ನಗರದಲ್ಲಿ ಹೆಚ್ಚಿದ ಕೋವಿಡ್‌ 19 ಆತಂಕ


Team Udayavani, Jun 14, 2020, 5:36 AM IST

anxity covids

ಬೆಂಗಳೂರು: ನಗರದಲ್ಲಿ ಶನಿವಾರ ಒಟ್ಟು 31ಜನರಲ್ಲಿ ಕೋವಿಡ್‌ 19 ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 648ಕ್ಕೆ ಏರಿಕೆಯಾದಂತಾಗಿದೆ. ಶನಿವಾರ ಸೋಂಕು ದೃಢಪಟ್ಟವರಲ್ಲಿ ತುಮಕೂರಿನಿಂದ ಬಂದವರೊಬ್ಬರಿದ್ದಾರೆ.  ಇತ್ತಿಚೆಗೆ ಕೊಡಗಿನಿಂದ ಬಂದ ಒಬ್ಬರು ಬಿಟ್ಟರೆ ಉಳಿದ ಜಿಲ್ಲೆಗಳಿಂದ ಬಂದವರಲ್ಲಿ ಸೋಂಕು ದೃಢಪಟ್ಟಿರಲಿಲ್ಲ. ಮಂಡ್ಯದಿಂದ ಬಂದ ಒಬ್ಬ ಆರೋಪಿ, ನಿಮ್ಹಾನ್ಸ್‌ನಲ್ಲಿನ ಸಹಾಯಕ ಸಿಬ್ಬಂದಿ (ಹೌಸ್‌ಕೀಪಿಂಗ್‌)ಗೂ ಸೋಂಕು ದೃಢಪಟ್ಟಿದೆ.

ಇದು ಈ ವಲಯಗಳಲ್ಲಿನ ಇತರ ಸಿಬ್ಬಂದಿಗಳಲ್ಲೂ ಆತಂಕ ಮೂಡಿಸಿದೆ. ಸೋಂಕು ದೃಢಪಟ್ಟವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಒಟ್ಟು ಹತ್ತು ಮಂದಿಯಲ್ಲಿ, ಮಹಾರಾಷ್ಟ್ರ ಮತ್ತು ದೆಹಲಿಯಿಂದ  ಬಂದ ತಲಾ ಒಬ್ಬರಲ್ಲಿ ಸೋಂಕು ಇರುವುದು ಖಚಿತವಾಗಿದೆ. ಕೋವಿಡ್‌ 19 ಲಕ್ಷಣವಿದ್ದು, ಸೋಂಕು ಪರೀಕ್ಷಗೆ ಒಳಪಟ್ಟ 12 ಜನರಲ್ಲಿ ಹಾಗೂ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ  ಮೂರು ಸೋಂಕು ಪ್ರಕರಣಗಳಲ್ಲಿ ಸಂಪರ್ಕ ಪತ್ತೆಯಾಗಿಲ್ಲ.

ಶನಿವಾರ ಎಲ್ಲೆಲ್ಲಿ ಸೋಂಕು ಪ್ರಕರಣಗಳು ಪತ್ತೆ: ಜಯನಗರ ಮೊದಲ ಬ್ಲಾಕ್‌ ನ 53 ವರ್ಷದ ಮಹಿಳೆ, ಸೋಮೇಶ್ವರ ನಗರದ 63 ವರ್ಷದ ಪುರುಷ, ಕಾಮರಾಜ ನಗರದ 57  ವರ್ಷದ ಪುರುಷ, ಶ್ರೀನಗರದಲ್ಲಿನ 54 ವರ್ಷದ ಪುರುಷ, ನ್ಯೂ ಗುಡ್ಡದಹಳ್ಳಿಯಲ್ಲಿ ಒಂದು ವರ್ಷದ ಮಗುವಿಗೆ ಸೋಂಕು ದೃಢಪಟ್ಟಿದೆ. ಪ್ಯಾಲೇಸ್‌ ರಸ್ತೆಯ 68 ವರ್ಷದ ಪುರುಷ, ನೀಲಸಂದ್ರದ 68 ವರ್ಷದ ಪುರುಷರೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.

ನಗರ ಜಿಲ್ಲಾ ವ್ಯಾಪ್ತಿಯಲ್ಲಿ  ಸರ್ಜಾಪುರ ರಸ್ತೆ ವ್ಯಾಪ್ತಿಯ 49 ವರ್ಷದ ಪುರುಷ, ನಗನಟ್ಟಗಾಪುರದ 52 ವರ್ಷದ ಮಹಿಳೆ, ರಾಜೀವ್‌ ಗಾಂಧಿ ನಗರದ 54 ವರ್ಷದ ಪುರುಷ, ತನಿಸಂದ್ರ 49 ವರ್ಷದ ಮಹಿಳೆ, ಎಲೆಕ್ಟ್ರಾನಿಕ್‌ ಸಿಟಿ (ದೆಹಲಿ ಪ್ರಯಾಣ)ಯ 40 ವರ್ಷದ ಪುರುಷ, ನಾಗರಬಾವಿಯ (ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ)21 ವರ್ಷದ ಯುವತಿ, ಬಾಲಾಜಿ ಲೇಔಟ್‌ನ 38 ವರ್ಷದ ಯುವತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಸಂಪರ್ಕ, ಪ್ರಯಾಣದ ಇಲ್ಲದವರಲ್ಲಿ ಸೋಂಕು!: ಪ್ರಯಾಣದ ಹಿನ್ನೆಲೆಯೂ ಇಲ್ಲ ಹಾಗೂ ಸೋಂಕಿತರ ಸಂಪರ್ಕದಲ್ಲೂ ಇಲ್ಲದ ಆರ್‌ಟಿ ನಗರದ ಎರಡನೇ ಬ್ಲಾಕ್‌ ನ 40 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿರುವುದು  ಸದ್ಯ ಆತಂಕಕ್ಕೆ ಕಾರಣವಾಗಿದೆ.

