ಆರೋಪಿಗಳಿಂದ ಪೊಲೀಸರಿಗೆ ಸೋಂಕು


Team Udayavani, Jun 16, 2020, 5:59 AM IST

aropi-police

ಬೆಂಗಳೂರು: ನಗರದಲ್ಲಿ ಸೋಮವಾರ 35 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ ನಗರದಲ್ಲಿ 725ಕ್ಕೆ ಏರಿಕೆಯಾದಂತಾಗಿದೆ. ಕಳವು ಆರೋಪಿಯೊಬ್ಬನಿಂದ ಪೊಲೀಸ್‌ ಸಿಬ್ಬಂದಿಗೂ ಸೋಂಕು ಹರಡಿದೆ.  ಮಹಾರಾಷ್ಟ್ರದಿಂದ ಬಂದ ಎಂಟು ಜನ,ಆಂಧ್ರದಿಂದ ಬಂದ ಒಬ್ಬರಲ್ಲಿ ಹಾಗೂ ಕಂಟೈನ್ಮೆಂಟ್‌ ಝೋನ್‌ ಸಂಪರ್ಕದಲ್ಲಿದ್ದ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.

ಕೋವಿಡ್‌ 19 ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಸೋಂಕು ಪರೀಕ್ಷೆಗೆ ಒಳಪಟ್ಟ ಏಳು ಜನ, ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಇಬ್ಬರಲ್ಲಿ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಇನ್ನುಳಿದವರ ಸಂಪರ್ಕ ಪತ್ತೆಯಾಗಿಲ್ಲ. ನಾಗದೇವನಹಳ್ಳಿಯ  ಆರ್‌ಆರ್‌ ಲೇಔಟ್‌ನ ಗರ್ಭಿಣಿಯೊಬ್ಬರಲ್ಲಿ (32 ವರ್ಷ), ಕೆ.ಆರ್‌.ಪುರಂನ ನೇತ್ರಾವತಿ ಲೇಔಟ್‌ನ 46 ವರ್ಷದ ಪುರುಷ, ಸ್ವಯಂ ಸೋಂಕು ಪರೀಕ್ಷೆಗೆ ಒಳಪಟ್ಟ ಎಚ್‌.ಬಿಆರ್‌ ಲೇಔಟ್‌ನ 48 ವರ್ಷದ ಪುರುಷ,

ತಿಂಡ್ಲು ಭಾಗದಲ್ಲಿ 39  ವರ್ಷದ  ಮಹಿಳೆ, ಮಧುಮೇಹ ಹಾಗೂ ರಕ್ತದಒತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಕೆ.ಜಿ ಹಳ್ಳಿಯ 74 ವರ್ಷದ ವೃದ್ಧೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಫ್ರೆಜರ್‌ಟೌನ್‌ನ 36 ವರ್ಷದ ಪುರುಷ, ನೇತಾಜಿ ರಸ್ತೆಯ 70 ವರ್ಷದ  ವೃದ್ಧೆ, ಸುಲ್ತಾನಪಾಳ್ಯದ 65 ವರ್ಷದ ವೃದ್ಧೆ, ವಿಲ್ಸನ್‌ಟೌನ್‌ನ 50 ಮತ್ತು 53 ವರ್ಷದ ಇಬ್ಬರು ಮಹಿಳೆಯರು, ನಾಗಪ್ಪನಪಾಳ್ಯದಲ್ಲಿ 46 ವರ್ಷದ ಪುರುಷ, ಲಕ್ಕಸಂದ್ರದ 68 ವರ್ಷದ ವೃದ್ಧೆ, ಬಿಎಸ್‌ಕೆ ಮೂರನೇ  ಹಂತದಲ್ಲಿ 57 ವರ್ಷದ ಪುರುಷ ಹಾಗೂ 61 ವರ್ಷದ ಪುರುಷ, ತಾವರೇಕೆರೆ ಭಾಗದಲ್ಲಿ 69 ವರ್ಷದ ವೃದ್ಧೆ,

