ವೈರಸ್ ಸ್ಟ್ರಾಂಗು , ವ್ಯಕ್ತಿ ವೀಕು : ಮಳೆಗಾಲದಲ್ಲಿ ವೈರಸ್ ಸ್ಟ್ರಾಂಗು ಗುರು…
ಸೋಂಕು ತೀವ್ರತೆಗೆ ಅನ್ ಲಾನ್ ಜತೆ ಹವಾಮಾನವೂ ಸಾಥ್
Team Udayavani, Jun 24, 2020, 6:24 AM IST
ಬೆಂಗಳೂರು: ಕೋವಿಡ್ 19 ವೈರಸ್ ಅನ್ನು ಅಶಕ್ತಗೊಳಿಸಲು ಸುದೀರ್ಘ ಲಾಕ್‌ಡೌನ್ ಜಾರಿಗೆ ತರಲಾಗಿತ್ತು. ಆದರೆ, ಬದಲಾದ ವಾತಾವರಣದಿಂದ ಮನುಷ್ಯನೇ ಅಶಕ್ತನಾಗುತ್ತಿದ್ದು, ಇದು ರಾಜಧಾನಿ ಸೇರಿ ರಾಜ್ಯಾದ್ಯಂತ ಸೋಂಕು ಜಾಗೃತವಾಗಲು ರಹದಾರಿಯಾಗುತ್ತಿದೆ. ಸಾಮಾನ್ಯವಾಗಿ ಮಳೆಗಾಲ ಎಂದರೆ ಕೀಟಾಣು, ವೈರಾಣುಗಳ ಕಾರ್ಯಚಟುವಟಿಕೆ ಹೆಚ್ಚಳವಾಗಿ ಸಾಂಕ್ರಾ ಮಿಕ ರೋಗ ಹರಡುವ ಅವಧಿ.
ಈ ಕಾರಣದಿಂದ ಮಳೆಗಾಲದಲ್ಲಿ ಡೆಂಘೀ, ಚಿಕೂನ್ ಗುನ್ಯಾ, ಎಚ್1ಎನ್1 ಸೇರಿ ವೈರಸ್ ಫ್ಯೂ ಜ್ವರಗಳು ಹೆಚ್ಚಿದ್ದು, ಇದರೊಂದಿಗೆ ಕೋವಿಡ್ 19 ತನ್ನ ವ್ಯಾಪ್ತಿ ವಿಸ್ತರಿಸಿದೆ. ಸದ್ಯ ರಾಜ್ಯದಲ್ಲಿ ಬೇಸಿಗೆಯಿಂದ ಮಳೆಗಾಲಕ್ಕೆ ವಾತಾವರಣ ಬದಲಾಗುತ್ತಿದ್ದು, ಬೇಸಿಗೆ ಕಾಲಕ್ಕೆ ಹೋಲಿಸಿದರೆ ವಾತಾವರಣದಲ್ಲಿ ತಾಪಮಾನ ಪ್ರಸ್ತುತ ಏಳು ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಿದೆ. ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲಿ ಮಳೆ ಸುರಿಯುತ್ತಿದೆ.
ಈ ಹವಾಮಾನ ಬದಲಾವಣೆಯು ನೇರವಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತಿದೆ. ತಂಪಾದ ವಾತಾವರಣದಲ್ಲಿ ಹೆಚ್ಚು ಕ್ರಿಯಾಶೀಲವಾ ಗುವ ಕೋವಿಡ್ 19 ಸುಲಭವಾಗಿ ಅಶಕ್ತ ಮನುಷ್ಯನ ದೇಹ ಸೇರುತ್ತಿದೆ. ಇದರೊಂದಿಗೆ ಅನ್ ಲಾಕ್‌ನಲ್ಲಿ ಜನರ ಓಡಾಟ ಸೋಂಕು ವ್ಯಾಪಿಸಲು ಸಹಾಯಮಾ ಡಿದೆ. ಹೀಗಾಗಿಯೇ ಕಳೆದ ಎರಡು ವಾರದಲ್ಲಿ ಅನಾ ರೋಗ್ಯಕ್ಕೆ ಒಳಗಾಗುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ.
ಪುಷ್ಟಿ ನೀಡುತ್ತಿರುವ ವಿಷಮಶೀತ ಜ್ವರ: ಈ ಹಿಂದೆ ರಾಜ್ಯದ ಸೋಂಕು ಪ್ರಕರಣಗಳಲ್ಲಿ ಸೋಂಕಿತರ ಸಂಪರ್ಕ ಹೊಂದಿದವರು, ಹೊರದೇಶ, ಹೊರ ರಾಜ್ಯ ಪ್ರಯಾಣ ಹಿನ್ನೆಲೆ ಹೆಚ್ಚಿರುತ್ತಿತ್ತು. ಆದರೆ, ಕಳೆದ ಒಂದು ವಾರದ ಪ್ರಕರಣಗಳಲ್ಲಿ ಶೇ.25 ರಷ್ಟು ಮಂದಿ ವಿಷಮಶೀತ (ಇನೂ# ಎಂಜಾ ಲೈಕ್ ಇಲ್‌ನೆಸ್) ಜ್ವರ ಹಿನ್ನೆಲೆ ಹೊಂದಿದ್ದಾರೆ. ಶೇ.5 ರಷ್ಟು ಮಂದಿ ತೀವ್ರ ಉಸಿರಾಟ ಸಮಸ್ಯೆ ಹಿನ್ನೆಲೆ ಹೊಂದಿ ದ್ದಾರೆ. ಸೋಂಕು ಸಂಪರ್ಕ ಪತ್ತೆಯಾಗದ ಪ್ರಕರಣ ಗಳು ಶೇ.15ರಷ್ಟಿವೆ. ಈ ಎಲ್ಲಾ ಸೋಂಕಿತರಿಗೂ ಹವಾಮಾನ ಬದಲಾವಣೆಯಿಂದ ಉಂಟಾದ ಜ್ವರ, ಶೀತ ಲಕ್ಷಣಗಳಂತಹ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ತೆರಳಿದ್ದು, ಸೋಂಕು ಇರುವುದು ದೃಢಪಟ್ಟಿದೆ.
