Liquid Nitrogen ಪಾನ್ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ
ಮದುವೆ ಮನೆಯಲ್ಲಿ ಪಾನ್ ಸೇವಿಸಿ ಅಸ್ವಸ್ಥಳಾದ ಬಾಲಕಿ
Team Udayavani, May 21, 2024, 10:00 AM IST
ಬೆಂಗಳೂರು: ಮದುವೆ ಸಮಾರಂಭದ ಆರತಕ್ಷತೆ ಕಾರ್ಯಕ್ರಮದಲ್ಲಿ “ಲಿಕ್ವಿಡ್ ನೈಟ್ರೋಜನ್’ನಿಂದ ಕೂಡಿದ ಪಾನ್ ಸೇವಿಸಿ, ಆಸ್ಪತ್ರೆಗೆ ದಾಖಲಾದ ಘಟನೆ ತಡವಾಗಿ ವರದಿಯಾಗಿದೆ.
ಬೆಂಗಳೂರಿನ 12 ವರ್ಷದ ಬಾಲಕಿಯೊಬ್ಬರು ಇತ್ತೀಚೆಗೆ ಸಂಬಂಧಿಕರ ಮದುವೆ ಸಮಾರಂಭದ ಅರತಕ್ಷತೆಗೆ ತೆರಳಿ, ಅಲ್ಲಿ ಊಟದ ಬಳಿಕ ಲಿಕ್ವಿಡ್ ನೈಟ್ರೋಜನ್‌ನಿಂದ ಕೂಡಿದ ಪಾನ್ ಸೇವಿಸಿದ್ದಾರೆ.
ಈ ವೇಳೆ ಅನಾರೋಗ್ಯಕ್ಕೆ ಒಳಗಾದ ಬಾಲಕಿಯನ್ನು ಎಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಡಾ. ವಿಜಯ ಎಚ್.ಎಸ್. ಅವರು ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಲಿಕ್ವಿಡ್ ನೈಟ್ರೋಜನ್‌ನಿಂದ ಕೂಡಿದ ಪಾನ್ ಸೇವನೆಯಿಂದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರವಾಗಿರುವುದು ದೃಢಪಡಿಸಿದ್ದಾರೆ.
ಈ ವೇಳೆ ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಿ, ರಂಧ್ರವನ್ನು ಮುಚ್ಚಿದ್ದಾರೆ. ಬಾಲಕಿ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆ ದೃಢಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.