ಮಾರೇನಹಳ್ಳಿಯಲ್ಲಿ 20 ವರ್ಷದ ಯುವಕ, 57 ವರ್ಷದ ಪುರುಷ, 20 ವರ್ಷದ ಯುವತಿ ಹಾಗೂ 36 ವರ್ಷದ  ಮಹಿಳೆಯೊಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಜಯನಗರದ 9ನೇ ಬ್ಲಾಕ್‌ನಲ್ಲಿ 18 ವರ್ಷದ ಯುವತಿ, ಅನ್ನಾವರ ಲೇಔಟ್‌ 57 ವರ್ಷದ ಪುರುಷ, ಮಾರೇನಹಳ್ಳಿ 60 ವರ್ಷದ ಪುರುಷ, ನಗರಪೇಟೆ 30 ವರ್ಷದ ಮಹಿಳೆ, ಕಾಕ್ಸ್‌ಟೌನ್‌ 64 ವರ್ಷದ ಮಹಿಳೆ, ಇಟ್ಟಮಡುಗು 51  ವರ್ಷದ ಪುರುಷ, ಬೈರಸಂದ್ರದ 83 ವರ್ಷದ ವೃದಟಛಿ, ಶ್ಯಾಮಣ್ಣ ಗಾರ್ಡನ್‌ನ ವ್ಯಾಪ್ತಿ 35 ವರ್ಷದ ಮಹಿಳೆ, ಪಾರ್ವತಿಪುರಂನ 34 ವರ್ಷದ ಪುರುಷ ಹಾಗೂ ಗುಟ್ಟೇನಪಾಳ್ಯದ 40  ವರ್ಷದ ಪುರುಷರೊಬ್ಬರಲ್ಲಿ ಸೋಂಕು ದೃಢಪಟ್ಟಿದೆ.

ಸಂಪರ್ಕಿತರಿಗೆ ಸೋಂಕು: ಕೋವಿಡ್‌ 19 ಸೋಂಕಿತರ ಸಂಪರ್ಕದಲ್ಲಿದ್ದ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರಲ್ಲಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಒಬ್ಬರಲ್ಲಿ ಸೋಂಕು ದೃಢಪಟ್ಟದೆ. ರೋಗಿ ಸಂಖ್ಯೆ 5335ರ ದ್ವಿತೀಯ  ಸಂಪರ್ಕದಲ್ಲಿದ್ದ ಬೆಳೆಕಹಳ್ಳಿಯ 44 ವರ್ಷದ ಪುರುಷ, ರೋಗಿ ಸಂಖ್ಯೆ 6014ರ ಸಂಪರ್ಕದಲ್ಲಿದ್ದ ಕೆ.ಆರ್‌ .ಪುರಂನ ದೇವಸಂದ್ರದ 35 ವರ್ಷದ ಮಹಿಳೆ ಹಾಗೂ ರೋಗಿ ಸಂಖ್ಯೆ 6881ರ  ಸಂಪರ್ಕದಲ್ಲಿದ್ದ 34 ವರ್ಷದ ಪುರುಷರೊಬ್ಬರಿಗೆ ಸೋಮವಾರ ಸೋಂಕು ಇರುವುದು ದೃಢಪಟ್ಟಿದೆ.

ಒಬ್ಬರು ಮೃತ: ನಗರದಲ್ಲಿ 75 ವರ್ಷದ ವೃದ್ಧೆಯೊಬ್ಬರು ಕೋವಿಡ್‌ 19 ಸೋಂಕಿನಿಂದ ಮೃತಪಟ್ಟಿದ್ದು, ಕೋವಿಡ್‌ 19ದಿಂದ ಒಟ್ಟು ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಕೋವಿಡ್‌ 19 ಸೋಂಕಿನ ಲಕ್ಷಣಗಳು  ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂ.13ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ. ಇನ್ನು ಸೋಮವಾರ ಸೋಂಕಿನಿಂದ ಇಬ್ಬರು ಗುಣಮುಖರಾಗಿದ್ದು, ಗುಣಮುಖರಾದವರ ಸಂಖ್ಯೆ 329ಕ್ಕೆ ಏರಿಕೆಯಾದಂತಾಗಿದೆ.