ಶೇ.50 ರಷ್ಟು ವಿಷಮಶೀತ ಜ್ವರ ಹಿನ್ನೆಲೆ: ಕಳೆದ ಒಂದು ವಾರದ ನಗರ ಸೋಂಕು ಪ್ರಕರಣಗಳಲ್ಲಿ ಶೇ.50 ರಷ್ಟು ಪ್ರಕರಣಗಳು ವಿಷಮಶೀತ ಜ್ವರ (ಐಎಲ್‌ಎ) ಹಿನ್ನೆಲೆ ಹೊಂದಿವೆ. ನಗರದ ಜ್ವರ ತಪಾಸಣಾ ಕೇಂದ್ರಗಳಲ್ಲಿ ಜೂನ್ ಎರಡನೇ ವಾರಕ್ಕಿಂತ ಮೂರನೇ ವಾರ ತಪಾಸಣೆಗೊಳಗಾದವರ ಸಂಖ್ಯೆ ದುಪ್ಪಟ್ಟಾಗಿದೆ. ಅದೇ ರೀತಿ ಸೋಂಕು ಪರೀಕ್ಷೆಗಗಳು ಒಂದೇ ವಾರದಲ್ಲಿ 6,000 ದಷ್ಟು ಹೆಚ್ಚಳವಾಗಿವೆ. ಇದರಿಂದ ಸೋಂಕು ಪ್ರಕರಣಗಳು ಹೆಚ್ಚಳವಾಗಿವೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಹವಾಮಾನ ಬದಲಾವಣೆಯಿಂದ ಸ್ಫೋಟ: ಕೋವಿಡ್ 19 ಸೋಂಕು ತೀವ್ರವಾಗಿರುವ ಬೆಂಗಳೂರಿನಲ್ಲಿ ಜೂನ್ ಮೊದಲ ವಾರದಲ್ಲಿ ಗರಿಷ್ಠ 32, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ ಜೂನ್ ಮೂರನೇ ವಾರ ಗರಿಷ್ಠ 27, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆ ವೈದ್ಯ ಡಾ.ಸಿ.ನಾಗರಾಜ್ ಹೇಳುವಂತೆ, ಯಾವುದೇ ತರಹದ ವೈರಸ್‌ಗಳು ತಣ್ಣನೆಯ ವಾತಾವರಣದಲ್ಲಿ ತಮ್ಮ ಕಾರ್ಯ ಚಟುವಟಿಕೆಯನ್ನು ದುಪಟ್ಟುಗೊಳಿಸುತ್ತವೆ.
ಅದರಲ್ಲೂ ಕೋವಿಡ್ ವೈರಸ್ ಕಾರ್ಯಚಟುವಟಿಕೆ ಮೂರುಪಟ್ಟು ಹೆಚ್ಚಳವಾಗಿದೆ. ಅಂತೆಯೇ ವಾತಾವರಣ ಬದಲಾವಣೆಯಿಂದ ಜನರ ರೋಗ ನಿರೋಧಕ ಶಕ್ತಿಯಲ್ಲೂ ಬದಲಾವಣೆ ಯಾಗಿರುತ್ತದೆ. ವೈರಸ್ ಶೀಘ್ರ ಮತ್ತು ಸುಲಭವಾಗಿ ದೇಹ ಸೇರುತ್ತದೆ. ಹೀಗಾಗಿ, ಆಸ್ಪತ್ರೆಗೆ ಜ್ವರ ಶೀತ ಲಕ್ಷಣದೊಂದಿಗೆ ಆಸ್ಪತ್ರೆಗೆ ಬರುತ್ತಿರುವವರು ಹೆಚ್ಚಳವಾಗಿದ್ದು, ಕೆಲವರಲ್ಲಿ ಕೋವಿಡ್ 19 ಸೊಂಕು ಕಂಡು ಬಂದಿದೆ.
ವಾತಾವರಣದಲ್ಲಿ ತಾಪಮಾನ ಕಡಿಮೆ ಇದ್ದಷ್ಟು ಕೋವಿಡ್-19 ಕಾರ್ಯಚಟು ವಟಿಕೆ ಹೆಚ್ಚಿರುತ್ತದೆ. ಜತೆಗೆ ಅನ್‌ಲಾಕ್‌ನಿಂದ ಜನರ ಓಡಾಟವು ಹೆಚ್ಚಳವಾಗಿದ್ದು, ವೈರಸ್ ವೇಗವಾಗಿ ಹರಡುತ್ತಿದೆ. ಸದ್ಯ ಮಳೆಗಾಲವೂ ಆಗಿದ್ದು, ಫ್ಯೂ ಜ್ವರಗಳು ಕೂಡಾ ಹೆಚ್ಚಿರುತ್ತವೆ. ಈ ಎಲ್ಲಾ ಅಂಶಗಳಿಂದ ಸೋಂಕು ಹೆಚ್ಚಳವಾಗಿದೆ.
-ಡಾ.ರವಿ, ನಿಮ್ಹಾನ್ಸ್ ವೈರಾಲಜಿ ವಿಭಾಗದ ಮುಖ್ಯಸ್ಥರು
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.