ಸೋಂಕಿತರ ಸಂಪರ್ಕದಲ್ಲಿದ್ದವರಿಗೆ ಸೋಂಕು: ನಗರದಲ್ಲಿ ಶನಿವಾರ ಒಂದೇ ದಿನ 12ಜನ ಸೋಂಕಿತರ ಸಂರ್ಪಕಿತರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ದ್ವಿತೀಯ ಸಂರ್ಪಕಿತರೂ ಒಬ್ಬರಿದ್ದಾರೆ. ಪೌಟ್ರಿಟೌನ್‌ನಲ್ಲಿ ಸೋಂಕು ದೃಢಪಟ್ಟ  ಸೋಂಕಿತರ ದ್ವಿತೀಯ ಸಂಪರ್ಕದಲ್ಲಿದ್ದ  62 ವರ್ಷದ ಮಹಿಳೆ. ಕಲಾಸಿಪಾಳ್ಯದಲ್ಲಿ ಸೋಂಕು ದೃಢಪಟ್ಟವರ ಪ್ರಾಥಮಿಕ  ಸಂಪರ್ಕದಲ್ಲಿದ್ದ ಕಲಾಸಿಪಾಳ್ಯದ 19  ವರ್ಷದ ಯುವಕ ಹಾಗೂ ನಾರಾಯಣ ಸ್ವಾಮಿ ರಸ್ತೆಯ 18  ವರ್ಷದ ಯುವಕನಿಗೆ ಸೋಂಕು ತಗುಲಿದೆ.

ಹನುಮಂತ ನಗರದಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಯ ಸಂಪರ್ಕದಲ್ಲಿದ್ದ 20 ವರ್ಷದ ಯುವಕ ಹಾಗೂ 46 ವರ್ಷದ  ಮಹಿಳೆಗೆ ಸೋಂಕು ಹಬ್ಬಿದೆ. ಅನ್ನೈಪ್ಪ ಬ್ಲಾಕ್‌ನ ಕುಮಾರ ಪಾರ್ಕ್‌  ವ್ಯಾಪ್ತಿಯಲ್ಲಿ ಸೋಂಕು ದೃಢಪಟ್ಟವರ ಸಂಪರ್ಕದಲ್ಲಿದ್ದ 4 ವರ್ಷದ ಹೆಣ್ಣುಮಗುವಿಗೆ ಹಾಗೂ 6368 ರೋಗಿಯ ಸಂಪರ್ಕದಲ್ಲಿದ್ದ ಶೇಷಾದ್ರಿಪುರಂನ ಇಬ್ಬರು ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ.

ರೋಗಿ ಸಂಖ್ಯೆ 6169  ಸಂಪರ್ಕದಲ್ಲಿದ್ದ ಹೊಂಗಸಂದ್ರದ 54 ವರ್ಷದ ಪುರುಷ, ಐದು ವರ್ಷದ ಹೆಣ್ಣು ಮಗು ಹಾಗೂ 24 ವರ್ಷದ ಯುವತಿ ಸೇರಿ ಮೂವರಲ್ಲಿ ಸೋಂಕು ದೃಢಪಟ್ಟಿದೆ. ರೋಗಿ ಸಂಖ್ಯೆ 4848ರ ಸಂಪರ್ಕದಲ್ಲಿದ್ದ ಚೊಕ್ಕ ಸಂದ್ರದ 35 ವರ್ಷದ  ಪುರುಷರೊಬ್ಬರಲ್ಲಿ ಸೋಂಕು ದೃಢಪಟ್ಟಿದೆ.

ಮೂರು ಜನ ಮೃತ: ಸೋಂಕಿನಿಂದ ಮೃತರ ಸಂಖ್ಯೆ ಹೆಚ್ಚುತ್ತಿದ್ದು, ಶನಿವಾರ ಮೂವರು ಮೃತಪಟ್ಟಿದ್ದಾರೆ. 23 ವರ್ಷದ ಯುವಕ ಹಾಗೂ 62 ವರ್ಷದ ಪುರುಷರೊಬ್ಬರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಯಾವುದೇ ಪ್ರಯಾಣದ  ಇತಿಹಾಸವಿಲ್ಲದ, ಸೋಂಕಿತರ ಸಂಪರ್ಕವೂ ಇಲ್ಲದ ನಾರಾಯಣ ಪಿಳ್ಳೆç ಸ್ಟ್ರೀಟ್‌ನ 70 ವರ್ಷದ ಮಹಿಳೆ ಕೋವಿಡ್‌ 19ಗೆ ಬಲಿಯಾಗಿದ್ದಾರೆ. ಆದರೆ, ಇವರ ವಿವರ ಬುಲೆಟಿನ್‌ಗೆ ಸೇರ್ಪಡೆಯಾಗಿಲ್ಲ. ನಗರದಲ್ಲಿ ಒಟ್ಟು 31 ಜನ  ಸಾವಿಗೀಡಾದಂತಾಗಿದೆ.

ಟಾಪ್ ನ್ಯೂಸ್

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

ನಿಸ್ಸಾನ್‌-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!

Japan rivals: ನಿಸ್ಸಾನ್‌-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

ನಿಸ್ಸಾನ್‌-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!

Japan rivals: ನಿಸ್ಸಾನ್‌-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.