಿಗೆ ಸರಿಯಾದ ಸಂದರ್ಭದಲ್ಲಿ ಚಿಕಿತ್ಸೆ ಸಿಗಲಿದೆ.
ಖಾಲಿ -ಖಾಲಿ: ಪ್ರಸ್ತುತ ಆಸ್ಪತ್ರೆಯೊಳಗೆ ಇಬ್ಬರು ಸಿಬ್ಬಂದಿ ಇದ್ದಾರೆ. ಅವರನ್ನು ಹೊರತು ಪಡಿಸಿ ಆಚೆ ಕಡೆ ಗಮನ ಹರಿಸಿದರೆ ಇಲಿ, ಬೆಕ್ಕುಗಳು ಕಾಣಸಿಗುತ್ತದೆ. ಇಡೀ ಆಸ್ಪತ್ರೆ ಖಾಲಿಯಾಗಿದೆ. ವೆಂಟಿಲೇರ್ ಸಿಲಿಂಡರ್‌ಗಳು ಕಟ್ಟಡ ಹೊರ ಭಾಗದ ಕೊಠಡಿಯಲ್ಲಿ ಬೀಗ ಹಾಕಿ ಇಡಲಾಗಿದೆ. ವ್ಯವಸ್ಥೆಗಳಿದ್ದರೂ ವೈದ್ಯರು ನೇಮಕವಾಗದ ಆಸ್ಪತ್ರೆ ನೋಡಿ ಜನ ಹಿಡಿ ಶಾಪ ಹಾಕುತ್ತಿದ್ದಾರೆ.
ಸೇವಾ ಮನೋಭಾವಕ್ಕಿಲ್ಲ ಗೌರವ
ಸೇವಾ ಮನೋಭಾವದಿಂದ ಇನ್ಫೋಸಿಸ್ ಫೌಂಡೇಶನ್ ಓಟಿ ಟೇಬಲ್, ಲೈಟ್ಸ್, ಪೀಠೊಪಕರಣ, ಐಸಿಯು ಬೆಡ್, ಟ್ರಾಲಿ, ಪ್ರೀಮಿಯಂ ಇಂಟರ್ವೆನÒನಲ್ ಕಾರ್ಡಿಯಾಲಜಿ ಲ್ಯಾಬ್, ವೆಂಟಿಲೇಟರ್, ಇಸಿಜಿ, ವೈದ್ಯಕೀಯ ಅನಿಲ ಪೈಪ್, ಮೊಬೈಲ್ ಎಕ್ಸ್‌ರೇ, ರೋಗಿಗಳ ಮಾನಿಟರಿಂಗ್ ವ್ಯವಸ್ಥೆ ಸೇರಿ ಇತರೆ ಸೌಲಭ್ಯಗಳನ್ನು ಕಲ್ಪಿಸಲು 10.25 ಕೋಟಿ ರೂ. ಧನಸಹಾಯ ನೀಡಿದೆ. ಆದರೆ, ಸರ್ಕಾರಕ್ಕೆ ಸೇವಾ ಮನೋಭಾವದಿಂದ ನೀಡಿರುವ ವೈದ್ಯಕೀಯ ಉಪಕರಣಗಳು ಬಳಕೆಯಾಗದೇ ಮೂಲೆ ಗುಂಪಾಗಿವೆ.
ಸರ್ಕಾರದಿಂದ ಅನುಮತಿ ದೊರೆತ ಅನಂತರ ಆಸ್ಪತ್ರೆಯ ಕಾರ್ಯಾ ಚರಣೆ ಪ್ರಾರಂಭವಾಗಲಿದೆ. ಮುಂದಿನ ತಿಂಗಳೊಳಗಾಗಿ 150 ವೈದ್ಯರು, ಸಿಬ್ಬಂದಿಗಳ ನೇಮಕಾತಿ ನಡೆಯಲಿದೆ. ನಂತರ ಸಾರ್ವಜನಿಕರ ಸೇವೆಗೆ ತೆರೆಯಲಾಗುತ್ತದೆ. ● ಡಾ.ಮನೋಜ್ ಕುಮಾರ್, ನಿರ್ದೇಶಕರು(ಡೀನ್), ಬೌರಿಂಗ್ ಬೆಂಗಳೂರು
● ತೃಪ್ತಿ ಕುಮ್ರಗೋಡು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.