ಪೊಲೀಸ್‌ ಠಾಣೆ ಸಿಬ್ಬಂದಿಗೆ ಸೋಂಕು: ತಮಿಳುನಾಡಿನ ಹೊಸೂರಿಗೆ ಹೋಗಿ ಬಂದಿದ್ದ ಎಚ್‌ಎಸ್‌ಆರ್‌ ಠಾಣೆಯ 25 ವರ್ಷದ ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಜೂನ್‌.6ಕ್ಕೆ ಇವರು ತಮಿಳುನಾಡಿಗೆ ಹೋಗಿದ್ದರು. ರೋಗಿ ಸಂಖ್ಯೆ 6560 ಅವರ  ಸಂಪರ್ಕದಿಂದ ಇವರಿಗೆ ಸೋಂಕು ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 14 ಜನ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 9 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು  ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಕಳವು ಆರೋಪಿಗಳಿಂದ ಸೋಂಕು ತಗಲುತ್ತಿದ್ದು, ಕೆಂಗೇರಿ ಉಪನಗರ ಪೊಲೀಸ್‌ ಕ್ವಾಟ್ರಸ್‌ನಲ್ಲಿದ್ದ 40ವರ್ಷದ ಪೊಲೀಸ್‌ ಸಿಬ್ಬಂದಿಗೂ ಕಳ್ಳನನ್ನು ಸೆರೆ ಮಾಡುವ ಸಂದರ್ಭದಲ್ಲಿ ಸೋಂಕು  ಹಬ್ಬಿದ್ದು, ಇವರ ಪ್ರಾಥಾಮಿಕ ಸಂಪರ್ಕದಲ್ಲಿದ್ದ ಮೂವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆ 191: ನಗರದಲ್ಲಿ ದಿನೇ ದಿನೆ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಮವಾರ 191ಕ್ಕೆ ಏರಿಕೆಯಾದಂತಾಗಿದೆ. ನಗರದ ಕೆಲವು ವಲ ಯಗಳು ಮಾತ್ರ ಕಂಟೈನ್ಮೆಂಟ್‌ ವ್ಯಾಪ್ತಿಯ ಲ್ಲಿದ್ದವು.  ಸದ್ಯ ಎಲ್ಲ ವಲಯಗಳಲ್ಲಿಯೂ ಕೋವಿಡ್‌ 19 ಪ್ರಕರಣಗಳು ದೃಢಪಟ್ಟಿದ್ದು, ಎಲ್ಲ ಎಂಟು ವಲಯಗಳಲ್ಲಿನ ಕೆಲವು ಪ್ರದೇಶಗಳು ಕಂಟೈನ್ಮೆಂಟ್‌ ವ್ಯಾಪ್ತಿಗೆ ಸೇರ್ಪಡೆಯಾದಂತಾಗಿದೆ.

ಒಬ್ಬರಲ್ಲಿ ಸೋಂಕು ದೃಢಪಟ್ಟರೂ ಆ ನಿರ್ದಿಷ್ಟ  ಪ್ರದೇಶವನ್ನು ಕಂಟೈನ್ಮೆಂಟ್‌ ಮಾಡುತ್ತಿರುವುದರಿಂದ ಕಂಟೈನ್ಮೆಂಟ್‌  ಪ್ರದೇಶಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಂಟೈನ್ಮೆಂಟ್‌ ವ್ಯಾಪ್ತಿಯ ಶೇ.90 ರಷ್ಟು ವಾರ್ಡ್‌ಗಳಲ್ಲಿ ಒಂದೇ ಪ್ರಕರಣ ದೃಢಪಟ್ಟಿದೆ. ಇನ್ನು  ಜೂನ್‌.12ರವರೆಗೆ ಸೋಂಕುದೃಢಪಟ್ಟವರು ಇದ್ದ ಪ್ರದೇಶಗಳ ಮಾಹಿತಿಯನ್ನು ಮಾತ್ರ ಪಾಲಿಕೆ ನೀಡಿದ್ದು, ಇನ್ನು ಮೂರು ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.