![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 6, 2020, 5:10 AM IST
ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಈಗ ಹಸಿರು ಹೊದಿಕೆ ಹಾಸಲಾಗಿದೆ. ಈ ಹಚ್ಚಹಸಿರಿ ನ ನಡುವೆ ಲೋಹದ ಹಕ್ಕಿಗಳ ವಿಹಾರದಿಂದಾಗಿ ಇಡೀ ನಿಲ್ದಾಣಕ್ಕೆ ವಿಶಿಷ್ಟ ಮೆರುಗು ಬಂದಿದೆ. ನಿಲ್ದಾಣ ಹಾಗೂ ಅದರ ಸುತ್ತಲಿನ ನೂರು ಎಕರೆ ಪ್ರದೇಶ ಹಸಿರ ಸಿರಿಯಿಂದ ಕಂಗೊಳಿಸುತ್ತಿದೆ.
ಇದಕ್ಕೆ ಕಾರಣ ಸ್ಮಾರ್ಟ್ ಸ್ವಯಂಚಾಲಿತ ನೀರಾವರಿ ವ್ಯವಸ್ಥೆ. ಹವಾಮಾನ ಮತ್ತು ತಂತ್ರಜ್ಞಾನ ಆಧಾರದಿಂದ ಈ ವ್ಯವಸ್ಥೆ ಕೆಲಸ ಮಾಡುತ್ತ ದೆ. ಮೊಬೈಲ್ ಫೋನ್ ಮೂಲಕ ದೂರದಿಂ ದಲೇ ಈ ವ್ಯವಸ್ಥೆ ನಿರ್ವಹಿಸಬಹುದು. ಇದರಿಂದ ಶೇ. 30 ನೀರನ್ನು ಉಳಿಸಬಹುದಾಗಿದೆ. ಇದರೊಂ ದಿಗೆ ಇಂತಹ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ ಎಂದು ಬಿಐಎಎಲ್ ಹೇಳಿದೆ.
ಲಾಕ್‌ಡೌನ್‌ನಂತಹ ಸಂದರ್ಭದಲ್ಲಿ ಈ ವಿಸ್ತಾರವಾದ ತೋಟದ ಪ್ರದೇಶವನ್ನು ಕಾರ್ಯಕ್ಷಮತೆಯೊಂದಿಗೆ ನಿರ್ವಹಿಸಲು ಈ ವ್ಯವಸ್ಥೆಯಿಂದ ಸಾಧ್ಯವಾಗಲಿದೆ. ಮಣ್ಣಿನ ತೇವಾಂಶ, ನೀರಿನ ಹರಿವು ಮತ್ತು ಮಳೆಯ ಪ್ರಮಾಣ ಅಳೆಯುವ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಪ್ರತಿ ಗಿಡಕ್ಕೆ ಅಗತ್ಯ ಇರುವಷ್ಟು ಮಾತ್ರ ನೀರನ್ನು ಹನಿ ನೀರಾವರಿ ಪದಟಛಿತಿಯಲ್ಲಿ ಪೂರೈಸಲಾಗುತ್ತದೆ ಎಂದು ತಿಳಿಸಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.