ಹನಿಟ್ರ್ಯಾಪ್: ಇಬ್ಬರು ವಂಚಕರ ಬಂಧನ
Team Udayavani, Apr 16, 2021, 12:21 PM IST
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಕಲಿ ಫೇಸ್‌ಬುಕ್‌ಖಾತೆ ಸೃಷ್ಟಿಸಿ ಯುವಕರನ್ನು ಹನಿಟ್ರ್ಯಾಪ್‌ಗೆ ಬೀಳಿಸಿಕೊಂಡುಬೆದರಿಕೆ ಹಾಕಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಕೆ.ಆರ್.ಪುರಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ರಾಬಿನ್(22) ಹಾಗೂ ಜಾವೇದ್(25) ಬಂಧಿತರು. ಇವರು ಸಾಮಾಜಿಕ ಜಾಲತಾಣದ ಮೂಲಕಯುವಕರಿಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲ ದೃಶ್ಯಗಳಿಂದಗಮನ ಸೆಳೆದು ಬಳಿಕ ಬ್ಲಾಕ್‌ಮೇಲ್‌ಮಾಡಿ ವಂಚಿಸುತ್ತಿದ್ದರು ಎಂದುಪೊಲೀಸರು ತಿಳಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿಯುವಕನಿಗೆ ಬಲೆ ಬೀಸಿ ಹನಿಟ್ರಾÂಪ್‌ನಲ್ಲಿ ಬೀಳಿಸಿಕೊಂಡ ಗ್ಯಾಂಗ್ ಒಂದುಕೆ.ಆರ್.ಪುರ ನಿವಾಸಿ ಅವಿನಾಶ್(26)ಎಂಬ ಯುವಕನ ಪ್ರಾಣ ತೆಗೆದಿತ್ತು.
ಅಶ್ಲೀಲ ದೃಶ್ಯ ಹರಿಬಿಡುವುದಾಗಿಹೆದರಿಸುತ್ತಿದ್ದ ತಂಡದ ಕಿರುಕುಳಕ್ಕೆಬೇಸತ್ತ ಯುವಕ ಮಾ. 23ರಂದುಮನೆಯಲ್ಲೇ ನೇಣಿಗೆ ಶರಣಾಗಿದ್ದ.
ಮಾನಕ್ಕೆ ಅಂಜಿ ಆತ್ಮಹತ್ಯೆ: ಅವಿನಾಶ್‌ಎಂಬಿಎ ವ್ಯಾಸಂಗ ಮುಗಿಸಿ ಐಎಎಸ್‌ಪರೀಕ್ಷೆಗೆ ತಯಾರಿ ನಡೆಸುತ್ತಿದ್ದನು. ಕೆ.ಆರ್.ಪುರದಲ್ಲಿರುವಕೋಚಿಂಗ್ ಸೆಂಟರ್‌ಗೂ ಸೇರಿಕೊಂಡಿದ್ದ. ಸಾಮಾಜಿಕಜಾಲತಾಣದಲ್ಲಿ ಸಕ್ರಿಯವಾಗಿದ್ದ. ಈ ನಡುವೆ ನೇಹಾ ಶರ್ಮಾಎಂಬ ನಕಲಿ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಬಳಿಕಸಲುಗೆಯಿಂದ ಮಾತನಾಡಿ ವಿಡಿಯೊ ಕರೆ ಮಾಡಲುಆರಂಭಿಸಿದ್ದಾರೆ. ಕ್ರಮೇಣ ಸಲುಗೆ ಬೆಳೆಸಿಕೊಂಡು ಯುವಕನಿಗೆತಿಳಿಯದಂತೆ ಅಶ್ಲೀಲ ದೃಶ್ಯಗಳ ರೆಕಾರ್ಡ್ ಮಾಡಿಕೊಂಡಿದ್ದಾರೆ.ಇದಾದ ಬಳಿಕ ಯುವಕನನ್ನೇ ಟಾರ್ಗೆಟ್ ಮಾಡಿದ ತಂಡ,ಹಂತ ಹಂತವಾಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಯುವಕಮಾನಕ್ಕೆ ಅಂಜಿ ಹಣ ನೀಡುತ್ತಾ ಬಂದಿದ್ದಾನೆ. ಬಳಿಕ ಸಾಲ ಮಾಡಿಅವರ ಖಾತೆಗೆ ಹಣ ಹಾಕಿದ್ದಾನೆ. ಆದರೆ ತಂಡ ಪದೇ ಪದೆಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಸಾಮಾಜಿಕಜಾಲತಾಣದಲ್ಲಿ ವಿಡಿಯೊ ಹರಿಬಿಡುವುದಾಗಿ ಬೆದರಿಕೆ ಹಾಕಿದೆ.ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತುಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿಗಳನ್ನು ಬಂಧಿಸಿದ್ದಾರೆ.
ನಂಬಿಸಿ ಮೋಸಗೈದರು
ಅಕ್ರಮವಾಗಿ ಹಣ ಸಂಪಾದಿಸುವ ದುರುದ್ದೇಶದಿಂದ ಫೇಸ್‌ಬುಕ್‌ನಲ್ಲಿ ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಮೃತ ಅವಿನಾಶ್‌ಗೆ ಬ್ಲಾಕ್‌ವೆುàಲ್ ಮಾಡಲು ರಿಕ್ವೆಸ್ಟ್ ಕಳುಹಿಸಿದ್ದೆವು. ಬಳಿಕ ಪರಿಚಯ ಮಾಡಿಕೊಂಡು ಮೆಸೆಂಜರ್‌ನಲ್ಲಿ ಅವಿನಾಶ್‌ಗೆ ವಿಡಿಯೊ ಕಾಲ್ ಮಾಡಿ ನೈಜಯುವತಿಯೇ ವಿಡಿಯೊ ಕಾಲ್ ಮಾಡುತ್ತಿರುವಂತೆನಂಬಿಸಿದ್ದೆವು. ಮೊದಲೇ ಇನ್ನೊಂದು ಮೊಬೈಲ್‌ನಲ್ಲಿಸಂಗ್ರಹಿಸಿದ್ದ ಮಹಿಳೆಯರ ಅಶ್ಲೀಲ ವಿಡಿಯೊ ತೋರಿಸಿ,ನೀನು ಸಹ ನಗ್ನಗೊಳ್ಳುವಂತೆ ಪ್ರೇರೇಪಿಸಿ, ವಿಡಿಯೊರಿಕಾರ್ಡ್ ಮಾಡಿಕೊಂಡಿದ್ದೆವು. ಬಳಿಕ, ವಿಡಿಯೊ ತೋರಿಸಿಹಣಕ್ಕೆ ಬೇಡಿಕೆ ಇಟ್ಟಿದ್ದೆವು. ಹಣ ವರ್ಗಾಯಿಸದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಅಪ್ಲೋಡ್‌ಮಾಡುವುದಾಗಿ ಬೆದರಿಸಿ, 35,680 ರೂ. ಹಣ ಪಡೆದಿದ್ದೆವು ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದುಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.